Jenu Goodu Serial: ಜೇನುಗೂಡು ನಡು ಕೋಟೆ ಮನೆಯಲ್ಲಿ ದಿಯಾ-ಶಶಾಂಕ್ ಮದುವೆ ಸಂಭ್ರಮ

ನಡು ಕೋಟೆ ಮನೆಯಲ್ಲಿ ದಿಯಾ ಮತ್ತು ಶಶಾಂಕ್ ಮದುವೆ ಸಂಭ್ರಮ ಕೂಡ ನಡೆಯುತ್ತಾ ಇದೆ. ಉತ್ತರ ಕರ್ನಾಟಕ ಶೈಲಿಯ ಈ ಮದುವೆಯ ಶಾಸ್ತ್ರಗಳು ಕೂಡ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದೆ.

ದಿಯಾ-ಶಶಾಂಕ್

ದಿಯಾ-ಶಶಾಂಕ್

  • Share this:
    ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಜೇನುಗೂಡು (Jenu Goodu) ಕೂಡ ಒಂದು. ಕೂಡುಕುಟುಂಬದ ನಡುವೆ ಪರಸ್ಪರ ಅನ್ಯೋನ್ಯತೆಯಿಂದ ಮನೆಮಂದಿಯಲ್ಲಾ ಸಂತೋಷದಿಂದ ಇರುವ ಧಾರಾವಾಹಿಯು ಪ್ರೇಕ್ಷಕರ ಅಚ್ಚುಮೆಚ್ಚು. ದಿಯಾ (Diya) ಹಾಗೂ ಶಶಾಂಕನ (Shashank) ನಡುವಿನ ಕೋಳಿ ಜಗಳ ಮತ್ತು ಮನಸ್ಸಿನ ಒಳಗೆ ಅವಿತಿರುವ ಪ್ರೀತಿ ನೋಡಲು ಪ್ರೇಕ್ಷಕರು ಸದಾ ಕಾಯುತ್ತ ಇರುತ್ತಾರೆ. ಇದೀಗ ನಡು ಕೋಟೆ ಮನೆಯಲ್ಲಿ ದಿಯಾ ಮತ್ತು ಶಶಾಂಕ್ ಮದುವೆ (Marriage) ಸಂಭ್ರಮ ಕೂಡ ನಡೆಯುತ್ತಾ ಇದೆ. ಉತ್ತರ ಕರ್ನಾಟಕ ಶೈಲಿಯ ಈ ಮದುವೆಯ ಶಾಸ್ತ್ರಗಳು ಕೂಡ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದೆ.

    ಮದುವೆ ಜವಳಿ ತೆಗೆದುಕೊಂಡು ಬಂದ  ಉಮೇಶಣ್ಣ

    ವಿನಾಯಕ್ ದಾದಾ ಈಗಾಗಲೇ ಮದುವೆಯ ಎಲ್ಲಾ ಖರ್ಚುಗಳನ್ನು ಇಷ್ಟೇ ಮಿತಿಯೊಳಗೆ ಮುಗಿಸಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಆದರೆ ನಡು ಕೋಟೆ ಮನೆಯ ಹೆಂಗಸರದ್ದು ಈಬಾರಿ ಖರ್ಚು ಡಬಲ್ ಆಗುವ ಸೂಚನೆ ಕಾಣಿಸುತ್ತಿದೆ. ಸುಮಿ ಮದುವೆಯಲ್ಲಿ ಇಷ್ಟೆಲ್ಲ ಖರ್ಚಾಗಿತ್ತು ಅಷ್ಟೇ ದುಡ್ಡಲ್ಲಿ ಶಶಾಂಕ್ ಮದುವೆ ಮಾಡಲು ವಿನಾಯಕ ದಾದಾ ಹೇಳಿದ್ದಾರೆ. ಆದರೆ ಈ ಬಾರಿ ಖರ್ಚು ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತಿದೆ. ಕುಕ್ಕಿ ಮತ್ತು ಗ್ಯಾಂಗ್ ಸೇರಿಕೊಂಡು ದಿಯಾ ಹಾಗೂ ಶಶಾಂಕ್ ಪ್ರಿ ವೆಡ್ಡಿಂಗ್ ಶೂಟ್ ಕೂಡ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಡಿಸಿದ್ದಾರೆ. ನಡು ಕೋಟೆ ಮನೆಯ ಸಂತಸವನ್ನು ಹೆಚ್ಚಿಸಲು ಇದೀಗ ಮದುವೆ ಜವಳಿ ತೆಗೆದುಕೊಂಡು ಬಂದಿದ್ದಾರೆ ನಡು ಕೋಟೆ ಮನೆಯ ಆಪ್ತ ದಾದಾನ ಸ್ನೇಹಿತ ಉಮೇಶಣ್ಣ.

    ಇದನ್ನೂ ಓದಿ: Jothe Jotheyali Serial: ಜೊತೆ ಜೊತೆಯಲಿ ಸೀರಿಯಲ್​ಗೆ 30 ಮಿಲಿಯನ್ ವೀಕ್ಷಕರು! ವಿಶೇಷ ಏನು ಗೊತ್ತಾ?

    ದಿಯಾ ಮನಸಲ್ಲಿ ಶಶಾಂಕ್ ಬಗ್ಗೆ ಪ್ರೀತಿಯ ಭಾವನೆ!

    ದಿಯಾ ಮತ್ತು ಶಶಾಂಕ್ ಪರಸ್ಪರ ಇಷ್ಟವಿಲ್ಲದೆ ಮದುವೆಯಾಗಲು ಹೊರಟವರು. ಮನೆಯವರ ಸಂತೋಷಕ್ಕಾಗಿ ಪರಸ್ಪರ ದ್ವೇಷಿಸುತ್ತಿದ್ದ ದಿಯಾ ಹಾಗೂ ಶಶಾಂಕ್ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಹಲವಾರು ಅಡೆತಡೆಗಳು ಎದುರಾದರೂ ಇದೀಗ ಮದುವೆಯ ಸಂಭ್ರಮ ಮನೆಯಲ್ಲಿ ಆರಂಭವಾಗಿದೆ. ದಿಯಾ ಮನಸಲ್ಲಿ ಶಶಾಂಕ್ ಬಗ್ಗೆ ಪ್ರೀತಿಯ ಭಾವನೆ ಮೂಡುತ್ತಿರುವುದು ಮನೆಮಂದಿಯಲ್ಲಾ ಕಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಕುಕ್ಕಿ ಮತ್ತು ಗ್ಯಾಂಗ್ ದಿಯಾ ಹಾಗೂ ಶಶಾಂಕ್ ಅನ್ನು ಒಂದು ಮಾಡಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

    ದಿಯಾ ಮತ್ತು ಶಶಾಂಕ್ ಈ ಮುಂಚೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಅದು ಮನೆಯವರಿಗೂ ಗೊತ್ತಿರುವ ವಿಚಾರವೇ. ದಿಯಾ ಡಿಗ್ರಿಯನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಮಾಡಿದರೆ ಡಿವೋರ್ಸ್ ಪಡೆಯುವುದು ಎಂದು. ಒಂದು ವರ್ಷಕ್ಕೆ ಮಾತ್ರ ಇದು ಅಧಿಕೃತ ಮದುವೆಯಾಗಿ ಉಳಿಯುವುದು ಎಂಬುದಾಗಿತ್ತು. ಆದರೆ ಈಗ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಪ್ರೀತಿಗಾಗಿ ದಿಯಾ ಡಿಗ್ರಿ ಬಿಡುತ್ತಾಳಾ ಅಥವಾ ಡಿಗ್ರಿಗಾಗಿ ಪ್ರೀತಿ ತೊರೆಯುತ್ತಾಳಾ ನೋಡಬೇಕಿದೆ.

    ಇದನ್ನೂ ಓದಿ: Kannadathi Serial: ವಿಘ್ನಗಳೆಲ್ಲಾ ಕಳೆದು ಸುಸೂತ್ರವಾಗಿ ನಡೆಯಿತು ಹರ್ಷ-ಭುವಿಯ ಕನ್ನಡದ ಮದುವೆ

    ವಿನಾಕಾರಣ ನಡು ಕೋಟೆ ಮನೆಯವರನ್ನು ದ್ವೇಷಿಸುತ್ತಿರುವ ತಾಯಿ ಶುಭಾಘ್ನಿ

    ದಿಯಾಳ ತಾಯಿ ಆರಂಭದಿಂದಲೂ ದಿಯಾಳ ಜೊತೆ ಇದ್ದವರಲ್ಲಾ. ಅಮೆರಿಕದಲ್ಲಿ ಆಡಂಬರದ ಜೀವನ ಮಾಡಿಕೊಂಡು ಇದ್ದವರು ಇದೀಗ ಮತ್ತೆ ಡಾಕ್ಟರ್ ಮನೆಗೆ ಸೇರಿದ್ದಾರೆ. ಶ್ರೀಮಂತಿಕೆ ಮದ ಹತ್ತಿರುವ ಶುಭಾಘ್ನಿಗೆ ಪಡುಕೋಟೆ ಮನೆಯನ್ನು ಕಂಡರೆ ಏನೋ ದ್ವೇಷ. ಮದುವೆ ಕಾರ್ಯಗಳಲ್ಲಿ ಇಷ್ಟವಿಲ್ಲದಿದ್ದರೂ ಕೋಪಿಸಿಕೊಂಡು ಕೋಟೆ ಮನೆಗೆ ಬಂದಿದ್ದಾಳೆ‌ ದಿಯಾಳ ತಾಯಿ.

    ದಿಯಾಳ ಅತ್ತೆ ಮಗಳು ಮಾಯಾ ಶಶಾಂಕ್ ಅನ್ನು ಪ್ರೀತಿಸುತ್ತಿದ್ದಾಳೆ. ದಿಯಾ ಮತ್ತು ಶಶಾಂಕ್ ನಡುವಿನ ಪ್ರೀತಿಯನ್ನು ಆಕೆಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಸಕಲೇಶಪುರಕ್ಕೆ ಹೋಗಿದ್ದ ನಡುಕೋಟೆ ಕುಟುಂಬದ ಸಂತೋಷವನ್ನು ಹಾಳು ಮಾಡಲು ಮಾಯ ಕೂಡ ಅಲ್ಲಿಗೆ ಹೋಗಿದ್ದಳು. ಇನ್ನು ಈ ಮದುವೆ ಕಾರ್ಯದಲ್ಲಿ ಹೇಗೆ ಸಂತೋಷವನ್ನು ಹಾಳು ಮಾಡುವ ಪ್ರಯತ್ನದಲ್ಲಿ ಇದ್ದಾಳೆ ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ನೋಡಬೇಕು.
    Published by:Swathi Nayak
    First published: