Dr. Rajkumar Birthday: 'ಮುತ್ತುರಾಜ'ನ ಹುಟ್ಟುಹಬ್ಬಕ್ಕೆ ಸಿದ್ಧವಾಯ್ತು ಸ್ಟಾರ್ ಸುವರ್ಣದ 'ದೃಶ್ಯ ನಮನ'
ರಾಜ್ ಬದುಕಿದ್ದರೆ ಈ ವರ್ಷ ಅವರು 92 ವಸಂತಗಳನ್ನು ಕಳೆದು, 93ನೇ ವರ್ಷಕ್ಕೆ ಕಾಲಿರಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಅವರಿಂದು ದೈಹಿಕವಾಗಿ ನಮ್ಮೊಡನಿಲ್ಲ. ಆದರೂ ಅವರ ಹುಟ್ಟುಹಬ್ಬವನ್ನು ಆಚರಿಸೋದನ್ನು ಕನ್ನಡಿಗರು ಎಂದೂ ಬಿಡುವುದಿಲ್ಲ. ಈ ಬಾರಿಯ ಅಣ್ಣಾವ್ರ ಹುಟ್ಟುಹಬ್ಬವನ್ನು ಸ್ಪೆಷಲ್ (Special) ಆಗಿ ಸೆಲಬ್ರೇಟ್ (Celebrate) ಮಾಡಲು ಸ್ಟಾರ್ ಸುವರ್ಣ ವಾಹಿನಿ (Star Suvarna) ಸಜ್ಜಾಗಿದೆ.
ಡಾ. ರಾಜ್ಕುಮಾರ್ (Dr, Rajkumar) ಎಂದರೆ ಕನ್ನಡ (Kannada), ಹೆಮ್ಮೆಯ ಕನ್ನಡಿಗ (Kannadiga), ಕರುನಾಡ ಕೀರ್ತಿ ಕಲಶ, ಕನ್ನಡ ಸಾಂಸ್ಕೃತಿಕ ರಂಗದ ಗುರುತು, ಕನ್ನಡ ಅಸ್ಮಿತೆ ಅವರು. ಡಾ. ರಾಜ್ಕುಮಾರ್ ಎಂದರೆ ಕನ್ನಡಿಗರ ಕಿವಿ ನಿಮಿರುವುದು, ಕನ್ನಡಿಗರ ಎದೆ ಕುಣಿಯುವುದು, ಕನ್ನಡಿಗರ ಮನದಲ್ಲಿ ಹೆಮ್ಮೆಯ ಭಾವ ಮೂಡುವುದು. ರಾಜ್ಕುಮಾರ್ ಅಂದರೆ ಹಾಗೇ, ಮನೆಯ ಹಿರಿಯಣ್ಣನಿದ್ದಂತೆ. ನಟಸೌರ್ವಭೌಮ ನಮ್ಮನ್ನು ದೈಹಿಕವಾಗಿ ಅಗಲಿ 16 ವರ್ಷಗಳೇ ಆಯ್ತು. ಆದರೆ ಪ್ರತಿ ದಿನ, ಪ್ರತಿ ಕ್ಷಣ ಕನ್ನಡಿಗರು ಅವರನ್ನು ನೆನೆಪಿಸಿಕೊಳ್ಳುತ್ತಾರೆ. ಈ ಸರಸ್ವತಿ ಪುತ್ರ ನಟಿಸಿದ್ದೆಲ್ಲವೂ ಅತ್ಯುತ್ತಮ ಚಿತ್ರಗಳೇ (Cinema). ಅವುಗಳನ್ನು ಜನ ಇಂದೂ ನೋಡುತ್ತಾ, ಅಣ್ಣಾವ್ರ ಅಭಿನಯಕ್ಕೆ (Acting) ತಲೆದೂಗುತ್ತಾರೆ. ಅಂದಹಾಗೆ ಇದೇ ಏಪ್ರಿಲ್ 24ರಂದು ಡಾ. ರಾಜ್ಕುಮಾರ್ ಜನ್ಮ ದಿನಾಚರಣೆ (Birthday). ಭೌತಿಕವಾಗಿ ರಾಜ್ ಬದುಕಿದ್ದರೆ ಈ ವರ್ಷ ಅವರು 92 ವಸಂತಗಳನ್ನು ಕಳೆದು, 93ನೇ ವರ್ಷಕ್ಕೆ ಕಾಲಿರಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಅವರಿಂದು ದೈಹಿಕವಾಗಿ ನಮ್ಮೊಡನಿಲ್ಲ. ಆದರೂ ಅವರ ಹುಟ್ಟುಹಬ್ಬವನ್ನು ಆಚರಿಸೋದನ್ನು ಕನ್ನಡಿಗರು ಎಂದೂ ಬಿಡುವುದಿಲ್ಲ. ಈ ಬಾರಿಯ ಅಣ್ಣಾವ್ರ ಹುಟ್ಟುಹಬ್ಬವನ್ನು ಸ್ಪೆಷಲ್ (Special) ಆಗಿ ಸೆಲಬ್ರೇಟ್ (Celebrate) ಮಾಡಲು ಸ್ಟಾರ್ ಸುವರ್ಣ ವಾಹಿನಿ (Star Suvarna) ಸಜ್ಜಾಗಿದೆ.
‘ಮುತ್ತುರಾಜನಿಗೆ ದೃಶ್ಯ ನಮನ’ ಸಲ್ಲಿಸಲು ಸ್ಟಾರ್ ಸುವರ್ಣ ಸಜ್ಜು
ಇದೇ ಏ. 24ರಂದು ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಅಂಗವಾಗಿ ರಾಜ್ಕುಮಾರ್ ಕುರಿತ ವಿಶೇಷ ಕಾರ್ಯಕ್ರಮ ಪ್ರಸಾರಕ್ಕೆ ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ. ಒಂದು ವಾರಗಳ ಕಾಲ 'ಮುತ್ತುರಾಜನಿಗೆ ದೃಶ್ಯ ನಮನ' ಸಲ್ಲಿಸುತ್ತಿದೆ. ಈ ಮೂಲಕ ರಾಜ್ ಅಭಿನಯದ ದೃಶ್ಯಗಳ ಮೆಲುಕು ಹಾಕಲಾಗುತ್ತದೆ.
ರಾಜ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಸೀರಿಯಲ್ ಸ್ಟಾರ್ಸ್
ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪ್ರಮುಖ ಪಾತ್ರಧಾರಿಗಳು ಡಾ.ರಾಜಕುಮಾರ್ ಅವರ ಎವರ್ ಗ್ರೀನ್ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಏ.22ರಂದು ‘ಮುದ್ದುಮಣಿಗಳು’ ಧಾರಾವಾಹಿಯಲ್ಲಿ ‘ಜೀವ ಹೂವಾಗಿದೆ…’ ಹಾಡಿಗೆ, ದೃಷ್ಟಿ ಮತ್ತು ಶಿವು, ಭೂಮಿ ಮತ್ತು ಶ್ರವಣ್ ಜೋಡಿಗಳು ರೆಟ್ರೋ ಲುಕ್ ನಲ್ಲಿ ಸ್ಟೆಪ್ ಹಾಕಲಿದ್ದಾರೆ.
ಇನ್ನು 'ಬೆಟ್ಟದ ಹೂ' ಧಾರಾವಾಹಿಯ ರಾಹುಲ್, ಹೂವಿ ಮತ್ತು ಮಾಲಿನಿ ಏ.25ರಂದು ‘ಚಿನ್ನದ ಮಲ್ಲಿಗೆ ಹೂವೇ…’ ಹಾಡಿಗೆ ತ್ರಿಕೋನ ಪ್ರೇಮ ಕಾವ್ಯ ಸೃಷ್ಟಿಸಲಿದ್ದಾರೆ. 'ಮರಳಿ ಮನಸಾಗಿದೆ' ಧಾರಾವಾಹಿಯ ವಿಕ್ರಾಂತ್ ಮತ್ತು ಸ್ಪಂದನ ಏ.26ರಂದು ‘ಚಂದಿರ ತಂದ ಹುಣ್ಣಿಮೆ ರಾತ್ರಿ…’ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಏ.26ರಂದು ‘ಜೇನುಗೂಡು’ ಧಾರಾವಾಹಿಯ ಶಶಾಂಕ್ ಮತ್ತು ದಿಯಾ 'ನನ್ನ ನೀನು ಗೆಲ್ಲಲ್ಲಾರೆ …' ಎಂದು ನೃತ್ಯ ಸ್ಪರ್ಧೆ ನಡೆಸಲಿದ್ದಾರೆ.
ಆದಿ-ರಾಗ ಡ್ಯೂಯೆಟ್!
ಏ.27ರಂದು 'ಮನಸೆಲ್ಲಾ ನೀನೆ'ಯ ಅದಿತ್ಯ ಮತ್ತು ರಾಗ 'ಆ ರತಿಯೇ ಧರೆಗಿಳಿದಂತೆ…’ ಎಂದು ಡ್ಯೂಯೆಟ್ ಹಾಡಲಿದ್ದಾರೆ ಮತ್ತು ಏ.28ರಂದು ‘ಸಂಫರ್ಷ’ದ ರಾಜ , ಇಂದಿರಾಳಿಗೆ ‘ಓ ನಲ್ಲೇ ಸವಿ ನುಡಿಯ ಹೇಳಿ…’ಎಂದು ಹಾಡಲಿದ್ದಾನೆ. ಡಾ. ರಾಜ್ ಕುಮಾರ್ ಅವರ ಈ ಸುಪ್ರಸಿದ್ಧ ಹಾಡುಗಳಿಗೆ ಕಿರುತೆರೆಯಲ್ಲಿ ಹೊಸ ರೂಪ ಕೊಡುವ ಮೂಲಕ ಸ್ಟಾರ್ ಸುವರ್ಣ ವಾಹಿನಿ 'ಮುತ್ತುರಾಜನಿಗೆ ದೃಶ್ಯ ನಮನ' ಸಲ್ಲಿಸುತ್ತಿದೆ.