Ismart Jodi: ಇದೇ ಭಾನುವಾರ ಇಸ್ಮಾರ್ಟ್ ಜೋಡಿ ಗ್ರ್ಯಾಂಡ್ ಫಿನಾಲೆ, ಯಾರಿಗೆ ವಿಜಯಮಾಲೆ?

ಇದೇ ಭಾನುವಾರ ಸಂಜೆ 6 ಗಂಟೆಗೆ ಗ್ರಾಂಡ್ ಫಿನಾಲೆ ಇದೆ. ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳು ಚೆನ್ನಾಗಿ ಆಡಿದ್ದಾರೆ. ಯಾರು ಗೆಲ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಹೆಚ್ಚಿದೆ. ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ.

ಇಸ್ಮಾರ್ಟ್ ಜೋಡಿ ಗ್ರಾಂಡ್ ಫಿನಾಲೆ

ಇಸ್ಮಾರ್ಟ್ ಜೋಡಿ ಗ್ರಾಂಡ್ ಫಿನಾಲೆ

 • Share this:
  ಸ್ಪರ್ಧಾ ಜಗತ್ತಿನಲ್ಲಿ ಓಡುತ್ತಿರಬೇಕು. ಗೆಲ್ಲಕೇ ಬೇಕು. ಇಲ್ಲ ಅಂದ್ರೆ ನೆಲ ಕಚ್ಚಿ ಬಿಡುತ್ತೇವೆ. ಒಮ್ಮೆ ನೆಲ ಕಚ್ಚಿದ್ರೆ ಮೇಲೇಳುವುದು ಕಷ್ಟ. ಸೋಲೋ, ಗೆಲುವು ಸ್ಪರ್ಧೆಯಂತೂ ಇರಲೇ ಬೇಕು. ಈಗ ಕನ್ನಡದ (Kannada) ಮನರಂಜನಾ (Entertainment) ವಾಹಿನಿಗಳು ಜನರನ್ನು ತಮ್ಮತ್ತ ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಕಲರ್ಸ್ ಕನ್ನಡದಲ್ಲಿ (Colors Kannada) ರಾಜ-ರಾಣಿ ಶೋ ಆರಂಭವಾಗಿತ್ತು. ಗಂಡ-ಹೆಂಡತಿಗಾಗಿ ಕಾರ್ಯಕ್ರಮ ಮಾಡಿದ್ರು. ಅಲ್ಲಿ ಅವರ ಭಾವನೆ, ಆಟ, ಜೀವನ ಎಲ್ಲದರ ಬಗ್ಗೆ ತಿಳಿಸಿ ಕೊಡ್ತಿದ್ರು. ಆ ಶೋ ಹಿಟ್ ಆಗಿದ್ದೇ ತಡ, ಈ ಬಾರಿ ಜೀ ಕನ್ನಡದಲ್ಲಿ (Zee Kannada) ಜೋಡಿ ನಂಬರ್ 01 ಬರ್ತಿದೆ. ಸ್ಟಾರ್ ಸುವರ್ಣದಲ್ಲಿ (Star Suvarna) ಇಸ್ಮಾರ್ಟ್  (Ismart Jodi) ಜೋಡಿ ಬರ್ತಿದೆ. ಅಲ್ಲದೇ ಕಲರ್ಸ್ ಕನ್ನಡದಲ್ಲಿ ಈ ಬಾರಿಯೂ ರಾಜ-ರಾಣಿ ಪ್ರಸಾರವಾಗುತ್ತಿದೆ. ಮೂರು ಕಾರ್ಯಕ್ರಮಗಳು ಒಂದೇ ರೀತಿಯವು. ಇಸ್ಮಾರ್ಟ್ ಜೋಡಿ ಕಾರ್ಯಕ್ರಮ ಗ್ರಾಂಡ್ ಫಿನಾಲೆ (Grand Finale) ಇದೇ ಸಂಡೆ (Sunday) ನಡೆಯಲಿದೆ.

  ಇಸ್ಮಾರ್ಟ್ ಜೋಡಿ ಕಾರ್ಯಕ್ರಮ
  ಇಸ್ಮಾರ್ಟ್ ಜೋಡಿ, ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಶೋ. ಸ್ಟಾರ್ ಸುವರ್ಣದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಶೋ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ದಂಪತಿ ಪರಸ್ಪರ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ. ಇನ್ನು ಅರ್ಥ ಮಾಡಿಕೊಳ್ಳಲಿ. ಮನಬಿಚ್ಚಿ ಮಾತನಾಡಲಿ ಎನ್ನುವುದೇ ಈ ಶೋ ಉದ್ದೇಶ.

  ಆಟಗಳ ಜೊತೆ ಜೀವನ ಪಾಠವೂ ಇರುತ್ತೆ. ಹಳೆಯ ದಿನಗಳನ್ನು ನೆನೆಸಿಕೊಂಡು ಕೆಲವರು ಖುಷಿಯಾದ್ರೆ, ಇನ್ನೂ ಕೆಲವರು ದುಃಖ ಪಟ್ಟಿದ್ದಾರೆ. ಶೋ ಮೂಲಕ ಎಷ್ಟೋ ಜನ ತಮ್ಮನ್ನು ತಾವು ಅರಿತು ಕೊಂಡಿದ್ದಾರೆ.

  ಇದನ್ನೂ ಓದಿ: Ramachari: ಅಮ್ಮನಿಗಾಗಿ ಗನ್ ಹಿಡಿದ ಚಾರು! ರೆಬೆಲ್ ಅವತಾರದಲ್ಲಿ ರಾಮಾಚಾರಿ ಮನೆಗೆ!

  ಭಾನುವಾರ ಗ್ರಾಂಡ್ ಫಿನಾಲೆ
  ಈ ಕಾರ್ಯಕ್ರಮದಲ್ಲಿ ಹಲವು ದಂಪತಿ ಭಾಗಿಯಾಗಿದ್ದರು. ಇಷ್ಟು ದಿನಗಳ ಕಾರ್ಯಕ್ರಮ ಅಂತಿಮ ಘಟಕ್ಕೆ ತಲುಪಿದೆ. ಇದೇ ಭಾನುವಾರ ಸಂಜೆ 6 ಗಂಟೆಗೆ ಗ್ರಾಂಡ್ ಫಿನಾಲೆ ಇದೆ. ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳು ಚೆನ್ನಾಗಿ ಆಡಿದ್ದಾರೆ. ಯಾರು ಗೆಲ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಹೆಚ್ಚಿದೆ.

  Star Suvarna show, star Suvarna ismart Jodi show timings, star Suvarna ismart Jodi contestants, Golden Star Ganesh, ಇಸ್ಮಾರ್ಟ್ ಜೋಡಿ ಕಾರ್ಯಕ್ರಮ, ಭಾನುವಾರ ಇಸ್ಮಾರ್ಟ್ ಜೋಡಿ ಗ್ರಾಂಡ್ ಫಿನಾಲೆ, ಸ್ಟಾರ್ ಸುವರ್ಣ ಕಾರ್ಯಕ್ರಮಗಳು, Kannada news, Karnataka news,
  ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದಲ್ಲಿ ಇಸ್ಮಾರ್ಟ್ ಜೋಡಿ


  ಫಿನಾಲೆಗೆ ಬಂದಿರುವ ಸ್ಪರ್ಧಿಗಳು ಯಾರು?
  ಹಲವಾರು ದಂಪತಿಗಳ ನಡುವಿನ ಸ್ಪರ್ಧೆಯಲ್ಲಿ 9 ಜೋಡಿಗಳು ಫಿನಾಲೆ ಹಂತವನ್ನು ತಲುಪಿದ್ದಾರೆ. ಪುನೀತ ಆಚಾರ್ಯ-ಶ್ರೀರಾಮ್ ಸುಳ್ಳ, ಜೈ ಜಗದೀಶ್-ವಿಜಯಲಕ್ಷ್ಮಿ, ಸುಮನ್ ನಗರ್ ಕರ್-ಗುರುದೇವ್ ನಾಗರಾಜ  ಫಿನಾಲೆಗೆ ಬಂದಿದ್ದಾರೆ.

  ದಿಶಾ-ಶಶಾಂಕ್, ಅಕ್ಷತಾ ಗೌಡ-ವಿನಯ್ ಗೌಡ, ವಿದ್ಯಾಶ್ರೀ-ರಘು,  ಹ್ಯಾರಿಯೆಟ್ ಲೂಯಿಸ್-ರಿಚರ್ಡ್ ಲೂಯಿಸ್, ಸಪ್ನ ದೀಕ್ಷಿತ್- ಅಶ್ವಿನ್ ದೀಕ್ಷಿತ್, ಇಂಪನಾ ಜಯರಾಜ್-ಅಜಿತ್ ಜಯರಾಜ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.

  ಗೆದ್ದವರಿಗೆ 10 ಲಕ್ಷ ಬಹುಮಾನ
  ಈ ಶೋನಲ್ಲಿ ತೀರ್ಪುಗಾರರಿರುವುದಿಲ್ಲ. ನಾನು ನಿರೂಪಕನಾಗಿರುತ್ತೇನೆ ಎಂದು ಗಣೇಶ್ ಹೇಳಿದ್ರು. ಸ್ಪರ್ಧಿಗಳಿಗೆ ಹಲವು ಟಾಸ್ಕ್​​ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ.

  ಇದನ್ನೂ ಓದಿ: Puttakkana Makkalu: 200 ಸಂಚಿಕೆಗಳ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಮುಂದಿನ ಟ್ವಿಸ್ಟ್ ಏನು?

  ಇಲ್ಲಿ ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜತೆಗೆ ಸಿನಿಮಾ ಪ್ರಮೋಷನ್‍ಗಳು ಸಹ ಇರುತ್ತವೆ. ಸೆಲೆಬ್ರಿಟಿಗಳು ಆಗಾಗ ಅತಿಥಿಯಾಗಿ ಬರುತ್ತಿರುತ್ತಾರೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೇಳಿದ್ರು.
  Published by:Savitha Savitha
  First published: