Anurag Kashyap: ಮಾಜಿ ಪತ್ನಿಯರ ಜೊತೆಗಿನ ಫೋಟೋ ಶೇರ್ ಮಾಡಿದ ಸ್ಟಾರ್ ಡೈರೆಕ್ಟರ್! ಹೇಗಿದೆ ನೋಡಿ

ಅನುರಾಗ್ ಕಶ್ಯಪ್ ಹಿಂದಿ ಸಿನೆಮಾದಲ್ಲಿನ ಹೆಸರಾಂತ ಚಲನಚಿತ್ರ ನಿರ್ದೇಶಕ, ಬರಹಗಾರ, ಸಂಪಾದಕ, ನಿರ್ಮಾಪಕ ಮತ್ತು ನಟ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮತ್ತು ನಾಲ್ಕು ಫಿಲ್ಮ್​​ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮ ಚಿತ್ರಗಳಿಗಾಗಿ ಸ್ವೀಕರಿಸಿದ್ದಾರೆ. ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ನೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಏನದು ನೋಡಿ

ಅನುರಾಗ್ ಕಶ್ಯಪ್, ಆರತಿ ಬಜಾಜ್ ಮತ್ತು ಕಲ್ಕಿ ಕೊಚ್ಲಿನ್

ಅನುರಾಗ್ ಕಶ್ಯಪ್, ಆರತಿ ಬಜಾಜ್ ಮತ್ತು ಕಲ್ಕಿ ಕೊಚ್ಲಿನ್

  • Share this:
ಬಾಲಿವುಡ್ ಸ್ಟಾರ್ ನಿರ್ದೇಶಕ (Star director) ಅನುರಾಗ್ ಕಶ್ಯಪ್  ಕೆಲ ದಿನಗಳ ಹಿಂದೆ ತಾಪ್ಸಿ ಪನ್ನು (Taapsee Pannu) ಬಗ್ಗೆ ಹೇಳಿದ ಮಾತಿನಿಂದಾಗಿ ಭಾರಿ ಸುದ್ದಿಯಲ್ಲಿದ್ದರು. ಹೀಗೆ ಆಗಾಗ ಕೆಲವೊಂದು ವಿವಾದಾತ್ಮಕ (Controversial) ಹೇಳಿಕೆಯನ್ನು ನೀಡುವ ಮೂಲಕ ಚರ್ಚೆಯಲ್ಲಿರುತ್ತಾರೆ ಅನುರಾಗ್ ಕಶ್ಯಪ್ (Anurag Kashyap). ಅನುರಾಗ್ ಕಶ್ಯಪ್ ಹಿಂದಿ ಸಿನೆಮಾದಲ್ಲಿನ ಹೆಸರಾಂತ ಚಲನಚಿತ್ರ ನಿರ್ದೇಶಕ, ಬರಹಗಾರ, ಸಂಪಾದಕ, ನಿರ್ಮಾಪಕ ಮತ್ತು ನಟ. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Film Award), ಮತ್ತು ನಾಲ್ಕು ಫಿಲ್ಮ್​​ಫೇರ್ ಪ್ರಶಸ್ತಿಗಳು (Filmfare Awards) ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮ ಚಿತ್ರಗಳಿಗಾಗಿ ಸ್ವೀಕರಿಸಿದ್ದಾರೆ. ಬಾಲಿವುಡ್ ನಲ್ಲಿ ಇವರೊಬ್ಬ ವಿಶೇಷ ರೀತಿಯ ನಿರ್ಮಾಪಕರಾಗಿದ್ದು, ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ನೊಂದಿಗೆ ಅಭಿಮಾನಿಗಳ ಮನಗೆದ್ದಿದ್ದಾರೆ.

ಹೌದು, ಇನ್‌ಸ್ಟಾಗ್ರಾಮ್ ನಲ್ಲಿ ಅನುರಾಗ್ ಕಶ್ಯಪ್ ತಮ್ಮ ಮಾಜಿ ಪತ್ನಿಯರ ಫೋಟೋ ಹಾಕಿ ವಿಶೇಷವಾದ ಅಡಿಬರಹ ನೀಡಿದ್ದಾರೆ. ಈ ಪೋಸ್ಟ್ ಎಲ್ಲರ ಮೆಚ್ಚುಗೆಗೆ ಸಹ ಪಾತ್ರವಾಗಿದೆ.

ಮಾಜಿ ಪತ್ನಿಯರ ಜೊತೆ ಫೋಟೋ ಪೋಸ್ಟ್
ಅನುರಾಗ್ ಕಶ್ಯಪ್ ತಮ್ಮ ಮಾಜಿ ಪತ್ನಿಯರಾದ, ಚಲನಚಿತ್ರ ಸಂಪಾದಕಿ ಆರತಿ ಬಜಾಜ್ ಮತ್ತು ಜಿಂದಗಿ ನಾ ಮಿಲೇಗಿ, ಗಲ್ಲಿ ಬಾಯ್ ಚಿತ್ರದ ನಟಿ ಕಲ್ಕಿ ಕೊಚ್ಲಿನ್ ಅವರೊಟ್ಟಿಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಮುದ್ದಾದ ಫೋಟೋ ಜೊತೆಗೆ ‘ಇವರಿಬ್ಬರು ನನ್ನ ಜೀವನದ ಆಧಾರ ಸ್ತಂಭಗಳು’ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Sushant Singh Rajput: ಬಾಲಿವುಡ್ ಬಿಗ್​ ಬಜೆಟ್ ಸಿನಿಮಾಗಳು ಬಾಯ್ಕಾಟ್, ಸುಶಾಂತ್ ಮಾತ್ರ ಫುಲ್ ಟ್ರೆಂಡಿಂಗ್! ಯಾಕೆ ಹೀಗೆ?

ಅನುರಾಗ್ ಕಶ್ಯಪ್ ಮತ್ತು ಆರತಿ ಬಜಾಜ್ ಅವರನ್ನು 1997ರಲ್ಲಿ ವಿವಾಹವಾಗಿ 2009ರಲ್ಲಿ ವಿಚ್ಛೇದನ ಪಡೆದರು ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ನಂತರ ನಟಿ ಕಲ್ಕಿಯನ್ನು 2011ರಲ್ಲಿ ಕೈ ಹಿಡಿದರು. ಇವರಿಬ್ಬರ ವೈವಾಹಿಕ ಜೀವನ ಕೂಡ ಬಹಳ ವರ್ಷ ಉಳಿಯದೇ 2015ರಲ್ಲಿ ಇಬ್ಬರು ವಿಚ್ಛೇದನ ಪಡೆಯುವ ಮೂಲಕ ದೂರವಾದರು.

ವಿಚ್ಛೇದನ ಪಡೆದರೂ ಹಾಗೆಯೇ ಉಳಿದಿರುವ ಬಾಂಧವ್ಯ
ಅನುರಾಗ್ ಕಶ್ಯಪ್ ಇಬ್ಬರು ಪತ್ನಿಯರ ಜೊತೆ ವಿಚ್ಛೇದನ ಪಡೆದರೂ ಸಹ ಇನ್ನೂ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ. ಫೋಟೋದಲ್ಲಿ ಅನುರಾಗ್ ಕಶ್ಯಪ್ ಅವರು ಆರತಿ ಮತ್ತು ಕಲ್ಕಿಯೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್​ ಮಾಡಿದ್ದಾರೆ. ಸಂತೋಷದ ಚಿತ್ರವನ್ನು ಹಂಚಿಕೊಂಡ ನಿರ್ದೇಶಕರು "ನನ್ನ ಎರಡು ಪಿಲ್ಲರ್" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಚಿತ್ರಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಕಶ್ಯಪ್ ಮತ್ತು ಆರತಿ ಬಜಾಜ್ ಅವರ ಮಗಳು ಆಲಿಯಾ ಕಶ್ಯಪ್, "ಐಕಾನಿಕ್" ಎಂದು ಕಾಮೆಂಟ್ ಮಾಡಿದ್ದಾರೆ. ಕುಬ್ರ ಸೇಟ್ ಅವರು ಹೃದಯದ ಎಮೋಜಿಯೊಂದಿಗೆ ಬೆಸ್ಟ್ ಫೋಟೋ ಎಂದು ಹೇಳಿದರೆ, ಅಮೃತಾ ಸುಭಾಷ್ ಎರಡು ಹೃದಯದ ಎಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Vijay Deverakonda: ಲೈಗರ್​ ಸಿನಿಮಾದಲ್ಲಿ ಒಂದೇ ಸಲಕ್ಕೆ 7 ಸೀನ್​ಗೆ ಕತ್ತರಿ! ಅಂಥಹ ದೃಶ್ಯಗಳೇನಿತ್ತು?

ಅನುರಾಗ್ ಕಶ್ಯಪ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುತ್ತಾರೆ ಮತ್ತು ಆಗಾಗ್ಗೆ ತಮ್ಮ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ, ಅನುರಾಗ್ ಕಶ್ಯಪ್ ಅವರು ಚಿತ್ರೀಕರಣದ ಮಧ್ಯೆ ಸೆಟ್‌ನಲ್ಲಿ ಮಲಗಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಶೀರ್ಷಿಕೆಯಲ್ಲಿ, "ನಾನು ಸೆಟ್‌ನಲ್ಲಿ ಚಲನಚಿತ್ರದ ಕನಸು ಕಾಣುತ್ತಿದ್ದೇನೆ" ಎಂದು ಬರೆದುಕೊಂಡಿದ್ದರು.

ದೋಬಾರಾ ಸಿನಿಮಾ ಪ್ರಮೋಷನ್ ನಲ್ಲಿ ಅನುರಾಗ್ ಬ್ಯುಸಿ
ಅನುರಾಗ್ ಸದ್ಯ ಮುಂದಿನ ಸಿನಿಮಾದ ರಿಲೀಸ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅನುರಾಗ್ ನಿರ್ದೇಶನದ ದೋಬಾರಾ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ಮಿಂಚಿದ್ದಾರೆ.
Published by:Ashwini Prabhu
First published: