ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ ಬೆಟ್ಟದ ಹೂ(Bettada Hoo) ಕೂಡ ಒಂದು. ಚೆನ್ನವಲ್ಸೆ (Chennavalse) ಎಂಬ ಪುಟ್ಟ ಹಳ್ಳಿಯಿಂದ ಹುಟ್ಟಿಕೊಂಡ ಈ ಕಥೆಯು ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ಜನ ಮನ ಗೆಲ್ಲುತ್ತಿದೆ. ಚೆನ್ನವಲ್ಸೆ ಎಂಬ ಪುಟ್ಟ ಹಳ್ಳಿಯ ಮುಗ್ಧ ಹುಡುಗಿ ಹೂವಿ (Hoovi) ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ. ತನ್ನ ಮುಗ್ಧತೆ ಹಾಗೂ ಹಳ್ಳಿ ಭಾಷೆಯ ಸೊಗಡಿನಿಂದ ಇವಳು ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದ್ದಾಳೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆಕಸ್ಮಿಕವಾಗಿ ಇವಳ ಬಾಳಿನಲ್ಲಿ ಹೊಸ ತಿರುವೊಂದು ಎದುರಾಗಿ ಪೇಟೆಯ ಹುಡುಗ ರಾಹುಲ್ (Rahul) ಜೊತೆಗೆ ಇವಳ ಮದುವೆಯಾಗುತ್ತದೆ. ಹಳ್ಳಿಯಲ್ಲಿ ತನ್ನ ತಾಯಿ ಜೊತೆಗೆ ಹಾಯಾಗಿ ಇದ್ದ ಹೂವಿ ಅನಿವಾರ್ಯವಾಗಿ ಸಿಟಿ ಕಡೆಗೆ ಬರುವಂತಾಗುತ್ತದೆ.
ಹೂವಿಯನ್ನು ಸ್ವಂತ ತಂಗಿಯಂತೆ ಕಾಣುತ್ತಿದ್ದಾಳೆ ಮಾಲಿನಿ
ಸಿಟಿ ಹುಡುಗ ರಾಹುಲ್ ಈ ಮೊದಲೇ ಮಾಲಿನಿ ಎಂಬ ಹುಡುಗಿಯನ್ನು ಇಷ್ಟ ಪಟ್ಟಿರುತ್ತಾನೆ. ಹೂವಿ ತನ್ನ ಎದುರೆ ತನ್ನ ಪತಿಗೆ ಇನ್ನೊಂದು ಮದುವೆ ಮಾಡಿಸಿ ತ್ಯಾಗಮಯಿ ಆಗುತ್ತಾಳೆ. ತನ್ನ ಪತಿಯ ಮನೆಯಲ್ಲಿ ಕೆಲಸದವಳಾ ಗಿದ್ದುಕೊಂಡು ಮನೆಮಂದಿಯ ಮನಸ್ಸನ್ನು ಗೆದ್ದಿದ್ದಾಳೆ.
ಮಾಲಿನಿ ರಾಹುಲ್ ನ ಪ್ರೀತಿಯ ಮಡದಿ. ಶ್ರೀಮಂತ ಮನೆಯಿಂದ ಬಂದ ಈಕೆ ರಾಹುಲ್ ಮನೆಯಲ್ಲಿ ಎಲ್ಲರೊಂದಿಗೆ ಸಂತೋಷದಿಂದ ಜೀವನ ನಡೆಸುತ್ತಿದ್ದಾಳೆ. ಹಾಗೆ ರಾಹುಲ್ ಕರೆದುಕೊಂಡು ಬಂದ ಹೂವಿಯನ್ನು ಸ್ವಂತ ತಂಗಿಯಂತೆ ಕಾಣುತ್ತಿದ್ದಾಳೆ.
ಇದನ್ನೂ ಓದಿ: Sangharsha Serial: ಮುಗಿದೇ ಹೋಯ್ತು 'ಸಂಘರ್ಷ'ದ ಕಥೆ, 'ಸುವರ್ಣ' ಅವಕಾಶಕ್ಕೆ ಥ್ಯಾಂಕ್ಸ್ ಎಂದ ತೇಜಸ್ವಿನಿ ಶೇಖರ್
ತಾಯಿ ಮಂದ್ರಾ ಮಾತಿನಿಂದ ಚಿಂತಿತಳಾಗಿದ್ದಾಳೆ ಮಾಲಿನಿ
ಆದರೆ ಇತ್ತೀಚೆಗೆ ರಾಹುಲ್ ಹೂವಿಯ ಮೇಲೆ ಅಕ್ಕರೆಯನ್ನು ತೋರಿಸುತ್ತಿರುವುದನ್ನು ಕಂಡು ಮಾಲಿನಿ ಹೂವಿ ಹಾಗೂ ರಾಹುಲ್ ಮಧ್ಯೆ ಏನು ನಡೆಯುತ್ತಿದೆ ಎಂಬ ವಿಚಾರವನ್ನು ಅರಿತಿದ್ದಾಳೆ. ಇಬ್ಬರು ಬೇರೆ ಬೇರೆ ಇದ್ದಾಗ ಮಾಲಿನಿ ಕೂಡ ಖುಷಿಯಾಗಿ ಇರುತ್ತಾಳೆ.
ಒಂದು ವೇಳೆ ಇಬ್ಬರು ಒಟ್ಟಿಗೆ ಸೇರಿದರೆ ಮಾಲಿನಿ ಮನಸ್ಸು ಕೆಂಡಾಮಂಡಲವಾಗಿ ಬಿಡುತ್ತದೆ. ಆದರೆ ಕೆಲದಿನಗಳ ಹಿಂದೆ ಮಾಲಿನಿಯ ತಾಯಿ ಮಂದ್ರಾ ಚೆನ್ನವಲ್ಸೇ ಹೆಚ್ಚು ಹೆಣ್ಣು ಮಕ್ಕಳನ್ನು ಹೆಚ್ಚು ನಂಬಬೇಡ ಎಂದು ಹೇಳಿರುವುದು ಆಗಾಗ ಅವಳ ತಲೆಯಲ್ಲಿ ಬಂದು ಹೋಗುತ್ತಿರುತ್ತದೆ.
ಹೂವಿಯ ಮುಗ್ಧತೆಯನ್ನು ಕಂಡು ಶಾಂತಳಾಗಿದ್ದಾಳೆ ಮಾಲಿನಿ
ಇತ್ತೀಚೆಗೆ ಮನೆಯ ಸದಸ್ಯರೆಲ್ಲ ಸೇರಿ ಶಾಪಿಂಗ್ ಗೆ ಹೋಗಿದ್ದರು ಅಲ್ಲಿ ಹೂವಿಗೆ ಎಲ್ಲಿಲ್ಲದ ಅವಮಾನ ಕೂಡ ಆಗಿತ್ತು. ಆದರೆ ರಾಹುಲ್ ಆ ಸಮಸ್ಯೆಯನ್ನು ಅಲ್ಲೇ ಪರಿಹರಿಸಿದ್ದಾನೆ. ಶಾಪಿಂಗ್ ವೇಳೆ ಎಲ್ಲರೂ ತಮಗೆ ಬೇಕಾದ ಬಟ್ಟೆ ತೆಗೆದುಕೊಂಡಾಗ ಹೂವಿ ತನಗಾಗಿ ಏನು ತೆಗೆದುಕೊಂಡಿರುವುದಿಲ್ಲ ಇದನ್ನರಿತ ರಾಹುಲ್ ಅವಳಿಗಾಗಿ ಒಂದು ಸುಂದರವಾದ ಸೀರೆ ಖರೀಸಿರುತ್ತಾನೆ.
ರಾಹುಲ್ ತಂದಿರುವ ಸೀರೆ ಅಕಸ್ಮಾತಾಗಿ ಮಾಲಿನಿಯ ಕಣ್ಣಿಗೆ ಬಿದ್ದಿರುತ್ತದೆ. ರಾಹುಲ್ ನನಗಾಗಿ ಸರ್ಪ್ರೈಸ್ ಕೊಡಲೆಂದು ಇದನ್ನು ತಂದಿದ್ದಾನೆ ಅಂದುಕೊಂಡು ಮಾಲಿನಿ ಸಂತಸಗೊಂಡಿರುತ್ತಾಳೆ. ಆದರೆ ರಾಹುಲ್ ಆ ಸೀರೆಯನ್ನು ಹೂವಿಗೆ ನೀಡಿರುತ್ತಾನೆ.
ರಾಹುಲ್ ನೀಡಿರುವ ಸೀರೆಯನ್ನು ಹೂವಿ ಉಟ್ಟಿರುವುದನ್ನು ಕಂಡು ಮಾಲಿನಿಗೆ ಶಾಕ್ ಆಗಿ ಬಿಡುತ್ತದೆ. ಹೂವಿಯ ಬಳಿ ಮಾಲಿನಿ ಸೀರೆಯ ಬಗ್ಗೆ ಕೇಳಿದಾಗ ಆಕೆ ಸತ್ಯವನ್ನೇ ಹೇಳಿ ಬಿಡುತ್ತಾಳೆ. ಹೂವಿಯ ಮುಗ್ಧತೆಯನ್ನು ಕಂಡು ಮಾಲಿನಿ ಸ್ವಲ್ಪವೂ ಕೋಪಗೊಳ್ಳದೆ ಅಲ್ಲಿಂದ ಹೋಗುತ್ತಾಳೆ.
ಇದನ್ನೂ ಓದಿ: Yuganthara Serial: ಕಿರುತೆರೆಯಲ್ಲಿ ಐಎಎಸ್ ಅಧಿಕಾರಿ ಕಥೆ - ಯುಗಾಂತರದಲ್ಲಿದೆಯಾ ರೋಹಿಣಿ ಸಿಂಧೂರಿ ಜೀವನಗಾಥೆ?
ಪತಿ ರಾಹುಲ್ ನ ಪಾದ ಪೂಜೆ ಮಾಡಲು ಹೊರಟಿದ್ದಾಳೆ ಹೂವಿ
ಪ್ರತಿಯೊಂದರಲ್ಲೂ ತಾಯಿಗೆ ಮೋಸ ಮಾಡಿದ ಹೂವಿ ತಾಯಿಯ ಸಂತೋಷಕ್ಕಾಗಿ ಇಂದು ಪತಿ ರಾಹುಲ್ ನ ಪಾದ ಪೂಜೆ ಮಾಡಲು ಹೊರಟಿದ್ದಾಳೆ. ಇದಕ್ಕಾಗಿ ಹೊಸದೊಂದು ಉಪಾಯವನ್ನು ಕಂಡುಕೊಂಡಿದ್ದಾಳೆ. ಮಾಲಿನಿ ಪಾದ ಪೂಜೆ ಮಾಡುತ್ತಿರುವಾಗ ಕನ್ನಡಿಯ ಬಿಂಬದ ಮೂಲಕ ತನ್ನ ಪತಿ ರಾಹುಲ್ ಪಾದಪೂಜೆ ಮಾಡಲು ತಯಾರಾಗಿದ್ದಾಳೆ ಹೂವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ