SS Rajamouli: ರಾಜಮೌಳಿ ಸಿನಿಮಾದಲ್ಲಿ ನಟಿಸಿದ್ರೆ ಯಶಸ್ಸಿನ ಜೊತೆ ದುರಾದೃಷ್ಟ ಉಚಿತವಂತೆ, ಈ ಸ್ಟಾರ್​ ನಟರ ಕಥೆ ಏನಾಯಿತು ಗೊತ್ತಾ?

ರಾಜಮೌಳಿ ಶಾಪ ಹಿಂಬಾಲಿಸುತ್ತದಂತೆ! ಹೌದು, ರಾಜಮೌಳಿ ಸಿನಿಮಾದಲ್ಲಿ ನಟಿಸಿದರೆ, ಯಶಸ್ಸಿನ ಜೊತೆ, ದುರಾದೃಷ್ಟ ಉಚಿತ, ಅಂದರೆ ಮುಂದಿನ ಸಿನಿಮಾದ ಸೋಲು ಖಚಿತ ಎಂಬಂತಿದೆ ಪರಿಸ್ಥಿತಿ. ರಾಜಮೌಳಿ ಚಿತ್ರಗಳ ನಾಯಕರಾಗಿದ್ದ ಪ್ರಭಾಸ್ ಮತ್ತು ರಾಮ್‍ಚರಣ್ ಅವರ ವಿಷಯದಲ್ಲಿ ಇದು ನಿಜವಾಗಿದೆ ಕೂಡ!

ರಾಜಮೌಳಿ

ರಾಜಮೌಳಿ

  • Share this:
ಭಾರತೀಯ ಸಿನಿಮಾ ರಂಗದ (Indian Cinema Theater) ಅತ್ಯುತ್ತಮ ನಿರ್ದೇಶಕರಲ್ಲಿ ಎಸ್ ಎಸ್ ರಾಜಮೌಳಿ (SS Rajamouli) ಕೂಡ ಒಬ್ಬರು. ಬಾಹುಬಲಿ 1- 2 ರ (Bahubali) ಯಶಸ್ಸಿನ ಬಳಿಕ ಮತ್ತೆ ಆರ್ ಆರ್ ಆರ್  ಸಿನಿಮಾದಿಂದ ಬ್ಲಾಕ್‍ಬಸ್ಟರ್ (Blockbuster) ಯಶಸ್ಸು ಗಳಿಸಿದ ಅವರು, ತಾನು ಇಂತಹ ಎಷ್ಟು ಅತ್ಯದ್ಭುತ ಸಿನಿಮಾಗಳನ್ನು (Cinema) ಬೇಕಾದರೂ ಮಾಡಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಜಮೌಳಿ ಸಿನಿಮಾಗಳೇನೋ ಸೂಪರ್ ಡೂಪರ್ ಹಿಟ್ ಆಗುತ್ತವೆ, ಆದರೆ ಆ ಸಿನಿಮಾಗಳಲ್ಲಿ ನಟಿಸಿದ ನಾಯಕರು ನಂತರದ ಸಿನಿಮಾಗಳಲ್ಲೂ ಅದೇ ಯಶಸ್ಸನ್ನು ಕಾಣುತ್ತಾರೆಯೇ? ಇಲ್ಲ ಎನ್ನುತ್ತದೆ ಇತಿಹಾಸ!

ಅವರನ್ನು ರಾಜಮೌಳಿ ಶಾಪ ಹಿಂಬಾಲಿಸುತ್ತದಂತೆ! ಹೌದು, ರಾಜಮೌಳಿ ಸಿನಿಮಾದಲ್ಲಿ ನಟಿಸಿದರೆ, ಯಶಸ್ಸಿನ ಜೊತೆ, ದುರಾದೃಷ್ಟ ಉಚಿತ, ಅಂದರೆ ಮುಂದಿನ ಸಿನಿಮಾದ ಸೋಲು ಖಚಿತ ಎಂಬಂತಿದೆ ಪರಿಸ್ಥಿತಿ. ರಾಜಮೌಳಿ ಚಿತ್ರಗಳ ನಾಯಕರಾಗಿದ್ದ ಪ್ರಭಾಸ್ ಮತ್ತು ರಾಮ್‍ಚರಣ್ ಅವರ ವಿಷಯದಲ್ಲಿ ಇದು ನಿಜವಾಗಿದೆ ಕೂಡ!

ಪ್ರಭಾಸ್ : ಬಾಹುಬಲಿಯ ನಂತರ ಸಿನಿಮಾ ಸಾಹೋ ವಿಫಲ
ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ಮೂಲಕ ಪ್ರಭಾಸ್ ಇಡೀ ದೇಶದ ಗಮನ ಸೆಳೆದರು. ಆದರೆ ಬಾಹುಬಲಿ ಸಿನಿಮಾದ ನಂತರ ಬಿಡುಗಡೆಯಾದ ಸಾಹೋ ಸಿನಿಮಾ ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಲಿಲ್ಲ. ಪ್ರಭಾಸ್ ಅವರಿಂದ ನಿಜ ಜೀವನವನ್ನು ಮೀರಿದ ಮತ್ತೊಂದು ಸಾಹಸಮಯ ಸಿನಿಮಾವನ್ನು ಪ್ರೇಕ್ಷಕರು ನಿರೀಕ್ಷಿಸಿದ್ದು ಈ ಸಿನಿಮಾ ಸೋಲಿನ ಕಾರಣಗಳಲ್ಲಿ ಒಂದು. ಸಾಹೋ ಅಂತಹ ಸಿನಿಮಾವಾಗಿರಲಿಲ್ಲ. ಆದರೂ, ಪ್ರಭಾಸ್‍ಗೆ ಬಾಹುಬಲಿಯಿಂದ ಸಿಕ್ಕಿದ ಜನಪ್ರಿಯತೆಯ ಕಾರಣದಿಂದ ಸಾಹೋ ಹಿಂದಿ ಪ್ರದೇಶಗಳಲ್ಲಿ ತಕ್ಕಮಟ್ಟಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಯಿತು.

ರಾಮ್ ಚರಣ್ - ಆರ್​ಆರ್​ಆರ್ ನಂತರ ಆಚಾರ್ಯ ಯಶಸ್ವಿಯಾಗಲಿಲ್ಲ
ಎಸ್ ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಅವರು ಕಾಣಿಸಿಕೊಂಡಿದ್ದರು. ಆರ್ ಆರ್ ಆರ್ ಸಿನಿಮಾದ ಬಿಡುಗಡೆಯ 5 ವಾರಗಳ ನಂತರ ಬಿಡುಗಡೆಯಾದ, ರಾಮ್‍ಚರಣ್ ಮತ್ತು ಅವರ ತಂದೆ ಚಿರಂಜೀವಿ ಜೊತೆಯಾಗಿ ಅಭಿನಯಿಸಿದ್ದ ಸಿನಿಮಾ ಆಚಾರ್ಯ ಅದ್ಭುತ ಯಶಸ್ಸು ಕಾಣಲಿಲ್ಲ. ಆರ್‍ಆರ್‍ಆರ್ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 1000 ಕೋಟಿಗೂ ಹೆಚ್ಚು ಗಳಿಕೆಯನ್ನು ಕಂಡಿದ್ದರೆ, ಆಚಾರ್ಯ ಸಿನಿಮಾ 100 ಕೋಟಿಯನ್ನು ದಾಟಲು ಕೂಡ ಹೆಣಗಾಡಿತು.

ಇದನ್ನೂ ಓದಿ: HBD Ragini Dwivedi: 'ಕೆಂಪೇಗೌಡನ' ರಾಣಿಗೆ ತುಂಬಿತು 32 - ಅಭಿಮಾನಿಗಳ ಎದೆಯಲ್ಲಿ ಇನ್ನೂ 'ರಾಗಿಣಿಯದ್ದೇ' ಹಾಡು

ಆರ್ ಆರ್ ಆರ್ ಗೂ ಮುನ್ನ ರಾಮ್‍ಚರಣ್ ಅವರು ರಾಜಮೌಳಿ ಅವರ ಮಗಧೀರ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ಬಳಿಕ ಬಿಡುಗಡೆಯಾದ ರಾಮ್‍ಚರಣ್ ಅವರ ಆರೆಂಜ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಎರಡನೇ ಬಾರಿ ರಾಜಮೌಳಿ ಸಿನಿಮಾದಲ್ಲಿ ನಟಿಸಿದಾಗಲೂ, ರಾಮ್‍ಚರಣ್ ಮತ್ತೆ ತಕ್ಷಣ ಸೋಲಿನ ರುಚಿ ಉಣ್ಣಬೇಕಾಯಿತು.

ರಾಜಮೌಳಿ ಸಿನಿಮಾದ ಯಶಸ್ಸಿನ ಜೊತೆಗೆ ಜೊತೆಗೆ ಹಿಂಬಾಲಿಸುವ ದುರಾದೃಷ್ಟದಿಂದ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ, ಆರ್ ಆರ್ ಆರ್ ಸಿನಿಮಾದ ಬಳಿಕ ಬಿಡುಗಡೆಯಾದ ಅವರ ಸಿನಿಮಾ ರನ್‍ವೇ 34 ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.

ಜೂನಿಯರ್ ಎನ್‍ಟಿಆರ್ ಅವರಿಗೂ ರಾಜಮೌಳಿ ಶಾಪ ತಟ್ಟಲಿದೆಯೇ?
ಕೊರಟಾಲ ಶಿವ ನಿರ್ದೇಶನದ 'ಎನ್‍ಟಿಆರ್ 30' ಸಿನಿಮಾದಲ್ಲಿ ಜೂನಿಯರ್ ಎನ್‍ಟಿಆರ್ ನಟಿಸುತ್ತಿದ್ದಾರೆ. ಆರ್ ಆರ್ ಆರ್ ಬಿಡುಗಡೆಯಾದ ತಕ್ಷಣದ ಸಿನಿಮಾ ಇದು. ಇನ್ನೊಂದು ವಿಶೇಷ ಸಂಗತಿಯೆಂದರೆ, ರಾಮ್‍ಚರಣ್ ಅವರ ಆಚಾರ್ಯ ಸಿನಿಮಾವನ್ನು ಕೂಡ ಕೊರಟಾಲ ಶಿವ ಅವರೇ ನಿರ್ದೇಶಿಸಿದ್ದರು. ರಾಜಮೌಳಿ ಸಿನಿಮಾದಲ್ಲಿ ನಟಿಸಿದ ಬಳಿಕ ಬಿಡುಗಡೆ ಆಗುವ ಸಿನಿಮಾ ವಿಫಲವಾಗುತ್ತದೆ ಎಂಬ ಮಾತನ್ನು ಜೂನಿಯರ್ ಎನ್‍ಟಿಆರ್ ಸುಳ್ಳು ಮಾಡುತ್ತಾರೆಯೇ? ಕಾದು ನೋಡಬೇಕಿದೆ.

ಅಸಲಿಗೆ, ರಾಜಮೌಳಿ ಸಿನಿಮಾದಲ್ಲಿ ನಟಿಸಿದ ನಟರ ನಂತರದ ಸಿನಿಮಾಗಳು ವಿಫಲವಾಗುವುದಕ್ಕೆ ಮುಖ್ಯ ಕಾರಣ, ಯಾವುದೇ ದುರಾದೃಷ್ಟವಲ್ಲ. ಬದಲಿಗೆ ಸಿನಿಮಾದ ವಿಷಯ ವಸ್ತು. ರಾಜಮೌಳಿ ಸಿನಿಮಾಗಳಲ್ಲಿ ವೀಕ್ಷಕರನ್ನು ಸೆಳೆಯಲು ಅಗತ್ಯವಿರುವ ಎಲ್ಲಾ ಅಂಶಗಳಿರುತ್ತವೆ. ರಾಜಮೌಳಿಯವರು ತಮ್ಮ ಹೀರೋಗಳ ಜೊತೆಗೆ ನಿಜ ಜೀವನವನ್ನು ಮೀರಿದ ಕಥಾವಸ್ತುವುಳ್ಳ ಸಿನಿಮಾಗಳನ್ನು ಮಾಡುತ್ತಾರೆ ನಿಜ, ಆದರೆ ಹೀರೋಗಳಿಗೆ ಅಂತಹ ಸಿನಿಮಾಗಳ ಯಶಸ್ಸನ್ನು ಮುಂದಿನ ಸಿನಿಮಾದಲ್ಲೂ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ, ದೇಶದ ಅದ್ಭುತ ನಿರ್ದೇಶಕರ ಜೊತೆ ಕೆಲಸ ಮಾಡಿದ ಬಳಿಕ ಪ್ರತಿಯೊಬ್ಬ ತಾರೆಯರು ಎದುರಿಸುವ ಸವಾಲು ಇದಾಗಿದೆ.

ಇದನ್ನೂ ಓದಿ: Mahesh Babu: 'ಪ್ರಿನ್ಸ್' ಮಹೇಶ್ ಬಾಬು ಅವರ ಪುತ್ರಿಯ ಬೆಸ್ಟ್ ಫ್ರೆಂಡ್ ಇವರೇ ಅಂತೆ!

ಇನ್ನು ರಾಜಮೌಳಿ ಅವರ ಕುರಿತು ಹೇಳುವುದಾದರೆ, ಮುಂದಿನ ಪ್ರಾಜೆಕ್ಟಿನಲ್ಲಿ ಅವರು ಮಹೇಶ್ ಬಾಬು ಜೊತೆಗೆ ಕೆಲಸ ಮಾಡಲಿದ್ದಾರೆ. ಆ ಸಿನಿಮಾ ಸೂಕ್ತ ಹೆಸರು ದೊರಕುವ ವರೆಗೆ, ತಾತ್ಕಾಲಿಕವಾಗಿ ಎಸ್‍ಎಸ್‍ಎಂಬಿ28 ಎಂದು ಹೆಸರಿಡಲಾಗಿದೆ. ರಾಜಮೌಳಿ ಅವರು, ಮಹೇಶ್ ಬಾಬು ಅವರೊಂದಿಗೆ ಮೆಗಾ -ಬಜೆಟ್‍ನ, ಅದ್ಧೂರಿ ಪ್ರಮಾಣದ ಸಾಹಸಮಯ ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದರು. ಈ ಸಿನಿಮಾದ ಚಿತ್ರೀಕರಣ 2023 ರ ಆರಂಭದ ತಿಂಗಳುಗಳಲ್ಲಿ ಶುರು ಆಗುವ ನಿರೀಕ್ಷೆ ಇದೆ.
Published by:Ashwini Prabhu
First published: