Jenu Goodu: ಶಶಾಂಕ್- ದಿಯಾ ಜೋಡಿಯ ಮಧ್ಯೆ ಮತ್ತೆ ಮತ್ತೆ ಮಾಯಾ ಎಂಟ್ರಿ - ಸಕ್ಸಸ್​ ಆಗುತ್ತಾ ಆಕೆಯ ಪ್ಲ್ಯಾನ್​?

ದಿಯಾಳ ಖುಷಿಗೆ ನಡುಕೋಟೆ ಮನೆಯವರೆಲ್ಲಾ ಸಾಥ್ ನೀಡಿದ್ದಾರೆ. ದಿಯಾಳ ಖುಷಿಗಾಗಿ ಸಕಲೇಶಪುರದ ಜೇನುಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಇಬ್ಬರ ನಡುವಲ್ಲಿ ಪ್ರೀತಿ ಮೂಡಿಸಲು ಕುಟುಂಬಸ್ಥರೇ ಸರ್ಕಸ್ ಮಾಡುತ್ತಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸ್ಟಾರ್ ಸುವರ್ಣ (Star Suvarna) ವಾಹಿನಿಯ ಜೇನುಗೂಡು (Jenu Goodu) ಧಾರವಾಹಿಯಲ್ಲಿ ಪ್ರೀತಿಯ ದಿಯಾಳ ಖುಷಿಗಾಗಿ ನಡುಕೋಟೆಯ ಮನೆಯವರು ದಿಯಾಳ ಜೊತೆ ಸಕಲೇಶಪುರದ ಜೇನುಗುಡ್ಡಕ್ಕೆ ಭೇಟಿ ನೀಡಿದ್ದಾರೆ. ಇಬ್ಬರ ನಡುವಲ್ಲಿ ಪ್ರೀತಿ (Love) ಮೂಡಿಸಲು ಕುಟುಂಬಸ್ಥರು ಸರ್ಕಸ್ ಮಾಡುತ್ತಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ಶಾಕ್ ನೀಡಲು ದಿಯಾಳ ಅತ್ತೆ ಮಗಳು ಮಾಯ (Maaya) ಕೂಡ ಇದ್ದಕ್ಕಿದ್ದಂತೆ ಸಕಲೇಶಪುರದಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಮಾಯಾ ಮತ್ತು ದಿಯಾ (Diya) ಎದುರು ಬದುರಾದರೆ ಅಲ್ಲಿ ಯುದ್ಧವೇ ಶುರುವಾಗುತ್ತದೆ. ಮಾಯಾ ಸಣ್ಣ ಸಣ್ಣ ವಿಚಾರಕ್ಕೂ ವ್ಯಂಗ್ಯ ಮಾಡಿ ಮಾತನಾಡುತ್ತಾಳೆ. ದಿಯಾ ವಿಚಾರ ಎಂದರೆ ಮನಸ್ಸಿಗೆ ನೋವಾಗುವಂತೆ, ಹಗುರವಾಗಿಯೇ ಮಾತನಾಡುತ್ತಾಳೆ. ಇದರಿಂದ ದಿಯಾ ಕೋಪ ನೆತ್ತಿಗೇರಿ, ಜಗಳ ವಿಕೋಪಕ್ಕೆ ಏರುತ್ತದೆ.

  ಸಕಲೇಶಪುರಕ್ಕೆ ಬಂದಳಲ್ಲ ಮಾಯಾ

  ಇದೀಗ ಸಕಲೇಶಪುರಕ್ಕೂ ಮಾಯಾ ಬಂದಿದ್ದಾಳೆ. ಇದು ಎಲ್ಲರಿಗೂ ನಿಜಕ್ಕೂ ಶಾಕ್ ಆಗಿದೆ. ಆದರೆ ಯಾರು ಏನನ್ನು ಹೇಳುವ ಹಾಗಿಲ್ಲಇಡೀ ಫ್ಯಾಮಿಲಿ ಎಂಜಾಯ್ ಮೂಡಿನಲ್ಲಿದ್ದಾರೆ. ಆದರೆ ಅದನ್ನು ಒಂದು ಕ್ಷಣದಲ್ಲಿ ಹಾಳು ಮಾಡಲು ಮಾಯಾ ಸಾಕು. ಅದರಲ್ಲೂ ಬಂದ ಕೂಡಲೇ ದಿಯಾಗೆ ಟಾಂಗ್ ಕೊಡುತ್ತಿದ್ದಾಳೆ. ನಾನು ಬಂದಿದ್ದು ನಿನಗೆ ಡಿಸ್ಟರ್ಬ್ ಆಯ್ತಾ ದಿಯಾ ಅಂತಿದ್ದಾಳೆ. ದಿಯಾ ಎಷ್ಟು ಮುಗ್ಧಳೋ ಹಾಗೇ ಆಕೆಯ ತಂಟೆಗೆ ಬಂದರೆ ಚಳಿ ಜ್ವರವನ್ನು ಬಿಡಿಸುವ ಜಗಳಗಂಟಿ. ಹೀಗಾಗಿ ಮಾಯಾಗೆ ನಂಗ್ಯಾವ ತೊಂದರೆಯೂ ಇಲ್ಲ ಎಂದಿದ್ದಾಳೆ. ಮಾಯಾ ಎಂಟ್ರಿಯಿಂದ ಇನ್ನು ಒಂದು ದಿನ ಇದ್ದಂತೆ ಟ್ರಿಪ್‌ನ ಚಿತ್ರಣ ಕಂಪ್ಲೀಟ್ ಬದಲಾಗುವ ಸಾಧ್ಯತೆ ಇದೆ.

  ಇದನ್ನೂ ಓದಿ: Aishwarya Salimath: ತಮಿಳು ಧಾರಾವಾಹಿಯಲ್ಲಿ ನಾಯಕಿಯಾಗಿ ಅಗ್ನಿಸಾಕ್ಷಿಯ ತನು

  ಮಾಯಾಳ ನಡವಳಿಕೆ ದಿಯಾ ಹಾಗೂ ನಡುಕೋಟೆ ಕುಟುಂಬಕ್ಕೂ ಬೇಸರ ತರಿಸಿದೆ

  ಈಗಾಗಲೇ ನಡುಕೋಟೆ ಕುಟುಂಬದ ದಿಯಾ ಹಿತೈಶಿಗಳು ಮಾಯಾಗೆ ವಾರ್ನ್ ಮಾಡಿದ್ದಾರೆ. ನೀನು ಅಸಿಸ್ಟೆಂಟ್ ಇದ್ದೀಯಾ, ಸೋ ಅಸಿಸ್ಟೆಂಟ್ ಆಗಿನೇ ಇರು. ನಿನ್ನ ಸೀನಿಯರ್ ಪರ್ಸನಲ್ ಲೈಫ್‌ನಲ್ಲಿ ಮೂಗು ತೂರಿಸಬೇಡ ಎಂದಿದ್ದಾರೆ. ಆದರೆ, ಮಾಯಾ ಇವುಗಳನ್ನೆಲ್ಲಾ ಹೇಗೆ ಬಿಡಲು ಸಾಧ್ಯ? ದಿಯಾಳಿಂದ ಬಿಡಿಸಿ, ಶಶಾಂಕ್ ಒಲವನ್ನು ತನ್ನ ಕಡೆ ಸೆಳೆದುಕೊಳ್ಳಲು ಯತ್ನಗಳನ್ನು ಮಾಡುತ್ತಿದ್ದಾಳೆ ಮಾಯಾ.

  ಮಾಯಾಳಿಂದ ದಿಯಾ ಬದುಕಲ್ಲಿ ಅಲ್ಲೋಲ ಕಲ್ಲೋಲ

  ಡಾ.ಶ್ರೀಧರ್ ತನ್ನ ಶ್ರೀಮಂತಿಕೆಯ ದರ್ಪದಿಂದಲೇ ತನ್ನ ತಾಯಿಯನ್ನು ಕರೆದುಕೊಂಡು ಹೋದರು ಹೋಗಿದ್ದಾರೆ ಎಂಬ ಸಿಟ್ಟು ಮಾಯಾಳಿಗೆ. ಹೀಗಾಗಿಯೇ ಮಾಯಾಗೆ ದಿಯಾ ಮೇಲೆ ಹೇಳಿಕೊಳ್ಳಲಾಗದ ಕೋಪ. ನನಗೆ ತಾಯಿ ಪ್ರೀತಿ ಸಿಗಲಿಲ್ಲ ಆ ತಾಯಿ ಪ್ರೀತಿ ದಿಯಾಳಿಗೆ ಸಿಕ್ಕಿದೆ ಅನ್ನೋ ಆರೋಪ. ಇದೇ ಕಾರಣಕ್ಕೆ ದಿಯಾನ ಕಂಡಲ್ಲೆಲ್ಲ ರೊಚ್ಚಿಗೆದ್ದು, ಬಾಯಿಗೆ ಬಂದ ಹಾಗೇ ಮಾತನಾಡುತ್ತಿರುತ್ತಾಳೆ ಮಾಯಾ. ಆಕೆಯ ವೈಯಕ್ತಿಕ ಜೀವನಕ್ಕೂ ಹಾನಿ ಮಾಡುತ್ತಿದ್ದಾಳೆ. ಅದರಲ್ಲೂ ತಾನೂ ಪ್ರೀತಿಸುತ್ತಿದ್ದ ಹುಡುಗನನ್ನು ದಿಯಾ ಮದುವೆಯಾಗುತ್ತಿದ್ದಾಳೆ ಎಂದಾಕ್ಷಣ ಮಾಯಾ ಮನಸ್ಸಲ್ಲಿ ಮತ್ತಷ್ಟು ಬೆಂಕಿ ಹೊತ್ತಿಕೊಂಡಿದೆ. ಅದಕ್ಕಾಗಿಯೇ ಇಬ್ಬರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾಳೆ. ಸಮಯ ಸಿಕ್ಕಾಗಲೆಲ್ಲಾ ದಿಯಾ ಬಗ್ಗೆ ನೆಗೆಟಿವ್ ಮಾತುಗಳನ್ನೇ ಆಡುತ್ತಿರುತ್ತಾಳೆ.

  ಇದನ್ನೂ ಓದಿ: Jenu Goodu: ಸಕಲೇಶಪುರದ ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುತ್ತಿದ್ದಾರೆ ದಿಯಾ ಜೊತೆ ನಡುಕೋಟೆ ಕುಟುಂಬ

  ಮಾಯಾ ತನ್ನನ್ನು ಲವ್ ಮಾಡುತ್ತಿದ್ದಾಳೆಂಬ ಯಾವ ಅರಿವು ಶಶಾಂಕ್‌ಗೆ ಇಲ್ಲ

  ಮಾಯಾ ತನ್ನನ್ನು ಲವ್ ಮಾಡುತ್ತಿದ್ದಾಳೆಂಬ ಯಾವ ಅರಿವು ಶಶಾಂಕ್‌ಗೆ ಇಲ್ಲ. ದಿಯಾಳ ಜೊತೆ ಮನೆಯವರು ಮದುವೆ ಫಿಕ್ಸ್ ಮಾಡಿದ್ದಾರೆ. ಆಕೆಯೇ ಬಾಳ ಸಂಗಾತಿ ಅಂತ ಫಿಕ್ಸ್ ಆಗಿದ್ದಾನೆ. ಒಬ್ಬ ಅಸಿಸ್ಟೆಂಟ್ ಜೊತೆಗೆ ಹೇಗಿರಬೇಕೋ ಅದೇ ರೀತಿ ಮಾಯಾಳ ಜೊತೆಗೂ ಇದ್ದಾನೆ. ಆದರೆ ಮಾಯಾ, ಶಶಾಂಕ್‌ನ ಇಂಪ್ರೆಸ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾನೆ. ಇಲ್ಲಿ ಶಶಾಂಕ್ ಕೊಂಚ ಎಡವಿದರು ಸುಂದರ ಸಂಬಂಧಗಳಿಗೆ ನೋವುಂಟಾಗುತ್ತದೆ. ಅದರಲ್ಲಿ ಮಾಯಾ ಯಾವಾಗಲೂ ದಿಯಾಳನ್ನು ಹೀಯಾಳಿಸಿದರೂ ಶಶಾಂಕ್ ಹೆಚ್ಚು ಸಪೋರ್ಟ್ ಮಾಡುತ್ತಿಲ್ಲ. ಇದು ದಿಯಾಳಿಗೂ ಬೇಸರ ತರಿಸಿದೆ.
  Published by:Swathi Nayak
  First published: