Raaji Serial: ಬಾಲ್ಯದ ಗೆಳೆಯ ಕರ್ಣನನ್ನೇ ಮದುವೆಯಾಗ್ತಾಳಾ ರಾಜೇಶ್ವರಿ? ರಾಜಿ ಧಾರವಾಹಿಯಲ್ಲಿ ಇದೇನಿದು ಬಿಗ್ ಟ್ವಿಸ್ಟ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ರಾಜಿ ಧಾರಾವಾಹಿ ಆರಂಭದಿಂದಲೇ ಜನಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸಿದ್ದಾರ್ಥ್ ಆಲಿಯಾಸ್ ವಿಜಯ್ ಸೂರ್ಯ ಕಳೆದ ಒಂದು ವಾರಗಳಿಂದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.

ರಾಜಿ

ರಾಜಿ

 • Share this:
  ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ರಾಜಿ (Raaji) ಧಾರಾವಾಹಿ ಆರಂಭದಿಂದಲೇ ಜನಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸಿದ್ದಾರ್ಥ್ ಆಲಿಯಾಸ್ ವಿಜಯ್ ಸೂರ್ಯ (Vijay Suriya) ಕಳೆದ ಒಂದು ವಾರಗಳಿಂದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಳೆದ ಒಂದು ವಾರಗಳಿಂದ ರಾಜಿ ಮನೆಯವರು ಮದುವೆಯ (Marriage) ಸಂಭ್ರಮದಲ್ಲಿ ಸಂತೋಷವಾಗಿದ್ದರು. ಆದರೆ ರಾಜಿ ಬದುಕು ಇದೀಗ ಅತಂತ್ರವಾಗಿದೆ. ಮುಂದೆ ರಾಜಿಯನ್ನು ಯಾರು ಮದುವೆಯಾಗುತ್ತಾರೆ. ಅವನ ಬಾಲ್ಯದ ಗೆಳೆಯ ಕರ್ಣನೇ (Karna) ಮದುವೆಯಾಗಿ ಅವಳಿಗೆ ಹೊಸ ಬಾಳು ನೀಡುತ್ತಾನೆ ಎನ್ನುವ ಬಗ್ಗೆ ವೀಕ್ಷರಿಗೆ ಕುತೂಹಲವಿದೆ.

  ಶತ್ರುಗಳ ಒತ್ತಾಯಕ್ಕೆ ಮಣಿದು  ಮದುವೆಯಾಗಲು ಒಪ್ಪಿಕೊಂಡ ರಾಜಿ

  ರಾಜಿಯನ್ನು ಮದುವೆಯಾಗಲು ಪ್ರೇಮ್ ಬಂದಿದ್ದು ಆತ ದುಷ್ಟರ ಬಲೆಯಲ್ಲಿ ಸಿಲುಕಿ ಈಗಾಗಲೇ ಮದುವೆಯಾಗಿದೆ ಎಂದು ಸತ್ಯ ಹೇಳಲಾಗದೆ ಒದ್ದಾಡುತ್ತಿದ್ದ, ತನ್ನ ಹೆಂಡತಿ ಮತ್ತು ಮಗುವಿನ ರಕ್ಷಣೆಗಾಗಿ ಆತ ರಾಜಿಯನ್ನು ಮದುವೆಯಾಗಲು ಹೊರಟಿದ್ದ.

  ಸದ್ಯ ಪ್ರೇಮ್ ಎಲ್ಲಾ ಸತ್ಯಗಳನ್ನು ರಾಜಿ ಮತ್ತು ಅವರ ಮನೆಯವರಿಗೆ ತಿಳಿಸಿ ಕ್ಷಮೆ ಕೂಡಯಾಚಿಸಿದ್ದಾನೆ. ವಾಸ್ತವದಲ್ಲಿ ರಾಜಿಗೂ ಕೂಡ ಈ ಮದುವೆ ಇಷ್ಟವಿರಲಿಲ್ಲ. ಆಕೆ ಮನೆಯಲ್ಲಿರುವ ಶತ್ರುಗಳ ಒತ್ತಾಯಕ್ಕೆ ಮಣಿದು ಈ ಮದುವೆಯಾಗಲು ಒಪ್ಪಿಕೊಂಡಿದ್ದಳು.

  ಮೇಲ್ನೋಟಕ್ಕೆ ನಗುತ್ತಾ  ಪ್ರೇಮ್ ಅನ್ನು ಮನಸ್ಪೂರ್ವಕವಾಗಿ ಇಷ್ಟಪಟ್ಟಂತೆ ನಟಿಸುತ್ತಾ ಪ್ರೇಮ್ ಜೊತೆ ಮದುವೆಯಾಗಲು ತಯಾರಾಗಿದ್ದಳು. ಇದೀಗ ವಿಧಿಯಾಟದಂತೆ ರಾಜಿ ಬಯಸಿದ ಜೀವನ ಆಕೆಗೆ ಮರಳಿ ದೊರಕುತ್ತದೆ ಎನ್ನುವ ಸೂಚನೆ ಕೂಡ ಕಾಣಿಸುತ್ತಿದೆ.

  ಇದನ್ನೂ ಓದಿ: Paaru Serial: ಅರಸನಕೋಟೆ ಸೊಸೆ ‌ಪಾರ್ವತಿಗೆ ಪ್ರತಿ ದಿನ ಅಗ್ನಿ ಪರೀಕ್ಷೆ! ದುಷ್ಟರ ಮೋಸದ ಜಾಲಕ್ಕೆ ಬಲಿಯಾದ ಪಾರು

  ರಾಜಿ ಮನೆಯವರ ಬಳಿ ದುರ್ಘಟನೆಗೆ  ಕ್ಷಮೆಯಾಚಿಸಿದ ಪ್ರೇಮ್

  ಒಂದು ದುಷ್ಟರ ಗ್ಯಾಂಗ್ ದುಡ್ಡಿನ ಆಸೆಗಾಗಿ ಪ್ರೇಮ್ ಅನ್ನು ರಾಜೇಶ್ವರಿಯ ಜೊತೆಗೆ ಮದುವೆ ಮಾಡಿಸಿ ಅವಳ ಆಸ್ತಿಯನ್ನು ಪಡೆದುಕೊಂಡು ಮತ್ತೆ ಪ್ರೇಮ್ ನ ಹೆಂಡತಿ ಮತ್ತು ಮಗುವನ್ನು ತಮ್ಮ ವಶದಿಂದ ಬಿಡುವುದಾಗಿ ಹೇಳಿತ್ತು,

  ಇದೇ ಕಾರಣಕ್ಕಾಗಿ ರಾಜಿ ಮನೆಯವರ ಬಳಿ ತನಗೆ ಈಗಾಗಲೇ ಮದುವೆಯಾಗಿದೆ ಎಂಬುದನ್ನು ಹೇಳುವುದಕ್ಕೆ ಆಗದೆ ರಾಜಿಯನ್ನು ಮದುವೆಯಾಗಲು ತಯಾರಾಗಿದ್ದ. ಆದರೆ ಪ್ರೇಮ್ ಧೈರ್ಯದಿಂದಾಗಿ ಹೇಗೋ ಹೆಂಡತಿ, ಮಗು ಪ್ರೇಮ್ ಕೈ ಸೇರಿತ್ತು.

  ಹೀಗಾಗಿ ರಾಜಿಯ ಬದುಕು ಹಾಳಾಗುವುದು ನಿಂತಿತ್ತು. ಈ ಎಲ್ಲಾ ದುರ್ಘಟನೆಗೆ ಪ್ರೇಮ್ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಆತನ ಹೆಂಡತಿಯೂ ಕ್ಷಮೆ ಕೇಳಿದ್ದಾರೆ. ಧರ್ಮ ಸಂಕಟದಲ್ಲಿದ್ದ ಪ್ರೇಮ್‌ನನ್ನು ಎಲ್ಲರೂ ಕ್ಷಮಿಸಿದ್ದಾರೆ.

  ಇದನ್ನೂ ಓದಿ: Kamali Serial: ಯಶಸ್ವಿಯಾಗಿ 1100 ಸಂಚಿಕೆ ಪೂರೈಸಿದ ಕಮಲಿ ಧಾರಾವಾಹಿ! ಮುಂದಿನ ಬಿಗ್​ ಟ್ವಿಸ್ಟ್ ಏನು?

  ಸಾಹಸವನ್ನೇ ಮಾಡಿ ಪ್ರೇಮ್ ನ ಹೆಂಡತಿ, ಮಗುವನ್ನು ಕಾಪಾಡಿದ ಕರ್ಣ

  ಪ್ರೇಮ್ ನ ಮೊಬೈಲ್ ಗೆ ಬರುತ್ತಿದ್ದಂತಹ ಎಲ್ಲಾ ಕರೆ ಮತ್ತು ಸಂದೇಶಗಳನ್ನು ಒಂದು ಗ್ಯಾಂಗ್ ಟ್ರ್ಯಾಕ್ ಮಾಡುತ್ತಿತ್ತು ಅಲ್ಲದೆ ಆತ ಎಲ್ಲಿಗೆ ಹೋದರು ಆಗಲ್ಲ ಸದಸ್ಯರು ಅವನನ್ನು ಫಾಲೋ ಕೂಡ ಮಾಡುತ್ತಿದ್ದರು. ಇದೇ ಕಾರಣದಿಂದ ಪ್ರೇಮ್ ಸತ್ಯ ಹೇಳಲು ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗುತ್ತಿರಲಿಲ್ಲ.

  ಆದರೆ ಪ್ರೇಮ್ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಅರಿಶಿನದಲ್ಲಿ ಯಾರಿಗೂ ಅರ್ಥವಾಗದಂತೆ ತನ್ನ ಸಂಕಷ್ಟವನ್ನು ಅದರಲ್ಲಿ ಬರೆದು ಅದನ್ನು ಕರ್ಣನಿಗೆ ದೊರಕುವಂತೆ ಮಾಡಿದ್ದಾನೆ, ಮಾಡಿಸಿದ. ಅದನ್ನು ಯಾರಿಗೂ ಗೊತ್ತಾಗದ ರೀತಿ ಓದಲು, ಅರ್ಥ ಮಾಡಿಕೊಳ್ಳಲು ಕರ್ಣನಿಗೆ ಸೂಚಿಸಿದ.

  ಅದನ್ನು ಗಂಭೀರವಾಗಿ ತೆಗೆದುಕೊಂಡ‌ ಕರ್ಣ ಎಲ್ಲವನ್ನು ತಾಳೆ ಹಾಕಿ, ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಇದು ಒಂದು ದೊಡ್ಡ ಗ್ಯಾಂಗ್ ಎಂಬುದು ತಿಳಿಯಿತು. ಪ್ರೇಮ್ ಏನಾದರೂ ಈ ಗ್ಯಾಂಗ್‌ನಲ್ಲಿ ಸಿಕ್ಕಿಬಿದ್ದಿದ್ದಾನಾ ಎಂಬುದನ್ನು ಹುಡುಕುತ್ತಾ ಹೊರಟಾಗ, ಆತನ ಹೆಂಡತಿ ಮಗುವನ್ನು ವಶದಲ್ಲಿಟ್ಟುಕೊಂಡಿರುವುದು ತಿಳಿಯಿತು.

  ಕರ್ಣ ಇದರ ಮೂಲ ಹುಡುಕಿಕೊಂಡು ಹೊರಟಾಗ ಪ್ರೇಮ್ ಹೆಂಡತಿ-ಮಗು ಇರುವ ಸ್ಥಳ ಸಿಕ್ಕಿತು. ಸಾಹಸವನ್ನೇ ಮಾಡಿ ಹೆಂಡತಿ, ಮಗುವನ್ನು ಕಾಪಾಡುವುದರ ಜೊತೆಗೆ ರಾಜಿಯ ಹಾಳಾಗುವುದರಿಂದ ತಡೆದಿದ್ದಾನೆ. ಮುಂದಿನ ಸಂಚಿಕೆಗಳಲ್ಲಿ ಇನ್ನೇನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
  Published by:Swathi Nayak
  First published: