• Home
  • »
  • News
  • »
  • entertainment
  • »
  • Gana Bajana Season 3: ಸ್ಟಾರ್ ಸುವರ್ಣದಲ್ಲಿ ಮತ್ತೆ ಗಾನಬಜಾನ, ಸೀಸನ್ 3ಗೆ ರಿಷಬ್ ಶೆಟ್ಟಿ ಆ್ಯಂಡ್ ಟೀಮ್ ಆಗಮನ!

Gana Bajana Season 3: ಸ್ಟಾರ್ ಸುವರ್ಣದಲ್ಲಿ ಮತ್ತೆ ಗಾನಬಜಾನ, ಸೀಸನ್ 3ಗೆ ರಿಷಬ್ ಶೆಟ್ಟಿ ಆ್ಯಂಡ್ ಟೀಮ್ ಆಗಮನ!

ಗಾನಬಜಾನ ಮೊದಲ ಸಂಚಿಕೆಯಲ್ಲಿ ಕಾಂತಾರ ಟೀಮ್

ಗಾನಬಜಾನ ಮೊದಲ ಸಂಚಿಕೆಯಲ್ಲಿ ಕಾಂತಾರ ಟೀಮ್

ಪ್ರತಿ ಭಾನುವಾರ ಗಾನಬಜಾನ ಸೀಸನ್ 3 ಪ್ರಸಾರ ಆಗುತ್ತದೆ ಸಂಜೆ 6 ಗಂಟೆಗೆ ಈ ಶೋ ಪ್ರಸಾರದ ಪ್ಲಾನಿಂಗ್ ಆಗಿದೆ ಇನ್ನು ಈಗಾಗಲೇ ಈ ಶೋ ಲಾಂಚ್​ಗಾಗಿಯೇ ಸಖತ್ ತಯಾರಿ ಕೂಡ ನಡೆದಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಸ್ಟಾರ್ ಸುವರ್ಣ (Gana Bajana Season2) ಹೊಸ ಹೊಸ ಪ್ರೋಗ್ರಾಮ್​ಗಳನ್ನ ಕೊಡ್ತಾನೇ ಬಂದಿದೆ. ಹಾಡು-ಕುಣಿತ-ಮಸ್ತಿ ಎಲ್ಲವೂ ಇರೋ ಗಾನಬಜಾನ ಮತ್ತೆ ಬರುತ್ತಿದೆ. ಈ ಹಿಂದಿನ ಎರಡು ಸೀಸನ್ (Season-3) ಸಖತ್ ಗಮನ ಸೆಳೆದಿವೆ. ಈಗ ಬಹು ದಿನಗಳ ಬಳಿಕ ಗಾನಬಜಾನ ಶುರು ಆಗುತ್ತಿದೆ. ಈ 3ನೇ ಸೀಸನ್​​ಗೆ ಆ್ಯಂಕರ್ (Anchor) ಕೂಡ ಬದಲಾಗಿದ್ದಾರೆ. ಈ ಹಿಂದಿನ ಎರಡು ಸೀಸನ್​ ನಲ್ಲಿ ಆ್ಯಂಕರ್ ಬೇರೆ ಆಗಿದ್ದರು. ಮೊದಲ ಸೀಸನ್ ಆ್ಯಕ್ಟರ್ ಯೋಗಿ ಮಾಡಿದ್ದರು. ಎರಡನೇ ಸೀಸನ್ ಅನ್ನು ನಿರಂಜನ್ ದೇಶಪಾಂಡೆ ಮಾಡಿದ್ದರು. ಮೂರನೇ ಸೀಸನ್ ಅನ್ನ ಆ್ಯಂಕರ್ ಅಕುಲ್ ಬಾಲಾಜಿ ಮಾಡುತ್ತಿದ್ದಾರೆ. ಇದೇ ತಿಂಗಳ 13 ರಂದು ಗಾನಬಜಾನ ಸೀಸನ್-3 ಟೆಲಿಕಾಸ್ಟ್ ಆಗುತ್ತಿದೆ. ಇದರ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ.


ಸ್ಟಾರ್ ಸುವರ್ಣದಲ್ಲಿ ಮತ್ತೆ ಸಖತ್ ಗಾನಬಜಾನ
ಕನ್ನಡದ ಸ್ಟಾರ್ ಸುವರ್ಣ ಚಾನೆಲ್ ಹೊಸ ಪ್ರಯೋಗಗಳನ್ನ ಮಾಡ್ತಾನೇ ಇರುತ್ತದೆ. ಧಾರವಾಹಿ, ರಿಯಾಲಿಟಿ ಶೋ ಹೀಗೆ ವಿವಿಧ ಕಾರ್ಯಕ್ರಮಗಳನ್ನ ಮಾಡ್ತಾನೇ ಬಂದಿದೆ. ಈ ಹಿಂದೆ ಗಾನಬಜಾನ ಹೆಸರಿನ ರಿಯಾಲಿಟಿ ಶೋ ಕೂಡ ಆರಂಭಗೊಂಡಿತ್ತು.


ಈ ಶೋ ನಿಜಕ್ಕೂ ವಿಶೇಷವಾಗಿಯೇ ಇತ್ತು. ಹಾಡು-ಆಟ-ಮಸ್ತಿ ಎಲ್ಲವೂ ಈ ಒಂದು ಗಾನಬಜಾನ ಶೋದಲ್ಲಿ ಇದ್ದವು. ಈ ಶೋದ ಉದ್ದೇಶ ಕೂಡ ಇದೇ ಆಗಿದೆ. ಈಗಾಗಲೇ ಎರಡು ಸೀಸನ್ ಮೂಲಕ ಜನರನ್ನ ಈ ಶೋ ರಂಜಿಸಿದೆ.


ಗಾನಬಜಾನ ಸೀಸನ್-3 ಗೆ ಅಕುಲ್ ಬಾಲಾಜಿ ಆ್ಯಂಕರ್
ಗಾನಬಜಾನ ಸೀಸನ್-3ಗೆ ಅಕುಲ್ ಬಾಲಾಜಿ ಆ್ಯಂಕರ್ ಆಗಿದ್ದಾರೆ. ಸಿನಿಮಾ ತಾರೆಯರು ಭಾಗವಹಿಸೋ ಈ ರಿಯಾಲಿಟಿ ಶೋದಲ್ಲಿ ಒಂದು ಹೊಸ ಚಾರ್ಮ್​ ಬಂದಂತಿದೆ. ಈ ಹಿಂದಿನ ಸ್ಟಾರ್ ಸುವರ್ಣ ಕಾರ್ಯಕ್ರಮಕ್ಕೆ ಅಕುಲ್ ಬಾಲಾಜಿ ಆ್ಯಂಕರ್ ಆಗಿರುತ್ತಿದ್ದರು.


ಆದರೆ ಈಗ ಗಾನಬಜಾನ ಶೋ ಮೂಲಕ ಮತ್ತೊಮ್ಮೆ ಧಮಾಕಾ ಮಾಡೋಕೆ ಅಕುಲ್ ಬಾಲಾಜಿ ಸಜ್ಜಾಗಿದ್ದಾರೆ. ಈ ಶೋದ ಸೀಸನ್-02 ಅನ್ನ ಈ ಹಿಂದೆ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದರು. ಅದಕ್ಕೂ ಮೊದಲು ಬಂದ ಸೀಸನ್-1 ಅನ್ನ ನಾಯಕ ನಟ ಲೂಸ ಮಾದ ಯೋಗಿ ನಿರೂಪಿಸಿದ್ದರು.


ಇದನ್ನೂ ಓದಿ: Kantara Craze Down: ಕಾಂತಾರ ಸಿನಿಮಾ ಕ್ರೇಜ್ ಕೊಂಚ ಡೌನ್! ಗರಿಗೆದರಿದ ಕನ್ನಡ ಸಿನಿಮಾಗಳ ರಿಲೀಸ್


ಗಾನಬಜಾನ-ಸೀಸನ್-3 ಶುರು ಆಗೋದು ಯಾವಾಗ?
ಗಾನಬಜಾನ ಸೀಸನ್-3 ಇದೇ ತಿಂಗಳಿನಿಂದಲೇ ಶುರು ಆಗುತ್ತಿದೆ. ನವೆಂಬರ್-13 ರಂದು ಗಾನಬಜಾನ ಸೀಸನ್-3 ಪ್ರಸಾರ ಆಗುತ್ತದೆ. ಈಗಾಗಲೇ ಈ ಶೋದ ಟೈಮ್ ಮತ್ತು ಡೇ ಕೂಡ ಫಿಕ್ಸ್ ಆಗಿದೆ.


ಪ್ರತಿ ಭಾನುವಾರ ಸಂಜೆ 6 ಗಂಟೆಗೆ ಗಾನಬಜಾನ
ಹೌದು, ಪ್ರತಿ ಭಾನುವಾರ ಗಾನಬಜಾನ ಸೀಸನ್-03 ಪ್ರಸಾರ ಆಗುತ್ತದೆ. ಸಂಜೆ-06 ಗಂಟೆಗೆ ಈ ಶೋ ಪ್ರಸಾರದ ಪ್ಲಾನಿಂಗ್ ಆಗಿದೆ. ಇನ್ನು ಈಗಾಗಲೇ ಈ ಶೋದ ಲಾಂಚ್ ಗಾಗಿಯೇ ಸಖತ್ ತಯಾರಿ ಕೂಡ ನಡೆದಿದೆ.


Star Suvarna Gana Bajana Season-3 will be telecasting this November
ಗಾನಬಜಾನ-ಸೀಸನ್-3 ಶುರು ಆಗೋದು ಯಾವಾಗ?


ಇನ್ನು ಈ ಶೋದ ಇನ್ನಷ್ಟು ವಿವರಣೆ ನೀಡೋದಾದ್ರೆ, ಸೆಲೆಬ್ರಿಟಿಗಳು ಈ ಒಂದು ಶೋದಲ್ಲಿ ಭಾಗಿ ಆಗುತ್ತಾರೆ. ಎರಡು ತಂಡಗಳಾಗಿಯೆ ಅವರನ್ನ ಇಲ್ಲಿ ವಿಂಗಡಿಸಲಾಗುತ್ತದೆ. ಆಮೇಲೆ ಹಾಡು-ಕುಣಿತ-ತಮಾಷೆ ಎಲ್ಲವೂ ಇರುತ್ತದೆ.


ಇದನ್ನೂ ಓದಿ: Razia-Ram Serial: ಹಿಂದೂ ಹುಡುಗಿಯ ಮುಸ್ಲಿಂ ಪಾತ್ರ! ರಜಿಯಾ ನಿಜಕ್ಕೂ ಯಾರು ಗೊತ್ತೇ?


ಹೆಚ್ಚಿಗೆ ಸ್ಕೋರ್ ಮಾಡೋ ಸೆಲೆಬ್ರಿಟಿಗಳನ್ನ ಇಲ್ಲಿ ವಿನ್ನರ್ ಎಂದು ಕೂಡ ಘೋಷಿಸಲಾಗುತ್ತದೆ. ಹೀಗೆ ಮನರಂಜನೆಯನ್ನ ಒಳಗೊಂಡ ಈ ಶೋದ ಪ್ರೋಮೋ ಕೂಡ ಈಗಾಗಲೇ ರಿಲೀಸ್ ಆಗಿದೆ. ಇನ್ನು ಇದೇ ಭಾನುವಾರ ಶೋ ಮೊದಲ ಎಪಿಸೋಡ್ ಪ್ರಸಾರ ಆಗುತ್ತಿದೆ.


ಗಾನಬಜಾನ ಮೊದಲ ಸಂಚಿಕೆಯಲ್ಲಿ ಕಾಂತಾರ ಟೀಮ್
ಹೌದು, ಈಗಾಗಲೇ ಈ ಶೋದ ಮೊದಲ ಎಪಿಸೋಡ್​ನ ಪ್ರೋಮೋ ರಿಲೀಸ್ ಆಗಿದೆ. ಡಿವೈನ್ ಬ್ಲಾಕ್​ ಬಸ್ಟರ್ ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಆ್ಯಂಡ್ ಟೀಮ್ ಈ ಶೋದಲ್ಲಿ ಭಾಗಿ ಆಗಿದೆ. ಇದರ ಪ್ರೋಮೋ ಈಗಲೇ ಭಾರೀ ಗಮನ ಸೆಳೆಯುತ್ತಿದೆ.

First published: