Samanvi ನಿಧನಕ್ಕೆ ಕಂಬನಿ ಮಿಡಿದ ಕಿರುತೆರೆ ಕಲಾವಿದರು.. `ದೇವರು ಇದ್ದಾನೋ, ಇಲ್ಲವೋ’ ಎಂದ ಸೃಜನ್ ಲೋಕೇಶ್‌!

ಕನ್ನಡ ಕಿರುತೆರೆಗೆ ಸಂಕ್ರಾಂತಿ ಹಬ್ಬಕ್ಕೆ ಸೂತಕದ ಛಾಯೆ ಮೂಡಿದೆ. ಯಾರು ಊಹಿಸಿಕೊಳ್ಳಲಾಗದತಂಹ ದುರಂತದಲ್ಲಿ 6 ವರ್ಷದ ಕಂದಮ್ಮ ಸಮನ್ವಿ ಇಹಲೋಖ ತ್ಯಜಿಸಿದ್ದಾಳೆ. ಇದು ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. 

ಸಮನ್ವಿ, ಸೃಜನ್​ ಲೋಕೇಶ್​

ಸಮನ್ವಿ, ಸೃಜನ್​ ಲೋಕೇಶ್​

  • Share this:
 'ನನ್ನಮ್ಮ ಸೂಪರ್ ಸ್ಟಾರ್'(Nannamma SuperStar) ರಿಯಾಲಿಟಿ ಶೋ ಸ್ಪರ್ಧಿ ಅಮೃತಾ ನಾಯ್ಡು(Amrutha Naidu) ಮತ್ತು ಅವರ ಪುತ್ರಿ ಸಮನ್ವಿ(Samanvi) ಗುರುವಾರ (ಜ.13) ಅಪಘಾತ(Accident)ಕ್ಕೆ ಈಡಾದರು. ಅಪಘಾತದ ತೀವ್ರತೆಗೆ ಸಮನ್ವಿ ದಾರುಣವಾಗಿ ಸಾವನ್ನಪ್ಪಿದಾರೆ, ಗಂಭೀರವಾಗಿ ಗಾಯಗೊಂಡಿರುವ ಅಮೃತಾ ನಾಯ್ಡುಗೆ ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಹಲವರನ್ನು ಕಂಗೆಡಿಸಿದೆ. ಕನ್ನಡ ಕಿರುತೆರೆಗೆ ಸಂಕ್ರಾಂತಿ ಹಬ್ಬಕ್ಕೆ ಸೂತಕದ ಛಾಯೆ ಮೂಡಿದೆ. ಯಾರು ಊಹಿಸಿಕೊಳ್ಳಲಾಗದತಂಹ ದುರಂತದಲ್ಲಿ 6 ವರ್ಷದ ಕಂದಮ್ಮ ಸಮನ್ವಿ ಇಹಲೋಖ ತ್ಯಜಿಸಿದ್ದಾಳೆ. ಇದು ಯಾರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಮೃತಾ ಮತ್ತು ಸಮನ್ವಿ ಕೋಣನಕುಂಟೆಯ ವಾಜರಹಳ್ಳಿಯ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಆ ವೇಳೆ ಟಿಪ್ಪರ್ ಲಾರಿಯೊಂದು ಅಮೃತಾ ಮತ್ತು ಸಮನ್ವಿ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದಳು. ಅಮೃತಾಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಸಮನ್ವಿ ನಿಧನಕ್ಕೆ ತಾರಾ (Tara), ಸೃಜನ್​ ಲೋಕೇಶ್ (Srujan Lokesh)​, ಪರಮೇಶ್ವರ್ (Parameshwar)​, ಅನು ಪ್ರಭಾಕರ್ (Anu Prabhakar)​ ಸೇರಿದಂತೆ ಹಲವರು ಕಂಬನಿ ಮೀಡಿದಿದ್ದಾರೆ. 

`ದೇವರು ಇದ್ದಾನೋ, ಇಲ್ಲವೋ’ ಎಂದ ಸೃಜನ್ ಲೋಕೇಶ್‌!

ಸಮನ್ವಿ ಸಾವಿಗೆ  ನಟ,ನಿರೂಪಕ ಸೃಜನ್ ಲೋಕೇಶ್​ ಕಂಬನಿ ಮಿಡಿದಿದ್ದಾರೆ , ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. 'ದೇವರು ನಿಜವಾಗಿಯೂ ದೇವರ? ಅಥವಾ ದೇವರು ಇದ್ದಾನ‌? ಇಲ್ಲ, ದೇವರನ್ನು ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿದೆ. ಇವತ್ತು ನಿಜವಾಗಲೂ ಈ ಘಟನೆಯ ನಂತರ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ...' ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ : ತಾಯಿ ಮುಂದಯೇ ಮಗಳನ್ನು ಬಲಿ ಪಡೆದ ಜವರಾಯ.. ಮೊದಲ ಮಗು ಕಳೆದುಕೊಂಡಿದ್ದ ಅಮೃತಾಗೆ ಮತ್ತೆ ಆಘಾತ!

ಅನ್ಯಾಯ ಮಾಡಿಬಿಟ್ಟೆ ದೇವರೇ ಎಂದ ಅನು ಪ್ರಭಾಕರ್​!

ಸಮನ್ವಿ ನಿಧನಕ್ಕೆ ಅನು ಪ್ರಭಾಕರ್​ ಸಂತಾಪ ಸೂಚಿಸಿದ್ದಾರೆ. ‘ನನ್ನನ್ನು ಪ್ರೀತಿಯಿಂದ Cherry judge ಅಂತ ಕರೆಯುತಿದ್ದ ಕಂದಮ್ಮ ಸಮನ್ವಿ... ವಿಧಿ ಆಟ... ದೇವರೇ ಇದು ಅನ್ಯಾಯ. ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಮೃತಾ ಮತ್ತು ಅವರ ಕುಟುಂಬಕ್ಕೆ ಆ ದೇವರು ನೀಡಲಿ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು, ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಕೂಡ ಸಮನ್ವಿಗೆ ಸಂತಾಪ ಸೂಚಿಸಿದ್ದಾರೆ. ‘ಸುದ್ದಿ ಕೇಳಿದಾಗಿನಿಂದ ಬರೀ ಸಂಕಟ. ಆ ಅಮ್ಮನ ಬಗ್ಗೆ ಯೋಚನೆ ಮಾಡಲೂ ಸಾಧ್ಯ ಆಗುತ್ತಿಲ್ಲ. ಮಗುವನ್ನು ಕಳೆದುಕೊಳ್ಳುವ ನೋವಿಗಿಂತ ದೊಡ್ಡ ನೋವು ಯಾವುದೂ ಇಲ್ಲ' ಎಂದು ಬರೆದುಕೊಂಡಿದ್ದಾರೆ.ಇದನ್ನು ಓದಿ : ಅಪಘಾತಕ್ಕೀಡಾದ ಧಾರವಾಹಿ ನಟಿ Amrutha Naiduರ ವಾಹನ: 6 ವರ್ಷದ ಮಗಳ ದುರ್ಮರಣ!

ದಿಗ್ಭ್ರಮೆ ವ್ಯಕ್ತಪಡಿಸಿದ ತಾರಾ ಅನುರಾಧ

ಹಿರಿಯ ನಟಿ ರಿಯಾಲಿಟಿ ಶೋ ತೀರ್ಪುಗಾರ್ತಿ ತಾರಾ ಅನುರಾಧ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ವಿಧಿ ಕ್ರೂರ ಎಂದು ಅನಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಬರೀ ಸಾವು-ನೋವು, ಕಷ್ಟಗಳನ್ನೇ ಅನುಭವಿಸುತ್ತಿದ್ದೇವೆ, ಕೇಳುತ್ತಿದ್ದೇವೆ. ನನಗೆ ನಂಬಲೂ ಆಗುತ್ತಿಲ್ಲ, ಅಮೃತಾನನ್ನು ನೋಡಿ ಸಮಾಧಾನ ಹೇಳಬೇಕಿದೆ. ಗುರುರಾಜ್ ನಾಯ್ಡು ಅವರ ಮಗಳು ಅಮೃತಾ ಅವರು ನಮ್ಮ ರಿಯಾಲಿಟಿ ಶೋಗೆ ಬಂದಾಗ ನಿಜಕ್ಕೂ ಖುಷಿಯಾಗಿತ್ತು. ಹಿರಿಯ ಹರಿಕಥಾ ವಿದ್ವಾಂಸರ ಮಗಳು ಹರಿಕಥೆ ಮಾಡುವುದನ್ನು ನಾನು ಸಾಕಷ್ಟು ಬಾರಿ ನೋಡಿದ್ದೆ. ಇಂದು ಅವರಿಗೆ ಹಾಗಾಗಿದ್ದು ನಿಜಕ್ಕೂ ನೋವಾಗುತ್ತಿದೆ, ಯಾವ ತಂದೆ-ತಾಯಿಗೂ ಈ ಪರಿಸ್ಥಿತಿ ಬರಬಾರದು ಎಂದು ಅವರು ಹೇಳಿದ್ದಾರೆ.
Published by:Vasudeva M
First published: