news18-kannada Updated:February 26, 2020, 10:02 PM IST
ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ನಟಿ ಮೇಘನಾ ರಾಜ್ ನಟನೆಯ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ‘ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಯ್ಯೂಟೂಬ್ನಲ್ಲಿ ಸದ್ದು ಮಾಡುತ್ತಿದೆ.
ಬಿಡುಗಡೆಯಾಗಿರುವ ಟೀಸರ್ನಲ್ಲಿ ಅತಿಯಾದ ಮೊಬೈಲ್ ಗೀಳಿನಿಂದ ಮಕ್ಕಳ ವರ್ತನೆ ಹೇಗೆ ಬದಲಾಗಬಹುದು ಎಂಬುದನ್ನು ನಿರ್ದೇಶಕ ಮಧುಚಂದ್ರ ತೋರಿಸಿದ್ದಾರೆ. ನಗರಗಳ ಸಿಗ್ನಲ್ಗಳಲ್ಲಿ ವಾಹನ ನಿಲ್ಲಿಸಿಕೊಂಡು ಇದ್ದಾಗ, ಪುಟಾಣಿ ಮಕ್ಕಳು ಡೇಟಾ ಕೊಡಿ ಅಂಕಲ್… ಡೇಟಾ ಕೊಡಿ ಆಂಟಿ ಎಂದು ಕೇಳುವ ದೃಶ್ಯವನ್ನು ಮತ್ತು ಮೊಬೈಲ್ ಬಳಕೆ ಹೆಚ್ಚಾಗಿ ಕತ್ತು ವಾಲಿಸಿಕೊಂಡವರ ಮದುವೆ ಸಂಭ್ರಮವನ್ನು ಟೀಸರ್ ತೋರಿಸಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಕಾಲಿರಿಸಿದ Samsung Galaxy M31 ಸ್ಮಾರ್ಟ್ಫೋನ್; ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯ
ಇನ್ನು ಟೀಸರ್ನಲ್ಲಿ ಅತಿಯಾದ ಮೊಬೈಲ್ ಬಳಕೆ ಮತ್ತು ಅದರ ದುಷ್ಪರಿಣಾಮಗಳಿಂದ ಜನರನ್ನು ರಕ್ಷಿಸಲು ‘ಪಲ್ಸ್ಮೊಲಿಯೊ‘ ಎಂಬ ಹನಿಯನ್ನು ಸಾರ್ವಜನಿಕರಿಗೆ ಹಾಕಲಾಗುವ ಹಾಸ್ಯಭರಿತ ದೃಶ್ಯವನ್ನು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದ ಟೀಸರ್ನಲ್ಲಿ ಹೇಳಲಾಗಿದೆ. ಈ ಚಿತ್ರವನ್ನು ಒಟ್ಟು ನಲವತ್ತು ಜನ ಸೇರಿ ನಿರ್ಮಾಣ ಮಾಡಿದ್ದಾರೆ
ಇದನ್ನೂ ಓದಿ: Video viral: ಹೊಟ್ಟೆ ಹಸಿವಿನಿಂದ ಕಂಗೆಟ್ಟಿದ್ದ ಹೆಬ್ಬಾವು ತಿಂದಿದ್ದೇನು ಗೊತ್ತಾ? ಕಡೆಗೆ ಬಚಾವು ಮಾಡಲು ವೈದ್ಯರೇ ಬರಬೇಕಾಯ್ತು
First published:
February 26, 2020, 9:59 PM IST