• Home
 • »
 • News
 • »
 • entertainment
 • »
 • Marali Manasagide Serial: 250 ಸಂಚಿಕೆ ಪೂರೈಸಿದ 'ಮರಳಿ ಮನಸಾಗಿದೆ' ಧಾರಾವಾಹಿ! ಮುಂದಿನ ಟ್ವಿಸ್ಟ್ ಏನು?

Marali Manasagide Serial: 250 ಸಂಚಿಕೆ ಪೂರೈಸಿದ 'ಮರಳಿ ಮನಸಾಗಿದೆ' ಧಾರಾವಾಹಿ! ಮುಂದಿನ ಟ್ವಿಸ್ಟ್ ಏನು?

 ಮರಳಿ ಮನಸಾಗಿದೆ

ಮರಳಿ ಮನಸಾಗಿದೆ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ ಧಾರಾವಾಹಿಯೂ ಇದೀಗ 250 ಸಂಚಿಕೆಗಳಲ್ಲಿ ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ.

 • Share this:

  ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸಾಗಿದೆ (Marali Manasagide) ಧಾರಾವಾಹಿಯೂ ಇದೀಗ 250 ಸಂಚಿಕೆಗಳಲ್ಲಿ ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ. ನಟ ಚಂದನ್ ಗೌಡ (Chandan Gowda) ಹಾಗೂ ದಿವ್ಯಾ (Divya) ನಟನೆಗೆ ಸೋಲದವರಿಲ್ಲ. ಇದೀಗ ಧಾರಾವಾಹಿ ಕುತೂಹಲ ಹಂತಕ್ಕೆ ತಲುಪಿದ್ದು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ವಿಕ್ರಾಂತ್ (Vikranth) ಹಾಗೂ ಸ್ಪಂದನ (Spandana) ನಡುವಿನ ಪ್ರೀತಿ ಅಲ್ಪಸ್ವಲ್ಪ ಜಗಳ ಎಲ್ಲವೂ ನೋಡಲು ವೀಕ್ಷಕರು ಕಾಯುತ್ತಿರುತ್ತಾರೆ. ಅನಿವಾರ್ಯವಾಗಿ ಸಣ್ಣವಯಸ್ಸಿನಲ್ಲೇ ನಾಯಕ  ಮನೆತನದ ಸೊಸೆಯಾಗಿ ಸ್ಪಂದನ ಬಂದಿರುತ್ತಾಳೆ. ಮನೆಯಲ್ಲಿ ಹಿರಿಯ ಸೊಸೆಯಾಗಿ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿರುವ ಸ್ಪಂದನ ಇದೀಗ ಮನೆಯ ಮಗಳು ಸಾಹಿತ್ಯಳ ಬದುಕನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾಳೆ.


  ವಿಕ್ರಾಂತ್ ಮತ್ತು ಸ್ಪಂದನ ನಡುವೆ ಭಿನ್ನಾಭಿಪ್ರಾಯ


  ಸ್ಪಂದನ ಇಡುತ್ತಿರುವ ಪ್ರತಿ ಹೆಜ್ಜೆಗೂ ಅಡ್ಡವಾಗಿ ನಿಲ್ಲುತ್ತಿರುವ ಅವಳ ದೊಡ್ಡ ಅತ್ತೆ ಮತ್ತು ಮಾವನ ಮುಂದೆಯೇ ಸೊಸೆ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಸ್ಪಂದನ ತೋರಿಸಿ ಕೊಡುತ್ತಿದ್ದಾಳೆ. ಇದೀಗ ಮನೆಯ ಮುದ್ದಿನ ಮಗಳು ಸಾಹಿತ್ಯಾಳ ಬದುಕನ್ನು ಸರಿಪಡಿಸುವ ಪ್ರಯತ್ನದಲ್ಲಿ ವಿಕ್ರಾಂತ್ ಮತ್ತು ಸ್ಪಂದನ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದೆ.


  ಸ್ಪಂದನಾ ಪರ ನಿಂತ ವಿಕ್ರಾಂತ್ ಇಷ್ಟು ದಿನ ಇಂಥ ದಿನಗಳು ಬಹಳ ಕಡಿಮೆ ಇತ್ತು. ವಿಕ್ರಾಂತ್ ಯಾವುದಕ್ಕೂ ಮಾತನಾಡುತ್ತಿರಲಿಲ್ಲ. ಮನೆಯವರಿಗೆ ಹೆಚ್ಚು ಬೆಲೆ ಕೊಡುವ ಉದ್ದೇಶದಿಂದಲೋ ಏನೋ ಅವರು ಏನೇ ತಪ್ಪು ಮಾಡಿದ್ದರು, ಅವರನ್ನು ಕ್ಷಮಿಸುತ್ತಾ ಸ್ಪಂದನಾಳ ಮೇಲೆಯೆ ಕೋಪಿಸಿಕೊಳ್ಳುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ, ಪ್ರೀತಿ ಹೆಚ್ಚಾಗಿದೆ. ವಿಕ್ರಾಂತ್ ಗೆ ಸ್ಪಂದನಾ ಮೇಲೆ ಪ್ರೀತಿ ಶುರುವಾಗಿದೆ. ಇದೇ ಕಾರಣಕ್ಕೆ ವಿಕ್ರಾಂತ್ ಕಂಪ್ಲೀಟ್ ಆಗಿ ಬದಲಾಗಿದ್ದಾನೆ. ಮನೆಯವರ ವಿರೋಧದ ನಡುವೆ ಸ್ಪಂದನಾ ಪರ ನಿಂತಿದ್ದನ್ನು.  ಸ್ಪಂದನಾ ಮಾಡಿದ್ದು ತಪ್ಪು ಅಂತ ಮನೆಯವರು ವಾದ ಮಾಡಿದರೆ, ಇಲ್ಲ ಅದು ಸರಿ ಎಂದೇ ವಾದ ಮಾತನಾಡುತಿದ್ದ ಆದರೇ ಸಾಹಿತ್ಯಳ ಅಚಾತುರ್ಯದಿಂದ ಇದೀಗ ಮನೆಯಲ್ಲಿ ಸ್ಪಂದನ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ. ಇದು ಅವರಿಬ್ಬರ ಸಂಬಂಧವನ್ನು ದೂರಮಾಡಲು ನಾಂದಿಯಾಗುತ್ತಾ ಎನ್ನುವುದನ್ನು ನೋಡಬೇಕಷ್ಟೇ.


  ಇದನ್ನೂ ಓದಿ: Gattimela Serial: ಸಂಕಷ್ಟದಿಂದ ಹೇಗೆ ಹೊರಗೆ ಬರ್ತಾಳೆ ರೌಡಿ ಬೇಬಿ? ವರ್ಕೌಟ್ ಆಗ್ಬಿಡ್ತಾ ಸುಹಾಸಿನಿ ಪ್ಲಾನ್?


  ಸ್ಪಂದನಾ ಜೊತೆ ಜಗಳವಾಡುತ್ತಾ ಬಂದಿದ್ದಾಳೆ ವೈಷ್ಣವಿ


  ಸ್ಪಂದನಳನ್ನು ಮನೆಯವರ ಮುಂದೆ ಮತ್ತು ವಿಕ್ರಂತ್ ಮುಂದೆ ಕೆಟ್ಟವಳನ್ನಾಗಿ ಮಾಡುವ ಎಲ್ಲಾ ಪ್ರಯತ್ನಗಳನ್ನು ವೈಷ್ಣವಿ ಮಾಡುತ್ತಲೇ ಬಂದಿದ್ದಾಳೆ. ತನ್ನ ಭವಿಷ್ಯವು ಹಾಳಾಗಲು ಸ್ಪಂದನವೇ ಕಾರಣ ಎಂದು ಬಲವಾಗಿ ನಂಬಿರುವ ವೈಷ್ಣವಿ ಸದಾ ಒಂದಲ್ಲ ಒಂದು ವಿಚಾರಗಳಲ್ಲಿ ಸ್ಪಂದನಾ ಜೊತೆ ಜಗಳವಾಡುತ್ತಾ ಬಂದಿದ್ದಾಳೆ.


  ಅಜಯ್ ಮತ್ತು ಸಾಹಿತ್ಯ ಪರಸ್ಪರ ಇಷ್ಟಪಟ್ಟೆ ಮದುವೆಯಾದರೂ ಅವರಿಬ್ಬರನ್ನು ಯಾವುದೋ ಒಂದು ಕಾರಣಕ್ಕಾಗಿ ಹೆತ್ತ ತಾಯಿಯೇ ಬೇರೆ ಮಾಡಿದ್ದಾರೆ. ಅಷ್ಟೇ ಅಲ್ಲ ಸಾಹಿತ್ಯಳಿಗೆ ತನ್ನ ಹಳೆಯ ಜೀವನದ ಬಗ್ಗೆ ನೆನಪು ಬರಬಾರದು ಎಂದು ಆಕೆಯನ್ನು ಹುಚ್ಚಿಯ ಸ್ಥಾನವನ್ನು ಕೂಡ ನೀಡಿದ್ದಾರೆ.


  ಇದನ್ನೂ ಓದಿ: Sathya Serial: ಅತ್ತೆ ಸೀತಾ ಚುಚ್ಚು ಮಾತಿನಿಂದ ತಾಳ್ಮೆ ಕಳೆದುಕೊಳ್ಳುತ್ತಾಳಾ ಸತ್ಯ?


  ಸಾಹಿತ್ಯಳ ಬದುಕನ್ನು ಸರಿಪಡಿಸುತ್ತಾಳಾ ಸ್ಪಂದನಾ 


  ಮುಂದೆ ಸ್ಪಂದನ ಸಾಹಿತ್ಯಳ ಬದುಕನ್ನು ಸರಿಪಡಿಸುತ್ತಾಳಾ? ವಿಕ್ರಾಂತ್ ಮತ್ತು ಸ್ಪಂದನ ಖುಷಿಖುಷಿಯಾಗಿ ಜೀವನ ನಡೆಸುತ್ತಾರೆ ಎಂದು ನೋಡಬೇಕಿದೆ. ಅತ್ತ ವೈಷ್ಣವಿ ಬದುಕು ಮತ್ತೆ ಹಾದಿಗೆ ಬರುತ್ತದೆಯೋ ಎನ್ನುವುದು ಕೂಡ ವೀಕ್ಷಕರಲ್ಲಿ ಕುತೂಹಲವಿದೆ. ವಾಸ್ತವದಲ್ಲಿ ವೈಷ್ಣವಿ ಒಳ್ಳೆ ಮನಸ್ಸಿನ ಹುಡುಗಿ ಆದರೆ ತನ್ನ ಬದುಕು ಹಾಳಾಗಿರುವ ಕಾರಣ ಇದೀಗ ಅವಳು ಸ್ಪಂದನಾಳ ಬದುಕನ್ನು ಕೂಡ ಹಾಳು ಮಾಡಬೇಕು ಎನ್ನುವ ಪಣತೊಟ್ಟಿದ್ದಾಳೆ.

  Published by:Swathi Nayak
  First published: