'ಜೇನುಗೂಡು' (Jenu Goodu) ಧಾರಾವಾಹಿ ಸಿಕ್ಕಾಪಟ್ಟೆ ಮಜಾ ನೀಡುತ್ತಿದೆ. ಸಕಲೇಶಪುರದ (Sakleshpura) ಸುಂದರ ನೋಟದ ನಡುವೆ ದಿಯಾ ಶಶಾಂಕ್ ಜಗಳದ ನಡುವೆ ಇದೀಗ ಸ್ನೇಹಿತರ ಬಳಗವೂ ಹೆಚ್ಚಾಗಿದೆ. ದಿಯಾ (Diya) ಮತ್ತು ಶಶಾಂಕ್ (Shashank) ನಡುವೆ ಮಾತು ಎತ್ತಿದರೆ ಶುರುವಾಗುತ್ತಿದ್ದ ಜಗಳ, ಈಗ ಒಬ್ಬರಿಗೊಬ್ಬರು ಹೊಟ್ಟೆಕಿಚ್ಚು ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ದಿಯಾಗೆ ನಡುಕೋಟೆ (Nadukote) ಮನೆಯವರ ಜೊತೆ ಇರುವುದೆಂದರೆ ಇನ್ನಿಲ್ಲದ ಖುಷಿ. ನಡುಕೋಟೆ ಮನೆಯ ಮಂದಿ ಜೊತೆಗಿದ್ದರೆ ಸಾಕು ಯಾವ ಕ್ರಿಶ್ ಬೇಡ, ಯಾವ ಫ್ರೆಂಡ್ಸ್ ಬೇಡ ಅಂತಿದ್ದಳು. ಆದರೆ ಮಾಯಾ ಎಂಬ ಬಿರುಗಾಳಿ ಬಂದು ಒಕ್ಕರಿಸಿ, ಅಲ್ಲೋಲ ಕಲ್ಲೋಲ ಮಾಡುತ್ತಿದೆ.
ಮಾಯಾ ಬುದ್ಧಿ ಕುಕ್ಕಿ ಗ್ಯಾಂಗ್‌ಗೆ ಅರ್ಥವಾಗಿದೆ?
ಶಶಾಂಕ್ ಮತ್ತು ದಿಯಾ ಒಟ್ಟಿಗೆ ಇರುವುದಕ್ಕೆ ಬಿಡುತ್ತಲೆ ಇಲ್ಲ. ಫೈರ್ ಕ್ಯಾಂಪ್ ಇದೆ ಅಂತ ಮಾಯಾಳನ್ನು ರೂಮಿನಲ್ಲಿಯೇ ಬಿಟ್ಟು ತನ್ನ ಗ್ಯಾಂಗ್ ಜೊತೆ ಹೋಗಿದ್ದ ಶಶಾಂಕ್. ಆದರೆ ಮಾಯಾ ತನಗೆ ಏನೋ ಅಪಾಯವಾಗಿದೆ ಎಂದು ಶಶಾಂಕ್‌ಗೆ ಫೋನ್ ಮಾಡಿ, ಕರೆದಿದ್ದಾಳೆ. ಮಾಯಾ ಸಕಲೇಶಪುರಕ್ಕೆ ಯಾಕೆ ಬಂದಿದ್ದಾಳೆ ಎಂಬುದು ಕುಕ್ಕಿ ಗ್ಯಾಂಗ್ ಗೆ ಈಗಾಗಲೇ ತಿಳಿದಿದೆ. ಶಶಾಂಕ್‌ನನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳುವುದಕ್ಕೆ ಮಾಯಾ ಬಂದಿದ್ದಾಳೆ ಎಂಬುದನ್ನು ಕುಕ್ಕಿ ಗ್ಯಾಂಗ್ ಅರ್ಥ ಮಾಡಿಕೊಂಡಿದೆ.
ಅದಕ್ಕೆ ಶಶಾಂಕ್‌ನಿಂದ ಮಾಯಾ ದೂರ ಇರುವಂತೆ ಅವರು ನೋಡಿಕೊಳ್ಳುತ್ತಿದ್ದಾರೆ. ಮಾಯಾ ಅದಕ್ಕೆ ಉಲ್ಟಾ ಯೋಚನೆ ಮಾಡುತ್ತಿದ್ದಾಳೆ. ಅಲ್ಲಿ ಎಲ್ಲರ ಜೊತೆಗಿದ್ದ ಶಶಾಂಕ್ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅಲ್ಲಿಂದ ಮಾಯಾಳನ್ನು ನೋಡುವುದಕ್ಕೆ ಹೋಗಿದ್ದಾನೆ. ಇದು ಎಲ್ಲರಿಗೂ ಬೇಸರ ತರಿಸಿದೆ.
ಇದನ್ನೂ ಓದಿ: Lakshana Serial: ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದ ಲಕ್ಷಣ ಧಾರಾವಾಹಿ
ದಿಯಾಗಿದೆ ಶಶಾಂಕ್ ಮೇಲೆ ಬೇಸರ
ದಿಯಾ ಒಬ್ಬಳೆ ಕುಳಿತು ಶಶಾಂಕ್ ಎಷ್ಟು ಪೆದ್ದು ಅಲ್ವಾ ಅಂತ ಯೋಚಿಸುತ್ತಿರುವಾಗಲೇ ಶಶಾಂಕ್ ಅಲ್ಲಿಗೆ ಎಂಟ್ರಿ ಕೊಡುತ್ತಾನೆ. ಅದೇ ಸಮಯಕ್ಕೆ ಕ್ರಿಶ್ ಕಾಲ್ ಮಾಡುತ್ತಾನೆ. ಒಂದು ಕಡೆ ಬೇಸರ, ಒಂದು ಕಡೆ ಕೋಪ ಎರಡು ಮಿಕ್ಸ್ ಆಗಿದ್ದ ದಿಯಾ, ಕ್ರಿಶ್‌ನ ಸಕಲೇಶಪುರಕ್ಕೆ ಬರುವಂತೆ ಕರೆಯುತ್ತಾಳೆ. ಇದು ಶಶಾಂಕ್‌ಗೆ ಕೋಪ ತರಿಸುತ್ತೆ. ಆಗ ದಿಯಾ ಹೇಳುವ ಮಾತುಗಳು ಶಶಾಂಕ್‌ಗೆ ಅರ್ಥವಾದರೆ, ಪ್ರೀತಿ ಹೆಚ್ಚಾಗಿರುತ್ತಿತ್ತು. ಮಾಯಾಳನ್ನು ನೀನು ಕರೆಸಿದ್ದಿಯಾ, ಹಾಗೇ ಕ್ರಿಶ್‌ನನ್ನು ನಾನು ಕರೆಸುತ್ತಿದ್ದೀನಿ. ಮಾಯಾ ಬಂದಿದ್ದು ನನಗೆ ಇಷ್ಟವಾಗಿಲ್ಲ ಆದರೂ ಸಹಿಸಿಕೊಂಡಿದ್ದೀನಿ. ಈಗ ಕ್ರಿಶ್ ಬಂದಿರುವುದು ನಿನಗೆ ಇಷ್ಟವಿಲ್ಲದೆ ಹೋದರೂ ಸಹಿಸಿಕೊಳ್ಳಬೇಕು ಎಂದಿದ್ದಾಳೆ.
ದಿಯಾ ತುಂಬಾ ಮುಗ್ಧಳೆ ಆದರೆ ಮಾಯಾ ಮಾಡುತ್ತಿರುವ ಎಲ್ಲಾ ಕಿತಾಪತಿ ಅರ್ಥವಾಗುತ್ತಿದೆ. ಇದೇ ಕಾರಣಕ್ಕೆ ಶಶಾಂಕ್ ಮೇಲೆ ಬೇಸರ ಮಾಡಿಕೊಂಡು ಬಂದು ಕುಳಿತಿದ್ದಾಳೆ. ಮೂಲಾಮ್ ಅಚ್ಚುವುದಕ್ಕೆ ಹೋದಾಗಲೂ ಮಾಯಾಳ ವರ್ತನೆಯಿಂದಾಗಿ ದಿಯಾಳಿಗೆ ಬೇಸರವಾಗಿತ್ತು. ಆದರೂ ಅದನ್ನು ಸಹಿಸಿಕೊಂಡು ಬಂದು ಜರಿ ಬಳಿ ಕುಳಿತಿದ್ದಳು. ಕುಕ್ಕಿಗೆ ಇಲ್ಲಿನ ಎಲ್ಲಾ ಸನ್ನಿವೇಶ ಅರ್ಥವಾಗಿದ್ದಕ್ಕೆ, ಮಾಯಾಳ ನಾಟಕಕ್ಕೆ ಬ್ರೇಕ್ ಹಾಕುವುದಕ್ಕೆಂದೆ ಡಾಕ್ಟರ್‌ನ ಕರೆಸಿ, ಮತ್ತೆ ದಿಯಾ ಇರುವ ಜಾಗಕ್ಕೆ ಶಶಾಂಕ್ ಹೋಗುವಂತೆ ಮಾಡಿದ್ದಾನೆ.
ಇದನ್ನೂ ಓದಿ: Priyanka Upendra: ಕಿರುತೆರೆಗೆ ಬಂದ ಉಪ್ಪಿಯ 'ಅರ್ಧಾಂಗಿ'! 'ಸುವರ್ಣ' ಅವಕಾಶದ ಬಗ್ಗೆ ಪ್ರಿಯಾಂಕಾ ಹೇಳಿದ್ದೇನು?
ಕ್ರಿಶ್ ಬಂದಿದ್ದಕ್ಕೆ ಶಶಾಂಕ್‌ಗೆ ಹೊಟ್ಟೆಕಿಚ್ಚು
ಈಗ ಸಕಲೇಶಪುರಕ್ಕೂ ಬಂದಿರುವ ಕ್ರಿಶ್ ಬೇರೆಯದ್ದೇ ರೀತಿಯಾಗಿ ಶಶಾಂಕ್‌ನನ್ನು ಕಾಡುತ್ತಿದ್ದಾನೆ. ಬಂದ ಕೂಡಲೇ ದಿಯಾ ಎಲ್ಲರನ್ನೂ ಪರಿಚಯ ಮಾಡಿಕೊಟ್ಟಳು. ದಿಯಾಗೆ ಕ್ರಿಶ್ ಬಾಯ್ ಫ್ರೆಂಡ್ ಆಗಿರುವುದು ಮೊದಲೆ ಇಷ್ಟವಿಲ್ಲ. ಆದರೆ ಅಗ್ರಿಮೆಂಟ್ ಮಾಡಿಕೊಳ್ಳುವಾಗ ಮಾತು ಕೊಟ್ಟಿರುವ ಕಾರಣಕ್ಕೆ ಶಶಾಂಕ್ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದಾನೆ. ಇದೀಗ ಎಲ್ಲರೂ ಸೇರಿ ಫೈರ್ ಕ್ಯಾಂಪ್ ಬಳಿ ಎಂಜಾಯ್ ಮಾಡುವ ಸಲುವಾಗಿ ಹೊರಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ