ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (vikrant Rona) ಚಿತ್ರ ಬಿಡುಗಡೆಯಾಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಭಾನುವಾರ, ಆರ್‌ಆರ್‌ಆರ್ (RRR) ನಿರ್ದೇಶಕ ಎಸ್‌ಎಸ್ ರಾಜಮೌಳಿ (S S Rajamouli) ಟ್ವಿಟ್ಟರ್‌ನಲ್ಲಿ ನಟ ಕಿಚ್ಚ ಸುದೀಪ್ ಅವರನ್ನು ಹೃತ್ಪೂರ್ವಕ ಅಭಿನಂದಿಸಿದ್ದು, ಮೆಚ್ಚುಗೆ ಮಾತುಗಳನ್ನು ಬರೆದುಕೊಂಡಿದ್ದಾರೆ. ಈ ಸಿನಿಮಾ ಮತ್ತು ಕಿಚ್ಚನನ್ನ ಹಾಡಿ ಹೊಗಳಿರುವ ರಾಜಮೌಳಿ, ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಕಿಚ್ಚನ ಹಾಡಿ ಹೊಗಳಿದ ನಿರ್ದೇಶಕ
ಎಸ್ ಎಸ್ ರಾಜಮೌಳಿ ಟ್ವೀಟ್ ಮಾಡಿ, "ವಿಕ್ರಾಂತ್ ರೋಣದ ಯಶಸ್ಸಿಗೆ ಅಭಿನಂದನೆಗಳು @KicchaSudeep. ಇಂಥಹ ಸಿನಿಮಾದಲ್ಲಿ ಹೂಡಿಕೆ ಮಾಡಲು ಧೈರ್ಯ ಮತ್ತು ನಂಬಿಕೆ ಬೇಕು. ನೀವು ಮಾಡಿದ್ದೀರಿ ಮತ್ತು ಅದು ಫಲ ನೀಡಿದೆ. ಪ್ರಿ ಕ್ಲೈಮ್ಯಾಕ್ಸ್, ಚಿತ್ರದ ಪ್ರಮುಖ ಭಾಗ ಅದ್ಭುತವಾಗಿದೆ. ಈ ಸಿನಿಮಾ ತುಂಬಾ ಚೆನ್ನಾಗಿತ್ತು. ಅದರಲ್ಲೂ ಗುಡ್ಡಿಯ ಗೆಳೆಯ ಭಾಸ್ಕರ್ ಅವರನ್ನು ವಿಶೇಷವಾಗಿ ನೆನಪಿಸಿಕೊಳ್ಳಲೇ ಬೇಕು ಎಂದು ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ, "ಧನ್ಯವಾದಗಳು @ssrajamouli ಸರ್. ನಿಮ್ಮಿಂದ ಈ ಸಾಲುಗಳನ್ನು ಕೇಳಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ಗೌರಚ ಎನಿಸುತ್ತದೆ. ಭಾಸ್ಕರ್ ಸೇರಿದಂತೆ ನಮ್ಮೆಲ್ಲರಿಂದ ದೊಡ್ಡ ಧನ್ಯವಾದಗಳು ಎಂದು ಬರೆದು, ರಾಜಮೌಳಿ ಅವರಿಗೆ ಥ್ಯಾಂಕ್ಯೂ ಎಂದಿದ್ದಾರೆ.
Congratulations @KicchaSudeep on the success of Vikrant Rona. It takes guts and belief to invest on such a line. You did and it paid off. Preclimax, the heart of the film was superb. Couldn’t see that coming and it was too good.👏🏻👌🏻
Special mention to Guddy's friend Bhaskar.🤩😂
— rajamouli ss (@ssrajamouli) July 31, 2022
ಇದನ್ನೂ ಓದಿ: ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ದೀಪಿಕಾ - ರಣವೀರ್, ಮನೀಶ್ ಮಲ್ಹೋತ್ರ ಫ್ಯಾಷನ್ ಶೋನಲ್ಲಿ ತಾರೆಯರ ಝಲಕ್
ಎಲ್ಲೆಡೆ ವಿಕ್ರಾಂತ್ ರೋಣನ ಸದ್ದು
ಸಿನಿಮಾ ತಂಡದ ಪ್ರಕಾರ, ವಿಕ್ರಾಂತ್ ರೋಣಾಗಾಗಿ 800 ಕ್ಕೂ ಹೆಚ್ಚು ಕಲಾವಿದರು VFX ಎಫೆಕ್ಟ್ಗಾಗಿ ಕೆಲಸ ಮಾಡಿದ್ದಾರೆ. ಸಿನಿಮಾದ ದೃಶ್ಯ ಅದ್ಭುತವಾಗಿದ್ದು, ಕ್ಯಾಮೆರಾದ ಹಿಂದೆ ಅದ್ಭುತವಾದ ಕೆಲಸವನ್ನು ಮಾಡಿದ ಅನುಪ್ ಭಂಡಾರಿ ಅವರ ತಂಡದ ಪರಿಶ್ರಮ ಅದ್ಭುತವಾಗಿ ಮೂಡಿ ಬಂದಿದೆ.
Thank you @ssrajamouli sir. Extremely honoured to hear these lines from you.
A big thanks and a hug from all of us ❤️🤗 ,,, including Bhaskar😅 https://t.co/bGZ0RtJTYh
— Kichcha Sudeepa (@KicchaSudeep) July 31, 2022
ಇದನ್ನೂ ಓದಿ: Ponniyin Selvan ಸಿನಿಮಾದ ಹಾಡು ರಿಲೀಸ್ ಮಾಡಲಿದ್ದಾರೆ ಈ ತಾರೆ, ಹೆಚ್ಚಾಗ್ತಿದೆ ಅಭಿಮಾನಿಗಳ ನಿರೀಕ್ಷೆ
ಸುನಿಧಿ ಚೌಹಾಣ್ ಮತ್ತು ನಕಾಶ್ ಅಜೀಜ್ ಹಾಡಿರುವ `ರಾ ರಾ ರಕ್ಕಮ್ಮ' ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಸಿನಿಮಾದ ಬಹುಮುಖ್ಯ ಭಾಗ ಇದು ಎಂದರೆ ತಪ್ಪಲ್ಲ. ಅನುಪ್ ಭಂಡಾರಿ ನಿರ್ದೇಶನದ ಮತ್ತು ಸಲ್ಮಾನ್ ಖಾನ್ ಫಿಲ್ಮ್ಸ್, ಜೀ ಸ್ಟುಡಿಯೋಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಪ್ರಸ್ತುತಪಡಿಸಿದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ಲೀನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ