Sushma Rao: ಬೆಟ್ಟದ ಹೂವು ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಸುಷ್ಮಾ ರಾವ್! ಪಾತ್ರವೇನು ಗೊತ್ತಾ?

ಇದೀಗ ಈ ಧಾರವಾಹಿಗೆ ಹೊಸ ಪಾತ್ರವನ್ನು ಎಂಟ್ರಿ ಕೊಟ್ಟಿದೆ. ಹೌದು ಕಿರುತೆರೆಯಲ್ಲಿ ತನ್ನದೆ  ಆದ ಅಭಿಮಾನಿಗಳನ್ನು ದಶಕಗಳ ಹಿಂದೆ ಪಡೆದಿರುವ ಸುಷ್ಮ ರಾವ್ ಬೆಟ್ಟದ ಹೂವು ಧಾರವಾಹಿಗೆ ಡಾ. ಭಾವನ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಸುಷ್ಮಾ ರಾವ್

ಸುಷ್ಮಾ ರಾವ್

 • Share this:
  ಸ್ಟಾರ್ ಸುವರ್ಣ ( Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಬೆಟ್ಟದ ಹೂವು (Bettada Hoo) ಕೂಡ ಒಂದು. ಇದೀಗ ಈ ಧಾರಾವಾಹಿಗೆ ಹೊಸ ಪಾತ್ರವನ್ನು ಎಂಟ್ರಿ ಕೊಟ್ಟಿದೆ. ಹೌದು ಕಿರುತೆರೆಯಲ್ಲಿ ತನ್ನದೆ  ಆದ ಅಭಿಮಾನಿಗಳನ್ನು ದಶಕಗಳ ಹಿಂದೆ ಪಡೆದಿರುವ ಸುಷ್ಮ ರಾವ್ (Sushma Rao) ಬೆಟ್ಟದ ಹೂವು ಧಾರಾವಾಹಿಗೆ ಡಾ. ಭಾವನ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯಿಂದ ಬಂದ ಹೂವಿ (Hoovi) ಸಿಟಿಯಲ್ಲಿ ಯಾವೆಲ್ಲ ರೀತಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಅನಿವಾರ್ಯವಾಗಿ ಸಿಟಿ ಹುಡುಗ ರಾಹುಲ್ (Rahul) ಅನ್ನು ಹೇಗೆ ಮದುವೆಯಾಗುತ್ತಾಳೆ ಮತ್ತು ಮುಂದೆ ಸಿಟಿಯಲ್ಲಿ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾಳೆ ಎನ್ನುವ ಸುತ್ತಾ ಧಾರಾವಾಹಿಯ ಕಥೆ ಇದೆ.

  ಚೆನ್ನವಲ್ಸೆಯ ಪುಟ್ಟ ಹಳ್ಳಿಯ ಮುಗ್ಧ ಹುಡುಗಿ ಹೂವಿ

  ತನ್ನ ಮನೆಯವರಿಗೆ ಗೊತ್ತಿಲ್ಲದೆ ಆದ ಮದುವೆಯನ್ನು ಹೂವಿ ರಾಹುಲ್ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಸಿಟಿ ಹುಡುಗ ರಾಹುಲ್ ಈ ಮೊದಲೇ ಮಾಲಿನಿ ಎಂಬ ಹುಡುಗಿಯನ್ನು ಇಷ್ಟ ಪಟ್ಟಿರುತ್ತಾನೆ. ಹೂವಿ ತನ್ನ ಎದುರೆ ತನ್ನ ಪತಿಗೆ ಇನ್ನೊಂದು ಮದುವೆ ಮಾಡಿಸಿ ತ್ಯಾಗಮಯಿ ಆಗುತ್ತಾಳೆ. ತನ್ನ ಪತಿಯ ಮನೆಯಲ್ಲಿ ಕೆಲಸದವಳಾ ಗಿದ್ದುಕೊಂಡು ಮನೆಮಂದಿಯ ಮನಸ್ಸನ್ನು ಗೆದ್ದಿದ್ದಾಳೆ. ಚೆನ್ನವಲ್ಸೆ ಎಂಬ ಪುಟ್ಟ ಹಳ್ಳಿಯ ಮುಗ್ಧ ಹುಡುಗಿ ಹೂವಿ ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ. ತನ್ನ ಮುಗ್ಧತೆ ಹಾಗೂ ಹಳ್ಳಿ ಭಾಷೆಯ ಸೊಗಡಿನಿಂದ ಇವಳು ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದ್ದಾಳೆ ಎನ್ನುವುದರಲ್ಲಿ ಎರಡು ಮಾತಿಲ್ಲ.

  ಇದನ್ನೂ ಓದಿ: Hitler Kalyana: ಅಜ್ಜಿಯ ಉಪಾಯದಿಂದ ಒಂದಾಗ್ತಾರಾ ಲೀಲಾ ಮತ್ತು ಏಜೆ? ಹಿಟ್ಟರ್ ಕಲ್ಯಾಣದಲ್ಲಿ ಬಿಗ್ ಟ್ವಿಸ್ಟ್

  ಡಾ. ಭಾವನ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ ಸುಷ್ಮಾ ರಾವ್

  ಕನ್ನಡ ಕಿರುತೆರೆಗೆ ಅತ್ಯಂತ ಪರಿಚಿತ ಹೆಸರು ಸುಷ್ಮಾ ರಾವ್ ಅವರದ್ದು. ಇವರು ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನ ಪಾತ್ರಧಾರಿಯಾಗಿ ಗಮನ ಸೆಳೆದು, ಕಿರುತೆರೆಯ ಮನೆ ಮಗಳಾಗಿ ಕಿರುತೆರೆಯ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದರು. ಹಾಗೆ ಜೀ ಕನ್ನಡ ವಾಹಿನಿ ಪ್ರಸಾರಗೊಳ್ಳುತ್ತಿದೆ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದರು ಕಾಣಿಸಿಕೊಂಡಿದ್ದರು. ಬಳಿಕ ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದ ಇವರು ಪೂರ್ಣ ಪ್ರಮಾಣದಲ್ಲಿ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಗಿರುವಂತಹ ಸೀರಿಯಲ್ ಸಂತೆಗಳಲ್ಲಿ ತಮ್ಮ ಅದ್ಭುತವಾದ ನಿರೂಪಣೆ ಮೂಲಕ ಸೈ ಎನಿಸಿಕೊಂಡಿದ್ದಾರೆ ಸುಷ್ಮಾ ರಾವ್.

  ಇದನ್ನೂ ಓದಿ: Gattimela Serial: ಆರತಿಯ ಜೀವ ಕಾಪಾಡಲು ಹೋಗಿ ತನ್ನ ಜೀವಕ್ಕೆ ಕುತ್ತು ತಂದು ಕೊಂಡ ವೇದಾಂತ್!

  ಚೆನ್ನವಲ್ಸೆಗೆ ಹೊರಟ ಹೂವಿಗೆ ಡಾ. ಭಾವನಾ ಆಕಸ್ಮಿಕ ಭೇಟಿ

  ರಾಹುಲ್ ಈಗ ಹೂವಿಗೆ ಎರಡನೇ ಮದುವೆ ಮಾಡಿಸುವ ಯೋಚನೆ ಮಾಡಿದ್ದಾನೆ. ಅಷ್ಟೇ ಅಲ್ಲಾ ಅಕೆಗೆ ಬಗ್ಗೆ ತಿಳಿಸಲು ಹೋಗುತ್ತಿರುವ ಸಂದರ್ಭದಲ್ಲಿ ರಾಹುಲ್ ರೌಡಿಗಳ ಸರಿಯಾಗಿ ಸಿಕ್ಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇತ್ತ ಹೂವಿ ಚೆನ್ನ ವಲಸೆಗೆ ಕೈಯಲ್ಲಿ ಬಿಡಿ ಕಾಸುಯಿಲ್ಲದೆ ಹೊರಟಿದ್ದಾಳೆ. ಬಸ್ಸಿನಲ್ಲಿ ಕಂಡಕ್ಟರ್ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಟಿಕೆಟ್ಗೆ ದುಡ್ಡು ಕೊಡು ಎಂದು ಕೇಳುತ್ತಾನೆ ಆದರೆ ಹೂವಿ ಬಳಿ ಆತನಿಗೆ ಕೊಡಲು ದುಡ್ಡು ಇರುವುದಿಲ್ಲ, ದುಡ್ಡು ಇಲ್ಲ ಅಂದರೆ ನಿನ್ನ ತಾಳಿ ಕಿತ್ತುಕೊಂಡು ಎಂದು ಕಂಡಕ್ಟರ್ ಹೇಳಿದ ಸಂದರ್ಭದಲ್ಲಿ ಡಾ. ಭಾವನಾ ಅಂದರೆ ಸುಷ್ಮಾ ರಾವ್ ಅವರ ಎಂಟ್ರಿ ಆಗುತ್ತದೆ.

  ಹೂವಿಯ ಟಿಕೆಟ್ ದುಡ್ಡನ್ನು ಈಗ ಡಾ.ಭಾವನ ಕಂಡಕ್ಟರಿಗೆ ನೀಡಿ ಅನುಚಿತವಾಗಿ ವರ್ತಿಸಿದಕ್ಕೆ ಬುದ್ಧಿಮಾತು ಕೂಡ ಹೇಳಿದ್ದಾಳೆ. ಮುಂದೆ ಅವರಿಬ್ಬರ ನಡುವಿನ ಸ್ನೇಹ ಹೂವಿ ಬಾಳಲ್ಲಿ ಹೊಸ ತಿರುವು ಎದುರಾಗಬಹುದು ಎನ್ನುವುದನ್ನು ಕಾದು ನೋಡಬೇಕಿದೆ
  Published by:Swathi Nayak
  First published: