RRR Movie: ಅಬ್ಬಾ.. ಆ ಒಂದೇ ಒಂದು ಸೀನ್​ಗೆ 75 ಲಕ್ಷ ರೂ. ಖರ್ಚು: ರಾಜಮೌಳಿ ಬಿಚ್ಚಿಟ್ಟ ಸತ್ಯ ಕೇಳಿ ಶಾಕ್​ ಆದ ಫ್ಯಾನ್ಸ್​!

ಈ ದೃಶ್ಯವನ್ನು 65 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು ಅದಕ್ಕಾಗಿ ಪ್ರತಿದಿನ 75 ಲಕ್ಷ ಮಾಡಲಾಗಿದೆ ಎಂಬ ಸಂಗತಿಯನ್ನು ರಾಜಮೌಳಿ ಹಂಚಿಕೊಂಡಿದ್ದಾರೆನ್ನಲಾಗಿದೆ

  ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದಶಕಗಳ ಹಿಂದೆ (Decades ago) 75 ಲಕ್ಷ ರೂಪಾಯಿಗಳಲ್ಲಿ(75 lakh Rupees) ಒಂದು ಪೂರ್ಣ ಚಿತ್ರವನ್ನೇ ಪೂರ್ಣಗೊಳಿಸಲಾಗುತ್ತಿತ್ತು. ಇಂದಿನ ಸಮಯದಲ್ಲೂ ಸಹ ಹಲವಾರು ಚಿತ್ರಗಳನ್ನು 75 ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಲಾಗಿದೆ ಹಾಗೂ ನಿರ್ಮಿಸಬಹುದಾಗಿದೆ. ಆದರೆ ಕೆಲ ಪ್ರತಿಷ್ಠಿತ ಚಿತ್ರ (Prestigious Filmmakers) ನಿರ್ಮಾಣಕಾರರು ಹಾಗೂ ಸ್ಟಾರ್ ನಟರಿರುವ ಚಿತ್ರಗಳು ಹಲವಾರು ಕೋಟಿಗಳಲ್ಲೇ ನಿರ್ಮಾಣವಾಗುತ್ತದೆ. ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದ ಪ್ರಖ್ಯಾತ ಚಿತ್ರ ನಿರ್ಮಾಣಕಾರ ಎಸ್.ಎಸ್ ರಾಜಮೌಳಿಯವರ (SS Rajamouli) ಚಿತ್ರಗಳೆಂದರೆ ಕೇಳಬೇಕೆ.. ಪ್ಯಾನ್‌ ಇಂಡಿಯಾ (Pan India) ಉಪಸ್ಥಿತಿ ಹೊಂದಿರುವ ಇವರ ಚಿತ್ರಗಳಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಲಾಗುತ್ತದೆ. ಚಿತ್ರ ನಿರ್ಮಾಣದ ಸಮಯದಲ್ಲಿ ಹಾಕಲಾಗುವ ಸೆಟ್‌ಗಳು ವೈಭವೋಪೇತವಾಗಿರುತ್ತವೆ. ಹಾಗಾಗಿ ಕೆಲ ಕೋಟಿಗಳಿರಲಿ ಇವರು ನಿರ್ಮಿಸುವ ಚಿತ್ರಗಳ ಒಟ್ಟಾರೆ ಬಂಡವಾಳ (Investment) ನೂರು ಕೋಟಿ ರೂಪಾಯಿಗಳನ್ನೇ ಮೀರಿರುತ್ತವೆ.

ಅಚ್ಚರಿಯ ಸಂಗತಿ
ಈಗ ಬಿಡುಗಡೆಗೆ ಸಜ್ಜಾಗುತ್ತಿರುವ ಹಾಗೂ ದೇಶಾದ್ಯಂತ ಕುತೂಹಲ ಹೆಚ್ಚಿಸಿರುವ ಟಾಲಿವುಡ್ ಸ್ಟಾರ್ ನಟರಾದ ಜೂನಿಯರ್ ಎನ್.ಟಿ.ಆರ್ ಹಾಗೂ ರಾಮ್‌ ಚರಣ್ ಪ್ರಥಮ ಬಾರಿಗೆ ಒಟ್ಟಾಗಿ ನಟಿಸಿರುವ ಹಾಗೂ ಬಾಲಿವುಡ್ ನಟರಾದ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಕೂಡ ಪಾತ್ರ ನಿರ್ವಹಿಸಿರುವ RRR ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಜಮೌಳಿ ಅಚ್ಚರಿಯ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

65 ದಿನಗಳ ಕಾಲ ಚಿತ್ರೀಕರಣ
ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ರಾಜಮೌಳಿ ಈ ಚಿತ್ರದಲ್ಲಿ ಮಧ್ಯಂತರ ಬರುವ ಮುಂಚೆ ಬರುವ ದೃಶ್ಯವೊಂದರ ಚಿತ್ರೀಕರಣ ಮಾಡಲು ಅವರಿಗೆ ಪ್ರತಿದಿನ 75 ಲಕ್ಷ ರೂ. ವೆಚ್ಚವಾಗಿದೆಯಂತೆ. ಇನ್ನು ಈ ದೃಶ್ಯವನ್ನು 65 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು ಅದಕ್ಕಾಗಿ ಪ್ರತಿದಿನ 75 ಲಕ್ಷ ಮಾಡಲಾಗಿದೆ ಎಂಬ ಸಂಗತಿಯನ್ನು ರಾಜಮೌಳಿ ಹಂಚಿಕೊಂಡಿದ್ದಾರೆನ್ನಲಾಗಿದೆ. ಈ ಚಿತ್ರದ ಒಟ್ಟಾರೆ ಬಜೆಟ್ ಸುಮಾರು 400 ಕೋಟಿ ರೂ. ಎಂದು ಹೇಳಲಾಗಿದೆ.

ಇದನ್ನೂ ಓದಿ: RRR Postponed: ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್​ ಕೊಡ್ಬೇಕು ಪ್ರೊಡ್ಯೂಸರ್​: ಹಿಂಗಾದ್ರೆ... ಮುಂದೆ ಹೆಂಗೆ ಸ್ವಾಮಿ!

ಸಂದರ್ಶನದಲ್ಲಿ ರಾಜಮೌಳಿಯವರು, ಈ ಚಿತ್ರದ ಸ್ಕ್ರೀನ್ ಪ್ಲೇ ಅನ್ನು ಸ್ವತಃ ಅವರೇ ಬರೆದದ್ದು ಅವರಿಗೆ ಎಲ್ಲಿಲ್ಲದ ಸಂತಸ ನೀಡಿದೆ ಎಂದು ಹೇಳಿದ್ದಾರೆ. "ಇಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಯಾವುದೂ ಇಲ್ಲ, ಎಲ್ಲವೂ ನಿರಂತರವಾಗಿ ಹರಿಯುತ್ತಿದ್ದ ಕಲ್ಪನೆಗಳು" ಎಂದು ಅವರು ಹೇಳುತ್ತಾರೆ. ರಾಜಮೌಳಿಯವರಿಗೆ ಚಿತ್ರ ನಿರ್ಮಾಣದಲ್ಲಿ ಇನ್ನೊಂದು ವಿಭಾಗ ತುಂಬಾ ಸಂತಸ ನೀಡುವುದೆಂದರೆ ಆ ಚಿತ್ರದ ಕುರಿತು ಮಾಡಬಹುದಾದ ನಿರೂಪಣೆ. ಈ ಚಿತ್ರಕ್ಕೆ ಅವರ ನಿರೂಪಣೆಯಿದ್ದು ತಮ್ಮ ಈ ಪ್ರತಿಭೆ ಎಲ್ಲರಿಗೂ ಅಚ್ಚರಿ ಉಂಟು ಮಾಡಬಹುದು ಎಂದು ಹೇಳಲು ಮರೆಯುವುದಿಲ್ಲ.

ಶಾಂತನಾಗಿಯೇ ಈ ಚಿತ್ರ ನಿರ್ಮಿಸಿದ್ದೇನೆ
ಇನ್ನೂ, ಇಂತಹ ದೊಡ್ಡ ಚಿತ್ರ ನಿರ್ಮಾಣದ ಸಮಯದಲ್ಲಿ ಅವರು ಎದುರಿಸಿರುವ ಯಾವುದಾದರೂ ಸಮಸ್ಯೆ ಅಥವಾ ಅಡಚಣೆಗಳ ಬಗ್ಗೆ ಅವರನ್ನು ಕೇಳಿದಾಗ "ಹಣ ಒಂದು ದೊಡ್ಡ ಜವಾಬ್ದಾರಿ. ದೊಡ್ಡ ಪ್ರಮಾಣದಲ್ಲಿ ತಂಡಗಳನ್ನಿಟ್ಟು, ಸೆಟ್ ಹಾಕಿ ಚಿತ್ರೀಕರಣ ನಡೆಸುವಾಗ ಎಲ್ಲಿಯಾದರೂ ಏನಾದರೂ ಚಿಕ್ಕ ಪುಟ್ಟ ಸಮಸ್ಯೆಗಳು ತಲೆದೋರಿದರೆ ಅದು ಪ್ರತಿದಿನ ವೆಚ್ಚವಾಗುವ ಹಣದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಕೆಲ ಸಂದರ್ಭಗಳಲ್ಲಿ ಸಮಸ್ಯೆಗಳಾದಾಗ ನಾನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದೆಯಾದರೂ ಒಟ್ಟಾರೆಯಾಗಿ ನಾನು ಶಾಂತನಾಗಿಯೇ ಈ ಚಿತ್ರ ನಿರ್ಮಿಸಿದ್ದೇನೆ" ಎಂದು ನುಡಿಯುತ್ತಾರೆ.

ಬಾಲಿವುಡ್‌ನ ಅಜಯ ದೇವಗನ್ ಹಾಗೂ ಆಲಿಯಾ ಭಟ್ ನಟಿಸಿರುವ ಮತ್ತು ಟಾಲಿವುಡ್‌ನ ಘಟಾನುಘಟಿ ತಾರೆಯರಾದ ಜೂ. ಎನ್.ಟಿ.ಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರಗಳಲ್ಲಿರುವ RRR ಬಹುಭಾಷೆಗಳಲ್ಲಿ ನಿರ್ಮಾಣಗೊಂಡಿದ್ದು ಜನವರಿ 7 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ದೇಶದಲ್ಲಿ ಮತ್ತೆ ಮೂರನೇ ಅಲೆ ಭೀತಿಯಿದ್ದು ಕೋವಿಡ್ ಪ್ರಕರಣಗಳೂ ಸಹ ಏರುತ್ತಿರುವುದರಿಂದ ಚಿತ್ರದ ಬಿಡುಗಡೆ ಮುಂದೂಡಲಾಗಿದೆ.

ಇದನ್ನೂ ಓದಿ: 2022 Most Expected Movies: ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್​-2: ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ..

ಇತ್ತೀಚಿನ ಕೆಲ ಸಮಯದಿಂದ ದಕ್ಷಿಣ ಭಾರತದ ಚಿತ್ರಗಳಾದ ಕೆ.ಜಿ.ಎಫ್ ಚಾಪ್ಟರ್ 2, ಪುಷ್ಪಾ ಹಾಗೂ RRR ಕಳೆದ ವರ್ಷದಿಂದಲೇ ದೇಶಾದ್ಯಂತ ಸಂಚಲನ ಉಂಟು ಮಾಡಿವೆ ಹಾಗೂ ಅಭಿಮಾನಿಗಳು ಈ ಚಿತ್ರಗಳಿಗಾಗಿ ಕಾದು ಕುಳಿತಿದ್ದಾರೆ. ಈಗಾಗಲೇ ಪುಷ್ಪಾ ಚಿತ್ರ ಬಿಡುಗಡೆಯಾಗಿದ್ದು ಅದ್ಭುತ ಪ್ರದರ್ಶನ ಕಾಣುತ್ತಿದೆ.
Published by:vanithasanjevani vanithasanjevani
First published: