Ismart Jodi: ಸ್ಟಾರ್ ಸುವರ್ಣ ಇಸ್ಮಾರ್ಟ್ ಜೋಡಿ ಇವರೇ ನೋಡಿ, 7 ಲಕ್ಷದ ಜೊತೆ ಟೈಟಲ್ ವಿನ್ನರ್ ಆದ ಕಪಲ್

ಇಸ್ಮಾರ್ಟ್ ಜೋಡಿಯ ವಿನ್ನರ್ ಪಟ್ಟವನ್ನು ಪುನೀತ ಆಚಾರ್ಯ-ಶ್ರೀರಾಮ್  ಸುಳ್ಯಾ ಅಲಂಕರಿಸಿದ್ದಾರೆ. ಮೊದಲ ಬಾರಿ ರಿಯಾಲಿಟಿ ಶೋನಲ್ಲಿ ಗೆದ್ದ ಜೋಡಿ ಸಂಭ್ರಮದಲ್ಲಿತ್ತು. ಅವಕಾಶ ಕೊಟ್ಟ ಸ್ಟಾರ್ ಸುವರ್ಣ ಚಾನೆಲ್‍ಗೆ ಧನ್ಯವಾದ ತಿಳಿಸಿದರು.

ಇಸ್ಮಾರ್ಟ್ ಜೋಡಿ ವಿನ್ನರ್

ಇಸ್ಮಾರ್ಟ್ ಜೋಡಿ ವಿನ್ನರ್

  • Share this:
    ಸ್ಪರ್ಧಾ ಜಗತ್ತಿನಲ್ಲಿ ಓಡುತ್ತಿರಬೇಕು. ಗೆಲ್ಲಲೇ ಬೇಕು. ಇಲ್ಲ ಅಂದ್ರೆ ನೆಲ ಕಚ್ಚಿ ಬಿಡುತ್ತೇವೆ. ಒಮ್ಮೆ ನೆಲ ಕಚ್ಚಿದ್ರೆ ಮೇಲೇಳುವುದು ಕಷ್ಟ. ಸೋಲೋ, ಗೆಲುವು ಸ್ಪರ್ಧೆಯಂತೂ ಇರಲೇ ಬೇಕು. ಈಗ ಕನ್ನಡದ ಮನರಂಜನಾ ವಾಹಿನಿಗಳು ಜನರನ್ನು ತಮ್ಮತ್ತ ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಕಲರ್ಸ್ ಕನ್ನಡದಲ್ಲಿ (Colors Kannada) ರಾಜ-ರಾಣಿ ಶೋ ಆರಂಭವಾಗಿತ್ತು. ಗಂಡ-ಹೆಂಡತಿಗಾಗಿ ಕಾರ್ಯಕ್ರಮ ಮಾಡಿದ್ರು. ಅಲ್ಲಿ ಅವರ ಭಾವನೆ, ಆಟ, ಜೀವನ ಎಲ್ಲದರ ಬಗ್ಗೆ ತಿಳಿಸಿ ಕೊಡ್ತಿದ್ರು. ಆ ಶೋ ಹಿಟ್ ಆಗಿದ್ದೇ ತಡ, ಈ ಬಾರಿ ಜೀ ಕನ್ನಡದಲ್ಲಿ (Zee Kannada) ಜೋಡಿ ನಂಬರ್ 01 ಬರ್ತಿದೆ. ಸ್ಟಾರ್  ಸುವರ್ಣದಲ್ಲಿ (Star Suvarna) ಇಸ್ಮಾರ್ಟ್ ಜೋಡಿ (Ismart Jodi) ಬರ್ತಿತ್ತು. ಇಸ್ಮಾರ್ಟ್ ಜೋಡಿ ಕಾರ್ಯಕ್ರಮ ಮುಗಿದಿದ್ದು, ವಿನ್ನರ್ (Winner) ಯಾರು ಅಂತ ಗೊತ್ತಾಗಿದೆ.

    ಇಸ್ಮಾರ್ಟ್ ಜೋಡಿ ಕಾರ್ಯಕ್ರಮ

    ಇಸ್ಮಾರ್ಟ್ ಜೋಡಿ, ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿದ್ದ ಶೋ. ಸ್ಟಾರ್ ಸುವರ್ಣದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಶೋ ಪ್ರಸಾರವಾಗುತ್ತಿತ್ತು. ಈ ಶೋನಲ್ಲಿ ದಂಪತಿ ಪರಸ್ಪರ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ. ಇನ್ನು ಅರ್ಥ ಮಾಡಿಕೊಳ್ಳಲಿ. ಮನಬಿಚ್ಚಿ ಮಾತನಾಡಲಿ ಎನ್ನುವುದೇ ಈ ಶೋ ಉದ್ದೇಶವಾಗಿತ್ತು.

    ಫಿನಾಲೆಗೆ ಬಂದಿದ್ದ ಸ್ಪರ್ಧಿಗಳು ಯಾರು?

    ಹಲವಾರು ದಂಪತಿಗಳ ನಡುವಿನ ಸ್ಪರ್ಧೆಯಲ್ಲಿ 9 ಜೋಡಿಗಳು ಫಿನಾಲೆ ಹಂತವನ್ನು ತಲುಪಿದ್ದರು. ಪುನೀತ ಆಚಾರ್ಯ-ಶ್ರೀರಾಮ್ ಸುಳ್ಯಾ, ಜೈ ಜಗದೀಶ್-ವಿಜಯಲಕ್ಷ್ಮಿ, ಸುಮನ್ ನಗರ್ ಕರ್-ಗುರುದೇವ್ ನಾಗರಾಜ ಫಿನಾಲೆಗೆ ಬಂದಿದ್ದಾರೆ. ದಿಶಾ-ಶಶಾಂಕ್, ಅಕ್ಷತಾ ಗೌಡ-ವಿನಯ್ ಗೌಡ, ವಿದ್ಯಾಶ್ರೀ-ರಘು, ಹ್ಯಾರಿಯೆಟ್ ಲೂಯಿಸ್-ರಿಚರ್ಡ್ ಲೂಯಿಸ್, ಸಪ್ನ ದೀಕ್ಷಿತ್- ಅಶ್ವಿನ್ ದೀಕ್ಷಿತ್, ಇಂಪನಾ ಜಯರಾಜ್-ಅಜಿತ್ ಜಯರಾಜ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು.

    ಇದನ್ನೂ ಓದಿ: Kendasampige: ಮನೆ ಸಾಲಕ್ಕಾಗಿ ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಳ್ಳೋಕೆ ರಾಜೇಶ್​ ರೆಡಿ 

    ಇಸ್ಮಾರ್ಟ್ ಜೋಡಿ ವಿನ್ನರ್ ಪುನೀತ ಆಚಾರ್ಯ-ಶ್ರೀರಾಮ್ ಸುಳ್ಯಾ

    9 ಜೋಡಿಗಳಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಇಸ್ಮಾರ್ಟ್ ಜೋಡಿಯ ವಿನ್ನರ್ ಪಟ್ಟವನ್ನು ಪುನೀತ ಆಚಾರ್ಯ-ಶ್ರೀರಾಮ್  ಸುಳ್ಯಾ ಅಲಂಕರಿಸಿದ್ದಾರೆ. ಮೊದಲ ಬಾರಿ ರಿಯಾಲಿಟಿ ಶೋನಲ್ಲಿ ಗೆದ್ದ ಜೋಡಿ ಸಂಭ್ರಮದಲ್ಲಿತ್ತು. ಅವಕಾಶ ಕೊಟ್ಟ ಸ್ಟಾರ್ ಸುವರ್ಣ ಚಾನೆಲ್‍ಗೆ ಧನ್ಯವಾದ ತಿಳಿಸಿದರು.

    Star Suvarna show, star Suvarna ismart Jodi show timings, star Suvarna ismart Jodi contestants, Golden Star Ganesh, Ismart Jodi Winner, ಇಸ್ಮಾರ್ಟ್ ಜೋಡಿ ಕಾರ್ಯಕ್ರಮ, ಇಸ್ಮಾರ್ಟ್ ಜೋಡಿಯ ವಿನ್ನರ್, ಸ್ಟಾರ್ ಸುವರ್ಣ ಕಾರ್ಯಕ್ರಮಗಳು, Kannada news, Karnataka news,
    ಗೋಲ್ಡನ್ ಸ್ಟಾರ್ ಗಣೇಶ್


    ಗೆದ್ದ ಜೋಡಿಗೆ 7 ಲಕ್ಷ ಬಹುಮಾನ

    ಇನ್ನು ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಗೆದ್ದ ಪುನೀತ ಆಚಾರ್ಯ ಮತ್ತು ಶ್ರೀರಾಮ್ ಸುಳ್ಯಾ ಅವರಿಗೆ ಟ್ರೋಪಿ ಜೊತೆಗೆ 7 ಲಕ್ಷ ಬಹುಮಾನ ಲಭಿಸಿದೆ. ಖುಷಿಯಲ್ಲಿ ಜೋಡಿ ಕುಣಿದಾಡಿತ್ತು.

    ಇಸ್ಮಾರ್ಟ್ ಜೋಡಿ ರನ್ನರ್ ಅಪ್ ಯಾರು?

    ಇನ್ನು ಇಸ್ಮಾರ್ಟ್ ಜೋಡಿ ರನ್ನರ್ ಅಪ್ ಸ್ಥಾನವನ್ನು ಸಪ್ನ ದೀಕ್ಷಿತ್ ಮತ್ತು ಅಶ್ವಿನ್ ದೀಕ್ಷಿತ್ ಅಲಂಕರಿಸಿದ್ದಾರೆ. ಈ ಜೋಡಿಗೆ 3 ಲಕ್ಷ ಬಹುಮಾನ ಲಭಿಸಿದೆ. ಒಟ್ನಲ್ಲಿ ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂತು. ಈ ಕಾರ್ಯಕ್ರಮದಲ್ಲಿ ಜಡ್ಜ್ ಇರಲಿಲ್ಲ.

    ಇದನ್ನೂ ಓದಿ: Bindas Kavya: 18 ವರ್ಷದ ಯೂಟ್ಯೂಬರ್‌ ಮನೆಯಿಂದ ಮಿಸ್ಸಿಂಗ್, ರೈಲಲ್ಲಿ ಪತ್ತೆ! ಅಸಲಿಗೆ ಬಿಂದಾಸ್‌ ಕಾವ್ಯಾಗೆ ಏನಾಗಿತ್ತು? 

    ಎಲ್ಲಾ ಆಟಗಳನ್ನು ಗಣೇಶ್ ಅವರು ನಡೆಸಿಕೊಡುತ್ತಿದ್ದರು. ಗೆದ್ದ ಜೋಡಿಗಳಿಗೆ ಪಾಯಿಂಟ್ಸ್ ನೀಡಲಾಗ್ತಿತ್ತು. ಅದೇ ರೀತಿ ಹೆಚ್ಚು ಅಂಕ ಗಳಿಸಿದವರು ಈ ಶೋನ ವಿನ್ನರ್ ಆಗಿದ್ದಾರೆ. ಇನ್ನು ಮುಂದಿನ ಸೀಸನ್ ಅಂದ್ರೆ ಇಸ್ಮಾರ್ಟ್ ಜೋಡಿ ಸೀಸನ್ 2ಗೆ ತಂಡ ರೆಡಿಯಾಗಬೇಕಿದೆ.
    Published by:Savitha Savitha
    First published: