• Home
  • »
  • News
  • »
  • entertainment
  • »
  • ಸಚಿವ ಸೋಮಣ್ಣ ಪುತ್ರ-ಸೃಜನ್ ಲೋಕೇಶ್ ಮಧ್ಯೆ ಜಗಳ? ಪಾರ್ಟಿ ಮಾಡೋವಾಗ ಫೈಟ್

ಸಚಿವ ಸೋಮಣ್ಣ ಪುತ್ರ-ಸೃಜನ್ ಲೋಕೇಶ್ ಮಧ್ಯೆ ಜಗಳ? ಪಾರ್ಟಿ ಮಾಡೋವಾಗ ಫೈಟ್

ಸಚಿವ ವಿ. ಸೋಮಣ್ಣ ಅವರ ಪುತ್ರ ಹಾಗೂ ನಿರೂಪಕ ಸೃಜನ್ ಲೋಕೇಶ್ ಮಧ್ಯೆ ಫೈಟ್ ಆಗಿದೆ. ಕ್ಲಬ್​​ನಲ್ಲಿ ಪಾರ್ಟಿ ಮಾಡುವಾಗ ಜಗಳ ಬೆಳೆದಿದೆ.

ಸಚಿವ ವಿ. ಸೋಮಣ್ಣ ಅವರ ಪುತ್ರ ಹಾಗೂ ನಿರೂಪಕ ಸೃಜನ್ ಲೋಕೇಶ್ ಮಧ್ಯೆ ಫೈಟ್ ಆಗಿದೆ. ಕ್ಲಬ್​​ನಲ್ಲಿ ಪಾರ್ಟಿ ಮಾಡುವಾಗ ಜಗಳ ಬೆಳೆದಿದೆ.

ಸಚಿವ ವಿ. ಸೋಮಣ್ಣ ಅವರ ಪುತ್ರ ಹಾಗೂ ನಿರೂಪಕ ಸೃಜನ್ ಲೋಕೇಶ್ ಮಧ್ಯೆ ಫೈಟ್ ಆಗಿದೆ. ಕ್ಲಬ್​​ನಲ್ಲಿ ಪಾರ್ಟಿ ಮಾಡುವಾಗ ಜಗಳ ಬೆಳೆದಿದೆ.

  • News18 Kannada
  • Last Updated :
  • Bangalore, India
  • Share this:

ಸೆಲೆಬ್ರಿಟಿಗಳ ಲೇಟ್​​ ನೈಟ್ ಪಾರ್ಟಿಗಳು (Party) ನಂತರ ನಡೆಯೋ ಜಗಳಗಳು ತಡವಾಗಿ ಬೆಳಕಿಗೆ ಬರುತ್ತವೆ. ಯಾವುದೋ ಕ್ಲಬ್​ನಲ್ಲಿ (Club) ಯಾವಾಗಲೋ ಮಾಡಿದ ಪಾರ್ಟಿ, ಯಾವುದೋ ಕಾರಣಕ್ಕಾಗಿ ನಡೆವ ಜಗಳ ನಂತರದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಇಂಥಹ ಬಹಳಷ್ಟು ಘಟನೆಗಳನ್ನು ನಾವು ನೋಡಿದ್ದೇವೆ. ಈಗ ಖ್ಯಾತ ನಿರೂಪಕ ಸೃಜನ್ ಲೋಕೇಶ್ ಅವರ ಹೆಸರು ಇಂಥದ್ದೇ ಒಂದು ಘಟನೆಯಲ್ಲಿ ಕೇಳಿ ಬಂದಿದೆ. ಸಚಿವ ವಿ. ಸೋಮಣ್ಣ ಅವ ರ ಪುತ್ರ ಹಾಗೂ ಸೃಜನ್ ಲೋಕೇಶ್ ಅವರಿಗೆ ಫೈಟ್ ನಡೆದಿದೆ ಎನ್ನುವ ವಿಚಾರ ಸುದ್ದಿಯಾಗಿದೆ.


ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ (Reality show) ಮಜಾ ಟಾಕೀಸ್ ನಿರೂಪಣೆ  (Anchoring) ಮಾಡುತ್ತಾ ಪ್ರೇಕ್ಷಕರ ಫೇವರೇಟ್ ಆಗಿರುವ ನಟ, ನಿರೂಪಕ ಸೃಜನ್ ಲೋಕೇಶ್ (Srujan Lokesh) ಮತ್ತು ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ನಡುವೆ ಫೈಟ್ ನಡೆದಿದೆ. ಬೆಂಗಳೂರಿನ ಮುದ್ದಿನ ಪಾಳ್ಯ ಎಂಬ ಪ್ರದೇಶದಲ್ಲಿರುವ ಕಿಂಗ್ಸ್ ಕ್ಲಬ್ ನಲ್ಲಿ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.


ಹೊಡೆದಾಟಕ್ಕೆ ಕಾರಣವೇನು?


ಸೋಮವಾರ ತಡ ರಾತ್ರಿ ಈ ಘಟನೆ ನಡೆದಿದ್ದು, ಪಾರ್ಟಿ ಮಾಡುವಾಗ ಜೋರಾಗಿ ಗಲಾಟೆ ಮಾಡಿದರು ಎನ್ನುವ ಕಾರಣಕ್ಕಾಗಿ ಹೊಡೆದಾಟ ನಡೆದಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: Jahvi Kapoor: ಜೂನಿಯರ್ NTR ಜೊತೆ ಜಾನ್ವಿ! ಸೌತ್​ ಇಂಡಸ್ಟ್ರಿಗೆ ಶ್ರೀದೇವಿ ಮಗಳ ಎಂಟ್ರಿ


ದೊಡ್ಡ ಧ್ವನಿಯಲ್ಲಿ ಕಿರುಚಾಟ, ಪ್ರಶ್ನಿಸಿದ್ದ ಸೋಮಣ್ಣ ಪುತ್ರ


ಬ್ಯಾಡ್ಮಿಂಟನ್ ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ ಟೀಮ್ ಪ್ರಾಕ್ಟಿಸ್ ಮಾಡುತ್ತಿತ್ತು. ಪ್ರಾಕ್ಟಿಸ್ ಮುಗಿಸಿ ಕಿಂಗ್ಸ್ ಕ್ಲಬ್ ನಲ್ಲಿ ಪಾರ್ಟಿಗಾಗಿ ಎಲ್ಲರೂ ಸೇರಿಕೊಂಡಿದ್ದರು. ಈ ಟೀಮ್ ದೊಡ್ಡ ಧ್ವನಿಯಲ್ಲಿ ಕಿರುಚಾಡುತ್ತಿದ್ದರು ಎನ್ನಲಾಗಿದೆ. ಇದೇ ವೇಳೆಯೇ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದ್ದರು. ಮಾತಿಗೆ ಮಾತು ಬೆಳೆದು ಹೊಡೆದಾಡುವ ಹಂತಕ್ಕೆ ಬಂದಿತ್ತು ಎಂದು ಹೇಳಲಾಗುತ್ತಿದೆ.


ಸೋಮಣ್ಣ ಪುತ್ರ ಅಲ್ಲಿರಲಿಲ್ವಾ?


ಆ ಗಲಾಟೆ ನಡೆದ ದಿನ ಸೋಮಣ್ಣ ಅವರ ಪುತ್ರ ಆ ಕ್ಲಬ್​​ನಲ್ಲಿ ಇರಲಿಲ್ಲ. ಯಾವುದೇ ಳಗಲಾಟೆಯೂ ನಡೆದಿಲ್ಲ. ಸೃಜನ್ ಬೇಗನೆ ಮನೆಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Kantara-Piyush Goyal: ಕಾಂತಾರ ಹೊಗಳಿದ ಕೇಂದ್ರ ಸಚಿವ ಪಿಯೂಷ್ ಗೋಯಲ್


ಸಚಿವರು ಏನಂತಾರೆ?


ಈ ಕುರಿತು ಸಚಿವ ಸೋಮಣ್ಣ ಕೂಡ ಪ್ರತಿಕ್ರಿಯಿಸಿದ್ದು, ‘ಸುಮ್ನೆ ಏನೇನೋ ಹೇಳೋಕ್ ಹೋಗ್ಬೇಡಿ, ಬಿಟ್ಬಿಡಿ. ಗೊತ್ತಿಲ್ಲದೆ ಇರೋದಕ್ಕೆಲ್ಲ ಹಿಟ್ ಅಂಡ್ ರನ್ ಕೆಲಸ ಬೇಡ. ನಾನು ಒಬ್ಬ ರಾಜಕಾರಣಿ, ಯಾರಾದರೂ ತಪ್ಪು ಮಾಡಿದ್ರೆ ತಪ್ಪೆ.ಆ ತರಹ ನನಗೆ ಏನೂ ಮಾಹಿತಿ ಇಲ್ಲ ಎಂದಿದ್ದಾರೆ.


ಮಗ ಜೊತೆಯಲ್ಲಿ ಇಲ್ಲ


ನನ್ನ ಮಗ ನನ್ನ ಜೊತೆ ಇಲ್ಲ. ಸುಮಾರು ಹತ್ತು ಹನ್ನೆರಡು ವರ್ಷದಿಂದ ಅವರು ಬೇರೆ ಮನೆಯಲ್ಲಿ ಇದ್ದಾರೆ. ಸುಮ್ನೆ ಏನೇನೋ ಮಾತಾಡೋದ್ರಲ್ಲಿ ಅರ್ಥ ಇಲ್ಲ. ಸತ್ಯಾಸತ್ಯತೆ ಪರಾಮರ್ಶೆ ಮಾಡೋದು ಒಳ್ಳೆಯದು. ನನಗೆ ಇದರ ಬಗ್ಗೆ ನನಗೆ ಕಿಂಚಿತ್ತು ಮಾಹಿತಿ ಇಲ್ಲ ಎಂದಿದ್ದಾರೆ.


ಪುನೀತ ಪರ್ವದಲ್ಲಿ ಭಾಗವಹಿಸಿದ್ದ ಸೃಜನ್


ಸೃಜನ್ ಲೋಕೇಶ್ ಪುನೀತ ಪರ್ವ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್​ನಲ್ಲಿ ಭಾಗವಹಿಸಿದ್ದರು. ಅಪ್ಪು ಅವರ ಕೊನೆಯ ಸಿನಿಮಾಗೆ ಶುಭ ಹಾರೈಸಿ, ಅವರ ಸಿನಿಮಾ ಯಶಸ್ವಿಯಾಗಬೇಕು. ಎಲ್ಲರೂ ಸಿನಿಮಾ ನೋಡಿ ಎಂದು ಕೇಳಿಕೊಂಡಿದ್ದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು