Pooja Hegde: ಕರಾವಳಿ ಬೆಡಗಿ ಕಾಲಿಗೆ ಕಿಸ್ ಮಾಡಿದ ಸ್ಟಾರ್ ನಟ; ವಿಡಿಯೋ ವೈರಲ್

ಇದೊಂದೇ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಇದನ್ನು ಟ್ರೋಲ್​ ಮಾಡಿದ್ದಾರೆ. ಸಿನಿಮಾಗೋಸ್ಕರ ಅಕ್ಷಯ್​ ಈ ರೀತಿ ಮಾಡಬಾರದಿತ್ತು ಎಂದು ಕೆಲವರು ಹೇಳಿದ್ದಾರೆ.

Rajesh Duggumane | news18-kannada
Updated:October 18, 2019, 9:56 AM IST
Pooja Hegde: ಕರಾವಳಿ ಬೆಡಗಿ ಕಾಲಿಗೆ ಕಿಸ್ ಮಾಡಿದ ಸ್ಟಾರ್ ನಟ; ವಿಡಿಯೋ ವೈರಲ್
ಪೂಜಾ ಹೆಗ್ಡೆ
Rajesh Duggumane | news18-kannada
Updated: October 18, 2019, 9:56 AM IST
ಹೀರೋಯಿನ್​ಗಳು ವೇದಿಕೆ ಏರಿದಾಗ ಅವರಿಗೆ ಅಭಿಮಾನಿಗಳು ಬಂದು ಹಗ್, ಕಿಸ್​ ಮಾಡಲು ಪ್ರಯತ್ನಿಸಿದ ಅನೇಕ ಉದಾಹರಣೆಗಳಿವೆ. ಸ್ಟಾರ್​ ನಟರು ಸಹ ನಟಿಗೆ ವೇದಿಕೆಯ ಮೇಲೆ ಪ್ರೀತಿ ಪೂರ್ವಕವಾಗಿ ಚುಂಬಿಸಿದ್ದಿದೆ. ಈಗ ಸ್ಟಾರ್ ನಟನೋರ್ವ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಕಾಲಿಗೆ ಕಿಸ್​ ಮಾಡಿದ್ದಾರೆ!

ಅಷ್ಟಕ್ಕೂ ಪೂಜಾ ಹೆಗ್ಡೆ ಕಾಲಿಗೆ ಕಿಸ್​ ಮಾಡಿದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರ, ಅಕ್ಷಯ್​ ಕುಮಾರ್​. ಅವರು ಕಿಸ್​ ಮಾಡಿದ್ದು ಯಾವುದೋ ವೇದಿಕೆ ಮೇಲಲ್ಲ. ಬದಲಿಗೆ, ‘ಹೌಸ್​ಫುಲ್​ 4’ ಸಾಂಗ್​ನಲ್ಲಿ. ‘ಎಕ್​ ಚುಮ್ಮಾ…’ ಹೆಸರಿನ ಸಾಂಗ್​ ಬಿಡುಗಡೆ ಆಗಿದೆ. ಇದರಲ್ಲಿ ಮುತ್ತು ಕೊಡೋದೇ ಹೈಲೈಟ್​. ಈ ವೇಳೆ ಅಕ್ಷಯ್​ ಪೂಜಾ ಹೆಗ್ಡೆ ಕಾಲಿಗೆ ಚುಂಬಿಸಿದ್ದಾರೆ.

ಇದೊಂದೇ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಇದನ್ನು ಟ್ರೋಲ್​ ಮಾಡಿದ್ದಾರೆ. ಸಿನಿಮಾಗೋಸ್ಕರ ಅಕ್ಷಯ್​ ಈ ರೀತಿ ಮಾಡಬಾರದಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅಕ್ಷಯ್​ ಕುಮಾರ್​ ಅವರನ್ನು ಪ್ರಶಂಸಿದ್ದಾರೆ.



ಫರ್ಹಾದ್​ ಸಮ್ಜಿ ನಿರ್ದೇಶನದ ‘ಹೌಸ್​ಫುಲ್​ 4’ ಸಿನಿಮಾ ಅಕ್ಟೋಬರ್​ 25ರಂದು ತೆರೆಗೆ ಬರುತ್ತಿದೆ. ಅಕ್ಷಯ್​ ಕುಮಾರ್​, ರಿತೇಶ್​ ದೇಶ್​ಮುಖ್​, ಬಾಬಿ ಡಿಯೋಲ್​, ಪೂಜಾ ಹೆಗ್ಡೆ, ಕೃತಿ ಸನನ್​, ಕೃತಿ ಕರಬಂಧ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಪ್ರಮೋಷನ್​ಗಾಗಿ ಈ ತಂಡ ಟ್ರೈನ್​ ಏರಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು.
First published:October 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...