Bettada Hoo: ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ಬೆಟ್ಟದ ಹೂ ಧಾರಾವಾಹಿ
ಹಳ್ಳಿಯಲ್ಲಿ ತನ್ನ ತಾಯಿ ಜೊತೆಗೆ ಹಾಯಾಗಿ ಇದ್ದ ಹೂವಿ ಅನಿವಾರ್ಯವಾಗಿ ಸಿಟಿ ಕಡೆಗೆ ಬರುವಂತಾಗುತ್ತದೆ. ಇದೀಗ ಈ ಧಾರಾವಾಹಿಯು ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ.
ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುವ ಬೆಟ್ಟದ ಹೂ (Bettada Hoo) ಧಾರಾವಾಹಿಯೂ ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಚೆನ್ನವಲ್ಸೆ (Chennavalse) ಎಂಬ ಪುಟ್ಟ ಹಳ್ಳಿಯ ಮುಗ್ಧ ಹುಡುಗಿ ಹೂವಿ ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ. ತನ್ನ ಮುಗ್ಧತೆ ಹಾಗೂ ಹಳ್ಳಿ ಭಾಷೆಯ ಸೊಗಡಿನಿಂದ ಇವಳು ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದ್ದಾಳೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆಕಸ್ಮಿಕವಾಗಿ ಇವಳ ಬಾಳಿನಲ್ಲಿ ಹೊಸ ತಿರುವೊಂದು ಎದುರಾಗಿ ಪೇಟೆಯ ಹುಡುಗ ರಾಹುಲ್ (Rahul) ಜೊತೆಗೆ ಇವಳ ಮದುವೆಯಾಗುತ್ತದೆ. ಹಳ್ಳಿಯಲ್ಲಿ ತನ್ನ ತಾಯಿ ಜೊತೆಗೆ ಹಾಯಾಗಿ ಇದ್ದ ಹೂವಿ (Hoovi) ಅನಿವಾರ್ಯವಾಗಿ ಸಿಟಿ ಕಡೆಗೆ ಬರುವಂತಾಗುತ್ತದೆ. ಇದೀಗ ಈ ಧಾರಾವಾಹಿಯು ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ.
ರಾಹುಲ್ ಗೆ ಹೂವಿಯ ಮೇಲೆ ಪ್ರೀತಿಯ ಭಾವನೆ!
ಇತ್ತೀಚೆಗೆ ರಾಹುಲ್ ಹೂವಿಯ ಮೇಲೆ ಅಕ್ಕರೆಯನ್ನು ತೋರಿಸುತ್ತಿರುವುದನ್ನು ಕಂಡು ಮಾಲಿನಿ ಹೂವಿ ಹಾಗೂ ರಾಹುಲ್ ಮಧ್ಯೆ ಏನು ನಡೆಯುತ್ತಿದೆ ಎಂಬ ವಿಚಾರವನ್ನು ಅರಿತಿದ್ದಾಳೆ. ಆದರೂ ಹೂವಿಯನ್ನು ಕಂಡರೆ ಮಾಲಿನಿಗೆ ಅಕ್ಕರೆ ಇದೆ. ಆದರೆ ಕೆಲದಿನಗಳ ಹಿಂದೆ ಮಾಲಿನಿಯ ತಾಯಿ ಮಂದ್ರಾ ಚೆನ್ನವಲ್ಸೇ ಹೆಚ್ಚು ಹೆಣ್ಣು ಮಕ್ಕಳನ್ನು ಹೆಚ್ಚು ನಂಬಬೇಡ ಎಂದು ಹೇಳಿರುವುದು ಆಗಾಗ ಅವಳ ತಲೆಯಲ್ಲಿ ಬಂದು ಹೋಗುತ್ತಿರುತ್ತದೆ.
ಪತಿಯ ಪಾದ ಪೂಜೆಯನ್ನು ಕನ್ನಡಿಯ ಪ್ರತಿಬಿಂಬದಲ್ಲಿ ಮಾಡಿ ಮುಗಿಸಿದ ಹೂವಿ ಕೊನೆಗೆ ರಾಹುಲ್ ನ ತಟ್ಟೆಯಲ್ಲೇ ಊಟ ಮಾಡಿ ಪೂಜೆಯನ್ನು ಸಂಪೂರ್ಣ ಗಳಿಸುತ್ತಾಳೆ. ಈ ಮುಗ್ಧ ಹುಡುಗಿಯ ಮನದಲ್ಲಿ ಬೆಟ್ಟದಷ್ಟು ನೋವಿದ್ದರೂ ಪಟಪಟ ಎಂದು ಮಾತನಾಡಿ ಎಲ್ಲರ ಮನಗೆದ್ದು ನೋವನ್ನು ನುಂಗಿ ಪತಿಯ ಮನೆಯಲ್ಲಿ ಕೆಲಸದವಳಾಗಿದ್ದುಕೊಂಡು ಜೀವನ ನಡೆಸುತ್ತಿದ್ದಾಳೆ.
ರಾಹುಲ್ ಮಾಲಿನಿ ಮಧ್ಯೆ ಭಿನ್ನಾಭಿಪ್ರಾಯ
ಮಾಲಿನಿಯ ತಾಯಿ ಮಂದ್ರಾಳಿಗೆ ಶ್ರೀಮಂತಿಕೆಯ ಅಹಂಕಾರ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ ಇದೆ. ಆದರೆ ಶ್ರೀಮಂತಿಕೆಯಲ್ಲೇ ಹುಟ್ಟಿ ಬೆಳೆದ ಮಾಲಿನಿಗೆ ಇದಾವುದರ ಬಗ್ಗೆಯೂ ಅಂತಹ ಆಸಕ್ತಿ ಏನಿಲ್ಲ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಮನಸಾರೆ ಪ್ರೀತಿಸಿ ಮದುವೆಯಾದ ರಾಹುಲ್ ಹಾಗೂ ಮಾಲಿನಿಯ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿಬರುತ್ತಿದೆ. ತಾಯಿಯ ಶ್ರೀಮಂತಿಕೆ ಮಗಳ ಭವಿಷ್ಯಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಶಾಪಿಂಗ್ ವೇಳೆ ಎಲ್ಲರೂ ತಮಗೆ ಬೇಕಾದ ಬಟ್ಟೆ ತೆಗೆದುಕೊಂಡಾಗ ಹೂವಿ ತನಗಾಗಿ ಏನು ತೆಗೆದುಕೊಂಡಿರುವುದಿಲ್ಲ ಇದನ್ನರಿತ ರಾಹುಲ್ ಅವಳಿಗಾಗಿ ಒಂದು ಸುಂದರವಾದ ಸೀರೆ ಖರೀಸಿರುತ್ತಾನೆ. ಹೂವಿಯ ಬಳಿ ಮಾಲಿನಿ ಸೀರೆಯ ಬಗ್ಗೆ ಕೇಳಿದಾಗ ಆಕೆ ಸತ್ಯವನ್ನೇ ಹೇಳಿ ಬಿಡುತ್ತಾಳೆ. ಹೂವಿಯ ಮುಗ್ಧತೆಯನ್ನು ಕಂಡು ಮಾಲಿನಿ ಸ್ವಲ್ಪವೂ ಕೋಪಗೊಳ್ಳದೆ ಅಲ್ಲಿಂದ ಹೋಗುತ್ತಾಳೆ.
ವಿಭಿನ್ನ ಕಥೆಯಿಂದ ಜನಮನ ಗೆಲ್ಲುತ್ತಿರುವ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಗಳ ಮೂಲಕ ಪ್ರೇಕ್ಷಕರನ್ನು ಮನ ರಂಜಿಸುತ್ತಿದೆ. ಮುಂದೆ ಮಾಲಿನಿಗೆ ತನ್ನ ಪತಿ ರಾಹುಲ್ ಗೆ ಈಗಾಗಲೇ ಹೂವಿ ಜೊತೆ ಮದುವೆಯಾಗಿದೆ ಎಂಬ ವಿಚಾರ ತಿಳಿದರೆ ಅವಳು ಯಾವ ರೀತಿ ಅದನ್ನು ಸ್ವೀಕರಿಸುತ್ತಾಳೆ ಎಂಬುದರ ಮೇಲೆ ಹೂವಿ ಹಾಗೂ ರಾಹುಲ್ ನ ಭವಿಷ್ಯ ನಿಂತಿದೆ. ವಾಸ್ತವವನ್ನು ಅರಿತು ಮಾಲಿನಿ ಹೂವಿಯನ್ನು ತನ್ನ ಮನೆಯಲ್ಲಿ ಇರಿಸಿಕೊಳ್ಳುತ್ತಾಳೋ ಇಲ್ಲವೋ ಎಂಬುದು ಪ್ರೇಕ್ಷಕರಿಗೆ ಎಲ್ಲರಿಗೆ ಇರುವ ಬಹುದೊಡ್ಡ ಪ್ರಶ್ನೆ. ಅತ್ತ ಮಂದ್ರಾ ತನ್ನ ಪತಿಯ ಸೀಕ್ರೇಟ್ಸ್ ತಿಳಿದು ಹೂವಿಯನ್ನು ಮತ್ತು ಅವಳ ತಾಯಿಯನ್ನು ಸುಮ್ಮನೆ ಬಿಡುತ್ತಾಳಾ ಎಂಬ ಪ್ರಶ್ನೆಗಳೆಲ್ಲಾ ಪ್ರೇಕ್ಷಕರ ಮುಂದಿದೆ
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ