ಶ್ರುತಿ ಹರಿಹರನ್​ ಸಕ್ಕರೆ ಇದ್ದ ಹಾಗಂತೆ, ಹಾಗಾಗಿ ಮಾಧ್ಯಮದವರು ಅವರನ್ನು ಹಿಂಬಾಲಿಸುತ್ತಿದ್ದಾರಂತೆ!

ನನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕಿದೆ. ಹಾಗಾಗಿ ನಾನು ಆಯೋಗಕ್ಕೆ ಬರುತ್ತೇನೆ ಎಂದು  ನಾಗಲಕ್ಷ್ಮೀಗೆ ಶ್ರುತಿ ಹೇಳಿದ್ದರು.  ಅಂತೆಯೇ ಅವರು ಇಂದು ಆಗಮಿಸಿದ್ದಾರೆ.

Rajesh Duggumane | news18
Updated:November 14, 2018, 3:50 PM IST
ಶ್ರುತಿ ಹರಿಹರನ್​ ಸಕ್ಕರೆ ಇದ್ದ ಹಾಗಂತೆ, ಹಾಗಾಗಿ ಮಾಧ್ಯಮದವರು ಅವರನ್ನು ಹಿಂಬಾಲಿಸುತ್ತಿದ್ದಾರಂತೆ!
ಶ್ರುತಿ ಹರಿಹರನ್​
  • News18
  • Last Updated: November 14, 2018, 3:50 PM IST
  • Share this:
ನ್ಯೂಸ್​ 18 ಕನ್ನಡ

ಅರ್ಜುನ್​ ಸರ್ಜಾ ವಿರುದ್ಧ ಮಾಡಿ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶ್ರುತಿ ಹರಿಹರನ್​ ಇಂದು ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ನೀಡಿರುವ ದೂರಿನ ಬಗ್ಗೆ ಮಹಿಳಾ ಆಯೋಗ ತನಿಖೆ ನಡೆಸುತ್ತಿದೆ. ಈ ಸಂಬಂಧ ಶ್ರುತಿ ಹರಿರನ್ ಅವರಿಂದ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಸ್ಪಷ್ಟನೆ ಪಡೆದಿದ್ದಾರೆ. ನಂತರ ಮಾಧ್ಯಮದ ಜತೆ ಮಾತನಾಡಿರುವ ಶ್ರುತಿ, ನನಗೆ ಜೀವ ಬೆದರಿಕೆ ಇಲ್ಲ ಎಂದಿದ್ದಾರೆ. '#MeToo ಅಭಿಯಾನ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಳ್ಳುವುದು. ನಾನು ಮಾಡಿರುವ ಆರೋಪಕ್ಕೆ ನನ್ನ ಬಳಿ ಸಾಕ್ಷಿ ಇದೆ. ಸಾಕಷ್ಟು ಸಾಕ್ಷಿಗಳು ನನ್ನ ಪರ ಮಾತನಾಡಿದ್ದಾರೆ. ನ್ಯಾಯಾಲಯಕ್ಕೆ ಎಲ್ಲವನ್ನೂ ನೀಡಿದ್ದೇನೆ' ಎಂದು ಹೇಳಿದ್ದಾರೆ.

#MeToo ಆರೋಪಕ್ಕೆ ಸಂಬಂಧಿಸಿದಂತೆ ಸಂಜನಾ ಕ್ಷಮೆಯಾಚಿಸಿದ್ದರು. ಈ ಬಗ್ಗೆ ಮಾತನಾಡಿರುವ ಶ್ರುತಿ, 'ಸಂಜನಾ ಗಲ್ರಾನಿ ಕ್ಷಮೆ ಕೇಳಿದಕ್ಕೆ ಬೇಸರ ಇದೆ. ಅವರು ಒತ್ತಡಕ್ಕೆ ಮಣಿದು ಕ್ಷಮೆ ಕೇಳಿರಬಹುದು. ಇನ್ನು ಅವರೊಂದಿಗೆ ಮಾತನಾಡಿಲ್ಲ' ಎನ್ನುತ್ತಾರೆ. ಇನ್ನು, ಶ್ರುತಿ ಮಾಧ್ಯಮದವರನ್ನು ವ್ಯಂಗ್ಯ ಮಾಡಿದ್ದು 'ನಾನು ಸಕ್ಕರೆ ಇದ್ದಂತೆ. ಹಾಗಾಗಿ ಅವರು ನನ್ನ ಹೀಗೆ ಹಿಂಬಾಲಿಸುತ್ತಿದ್ದಾರೆ' ಎಂದಿದ್ದಾರೆ.

ಇದನ್ನೂ ಓದಿ: 'ದೀಪ್​ವೀರ್'​ ಮದುವೆಗೆ ಕ್ಷಣ ಗಣನೆ: ಅದ್ದೂರಿ ವಿವಾಹಕ್ಕೆ ಭರ್ಜರಿ ಭದ್ರತೆ, 6 ಲಕ್ಷ ಮೌಲ್ಯದ ಗುಲಾಬಿ ಹೂವುಗಳು!

'ನನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕಿದೆ. ಹಾಗಾಗಿ ನಾನು ಆಯೋಗಕ್ಕೆ ಬರುತ್ತೇನೆ' ಎಂದು  ನಾಗಲಕ್ಷ್ಮೀ ಬಳಿ ಶ್ರುತಿ ಹೇಳಿದ್ದರು.  ಈ ಹಿನ್ನೆಲೆಯಲ್ಲಿ ಅವರು ಇಂದು ಆಗಮಿಸಿದ್ದಾರೆ. ಆದರೆ ಪ್ರಕರಣ ಕೋರ್ಟ್​ನಲ್ಲಿರುವುದರಿಂದ ಈ ಬಗ್ಗೆ  ನಾಗಲಕ್ಷ್ಮೀ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲವಂತೆ.

  
First published:November 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading