ಎಫ್​ಐಆರ್​ ರದ್ದು ಕೋರಿ ಶ್ರುತಿ, ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​​

ಶಿವಾರ್ಜುನ ಅವರು ಶ್ರುತಿ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದರು. ಅದನ್ನು ರದ್ದು ಮಾಡುವಂತೆ ಕೋರಿ ಶ್ರುತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Rajesh Duggumane | news18
Updated:November 22, 2018, 12:22 PM IST
ಎಫ್​ಐಆರ್​ ರದ್ದು ಕೋರಿ ಶ್ರುತಿ, ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​​
ವಿಸ್ಮಯ ಚಿತ್ರದ ದೃಶ್ಯದಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ
  • News18
  • Last Updated: November 22, 2018, 12:22 PM IST
  • Share this:
ನ್ಯೂಸ್​ 18 ಕನ್ನಡ

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್​ #MeToo ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈಗ ಎಫ್​ಐಆರ್​ ರದ್ದು ಮಾಡುವಂತೆ ಕೋರಿ ಶ್ರುತಿ ಹರಿಹರನ್​  ಹಾಗೂ ಅರ್ಜುನ್​ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​​ ಮುಂದೂಡಿದೆ.

ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್‌ #MeToo ಆರೋಪ ಮಾಡಿದ್ದರು. ಈ ಸಂಬಂಧ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಆದರೆ, 'ಅವರು ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ' ಎಂದು ಅರ್ಜುನ್​ ಸರ್ಜಾ ಮ್ಯಾನೆಜರ್​  ಶಿವಾರ್ಜುನ ಅವರು ಶ್ರುತಿ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದರು. ಅದನ್ನು ರದ್ದು ಮಾಡುವಂತೆ ಕೋರಿ ಶ್ರುತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಸ್ವೀಕಾರ ಮಾಡಿರುವ ಹೈಕೋರ್ಟ್ ‌ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ವಿಚಾರಣೆಯನ್ನು ಮುಂದಿನವಾರಕ್ಕೆ ಮುಂದೂಡಿದ್ದಾರೆ.  ಇನ್ನು, ಅರ್ಜುನ್​ ಸರ್ಜಾ ವಿರುದ್ಧ ಸಲ್ಲಿಕೆಯಾದ ಎಫ್​ಐಆರ್​ ರದ್ದು ಮಾಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ಶ್ರುತಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನ.19ಕ್ಕೆ ಮುಂದೂಡಿಕೆ

ಶ್ರುತಿ ಮಾಡಿದ ಆರೋಪದಿಂದ ಮಾನ ಹಾನಿಯಾಗಿದೆ ಎಂದು ಈಗಾಗಲೇ ಅರ್ಜುನ್​ ಸರ್ಜಾ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಕೋರ್ಟ್​​ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅಲ್ಲದೆ, ಶ್ರುತಿ ವಿರುದ್ಧ ನಿರ್ಬಂಧ ಹೇರಬೇಕು ಎಂದು ಅರ್ಜುನ್​ ಪರ ವಕೀಲರು ಒತ್ತಾಯಿಸಿದ್ದಾರೆ.
First published:November 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading