ಶ್ರೀಮುರಳಿ ಅಭಿನಯದ Madhagaja Release ಕುರಿತಾಗಿ ಅಪ್ಡೇಟ್​ ಕೊಟ್ಟ ನಿರ್ದೇಶಕ ಮಹೇಶ್​

ಮದಗಜ ಸಿನಿಮಾದಲ್ಲಿ ಶ್ರೀಮುರಳಿ-ಆಶಿಕಾ ರಂಗನಾಥ್​

ಮದಗಜ ಸಿನಿಮಾದಲ್ಲಿ ಶ್ರೀಮುರಳಿ-ಆಶಿಕಾ ರಂಗನಾಥ್​

 ಮದಗಜ ಸಿನಿಮಾದ ನಿರ್ದೇಶಕ ಮಹೇಶ್​ ಕುಮಾರ್ ಅವರು ಸಿನಿಮಾ ಡಿಸೆಂಬರ್​ನಲ್ಲಿ ತೆರೆಗಪ್ಪಳಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಕೇಳಿದಾಗಿನಿಂದ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.

  • Share this:

2019 ಭರಾಟೆ  ಸಿನಿಮಾದ ನಂತರ  ನಟ ಶ್ರೀಮುರಳಿ  (Srimurali) ಅಭಿನಯದ ಯಾವುದೇ ಚಿತ್ರ ತೆರೆ ಕಂಡಿಲ್ಲ. ಇದರಿಂದಾಗಿ ರೋರಿಂಗ್ ಸ್ಟಾರ್  (Roaring Star)ಅವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮದಗಜ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಬಿಟ್ಟರೆ ಇಲ್ಲಿಯವರೆಗೆ ಮತ್ತಾವ ಅಪ್ಡೇಟ್ ಸಹ ಸಿಕ್ಕಿಲ್ಲ. ಈಗ ಅಭಿಮಾನಿಗಳು ಸಿನಿಮಾ ರಿಲೀಸ್​ ದಿನಾಂಕದ ಜೊತೆಗೆ ಹಾಡು ಅಥವಾ ಟ್ರೇಲರ್ ರಿಲೀಸ್​ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗಲೇ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮದಗಜ (Madhagaja) ಚಿತ್ರತಂಡದ ಕಡೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೌದು, ಸಿನಿಮಾದ ನಿರ್ದೇಶಕ ಮಹೇಶ್ ಕುಮಾರ್​ ಮದಗಜ ಚಿತ್ರದ ರಿಲೀಸ್ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. 


ಈಗಾಗಲೇ ಮದಗಜ ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೆ ಶೂಟಿಂಗ್​ ಮುಕ್ತಾಯವಾದ ಸುದ್ದಿ ಹೊರ ಬಿದ್ದಿತ್ತು. ಈ ಮದಗಜ ಬೆಳ್ಳಿತೆರೆಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ. ಹೌದು ಈ ಸಿನಿಮಾವನ್ನು ಡಿಸೆಂಬರ್​ನಲ್ಲಿ ರಿಲೀಸ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ.




ಮದಗಜ ಸಿನಿಮಾದ ನಿರ್ದೇಶಕ ಮಹೇಶ್​ ಕುಮಾರ್ ಅವರು ಸಿನಿಮಾ ಡಿಸೆಂಬರ್​ನಲ್ಲಿ ತೆರೆಗಪ್ಪಳಿಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಕೇಳಿದಾಗಿನಿಂದ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಅಲ್ಲದೆ, ಇನ್ನೇನು ಸಿನಿಮಾದ ಟ್ರೇಲರ್​ ರಿಲೀಸ್​ಗಾಗಿ ಕಾಯುತ್ತಿರುವುದಾಗಿಯೂ ಹೇಳುತ್ತಿದ್ದಾರೆ.


ಈ ಹಿಂದೆ ಸಿನಿಮಾವನ್ನು ಆಗಸ್ಟ್​ನಲ್ಲಿ ತೆರೆಗೆ ತರಲು ನಿರ್ಧರಿಸಲಾಗಿತ್ತು. ಆದರೆ, ಕೊರೋನಾ 2ನೇ ಅಲೆಯಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಈಗ ಚಿತ್ರವನ್ನು ಡಿಸೆಂಬರ್​ನಲ್ಲಿ ರಿಲೀಸ್​ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.


ಇದನ್ನೂ ಓದಿ: Drugs Case ಅನುಶ್ರೀಗೆ ಬಿಗ್ ರಿಲೀಫ್: ಆರೋಪಿಗಳ ಪಟ್ಟಿಯಿಂದ ಹೆಸರು ಕೈ ಬಿಟ್ಟ ಸಿಸಿಬಿ ಪೊಲೀಸರು..?


ರಾಬರ್ಟ್​ ಚಿತ್ರದ ನಿರ್ಮಾಪಕ ಉಮಾಪತಿ ನಿರ್ಮಾಣದ ಸಿನಿಮಾ ಮದಗಜ ಕೊರೋನಾ ಎರಡನೇ ಅಲೆಯಿಂದಾಗಿ ಹೇರಲಾಗಿದ್ದ ಲಾಕ್​ಡೌನ್​ ಹಂತ ಹಂತವಾಗಿ ಅನ್​ಲಾಕ್​ ಆಗುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣ ಆರಂಭಿಸಿತ್ತು. ಕೊನೆಯ ಹಂತದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ. ಸತತ 74 ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಈ ಸಿನಿಮಾದ ಶೂಟಿಂಗ್​ಗೆ ಈಗ ತೆರೆ ಎಳೆಯಲಾಯಿತು.




ಮದಗಜ ಸಿನಿಮಾದಲ್ಲಿ ರೋರಿಂಗ್ ಸ್ಟಾರ್​ ಶ್ರೀಮುರಳಿ ಅವರಿಗೆ ಆಶಿಕಾ ರಂಗನಾಥ್​ ಅವರು ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಲುಕ್​ನಲ್ಲಿ ಆಶಿಕಾ ರಂಗನಾಥ್​ ನಟಿಸಿದ್ದಾರೆ. ಈ ಹಿಂದೆ ಅಂದರೆ ಆಶಿಕಾ ರಂಗನಾಥ್​ ಹುಟ್ಟುಹಬ್ಬದಂದು ಅವರ ಫಸ್ಟ್​ಲುಕ್​ ಸಹ ರಿಲೀಸ್ ಮಾಡಲಾಗಿತ್ತು. ಇನ್ನು ಸಿನಿಮಾದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಈಗಾಗಲೇ ಸಿನಿಪ್ರಿಯರ ಮನಸ್ಸು ಕದ್ದಿದೆ. ಜಗಪತಿ ಬಾಬು ಅವರು ರಾಬರ್ಟ್​ ನಂತರ ಬಣ್ಣ ಹಚ್ವಿರುವ ಕನ್ನಡ ಸಿನಿಮಾ ಇದಾಗಿದೆ.


ಇದನ್ನೂ ಓದಿ: ಮಾಜಿ ಗರ್ಲ್​ಫ್ರೆಂಡ್​ Bipasha Basu ಜತೆಗಿನ ಬ್ರೇಕಪ್​ ಬಗ್ಗೆ ದ ಎಂಪೈರ್​ ನಟ Dino Morea ಹೇಳಿದ್ದು ಹೀಗೆ..!


ಇನ್ನು, ಶ್ರೀಮುರಳಿ ಅವರು ಇದೇ ಸಿನಿಮಾದ ಸೆಟ್​ನಲ್ಲಿ ಪುಟ್ಟ ಮಗುವಿನ ಜೊತೆ ಬಿಸ್ಕೆಟ್​ ಕೊಟ್ಟು ಚಿಪ್ಸ್​ ಕೇಳುತ್ತಿದ್ದ ಮುದ್ದಾದ ವಿಡಿಯೋ ಒಂದು ಇತ್ತೀಚೆಗೆ ವೈರಲ್​ ಆಗಿತ್ತು. ಇನ್ನು ಕೊನೆಯ ಹಂತದ ಚಿತ್ರೀಕರಣದಲ್ಲಿ ಸಿನಿಮಾದ ಟೈಟಲ್​ ಟ್ರ್ಯಾಕ್​ ಅನ್ನು ಚಿತ್ರೀಕರಿಸಲಾಯಿತು.

First published: