ಭಾರತದ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ (SS Rajamouli) ಹೆಸರು ಬಾನೆತ್ತರ ತಲುಪಿದೆ. ತೆಲುಗು ನಿರ್ದೇಶಕನ (Telugu Director) ಹೆಸರಿಂದ ಹಾಲಿವುಡ್ (Hollywood) ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ತ್ರಿಬಲ್ ಆರ್ (RRR) ಸಿನಿಮಾ ವರ್ಲ್ಡ್ ಹಿಟ್ ಆಗುತ್ತಿದ್ದಂತೆ ರಾಜಮೌಳಿ ಇನ್ನೊಂದು ರೇಂಜ್ ಅನ್ನು ತಲುಪಿದ್ದಾರೆ. ಬಾಹುಬಲಿ (Baahubali) ನಿರ್ದೇಶಕ ಭಾರತದಲ್ಲಿ ಎಷ್ಟು ಕ್ರೇಜ್ ಸೃಷ್ಟಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಬಾಹುಬಲಿ ಸಿನಿಮಾಗಳನ್ನು ನೋಡಿದ ಜನ ಇವರೆಂಥಾ ಕಲಾಮಾಂತ್ರಿಕ ಎನ್ನುವುದನ್ನು ಅರಿತುಕೊಂಡಿದ್ದಾರೆ. ಈಗ ಜನರು ಎಸ್ಎಸ್ಆರ್ ಹಾಲಿವುಡ್ ಸಿನಿಮಾ ಮಾಡಬೇಕೆಂದು ಬಯಸುತ್ತಿದ್ದಾರೆ.
ಆರ್ಆರ್ಆರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ಹಾಲಿವುಡ್ ಪ್ರಾಜೆಕ್ಟ್ಗಳ ಬಗ್ಗೆ ಜನರು ಎಷ್ಟು ಕುತೂಹಲದಿಂದ ಕಾಯುತ್ತಿದ್ದಾರೋ ಅದೇ ರೀತಿ ತೆಲುಗಿನ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಕೂಡ ಹಾಲಿವುಡ್ ಸಿನಿಮಾ ಬಗ್ಗೆಯೂ ಕುತೂಹಲವಿದೆ.
ಇಂಗ್ಲಿಷ್ ಸಿನಿಮಾ ಸಿನಿಮಾ ಮಾಡಲು ಎಸ್ಎಸ್ಆರ್ ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ನಲ್ಲಿ RRR ನ ಭರ್ಜರಿ ಗೆಲುವಿನ ನಂತರ, ರಾಜಮೌಳಿ ಮತ್ತು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಹಾಲಿವುಡ್ ಚಲನಚಿತ್ರ ನಿರ್ಮಾಪಕರಾದ ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಜೇಮ್ಸ್ ಕ್ಯಾಮರೂನ್ ಅವರನ್ನು ಭೇಟಿಯಾದರು. ಇಬ್ಬರೂ ನಿರ್ದೇಶಕರು ಆರ್ಆರ್ಆರ್ ತಂಡ ಮತ್ತು ರಾಜಮೌಳಿ ಅವರ ಸಿನಿಮಾವನ್ನು ಹೊಗಳಿದರು.
ಆರ್ಆರ್ಆರ್ ಪ್ರದರ್ಶನದ ಭಾಗವಾಗಿ ರಾಜಮೌಳಿ ಅವರು ಈಗ ಯುಎಸ್ಗೆ ಕೆಲವು ಪ್ರವಾಸಗಳನ್ನು ಮಾಡಿದ್ದಾರೆ. ಅಮೆರಿಕಾದಲ್ಲಿ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಮೂಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಪ್ರೇಕ್ಷಕರಿಗೆ ಸಂತೋಷ ನೀಡುವ ಸಿನಿಮಾಗಳನ್ನು ಮಾಡಲು ನಾನು ಇಷ್ಟಪಡುತ್ತೇನೆ ಎಂದು ಅವರು ಹೇಳಿದ್ದಾರೆ.
ಅಮೆರಿಕಾದ ಮ್ಯಾಗಜೀನ್ ಎಂಟರ್ಟೈನ್ಮೆಂಟ್ ವೀಕ್ಲಿಯ ಅವಾರ್ಡಿಸ್ಟ್ ಪಾಡ್ಕಾಸ್ಟ್ನೊಂದಿಗೆ ರಾಜಮೌಳಿ ಮಾತನಾಡಿದ್ದಾರೆ. ಹಾಲಿವುಡ್ನಲ್ಲಿ ಸಿನಿಮಾ ನಿರ್ಮಿಸುವುದು ಪ್ರಪಂಚದಾದ್ಯಂತದ ಪ್ರತಿಯೊಬ್ಬ ಚಲನಚಿತ್ರ ನಿರ್ದೇಶಕನ ಕನಸು ಎಂದು ನಾನು ಭಾವಿಸುತ್ತೇನೆ. ನಾನು ಕೂಡಾ ಅದಕ್ಕೆ ಹೊರತಾಗಿಲ್ಲ. ನಾನು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತೇನೆ. ಮುಂದೇನು ಮಾಡಬೇಕೆಂಬುದರ ಬಗ್ಗೆ ಕೊಂಚ ಗೊಂದಲವಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಸಿನಿಮಾದಲ್ಲಿ ನಾನು ಸರ್ವಾಧಿಕಾರಿಯಾಗಿದ್ದೇನೆ. ಸಿನಿಮಾಗಳನ್ನು ಹೇಗೆ ಮಾಡಬೇಕೆಂದು ಯಾರೂ ನನಗೆ ಹೇಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಹಾಲಿವುಡ್ನಲ್ಲಿ ಸಿನಿಮಾ ಮಾಡಿದರೆ, ಅವರು ಇನ್ನೊಬ್ಬ ಕಲಾವಿದರೊಂದಿಗೆ ಕ್ರೆಡಿಟ್ ಹಂಚಿಕೊಳ್ಳಲೇಬೇಕು ಎಂದು ಅವರು ಹೇಳಿದ್ದಾರೆ.
ಜೂನಿಯರ್ NTR ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಪಿರಿಯಡಿಕಲ್ ಡ್ರಾಮಾ ಸಿನಿಮಾ 1920 ರ ಬ್ರಿಟಿಷ್ ಆಕ್ರಮಿತ ಭಾರತದ ಚಿತ್ರಣ ತೋರಿಸುತ್ತದೆ. ಪಾತ್ರವರ್ಗದಲ್ಲಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಜೊತೆಗೆ ಬ್ರಿಟಿಷ್ ನಟರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಇದ್ದಾರೆ.
ಕಲೆಕ್ಷನ್ ಎಷ್ಟು?
ಜಾಗತಿಕವಾಗಿ ₹ 1,200 ಕೋಟಿ ಗಳಿಸಿದ RRR ಈಗಾಗಲೇ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗಳಲ್ಲಿ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಸೇರಿದಂತೆ ಅಂತರರಾಷ್ಟ್ರೀಯ ಗೌರವಗಳನ್ನು ಗೆದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ