ಸ್ಟಾರ್ ಸುವರ್ಣದಲ್ಲಿ (Star Suvarna) ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು ತೆರೆಗೆ ತರುತ್ತಿದೆ. ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ (Namma Lachhi) ಎನ್ನುವ ಧಾರಾವಾಹಿ (Serial) ಪ್ರಸಾರವಾಗ್ತಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ. ಅಪ್ಪ ದೊಡ್ಡ ಸಿಂಗರ್. ಆದ್ರೆ ಇವರ ಜೊತೆಗೆ ಇಲ್ಲ. ಮಗಳಿಗೂ ಅಪ್ಪನಂತೆ ಹಾಡುವ ಗುಣ ಬಂದಿದೆ. ಗಿರಿಜಾ ಪಾತ್ರವನ್ನು ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ (Neha Gowda) ಮಾಡ್ತಿದ್ರು. ಆದ್ರೆ ಅವರಿಗೆ ಅಪಘಾತವಾಗಿ ಸಾವನ್ನಪ್ಪಿದ್ದಾರೆ. ಸಂಗಮ್ ಮತ್ತು ಗಿರಿಜಾ ಇಬ್ಬರು ಪ್ರೀತಿ ಮಾಡ್ತಾ ಇರ್ತಾರೆ. ಮದುವೆ ಆಗ್ತಾರೆ. ಸಂಗಮ್ ಸಿಂಗರ್ ಆಗಲು ಸಿಟಿಗೆ ಹೋಗ್ತಾನೆ. ವಾಪಸ್ ಬಂದಿಲ್ಲ. ಇಬ್ಬರ ಪ್ರೀತಿಯ ಸಂಕೇತವಾಗಿ ಲಚ್ಚಿ ಹುಟ್ಟಿದ್ದಾಳೆ. ಈಗ ಅಮ್ಮನನ್ನು ಕಳೆದುಕೊಂಡ ಲಚ್ಚಿ ಬೆಂದಳೂರಿನಲ್ಲಿ (Bengaluru) ಅನಾಥವಾಗಿದ್ದಾಳೆ.
ಗಿರಿಜಾ ಪಾತ್ರ ಅಂತ್ಯ
ಗಿರಿಜಾ ಮತ್ತು ಸಂಗಮ್ ಇಬ್ಬರು ಮತ್ತೆ ಜೊತೆಯಾಗ್ತಾರೆ. ಲಚ್ಚಿಗೆ ಒಂದು ಒಳ್ಳೆ ಜೀವನ ಸಿಗಬಹುದು ಎಂದು ಅಭಿಮಾನಿಗಳು ಎಂದುಕೊಂಡಿದ್ರು. ಆದ್ರೆ ಧಾರಾವಾಹಿ ತಿರುವು ಪಡೆದುಕೊಂಡಿದೆ. ಸಂಗಮ್ ನನ್ನು ಮಾತನಾಡಿಸಬೇಕು. ಲಚ್ಚಿಯನ್ನು ಅವನ ಬಳಿ ಸೇರಿಸಬೇಕು ಎಂದು ಓಡಿ ಬರುತ್ತಿರುವಾಗ ಅಪಘಾತವಾಗಿ ಗಿರಿಜಾ ಸಾವನ್ನಪ್ಪಿದ್ದಾಳೆ. ಆ ಅಪಘಾತವನ್ನು ಸಂಗಮ್ ಎರಡನೇ ಪತ್ನಿ ದೀಪಿಕಾ ಮಾಡಿದ್ದಾಳೆ.
ಹಣಬಾಕಿ ಅತ್ತೆವ್ವ
ಗಿರಿಜಾ ಸಾವನ್ನಪ್ಪಿದ ಮೇಲೆ, ಲಚ್ಚಿ ಅತ್ತೆ ಆಕೆಗೆ ಹಾಡುವಂತೆ ಹೇಳ್ತಾಳೆ. ಆದ್ರೆ ಲಚ್ಚಿ ಅವ್ವನಿಗೆ ಮಾತು ಕೊಟ್ಟಿದ್ದೇನೆ ಇನ್ಮುಂದೆ ಹಾಡಲ್ಲ ಎಂದು ಹೇಳ್ತಾಳೆ. ಅದಕ್ಕೆ ನೀನು ಈ ಮನೆಯಲ್ಲಿ ಇದ್ರೆ ತಾನೇ, ನಾನು ನೋಡಿಕೊಳ್ಳಬೇಕು. ನಿನ್ನನ್ನು ಮಾರಿ ಬಿಡ್ತೇನೆ ಎಂದು ಹೇಳ್ತಾಳೆ. 5 ಲಕ್ಷಕ್ಕೆ ಲಚ್ಚಿಯನ್ನು ಮಾರುತ್ತಾಳೆ. ಹಣ ಪಡೆದು ಅವರ ಜೊತೆ ಹೋಗು ಎಂದು ಹೇಳ್ತಾಳೆ. ಆದ್ರೆ ಲಚ್ಚಿ ಹೋಗಲ್ಲ ಅಂತಾಳೆ.
ಹುಡುಗನಾದ ಲಚ್ಚಿ
ಲಚ್ಚಿಯ ಮಾಮ ತುಂಬಾ ಒಳ್ಳೆಯವನು. ತಂಗಿಯ ಮಗಳಿಗೆ ಹೇಗಾದ್ರೂ ನ್ಯಾಯ ಕೊಡಿಸಬೇಕು. ಆಕೆಯನ್ನು ಅವರ ಅಪ್ಪನ ಬಳಿ ಸೇರಿಸಬೇಕು ಎಂದುಕೊಂಡಿದ್ದಾನೆ. ಆದ್ರೆ ಅವನ ಹೆಂಡ್ತಿ ಬಿಡ್ತಿಲ್ಲ. ಅದಕ್ಕೆ ಲಚ್ಚಿಗೆ ಹುಡುಗನ ವೇಷ ಹಾಕಿಸಿದ್ದಾನೆ. ನೀನು ಇನ್ಮೇಲೆ ಇದೇ ಬಟ್ಟೆಯಲ್ಲಿ ಇರು ಎಂದು ಹೇಳಿದ್ದಾನೆ. ಲಚ್ಚಿಯೂ ಒಪ್ಪಿಕೊಂಡಿದ್ದಾಳೆ.
ಬೆಂಗಳೂರಲ್ಲಿ ಒಬ್ಬಂಟಿಯಾದ ಲಚ್ಚಿ
ಲಚ್ಚಿ ಮತ್ತು ಆಕೆಯ ಮಾವ ಬೆಂಗಳೂರಿಗೆ ಹೋಗಲು ಬಸ್ ಹತ್ತಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಲಚ್ಚಿ ಅತ್ತೆ ಬರುತ್ತಾಳೆ. ಆಕೆಯ ಕಣ್ಣು ತಪ್ಪಿಸಿಕಳ್ಳಲು ಮಾವ ಕೆಳಗಿಳಿಯುತ್ತಾನೆ. ಅಷ್ಟರಲ್ಲಿ ಬಸ್ ಹೊರಟು ಹೋಗುತ್ತೆ. ನೋಡಿದ್ರೆ ಲಚ್ಚಿ ಒಬ್ಬಳೇ ಬೆಂಗಳೂರಿಗೆ ಹೋಗಿದ್ದಾಳೆ. ಸಂಪಿಗೆಹಳ್ಳಿಯಂತ ಚಿಕ್ಕ ಊರಿನಲ್ಲಿದ್ದ ಲಚ್ಚಿಗೆ ಬೆಂಗಳೂರಿನಲ್ಲಿ ಕಷ್ಟ ಆಗ್ತಿದೆ. ಮಾವನೂ ಇಲ್ಲದೇ ಒಬ್ಬಂಟಿಯಾಗಿದ್ದಾಳೆ.
ಅಪ್ಪನ ಮಡಿಲು ಸೇರ್ತಾಳಾ?
ಲಚ್ಚಿಗೆ ಬೆಂಗಳೂರಿನಲ್ಲಿ ಏನು ಮಾಡಬೇಕು ಎಂದು ಗೊತ್ತಾಗಿಲ್ಲ. ಅದಕ್ಕೆ ಹತ್ತಿರವಿದ್ದ ದೇವಸ್ಥಾನಕ್ಕೆ ಹೋಗಿದ್ದಾಳೆ. ಅಲ್ಲೇ ಶಿವನನ್ನು ನೋಡುತ್ತಾ ಕೂತಿದ್ದಾಳೆ. ಅಲ್ಲಿ ಕೊಡುವ ಪ್ರಸಾದವನ್ನು ತಿನ್ನುತ್ತಿದ್ದಾಳೆ. ಒಬ್ಬಂಟಿಯಾಗಿರುವ ಲಚ್ಚಿಗೆ ಅಪ್ಪ ಸಿಗ್ತಾನಾ? ತಾಯಿ ಕಳೆದುಕೊಂಡ ಮಗುವೆಗೆ ಆಸರೆಯಾಗ್ತಾನಾ ಅಪ್ಪ ಎನ್ನು ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: Vaishnavi Gowda: ಇಷ್ಟು ಕ್ಯೂಟ್ ಆಗಿದ್ದೀರಿ ಅಮ್ಮನ ಪಾತ್ರ ಮಾಡ್ತೀರಾ? ವೈಷ್ಣವಿಗೆ ಅಭಿಮಾನಿಗಳ ಪ್ರಶ್ನೆ!
ಅಮ್ಮನಿಲ್ಲದ ಲಚ್ಚಿ ಕಥೆ ಏನು? ಅಪ್ಪನ ಮಡಿಲು ಸೇರ್ತಾಳಾ ಮುದ್ದು ಮಗಳು? ಲಚ್ಚಿಗೆ ಅಪ್ಪ ಸಿಗ್ತಾನಾ? ಇಲ್ಲ ಮತ್ತೆ ಸಂಪಿಗೆ ಹಳ್ಳಿಗೆ ಹೋಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ನಮ್ಮ ಲಚ್ಚಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ