Ismart Jodi: ನನ್ನ ದುಡಿಮೆಯಲ್ಲೇ ನನ್ನ ಗಂಡ ಕೂತು ತಿನ್ನುತ್ತಾನೆ! ಹೀಗ್ಯಾಕೆ ಅಂದ್ರು ಈ ನಟಿ?

16 ವರ್ಷಗಳಿಂದ ಗಂಡ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದಾರೆ. ಈ ನಟಿ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದಾರಂತೆ. ಈ ಶೋನಲ್ಲಿ ಕಣ್ಣೀರು ಹಾಕಿದ ನಟಿ, ನನಗೆ ನನ್ನ ಗಂಡ ಈಗಲೂ ಹೀರೋನೇ ಸರ್, ಆದ್ರೆ ಅವರಿಗೆ ಅಂತ ಸಮಾಜದಲ್ಲಿ ಗೌರವ ಬೇಡ್ವಾ ಅಂತ ಕೇಳಿದ್ದಾರೆ.

ನಟಿ ಸ್ವಪ್ನಾ ದೀಕ್ಷಿತ್ ಹಾಗೂ ಆಕೆಯ ಪತಿ ಅಶ್ವಿನ್
(ಕೃಪೆ: ಸ್ಟಾರ್ ಸುವರ್ಣ)

ನಟಿ ಸ್ವಪ್ನಾ ದೀಕ್ಷಿತ್ ಹಾಗೂ ಆಕೆಯ ಪತಿ ಅಶ್ವಿನ್ (ಕೃಪೆ: ಸ್ಟಾರ್ ಸುವರ್ಣ)

 • Share this:
  ಸ್ಪರ್ಧಾ ಜಗತ್ತಿನಲ್ಲಿ ಓಡುತ್ತಿರಬೇಕು. ಗೆಲ್ಲಕೇ ಬೇಕು. ಇಲ್ಲ ಅಂದ್ರೆ ನೆಲ ಕಚ್ಚಿ ಬಿಡುತ್ತೇವೆ. ಒಮ್ಮೆ ನೆಲ ಕಚ್ಚಿದ್ರೆ ಮೇಲೇಳುವುದು ಕಷ್ಟ. ಸೋಲೋ, ಗೆಲುವು ಸ್ಪರ್ಧೆಯಂತೂ ಇರಲೇ ಬೇಕು. ಈಗ ಕನ್ನಡದ (Kannada) ಮನರಂಜನಾ (Entertainment) ವಾಹಿನಿಗಳು ಜನರನ್ನು ತಮ್ಮತ್ತ ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಕಲರ್ಸ್ ಕನ್ನಡದಲ್ಲಿ (Colors Kannada) ರಾಜ-ರಾಣಿ ಶೋ ಆರಂಭವಾಗಿತ್ತು. ಗಂಡ-ಹೆಂಡತಿಗಾಗಿ ಕಾರ್ಯಕ್ರಮ ಮಾಡಿದ್ರು. ಅಲ್ಲಿ ಅವರ ಭಾವನೆ, ಆಟ, ಜೀವನ ಎಲ್ಲದರ ಬಗ್ಗೆ ತಿಳಿಸಿ ಕೊಡ್ತಿದ್ರು. ಆ ಶೋ ಹಿಟ್ ಆಗಿದ್ದೇ ತಡ, ಈ ಬಾರಿ ಜೀ ಕನ್ನಡದಲ್ಲಿ (Zee Kannada) ಜೋಡಿ ನಂಬರ್ 01 ಬರ್ತಿದೆ. ಸ್ಟಾರ್ ಸುವರ್ಣ (Star Suvarna)ದಲ್ಲಿ ಇಸ್ಮಾರ್ಟ್ ಜೋಡಿ  ಬರ್ತಿದೆ. ಅಲ್ಲದೇ ಕಲರ್ಸ್ ಕನ್ನಡದಲ್ಲಿ ಈ ಬಾರಿಯೂ ರಾಜ-ರಾಣಿ ಪ್ರಸಾರವಾಗುತ್ತಿದೆ. ಮೂರು ಕಾರ್ಯಕ್ರಮಗಳು ಒಂದೇ ರೀತಿಯವು.

  ಇಸ್ಮಾರ್ಟ್ ಜೋಡಿ ಕಾರ್ಯಕ್ರಮ
  ಇಸ್ಮಾರ್ಟ್ ಜೋಡಿ, ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಶೋ. ಸ್ಟಾರ್ ಸುವರ್ಣದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಬರುತ್ತದೆ. ಈ ಶೋನಲ್ಲಿ ದಂಪತಿಗಳು ಪರಸ್ಪರ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ. ಇನ್ನು ಅರ್ಥ ಮಾಡಿಕೊಳ್ಳಲಿ. ಮನಬಿಚ್ಚಿ ಮಾತನಾಡಲಿ ಎನ್ನುವುದೇ ಈ ಶೋ ಉದ್ದೇಶ. ಆಟಗಳ ಜೊತೆ ಜೀವನ ಪಾಠವೂ ಇರುತ್ತೆ. ಹಳೆಯ ದಿನಗಳನ್ನು ನೆನೆಸಿಕೊಂಡು ಕೆಲವರು ಖುಷಿಯಾದ್ರೆ, ಇನ್ನೂ ಕೆಲವರು ದುಃಖ ಪಡ್ತಾರೆ. ಈ ಸ್ಪರ್ಧೆಯಲ್ಲಿ ನಟಿ ಸ್ವಪ್ನಾ ದೀಕ್ಷಿತ್ ಹಾಗೂ ಆಕೆಯ ಪತಿ ಅಶ್ವಿನ್ ಭಾಗಿಯಾಗಿದ್ದಾರೆ.

  Star Suvarna show, star Suvarna ismart Jodi show timings, star Suvarna ismart Jodi contestants, Golden Star Ganesh, ಇಸ್ಮಾರ್ಟ್ ಜೋಡಿ ಕಾರ್ಯಕ್ರಮ, ಸ್ಟಾರ್ ಸುವರ್ಣ ಕಾರ್ಯಕ್ರಮಗಳು, Kannada news, Karnataka news,
  ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದಲ್ಲಿ ಇಸ್ಮಾರ್ಟ್ ಜೋಡಿ


  ಕಳೆದ ವಾರ ಗಂಡನಿಗಿಂತ ವೃತ್ತಿ ಜೀವನ ಮುಖ್ಯ ಎಂದಿದ್ದ ಸ್ವಪ್ನಾ
  ಕಳೆದ ವಾರ ಇಸ್ಮಾರ್ಟ್ ಜೋಡಿಯಲ್ಲಿ ಒಂದು ಟಾಸ್ಕ್ ಇರುತ್ತೆ. ಒಂದು ಬೋರ್ಡ್‍ನಲ್ಲಿ ಕೆಲವೊಂದು ವಿಷಯಗಳನ್ನು ಬರೆದಿರುತ್ತಾರೆ. ನಿಮ್ಮ ಜೀವನದಲ್ಲಿ ಯಾವುದು ಮುಖ್ಯ ಎಂದು ಜೋಡಿಸಿ ಎಂದು. ಆಗ ಸ್ವಪ್ನಾ ದೀಕ್ಷಿತ್ ವೃತ್ತಿ ಜೀವನ ನನಗೆ ಮೊದಲು. ಗಂಡ, ಮಕ್ಕಳು, ಮನೆ ನಂತರ ಎಂದು ಹೇಳಿಕೊಂಡಿದ್ರು.

  ನನ್ನ ಗಂಡ ಕೆಲಸಕ್ಕೆ ಹೋಗಲ್ಲ!
  ಸ್ಪಪ್ನಾ ದೀಕ್ಷಿತ್ ಅಶ್ವಿನ್‍ರನ್ನು ಕಾಲೇಜಿಗೆ ಹೋಗುತ್ತಿರುವಾಗ ಪ್ರೀತಿಸುತ್ತಿದ್ದರು. ಮದುವೆಯಾಗಿ 19 ವರ್ಷ ಕಳೆದಿದೆ. ಆದ್ರೆ ದೀಕ್ಷಿತ್ 16 ವರ್ಷದಿಂದ ಕೆಲಸಕ್ಕೆ ಹೋಗಿಲ್ವಂತೆ. ಇಂದು ನಡೆಯುವ ಕಾರ್ಯಕ್ರಮದಲ್ಲಿ ಗಣೇಶ್ ಮುಂದೆ ತನ್ನ ನೋವು ಹೇಳಿಕೊಳ್ಳಲಿದ್ದಾರೆ ಸ್ವಪ್ನಾ ದೀಕ್ಷಿತ್.

  ಇದನ್ನೂ ಓದಿ: Bigg Boss OTT: ಬಿಗ್​ಬಾಸ್ ಮನೆಗೆ ಈ ಟಿಕ್​ಟಾಕ್​ ಸ್ಟಾರ್ ಎಂಟ್ರಿ ಪಕ್ಕನಾ? ಮೊದಲ ಸೀಸನ್​ಗೆ ಕ್ಷಣಗಣನೆ

  ಕೆಲಸ ಮಾಡದೇ ಕೂತುಕೊಂಡು ತಿನ್ನುತ್ತಾನೆ
  16 ವರ್ಷಗಳಿಂದ ದೀಕ್ಷಿತ್ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದಾರೆ. ಸ್ವಪ್ನಾ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದಾರಂತೆ. ಸ್ವಪ್ನಾ ತಾಯಿಗೆ ಬೇಸರ ಇದೆಯಂತೆ. ತನ್ನ ಮಗಳು ಒಬ್ಬಳೇ ದುಡಿಯುತ್ತಾಳೆ. ಅಳಿಯ ದುಡಿಯಲ್ಲ. ಕೂತು ತಿಂತಾನೆ ಅಂತ. ಅಲ್ಲದೇ ಗಣೇಶ ಮುಂದೆ ಕಣ್ಣೀರು ಹಾಕುತ್ತಾ ಸ್ವಪ್ನಾ, ನನಗೆ ನನ್ನ ಗಂಡ ಈಗಲೂ ಹೀರೋನೇ ಸರ್, ಆದ್ರೆ ಅವರಿಗೆ ಅಂತ ಸಮಾಜದಲ್ಲಿ ಗೌರವ ಬೇಡವಾ ಎಂದಿದ್ದಾರೆ.

  ನನ್ನ ಕಾಲ ಮೇಲೆ ಚಪ್ಪಡಿ ಹಾಕಿದ್ಲು ಎಂದ ಅಶ್ವಿನ್
  ಇನ್ನು ಸ್ಪಪ್ನಾ ತನ್ನ ನೋವನ್ನು ಗೋಲ್ಡನ್ ಸ್ಟಾರ್ ಗಣೇಶ್ ಮುಂದೆ ಹೇಳಿಕೊಳ್ತಿದ್ರೆ, ಇನ್ನೊಂದು ಕಡೆ ಕೂತು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಅಶ್ವಿನ್ ಬೇಸರಿಸಿಕೊಂಡಿದ್ದಾರೆ. ಇದು ಟಾಪಿಕ್ ಲೆಸ್, ಈ ರೀತಿಯ ಮಾತು ಈಗ ಬೇಕಾಗಿರಲಿಲ್ಲ. ನನ್ನ ಕಾಲ ಮೇಲೆ ಚಪ್ಪಡಿ ಹಾಕಿಬಿಟ್ಲು ಎಂದು ನೊಂದುಕೊಂಡಿದ್ದಾರೆ.

  ಇದನ್ನೂ ಓದಿ: Ramachari: ಮೊದಲ ಬಾರಿ ರಾಮಾಚಾರಿ ಮೆಚ್ಚುವಂತ ಕೆಲಸ ಮಾಡಿದ ಚಾರು! ಅಹಂಕಾರ ಎಲ್ಲಾ ಕರಗಿತ್ತಾ?

  ಇದಕ್ಕೆ ಗಣೇಶ್ ಏನ್ ಹೇಳ್ತಾರೆ? ಜೋಡಿ ಮಧ್ಯೆ ಇರುವ ವೈಮನಸ್ಸು ದೂರವಾಗುತ್ತಾ, ಎಲ್ಲವನ್ನು ನೋಡಲು ಕಾರ್ಯಕ್ರಮ ನೋಡಬೇಕು.
  Published by:Savitha Savitha
  First published: