RRR ಸಿನಿಮಾದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ: ರಾಜಮೌಳಿ ಮಾತು ಕೇಳಿ ಫ್ಯಾನ್ಸ್​ ಶಾಕ್​!

ಆಲಿಯಾ ಮತ್ತು ಅಜಯ್​ ದೇವಗನ್​ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅದನ್ನು ಮುಚ್ಚಿಟ್ಟು ನಾನು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ. ಆದರೆ ಆ ಪಾತ್ರಗಳಿಗೆ ಹೀರೋಗಳಷ್ಟೇ ಮಹತ್ವ ಇದೆ’ ಎಂದು ಎಸ್​​.ಎಸ್​. ರಾಜಮೌಳಿ ಹೇಳಿದ್ದಾರೆ. ಸಿನಿಮಾ ಮಾಂತ್ರಿಕನ ಮಾತು ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ.

ಅಜಯ್​ ದೇವಗನ್​, ರಾಜಮೌಳ, ಆಲಿಯಾ ಭಟ್​

ಅಜಯ್​ ದೇವಗನ್​, ರಾಜಮೌಳ, ಆಲಿಯಾ ಭಟ್​

  • Share this:
ಜನವರಿ 7ರಂದು ‘ಆರ್​ಆರ್​ಆರ್’​​ (RRR) ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ. ಹೀಗಾಗಿ ಚಿತ್ರತಂಡ ಈಗಾಗಲೇ ಬೆಂಗಳೂರು (Bengaluru), ಆಂಧ್ರ, ತಮಿಳುನಾಡು, ಕೇರಳ, ಮುಂಬೈನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಎಸ್​.ಎಸ್​.ರಾಜಮೌಳಿ (S.S Rajamouli) ಅಂದರೆ ಅಲ್ಲಿ ಹೊಸತನ ಇರುತ್ತೆ. ಅದು ಚಿತ್ರದಲ್ಲಿ ಆಗಲಿ, ಸಿನಿಮಾದ ಪ್ರಚಾರದಲ್ಲಿ ಆಗಲಿ, ವಿಭಿನ್ನವಾಗಿಯೇ ಪ್ರಮೋಷನ್​ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ 25 ದಿನ ಬಾಕಿ ಇರುವಾಗಲೇ ರಾಜಮೌಳಿ ಪ್ರಚಾರದ ಅಖಾಡಕ್ಕೆ ಎಂಟ್ರಿಕೊಟ್ಟಿದ್ದರು. ಜೂ.ಎನ್​ಟಿಆರ್ (Jr.NTR)​, ರಾಮಚರಣ್ (Ramcharan)​, ಆಲಿಯಾ ಭಟ್ (​Alia Bhatt), ಎಸ್​​.ಎಸ್​.ರಾಜಮೌಳಿ ಪ್ರಮುಖ ರಾಜ್ಯಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಆರ್​ಆರ್​ಆರ್​ ಚಿತ್ರತಂಡ ಅದ್ಧೂರಿ ಪ್ರಚಾರ ನಡೆಸಿದೆ. ಈಗಾಗಲೇ ಟ್ರೈಲರ್​ನಲ್ಲೇ ಆರ್​ಆರ್​ಆರ್​ ಸಿನಿಮಾ ಮೋಡಿ ಮಾಡಿದೆ.  ಬಾಲಿವುಡ್​ ಕಲಾವಿದರಾದ ಅಜಯ್​ ದೇವಗನ್​ (Ajay Devgn) ಮತ್ತು ಆಲಿಯಾ ಭಟ್ (Alia Bhatt)​ ಅವರು ನಟಿಸಿದ್ದಾರೆ. ಆದರೆ ಅವರ ಪಾತ್ರಗಳ ಬಗ್ಗೆ ಒಂದು ಸತ್ಯವನ್ನು ನಿರ್ದೇಶಕ ರಾಜಮೌಳಿ ಬಾಯಿ ಬಿಟ್ಟಿದ್ದಾರೆ. ಇವರಿಬ್ಬರದ್ದು ಅತಿಥಿ ಪಾತ್ರ ಎಂದು ಅವರು ಹೇಳಿದ್ದಾರೆ. ಈ ವಿಷಯ ಕೇಳಿ ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ಅಭಿಮಾನಿಗಳಿಗೆ ಬೇಸರ ಆದರೂ ಅಚ್ಚರಿ ಏನಿಲ್ಲ. ಸಿನಿಮಾ ಪೂರ್ತಿ ಇರುವ ಪಾತ್ರಗಳೆಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿರುವುದು ಸುಳ್ಳಲ್ಲ.

ಆಲಿಯಾ, ಅಜಯ್​ ಅತಿಥಿ ಪಾತ್ರಗಳಂತೆ!

ಆಲಿಯಾ ಭಟ್​ ಅವರು ಸೀತಾ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಆದರೆ ಅದೊಂದು ಚಿಕ್ಕ ಪಾತ್ರ ಎಂಬ ಮಾಹಿತಿ ತಿಳಿದುಬಂದಿದೆ. ಆ ಬಗ್ಗೆ ರಾಜಮೌಳಿ ಕೂಡ ಯಾವುದೇ ಮುಚ್ಚುಮರೆ ಮಾಡಿಲ್ಲ. ‘ಆಲಿಯಾ ಮತ್ತು ಅಜಯ್​ ದೇವಗನ್​ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅದನ್ನು ಮುಚ್ಚಿಟ್ಟು ನಾನು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ. ಆದರೆ ಆ ಪಾತ್ರಗಳಿಗೆ ಹೀರೋಗಳಷ್ಟೇ ಮಹತ್ವ ಇದೆ’ ಎಂದು ಎಸ್​​.ಎಸ್​. ರಾಜಮೌಳಿ ಹೇಳಿದ್ದಾರೆ. ಸಿನಿಮಾ ಮಾಂತ್ರಿಕನ ಮಾತು ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ. ಆಲಿಯಾ ಭಟ್​, ಅಜಯ್​ ದೇವಗನ್​ ಅವರದ್ದು ಚಿಕ್ಕ ಪಾತ್ರ ಎಂದು ಹೇಳಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನು ಓದಿ : ಸಮಂತಾ ಇಷ್ಟೊಂದು ವರ್ಕ್‌ಔಟ್ ಮಾಡೋದೇಕೆ.. ಏನು ಹೇಳ್ತಾರೆ ಕೇಳಿ

ಪ್ರೇಕ್ಷಕರನ್ನು ಸೆಳೆಯಲು ಪಾತ್ರ ಕೊಟ್ರಾ ರಾಜಮೌಳಿ!

‘ತೆರೆ ಮೇಲೆ ಒಂದು ಪಾತ್ರ ಎಷ್ಟು ಹೊತ್ತು ಬರುತ್ತದೆ ಎಂಬುದು ಮುಖ್ಯವಲ್ಲ. ಆ ಪಾತ್ರಕ್ಕೆ ಎಷ್ಟು ಮಹತ್ವ ಇದೆ ಎಂಬುದು ಮುಖ್ಯವಾಗುತ್ತದೆ. ಆ ದೃಷ್ಟಿಯಿಂದ ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ನಿಭಾಯಿಸಿರುವ ಈ ಪಾತ್ರಗಳಿಗೆ ತುಂಬ ಪ್ರಾಮುಖ್ಯತೆ ಇದೆ. ಈ ಸಿನಿಮಾದ ಆತ್ಮವೇ ಅಜಯ್​ ದೇವಗನ್​ ಪಾತ್ರ. ಇಬ್ಬರು ಹೀರೋಗಳನ್ನು ಬ್ಯಾಲೆನ್ಸ್​ ಮಾಡುವಂತಹ ಪಾತ್ರ ಆಲಿಯಾ ಭಟ್​ ಅವರದ್ದು’ ಎಂದು ರಾಜಮೌಳಿ ಹೇಳಿದ್ದಾರೆ. ಬಾಲಿವುಡ್​ ಪ್ರೇಕ್ಷಕರನ್ನು ಸೆಳೆಯಲು ಆಲಿಯಾ, ಅಜಯ್​ ದೇವಗನ್​ ಅವರನ್ನು ಆರ್​ಆರ್​ಆರ್​ ಸಿನಿಮಾದಲ್ಲಿ ಪಾತ್ರ ಕೊಟ್ಟಿದ್ದಾರೆ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ : ಡಿಸ್ನಿ ಹಾಟ್ ​ಸ್ಟಾರ್ ಪಾಲಾದ `ಅಖಂಡ’.. ಸ್ಟ್ರೀಮಿಂಗ್​ ಡೇಟ್​ ಕೂಡ ಕನ್ಫರ್ಮ್​!​

ಆರ್​ಆರ್​ಆರ್​ ಬಜೆಟ್ 400 ಕೋಟಿ ರೂ

ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾದ ಬಜೆಟ್ ಬರೋಬ್ಬರಿ 400 ಕೋಟಿ ರೂ. ಇದು ಈವರೆಗೆ ತಯಾರಾಗಿರುವ ಭಾರತದ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಎಂಬ ದಾಖಲೆ ಬರೆದಿದೆ. ಬಾಹುಬಲಿ ನಂತರ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಮಾರುಕಟ್ಟೆ ವಿಸ್ತೃತಗೊಂಡಿದೆ. ರಾಜಮೌಳಿ ಸಿನಿಮಾ ಆದ್ದರಿಂದ ಭಾರತದಾದ್ಯಂತ ಜನರಿಗೆ ಕುತೂಹಲ ಇದೆ. ಹಿಂದಿ ಭಾಷೆಯಲ್ಲೂ ಸಿನಿಮಾ ಇರುವುದರಿಂದ ಚಿತ್ರದ ಗಳಿಕೆ ಸಾವಿರ ಕೋಟಿ ಮೀರಿದರೆ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು.
Published by:Vasudeva M
First published: