• Home
  • »
  • News
  • »
  • entertainment
  • »
  • Bollywood Star Kids: ಬಹುಕೋಟಿ ಬೆಲೆಯ ಲಕ್ಷುರಿ ಬಂಗಲೆಯಲ್ಲಿ ವಾಸಿಸುತ್ತಾರೆ ಬಾಲಿವುಡ್ ಸ್ಟಾರ್ ಕಿಡ್ಸ್

Bollywood Star Kids: ಬಹುಕೋಟಿ ಬೆಲೆಯ ಲಕ್ಷುರಿ ಬಂಗಲೆಯಲ್ಲಿ ವಾಸಿಸುತ್ತಾರೆ ಬಾಲಿವುಡ್ ಸ್ಟಾರ್ ಕಿಡ್ಸ್

ಆಲಿಯಾ ಭಟ್-ಸೋನಂ ಕಪೂರ್

ಆಲಿಯಾ ಭಟ್-ಸೋನಂ ಕಪೂರ್

ಬಾಲಿವುಡ್​​ನಲ್ಲಿ ಸ್ಟಾರ್ ಕಿಡ್ಸ್ ಲಕ್ಷುರಿ ಜೀವನದ ಬಗ್ಗೆ ಹೇಳೋ ಅಗತ್ಯವೇ ಇಲ್ಲ. ನಟಿ ಸೋನಂ ಕಪೂರ್ ಬರೋಬ್ಬೆಇ 173 ಕೋಟಿ ಬೆಲೆಯ ಬಂಗಲೆ ಹೊಂದಿದ್ದಾರೆ. ಉಳಿದವರ ಮನೆಗಳು ಎಷ್ಟು ದುಬಾರಿ ಗೊತ್ತೇ?

  • Share this:

ಬಾಲಿವುಡ್‌ (Bollywood) ಸೆಲೆಬ್ರಿಟಿಗಳೆಲ್ಲ (Celebrity) ಕೋಟ್ಯಾಧೀಶರು ಅನ್ನೋ ವಿಷಯ ಎಲ್ಲರಿಗೂ ಗೊತ್ತಿರೋದೇ. ಒಮ್ಮೆ ಒಂದು ಚಿತ್ರ ಕ್ಲಿಕ್‌ ಆಗೋದೋಂದೇ ಬಾಕಿ, ಅವರ ಸಂಭಾವನೆ ಕೋಟಿಗಳ ಲೆಕ್ಕದಲ್ಲಿಯೇ ಇರುತ್ತದೆ. ಹಾಗಾಗಿ ಐಷಾರಾಮಿ ಬದುಕು ಅವರಿಗೆ ಸಾಮಾನ್ಯ. ಇನ್ನು ಸ್ಟಾರ್‌ ನಟ ನಟಿಯರ ಮಕ್ಕಳು ಮುಂಬೈನಂಥ ನಗರದಲ್ಲಿ ಕೋಟಿ ಕೋಟಿ ಕೊಟ್ಟು ಮನೆಗಳನ್ನು ಅಪಾರ್ಟ್‌ ಮೆಂಟ್‌ ಗಳನ್ನು ಖರೀದಿಸುತ್ತಾರೆ. ಹಾಗಾಗಿದ್ರೆ ಯಾವ್ಯಾವ ಸ್ಟಾರ್‌ ಕಿಡ್‌ ಎಷ್ಟೆಷ್ಟು ಕೋಟಿ ಬೆಲೆಯ ಮನೆಯಲ್ಲಿ ವಾಸವಾಗಿದ್ದಾರೆ ಅನ್ನೋದನ್ನು ನೋಡೋಣ.


ಜಾನ್ವಿ ಕಪೂರ್‌: ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್‌ ಮಗಳು ಜಾನ್ವಿ ಕಪೂರ್‌ ಬಹುಕೋಟಿ ಮನೆಯಲ್ಲಿ ವಾಸವಿದ್ದಾರೆ. ಸಹೋದರಿ ಖುಷಿ ಕಪೂರ್‌ ಹಾಗೂ ತಂದೆ ಬೋನಿ ಕಪೂರ್‌ ಜೊತೆ ಸೇರಿ 65 ಕೋಟಿ ಮೌಲ್ಯದ ಮನೆಯನ್ನು ಕೊಂಡು ಅವರು ಸುದ್ದಿಯಾಗಿದ್ದರು. ಈ ಐರಾಷಾರಾಮಿ ಬಂಗಲೆ ಪ್ರೈವೇಟ್‌ ಗಾರ್ಡನ್‌, ಸ್ವಿಮ್ಮಿಂಗ್‌ ಫೂಲ್‌ ಹಾಗೂ 5 ಕಾರ್‌ ಪಾರ್ಕಿಂಗ್‌ ಹೊಂದಿದೆ.


ಅರ್ಜುನ್‌ ಕಪೂರ್‌ : ಪ್ರಸಿದ್ಧ ನಿರ್ಮಾಪಕ ಬೋನಿ ಕಪೂರ್‌ ಮಗ ಹಾಗೂ ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಮುಂಬೈನಲ್ಲಿ 20-23 ಕೋಟಿ ಕೊಟ್ಟು ಲಕ್ಷುರಿ ಫ್ಲ್ಯಾಟ್ ಖರೀದಿಸಿದ್ದಾರೆ. ಅದು ಅರ್ಜುನ್‌ ಕಪೂರ್‌ ಗರ್ಲ್‌ ಫ್ರೆಂಡ್‌ ಮಲೈಕಾ ಅರೋರಾ ಮನೆಯ ಬಳಿಯೇ ಇರುವುದು ವಿಶೇಷ.


ಇಶಾನ್‌ ಕಟ್ಟರ್:‌ ಧಡಕ್‌ ಚಿತ್ರದ ಮೂಲಕ ಬಾಲಿವುಡ್‌ ಗೆ ಎಂಟ್ರಿ ಕೊಟ್ಟ ನಟ ಇಶಾನ್‌ ಕಟ್ಟರ್‌ ಇತ್ತೀಚಿಗೆ ಮುಂಬೈನಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ. ಸಹೋದರ ಶಾಹಿದ್‌ ಕಪೂರ್‌ ಮನೆಯಂತೆಯೇ ಇವರ ಐಷಾರಾಮಿ ಮನೆಯೂ ಸಮುದ್ರಕ್ಕೆ ಮುಖ ಮಾಡಿಕೊಂಡಿದೆ.


ಇದನ್ನೂ ಓದಿ: Varun Dhawan-Vestibular Hypofunction: ದೇಹದ ಬ್ಯಾಲೆನ್ಸ್ ತಪ್ಪಿಸೋ ರೋಗ! ವರುಣ್ ಧವನ್ ಆರೋಗ್ಯ ಸಮಸ್ಯೆ ಏನು?


ಅನನ್ಯಾ ಪಾಂಡೆ: ಬಾಲಿವುಡ್‌ ನಟಿ, ಸ್ಟಾರ್‌ ಕಿಡ್‌ ಅನನ್ಯಾ ಪಾಂಡೆ ಕೂಡ ಹೊಸ ಮನೆಯ ಖರೀದಿಸಿದ್ದಾರೆ. ಖಾರ್‌ ಡೆಸ್ಟ್‌ ನಲ್ಲಿರುವ ಪಾಲಿ ಹಿಲ್‌ ನಲ್ಲಿ 10 ಕೋಟಿ ವೆಚ್ಚದ ಮನೆಯನ್ನು ಹೊಂದಿದ್ದಾರೆ. ಇದರಲ್ಲಿ ಕಂಟೆಪರಿ ಇಂಟೀರಿಯರ್ಸ್‌, ಜೊತೆಗೆ ಓಪನ್‌ ಸ್ಪೇಸ್‌ ಕೂಡ ಇದೆ. ಅಲ್ಲದೇ ಮುಂಬೈ ನಗರದ ಮನಮೋಹಕ ದೃಶ್ಯ ಕಾಣುವಂತೆ ಇದನ್ನು ಡಿಸೈನ್‌ ಮಾಡಲಾಗಿದೆ.


ಸೋನಮ್‌ ಕಪೂರ್:‌ ಬಾಲಿವುಡ್‌ ನಟ ಅನಿಲ್‌ ಕಪೂರ್‌ ಮಗಳು ನಟಿ ಸೋನಮ್‌ ಕಪೂರ್‌ ಮದುವೆಯಾಗಿರುವುದು ದೊಡ್ಡ ಉದ್ಯಮಿ ಆನಂದ ಅಹೂಜಾ ಅವರನ್ನು. ಈ ದಂಪತಿ ದೆಹಲಿಯಲ್ಲಿ ಬರೋಬ್ಬರಿ 173 ಕೋಟಿಯ ಬಂಗಲೆಯನ್ನು ಹೊಂದಿದ್ದಾರೆ.


ಆಲಿಯಾ ಭಟ್:‌ ಪ್ರಸಿದ್ಧ ನಿರ್ದೇಶಕ ಮಹೇಶ್‌ ಭಟ್‌ ಮಗಳು ಆಲಿಯಾ ಭಟ್‌ ಕೂಡ 32 ಕೋಟಿ ಕೊಟ್ಟು ಫ್ಲ್ಯಾಟ್ ಖರೀದಿಸಿದ್ದಾರೆ. ಇದು ರಣಬೀರ್‌ ಕಪೂರ್‌ ಹೊಂದಿರುವ ಅಪಾರ್ಟ್‌ ಮೆಂಟ್‌ ನಲ್ಲೇ ಇರುವುದು ವಿಶೇಷ. ಇನ್ನು ಆಲಿಯಾ ಇದೇ  ಫ್ಲ್ಯಾಟ್ ಅನ್ನು ತಮ್ಮ ಆಫೀಸ್‌ ಆಗಿಯೂ ಬಳಸಿಕೊಳ್ಳುತ್ತಾರೆ ಎನ್ನಲಾಗಿದೆ.


ಇದನ್ನೂ ಓದಿ: Rajeev Sen-Charu Asopa: ಮನೆಯಲ್ಲಿ ಸಿಸಿಟಿವಿ! ಹೆಂಡ್ತಿ ಮೇಲೆ ವಿಪರೀತ ಸಂಶಯ, ಸುಶ್ಮಿತಾ ಸಹೋದರನ ವಿರುದ್ಧ ಆರೋಪ


ರಣಬೀರ್‌ ಕಪೂರ್:‌ ನಟ ರಿಶಿ ಕಪೂರ್‌ ಮಗ ನಟ ರಣಬೀರ್‌ ಕಪೂರ್‌ ಬಾಂದ್ರಾದಲ್ಲಿ ಲಕ್ಸುರಿ ಅಪಾರ್ಟ್‌ ಹೊಂದಿದ್ದಾರೆ. 35 ಕೋಟಿ ಕೊಟ್ಟು ಕೊಂಡುಕೊಳ್ಳಲಾಗಿರೋ ಈ ಫ್ಲಾಟ್‌ ಗೆ ಇಂಟೀರಿಯರ್‌ ಡಿಸೈನ್‌ ಮಾಡಿದ್ದು ನಟ ಶಾರುಖ್‌ ಖಾನ್‌ ಪತ್ನಿ, ಪ್ರಸಿದ್ದ ಇಂಟೀರಿಯರ್‌ ಡಿಸೈನರ್‌ ಗೌರ್‌ ಖಾನ್!‌


ಟೈಗರ್‌ ಶ್ರಾಫ್:‌ ಮುಂಬೈನ ಪಾಶಕರ್‌ ವೆಸ್ಟ್‌ ನಲ್ಲಿ ಅಲ್ಟ್ರಾ ಲಕ್ಸುರಿ ಬಂಗಲೆಯನ್ನು ಹೊಂದಿದ್ದಾರೆ ನಟ ಟೈಗರ್‌ ಶ್ರಾಫ್.‌ ಇದು 8 ಬಿಹೆಚ್‌ ಕೆ ಮನೆಯಾಗಿದೆ. ಈ ಅಪಾರ್ಟ್‌ ಮೆಂಟ್‌ ನ ಬೇಸ್‌ ಪ್ರೈಸ್‌ ಆರಂಭವಾಗೋದು 5.5 ಕೋಟಿಯಿಂದ ಎನ್ನಲಾಗಿದೆ.


ಹೃತಿಕ್‌ ರೋಷನ್:‌ ನಟ ಹೃತಿಕ್‌ ರೋಷನ್‌ ಮುಂಬೈನಲ್ಲಿ ಬರೋಬ್ಬರಿ 100 ಕೋಟಿ ಕೊಟ್ಟು ಖರೀದಿಸಲಾಗಿರುವ ಲಕ್ಸರಿ ಮನೆಯನ್ನು ಹೊಂದಿದ್ದಾರೆ.

Published by:Divya D
First published: