Brahmastra: ನಿರ್ದೇಶಕ ಎಸ್​ಎಸ್ ರಾಜಮೌಳಿಗೆ ಅಯ್ಯಾನ್ ಮುಖರ್ಜಿ ಮೇಲೆ ಬೇಸರವಂತೆ; ಕಾರಣ ಏನು ಗೊತ್ತಾ?

ಮೊನ್ನೆ ಮೊನ್ನೆ ಮೇ 31 ರಂದು ವಿಶಾಖಾಪಟ್ಟಣದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ 'ಬಾಹುಬಲಿ' ಮತ್ತು 'ಆರ್‌‌‌ಆರ್‌‌‌‌‌ಆರ್' ಖ್ಯಾತಿಯ ಎಸ್.ಎಸ್ ರಾಜಮೌಳಿ, ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಿರ್ದೇಶಕ ಅಯ್ಯಾನ್ ಮುಖರ್ಜಿ ಒಂದೆಡೆ ಸೇರಿದ್ದರು. ಇನ್ನು ಬಿಡುಗಡೆಯಾಗಬೇಕಿರುವ ಬಾಲಿವುಡ್ಡಿನ ಬಹು ನಿರೀಕ್ಷಿತ ಚಿತ್ರವಾದ 'ಬ್ರಹ್ಮಾಸ್ತ್ರ'ದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಈ ಮೂರು ಸಿನೆ ದಿಗ್ಗಜರು ಸೇರಿದ್ದರು.

ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ

ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ

  • Share this:
ಮೊನ್ನೆ ಮೊನ್ನೆ ಮೇ 31 ರಂದು ವಿಶಾಖಾಪಟ್ಟಣದಲ್ಲಿ (Visakhapatnam) ತೆಲುಗು (Telugu) ಚಿತ್ರರಂಗದ (Cinema) ಖ್ಯಾತ ನಿರ್ದೇಶಕ (Famous Director) ಹಾಗೂ 'ಬಾಹುಬಲಿ' (Bahubali) ಮತ್ತು 'ಆರ್‌‌‌ಆರ್‌‌‌‌‌ಆರ್' (RRR) ಖ್ಯಾತಿಯ ಎಸ್.ಎಸ್ ರಾಜಮೌಳಿ (SS Rajamouli), ಬಾಲಿವುಡ್ ನಟ ರಣಬೀರ್ ಕಪೂರ್ (Bollywood actor Ranbir Kapoor) ಹಾಗೂ ನಿರ್ದೇಶಕ ಅಯ್ಯಾನ್ ಮುಖರ್ಜಿ (Director Ayyan Mukherjee) ಒಂದೆಡೆ ಸೇರಿದ್ದರು. ಇನ್ನು ಬಿಡುಗಡೆಯಾಗಬೇಕಿರುವ (Release) ಬಾಲಿವುಡ್ಡಿನ ಬಹು ನಿರೀಕ್ಷಿತ ಚಿತ್ರವಾದ 'ಬ್ರಹ್ಮಾಸ್ತ್ರ'ದ (Brahmastra) ಪ್ರಚಾರ (Promotion) ಕಾರ್ಯಕ್ರಮವೊಂದರಲ್ಲಿ ಈ ಮೂರು ಸಿನೆ ದಿಗ್ಗಜರು ಸೇರಿದ್ದರು.

ಬಾಲಿವುಡ್ ನ ಬಹುನಿರೀಕ್ಷಿತ ಸಿನೆಮಾ ಬ್ರಹ್ಮಾಸ್ತ್ರ
ಈಗಾಗಲೇ ನಿಮಗೆ ಗೊತ್ತಿರುವಂತೆ ಹಿಂದಿ ಭಾಷೆಯ ಈ ಚಿತ್ರ ದಕ್ಷಿಣದ ಮಾರುಕಟ್ಟೆಯನ್ನು ಆವರಿಸಬೇಕೆಂಬ ಮನದಾಸೆ ಹೊತ್ತಿದ್ದು ಆ ಚಿತ್ರವನ್ನು ಈ ಭಾಗದಲ್ಲಿ ರಾಜಮೌಳಿ ಪ್ರಸ್ತುತಪಡಿಸುತ್ತಿದ್ದಾರೆ. ರಾಜಮೌಳಿ ಬ್ರಹ್ಮಾಸ್ತ್ರವನ್ನು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ರಸ್ತುತಪಡಿಸುತ್ತಿದ್ದಾರೆಂಬುದು ಗೊತ್ತಿರುವ ವಿಚಾರವೇ ಆಗಿದೆ. ಈ ಹಿಂದೆ ಹಿಂದಿ ಭಾಷೆಯಲ್ಲಿ ರಾಜಮೌಳಿ ಅವರ 'ಬಾಹುಬಲಿ' ಮತ್ತು 'ಆರ್‌‌‌ಆರ್‌‌‌‌‌ಆರ್' ಚಿತ್ರಗಳನ್ನುಉತ್ತರ ಭಾರತದ ಮಾರುಕಟ್ಟೆಯಲ್ಲಿ ಕರಣ್ ಜೋಹರ್ ಪ್ರಸ್ತುತಪಡಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ರಾಜಮೌಳಿಗೆ ಅಯ್ಯಾನ್ ಮುಖರ್ಜಿ ಮೇಲೆ ಬೇಸರವೇಕೆ?
ಅಷ್ಟಕ್ಕೂ ಈಗ ಹರಿದಾಡುತ್ತಿರುವ ಸುದ್ದಿ ಎಂದರೆ ರಾಜಮೌಳಿ ಅವರು ಬ್ರಹ್ಮಾಸ್ತ್ರ ಚಿತ್ರದ ನಿರ್ದೇಶಕ ಅಯ್ಯಾನ್ ಅವರ ಮೇಲೆ ಬೇಸರಪಟ್ಟುಕೊಂಡಿದ್ದಾರೆ, ಇದಕ್ಕೆ ಪ್ರಮುಖ ಕಾರಣ ಮುಖರ್ಜಿ ಅವರು ಇನ್ನೂ ವರೆಗೂ ರಾಜಮೌಳಿ ಅವರಿಗೆ ತಮ್ಮ ಚಿತ್ರ ಬ್ರಹ್ಮಾಸ್ತ್ರವನ್ನು ತೋರಿಸಿಯೇ ಇಲ್ಲ ಎಂಬುದೆ ಆಗಿದೆ.

ಇದನ್ನೂ ಓದಿ: Sarkaru Vaari Paata: OTT ನಲ್ಲಿ ರಿಲೀಸ್ ಆಗ್ತಿದೆ ‘ಸರ್ಕಾರು ವಾರಿ ಪಾಟ‘, ಆದ್ರೆ ಷರತ್ತುಗಳು ಅನ್ವಯ!

ಮೊನ್ನೆ ನಡೆದ ಪ್ರಚಾರ ಕಾರ್ಯದ ಸಂದರ್ಭದಲ್ಲಿ ರಾಜಮೌಳಿ ಅವರು ಮಾತನಾಡುತ್ತ ಕೆಲವು ವಿಚಾರಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು. ಅವರು ಈ ಸಂದರ್ಭದಲ್ಲಿ, "ಅವರು ಈಗಾಗಲೇ ಒಂದು ಬ್ಲಾಕ್ ಬಸ್ಟರ್ ಚಿತ್ರವೊಂದನ್ನು ನಿರ್ಮಿಸಿದ್ದಾರೆ, ಮುಖರ್ಜಿ ಅವರ ಬಗ್ಗೆ ನನಗೆ ಇರುವ ಒಂದೇ ಒಂದು ದೂರು ಎಂದರೆ ನನ್ನ ಚಿತ್ರಗಳು ಬಿಡುಗಡೆಯಾದ ಮೇಲೆ ನಾನು ಮುಂಬೈಗೆ ಎರಡು ಬಾರಿ ಭೇಟಿ ನೀಡಿದ್ದೆ. ಆದರೆ, ಅವರು ಈವರೆಗೂ ನನಗೆ ತಮ್ಮ ಚಿತ್ರ ತೋರಿಸಿಯೇ ಇಲ್ಲ, ಆದರೆ ಪೂರ್ಣ ಚಿತ್ರವನ್ನು ಅವರು ಈಗಾಗಲೇ ನನ್ನ ತಂದೆಯವರಿಗೆ ತೋರಿಸಿದ್ದಾರೆ" ಎಂದು ಹೇಳಿದರು.

ಬ್ರಹ್ಮಾಸ್ತ್ರದ ಮೊದಲ ಭಾಗದ ಟ್ರೈಲರ್ ಬಿಡುಗಡೆ
ಏತನ್ಮಧ್ಯೆ ಈ ಪೌರಾಣಿಕ, ಕಾಲ್ಪನಿಕ ಹಾಗೂ ಸಾಹಸಭರಿತ ಚಿತ್ರವಾದ ಬ್ರಹ್ಮಾಸ್ತ್ರದ ಮೊದಲ ಭಾಗದ ಟ್ರೈಲರ್ ಅನ್ನು ಈ ತಿಂಗಳು ಅಂದರೆ ಜೂನ್ 15 ರಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಚಿತ್ರ ನಿರ್ಮಾಪಕರು ಈ ಬಗ್ಗೆ ಇತ್ತೀಚೆಗೆ ವಿಶೇಷ ವಿಡಿಯೋ ಒಂದನ್ನು ಮಾಡಿ ಆ ಮೂಲಕ ಈ ಸುದ್ದಿ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರು ಕಾಣಿಸಿಕೊಂಡಿದ್ದಾರೆ.

ಸಿನೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದ ಸಿನೆಮಾ
ವಿಎಫ್‍ಎಕ್ಸ್ ನಿಂದ ಭರ್ಜರಿಯಾಗಿ ಲೋಡ್ ಆಗಿರುವ ವಿಡಿಯೋದಲ್ಲಿ ರಣಬೀರ್ ಕಪೂರ್ ಶಿವನಾಗಿಯೂ ಆಲಿಯಾ ಈಶಾಳಾಗಿಯೂ ಬಿರುಗಾಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ನೋಡಬಹುದಾಗಿದೆ. ಈ ಚಿತ್ರವು ಈಗ ಸಿನೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಇನ್ನೊಂದು ವಿಚಾರವೆಂದರೆ ಬಿಡುಗಡೆಯ ಇನ್ನು ನೂರು ದಿನಗಳಿರುವ ಸಂದರ್ಭದಲ್ಲಿ ಚಿತ್ರದ ಟ್ರೈಲರ್ ಬಗ್ಗೆ ಘೋಷಣೆ ಮಾಡಲಾಗಿದೆ.

ಕಾಲ್ಪನಿಕ ಪೌರಾಣಿಕ ಕಥೆ
ಈ ಕಾಲ್ಪನಿಕ ಪೌರಾಣಿಕ ಕಥೆಯ ಮೊದಲನೇ ಭಾಗವು ಶಿವಾ ಹಾಗೂ ಅವನ ಅಪ್ರತಿಮ ಬ್ರಹ್ಮಾಸ್ತ್ರದ ಸುತ್ತಲಿದೆ. ಚಿತ್ರದ ಅಧಿಕೃತ ಸಾರಾಂಶದ ಪ್ರಕಾರ, 'ಬ್ರಹ್ಮಾಸ್ತ್ರ ಭಾಗ 1: ಶಿವ' ಎಂಬುದು "ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು ಮತ್ತು ಕಥೆಗಳಿಂದ ಸ್ಫೂರ್ತಿ ಪಡೆದ ಹೊಸ ಮೂಲ ಸಿನಿಮೀಯ ವಿಶ್ವವಾಗಿದೆ ಆದರೆ ಆಧುನಿಕ ಜಗತ್ತಿನಲ್ಲಿ ಕಾಲ್ಪನಿಕ ಕಥೆ, ಸಾಹಸ, ಒಳ್ಳೆಯದ್ದು ಹಾಗೂ ಕೆಟ್ಟದ್ದು ಹೀಗೆ ಹಲವು ಅಂಶಗಳುಳ್ಳ ಮಹಾಕಾವ್ಯದ ಕಥೆಯನ್ನು ಹೊಂದಿದೆ.

ಇದನ್ನೂ ಓದಿ: Rashmika Mandanna: ಶಾಲಾ ದಿನಗಳಲ್ಲಿ ಈ ನಟನೆಂದರೆ ತುಂಬಾ ಇಷ್ಟವಾಗುತ್ತಿತ್ತು, ರಹಸ್ಯ ಬಿಚ್ಚಿಟ್ಟ ರಶ್ಮಿಕಾ

ದುಷ್ಟತೆ, ಪ್ರೀತಿ ಮತ್ತು ಭರವಸೆ; ಎಲ್ಲವನ್ನೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಹೇಳಲಾಗಿದೆ ಮತ್ತು ಇದು ಪ್ರೇಕ್ಷಕರಿಗೆ ಹಿಂದೆಂದೂ ಕಂಡರಿಯದಂತಹ ವಿಶಿಷ್ಠ ಅನುಭೂತಿಯನ್ನು ನೀಡಲಿದೆ ಎಂದು ತಿಳಿದುಬಂದಿದೆ.
Published by:Ashwini Prabhu
First published: