ದಿಗ್ಗಜರೊಂದಿಗೆ ಜೂ.ಕ್ರೇಜಿಸ್ಟಾರ್​ ತ್ರಿವಿಕ್ರಮನ ಫೈಟ್​

ಇನ್ನು ರೋಸ್ ಮತ್ತು ಮಾಸ್ ಲೀಡರ್​ನಂತಹ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾಮೂರ್ತಿ ಜೂನಿಯರ್ ಕ್ರೇಜಿಸ್ಟಾರ್​ರನ್ನು ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 

zahir | news18-kannada
Updated:December 2, 2019, 5:30 PM IST
ದಿಗ್ಗಜರೊಂದಿಗೆ ಜೂ.ಕ್ರೇಜಿಸ್ಟಾರ್​ ತ್ರಿವಿಕ್ರಮನ ಫೈಟ್​
ತ್ರಿವಿಕ್ರಮ
  • Share this:
ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ರವಿಚಂದ್ರನ್ ಪುತ್ರ ವಿಕ್ರಂ ಅಭಿನಯದ ಚೊಚ್ಚಲ ಸಿನಿಮಾ ತ್ರಿವಿಕ್ರಮ ನಾನಾ ಕಾರಣಗಳಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭಿಸಿರುವ ತ್ರಿವಿಕ್ರಮ ತಂಡಕ್ಕೆ ಇದೀಗ ಖ್ಯಾತನಾಮರು ಎಂಟ್ರಿ ಕೊಡುತ್ತಿದ್ದಾರೆ. ಅದು ಕೂಡ ಭರ್ಜರಿ ಆ್ಯಕ್ಷನ್​ಗಾಗಿ ಎಂಬುದೇ ವಿಶೇಷ.

ಮೊದಲ ಚಿತ್ರದಲ್ಲೇ ವಿಕ್ರಂ ನ ಸಾಹಸಕ್ಕೆ ದಿಗ್ಗಜ ಫೈಟ್​ ಮಾಸ್ಟರ್​ಗಳು ಸಾಥ್ ನೀಡಲಿದ್ದಾರೆ. ಪಕ್ಕಾ ಆ್ಯಕ್ಷನ್ ಲವ್ ಸ್ಟೋರಿ ಹೊಂದಿರುವ ತ್ರಿವಿಕ್ರಮನಿಗೆ ಸೂಪರ್ ಸ್ಟಾರ್ಸ್​ ಚಿತ್ರಗಳಿಗೆ ಸಾಹಸ ಸಂಯೋಜಿಸಿರುವ ಮಾಸ್ಟರ್​ಗಳನ್ನೇ ಕರೆ ತರಲಾಗುತ್ತಿದೆ. ಅದು ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ಕು ಪ್ರಖ್ಯಾತ ಫೈಟ್​ ಮಾಸ್ಟರ್​ಗಳು.

1) ಅನ್ಬು - ಅರಿವು: ಮದ್ರಾಸ್​, ಕಬಾಲಿ, ಕೆಜಿಎಫ್​ ನಂತಹ ಸೂಪರ್​ ಹಿಟ್​ ಚಿತ್ರಗಳಿಗೆ ಸಾಹಸ ದೃಶ್ಯಗಳಿಗೆ ಆ್ಯಕ್ಷನ್​ ಕಟ್​ ಹೇಳಿರುವ ಅನ್ಬು, ಈಗಾಗಲೇ ಕಾಲಿವುಡ್​, ಟಾಲಿವುಡ್​, ಮಾಲಿವುಡ್​, ಬಾಲಿವುಡ್​ನಲ್ಲಿ ತನ್ನದೆ ಛಾಪು ಮೂಡಿಸಿದ್ದಾರೆ. ಇನ್ನು KGF ಚಿತ್ರದ ಸಾಹಸ ನಿರ್ದೇಶನಕ್ಕಾಗಿ ನ್ಯಾಷನಲ್​ ಅವಾರ್ಡ್​ ಕೂಡ ಪಡೆದಿದ್ದಾರೆ. ಅನ್ಬು-ಅರಿವು ಜೋಡಿ ಇದೀಗ ತ್ರಿವಿಕ್ರಮನ ಸಾಹಸದ ಹುಮಸ್ಸನ್ನ ಮತ್ತಷ್ಟು ಹೆಚ್ಚಿಸಲು ಕೈ ಜೋಡಿಸಿದ್ದಾರೆ.

ಅನ್ಬು-ಅರಿವು


2) ವಿಜಯ್​ ಮಾಸ್ಟರ್: ​ದಬಾಂಗ್​, ಬಾಡಿಗಾಡ್​, ವಾಂಟೆಡ್, ಮನಂ, ಟೆಂಪರ್​, ಹಿಟ್ಲರ್​, ಬಾಬ, ವಿಲ್ಲು, ಪೊಕಿರಿ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಜಯ್ ಮಾಸ್ಟರ್ ಕೂಡ ತ್ರಿವಿಕ್ರಮನಿಗಾಗಿ ಎಂಟ್ರಿ ಕೊಟ್ಟಿದ್ದಾರೆ. ಬೆಸ್ಟ್​ ಆ್ಯಕ್ಷನ್​ ಕೆಟಗರಿಯಲ್ಲಿ ಎರಡು ಬಾರಿ ಫಿಲ್ಮ್​ಫೇರ್​ ಅವಾರ್ಡ್​ ಪಡೆದಿರುವ ವಿಜಯ್ ಮಾಸ್ಟರ್ ಸೌತ್​ ಇಂಡಿಯಾ, ಬಾಲಿವುಡ್​ನಲ್ಲಿ ಬಹುಬೇಡಿಕೆಯ ಸಾಹಸ ನಿರ್ದೇಶಕ.

3) ರವಿ ವರ್ಮ: ಮಫ್ತಿ, ದಿ ವಿಲನ್​, ಮಾಸ್ತಿಗುಡಿ, ಕಿರಿಕ್​ ಪಾರ್ಟಿ, ದೊಡ್ದಮನೆ ಹುಡುಗ, ವಿರಾಟ್​, ಉಗ್ರಂ,ಗೂಗ್ಲಿ, ರಾಜಾಹುಲಿ, ಬಚ್ಚನ್​, ಅದ್ದೂರಿ ಯಾರೇ ಕೂಗಾಡಲಿ ಸಂಗೂಳ್ಳಿ ರಾಯಣ್ಣ, ಜಾಕಿ, ಮೈನಾ ಸೇರಿದಂತೆ ಇನ್ನೂ ಅನೇಕ ಸೂಪರ್​ ಇಟ್​ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರು ರವಿ ವರ್ಯ ಕನ್ನಡದ ಅತ್ಯುತ್ತಮ ಫೈಟ್ ಮಾಸ್ಟರ್. ಈಗಾಗಲೇ ಬಾಲಿವುಡ್​ ಸೇರಿದಂತೆ ಸೌತ್​ ಇಂಡಿಯಾದಲ್ಲಿ ಬೆಸ್ಟ್​ ಸ್ಟಂಟ್​ ಮಾಸ್ಟರ್​ ಎಂದು ಹೆಸರು ಮಾಡಿರುವ ರವಿ ವರ್ಮ ಕೂಡ ತ್ರಿವಿಕ್ರಮ ಚಿತ್ರದ ಹಲವು ಆಕ್ಷನ್​ ಸೀನ್​ಗಳಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ.

ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್
Loading...

4) ಜಾಲಿ ಬಾಸ್ಟಿನ್​: ಪ್ರೇಮಲೋಕ, ಪುಟ್ನಂಜ, ಅಣ್ಣಯ್ಯ, ಧಮ್​, ಕ್ರೆಜಿಸ್ಟಾರ್​, ಶೈಲು, ಅರಮನೆ, ಗಾಳಿಪಟ, ಸೇರಿದಂತೆ ನೂರಾರು ಚಿತ್ರಗಳಿಗೆ ಆ್ಯಕ್ಷನ್​ ಸೀನ್​ಗಳಿಗೆ ಸಾಹಸ ನಿರ್ದೇಶನ ಮಾಡಿರುವ ಜಾಲಿ ಬಾಸ್ಟಿನ್ ಸಹ ತ್ರಿವಿಕ್ರಮನಿಗೆ ಸಾಥ್ ನೀಡಲಿದ್ದಾರೆ.

ಈ ನಾಲ್ಕು ದಿಗ್ಗಜ ಫೈಟ್ ಮಾಸ್ಟರ್ಸ್​ ಜೊತೆ ತ್ರಿವಿಕ್ರಮ ರೂಪುಗೊಳ್ಳುತ್ತಿದ್ದು, ರವಿಚಂದ್ರನ್ ಪುತ್ರನ ಚೊಚ್ಚಲ ಎಂಟ್ರಿ ಹೇಗಿರಲಿದೆ ಎಂಬುದು ಇದೀಗ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದೆ. ಇನ್ನು ನಾಲ್ಕು ದಿಗ್ಗಜದ ಸಾಹಸ ಚಿತ್ರದಲ್ಲಿ ಹೇಗೆ ವಿಭಿನ್ನವಾಗಿರಲಿದೆ ಎಂಬುದನ್ನು ತಿಳಿಯಲು ಚಿತ್ರ ಬಿಡುಗಡೆವರೆಗೂ ಕಾದು ನೋಡಬೇಕಿದೆ.

ಇನ್ನು ರೋಸ್' ಮತ್ತು 'ಮಾಸ್ ಲೀಡರ್'​ನಂತಹ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾಮೂರ್ತಿ ಜೂನಿಯರ್ ಕ್ರೇಜಿಸ್ಟಾರ್​ರನ್ನು ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.  ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಈಗಾಗಲೇ ಆಕಾಂಕ್ಷ ಮತ್ತು ಅಕ್ಷರಾ ಗೌಡ ಪ್ರೀತಿ-ಪ್ರೇಮದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
First published:December 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...