RRR ಬಿಡುಗಡೆಗೆ ಎರಡು ದಿನಾಂಕ ಘೋಷಿಸಿದ ಚಿತ್ರತಂಡ

SS Rajamouli :ಒಂದು ವೇಳೆ ಸೋಂಕು ನಿಯಂತ್ರಣಕ್ಕೆ ಬಂದು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಆಸನ ಬರ್ತಿದೆ ಭರ್ತಿಗೆ ನೀಡಿದರೆ, ಮಾರ್ಚ್ 18ಕ್ಕೆ ಆರ್‌ಆರ್‌ಆರ್‌(ರೌದ್ರ-ರಣ-ರುಧಿರ) ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ರಾಜಮೌಳಿ ತಿಳಿಸಿದ್ದಾರೆ

RRR ಸಿನಿಮಾ,

RRR ಸಿನಿಮಾ,

 • Share this:
  ಬಹುನಿರೀಕ್ಷಿತ ‘ಆರ್​ಆರ್​ಆರ್​’ ಸಿನಿಮಾದ (RRR Movie) ಕ್ರೇಜ್​ ದಿನದಿನವೂ ಹೆಚ್ಚುತ್ತಿದೆ. ರಾಜಮೌಳಿ (Rajamouli) ನಿರ್ದೇಶನದ ಈ ಚಿತ್ರದಲ್ಲಿ ರಾಮ್​ ಚರಣ್ (Ram Charan)​ ಮತ್ತು ಜ್ಯೂ. ಎನ್​ಟಿಆರ್(Jr.NTR)​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್(Alia Bhat)​ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​(Teaser) ಮತ್ತು ಪೋಸ್ಟರ್​ಗಳು(poster) ಭಾರಿ ಹೈಪ್​(Hipe) ಸೃಷ್ಟಿ ಮಾಡಿವೆ. ಹೀಗಾಗಿ ಯಾವಾಗ ಸಿನಿಮಾ(Cinema) ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಹೀಗಾಗಿ ಈ ವರ್ಷದ ಆರಂಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ದೇಶಕ ರಾಜಮೌಳಿ ಘೋಷಣೆ ಮಾಡಿದ್ದರು. ಆದರೆ ಕೊರೊನಾ ಮಹಾಮಾರಿ ಸೋಂಕಿನ ಆರ್ಭಟ ಹೆಚ್ಚಾದ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಆದರೆ ಕೊನೆಗೂ ಸಿನಿಮಾದ ನಿರ್ದೇಶಕ ಎಸ್ ಎಸ್ ರಾಜಮೌಳಿ ಸಿನಿಮಾ ಯಾವಾಗ ಬಿಡುಗಡೆ ಮಾಡುತ್ತೇವೆ ಎಂಬ ದಿನಾಂಕವನ್ನು ತಿಳಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ..

  ಮಾರ್ಚ್ 18 ಅಥವಾ ಏಪ್ರಿಲ್ 28ಕ್ಕೆ ಸಿನಿಮಾ ತೆರೆಗೆ

  ಪ್ರಸ್ತುತ ದೇಶದಲ್ಲಿ ಕೊರೋನಾ ಮಹಾಮಾರಿಯ ಆರ್ಭಟ ಹೆಚ್ಚಾಗಿದೆ ಹೀಗಾಗಿ ಚಿತ್ರಮಂದಿರಗಳಲ್ಲಿ ಶೇಕಡಾ ಐವತ್ತರಷ್ಟು ಆಸನಕ್ಕೆ ಮಾತ್ರ ಭರ್ತಿಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಸೋಂಕು ನಿಯಂತ್ರಣಕ್ಕೆ ಬಂದು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಆಸನ ಬರ್ತಿದೆ ಭರ್ತಿಗೆ ನೀಡಿದರೆ, ಮಾರ್ಚ್ 18ಕ್ಕೆ ಆರ್‌ಆರ್‌ಆರ್‌(ರೌದ್ರ-ರಣ-ರುಧಿರ) ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ರಾಜಮೌಳಿ ತಿಳಿಸಿದ್ದಾರೆ.

  ಒಂದು ವೇಳೆ ಮಾರ್ಚ್ 18 ರ ವೇಳೆಗೆ ಚಿತ್ರಮಂದಿರಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಅವಕಾಶ ನೀಡದೇ ಇದ್ದರೆ ಏಪ್ರಿಲ್ 28ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಚಿತ್ರತಂಡ ತಿಳಿಸಿದೆ.

  ಇದನ್ನೂ ಓದಿ: ಮಗಳಿಂದ ದೂರವಾದರೂ ಮಾವನಿಗೆ ಅಳಿಯನೆಂದರೆ ಪ್ರೀತಿ, ಧನುಷ್​ಗೆ ರಜನಿ ಕೊಟ್ಟಿದ್ದ ಗಿಫ್ಟ್ ನೋಡಿ!

  ಜನವರಿ 7ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ..

  ಈ ಹಿಂದೆ RRR ಸಿನಿಮಾವನ್ನು ಜನವರಿ 7ರಂದು ಭಾರತದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಭರ್ಜರಿಯಾಗಿ ಪ್ರಚಾರ ನಡೆಸಿತ್ತು. ಆದರೆ ದೇಶದಲ್ಲಿ ಕೊರೋನಾ ಪ್ರಕರಣಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿತ್ತು.

  ಹೀಗಾಗಿ ಇದು ಸಿನಿಮಾದ ಮೇಲೆ ಭಾರಿ ಹೊಡೆತ ಬೀಳಬಹುದು ಎಂಬ ಕಾರಣದಿಂದ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಿತ್ತು..ಹೀಗಾಗಿ ಮತ್ತೆ ಚಿತ್ರತಂಡ ಯಾವಾಗ ಹೊಸ ದಿನಾಂಕವನ್ನು ಘೋಷಣೆ ಮಾಡುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.

  ಅದರಂತೆ ಈಗ ಸಿನಿಮಾ ಬಿಡುಗಡೆಗಾಗಿ ಎರಡು ದಿನಾಂಕವನ್ನು ಚಿತ್ರತಂಡ ಘೋಷಿಸಿರುವುದು ಅಭಿಮಾನಿಗಳು ಸಂತೋಷ ಪಡುವಂತೆ ಮಾಡಿದೆ..

  ಇನ್ನು RRR ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟಿ ಆಲಿಯಾ ಭಟ್​ ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್​ ದೇವಗನ್​ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಕನ್ನಡ, ತಮಿಳು, ತೆಲುಗು ಹಿಂದಿ ಹಾಗೂ ಮಾಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ ತ್ರಿಬಲ್ ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದೆ.

  ಇದನ್ನೂ ಓದಿ: ತಾಯಿಯಾದ ನಟಿ ಪ್ರಿಯಾಂಕಾ ಚೋಪ್ರಾ, ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್​

  ಸದ್ಯ ಕೊರೊನಾ ಪ್ರಕರಣಗಳ ಹಾವಳಿ ಕಡಿಮೆಯಾದರೆ ಮಾತ್ರ ಸಿನಿಮಾ ತಂಡ ಈಗ ಘೋಷಣೆ ಮಾಡಿರುವ ಎರಡು ದಿನಾಂಕಗಳಲ್ಲಿ ಒಂದು ದಿನಾಂಕದಂದು ಸಿನಿಮಾ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ.

  ಒಂದು ವೇಳೆ ಸೋಂಕಿನ ಆರ್ಭಟ ಕಡಿಮೆ ಆಗದೇ ಹೋದರೆ ಚಿತ್ರತಂಡ ಮತ್ತೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವ ಸಾಧ್ಯತೆ ಇದೆ.. ಅಲ್ಲದೆ ಮತ್ತೆ ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಮಾಡಿ ಇನ್ನಷ್ಟು ಅಭಿಮಾನಿಗಳನ್ನು ಹತ್ತಿರಕೆ ಸೆಳೆಯುವ ಪ್ಲಾನ್ ಕೂಡ ಮಾಡಿಕೊಂಡಿದ್ದೆ..
  Published by:ranjumbkgowda1 ranjumbkgowda1
  First published: