• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Srimurali-Madhagaja: ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ಮುಕ್ತಾಯ: ಸಂಭ್ರಮದಲ್ಲಿ ಚಿತ್ರತಂಡ..!

Srimurali-Madhagaja: ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ಮುಕ್ತಾಯ: ಸಂಭ್ರಮದಲ್ಲಿ ಚಿತ್ರತಂಡ..!

ಮದಗಜ ಸಿನಿಮಾ ಚಿತ್ರೀಕರಣ ಮುಕ್ತಾಯ

ಮದಗಜ ಸಿನಿಮಾ ಚಿತ್ರೀಕರಣ ಮುಕ್ತಾಯ

ಭರಾಟೆ (2019) ಸಿನಿಮಾದ ನಂತರ ಶ್ರೀಮುರಳಿ ಅಭಿನಯದ ಯಾವುದೇ ಚಿತ್ರ ತೆರೆ ಕಂಡಿಲ್ಲ. ಇದರಿಂದಾಗಿ ರೋರಿಂಗ್ ಸ್ಟಾರ್ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮದಗಜ ಶೂಟಿಂಗ್ ಮುಕ್ತಾಯವಾಗಿದೆ.

ಮುಂದೆ ಓದಿ ...
  • Share this:

ಮಹೇಶ್​ ಕುಮಾರ್ (Mahesh Kumar)​ ನಿರ್ದೇಶನದಲ್ಲಿ ಸ್ಯಾಂಡಲ್​ವುಡ್​ (Sandalwood) ರೋರಿಂಗ್ ಸ್ಟಾರ್ ಶ್ರೀಮುರಳಿ  (Srimurali) ಅಭಿನಯದ ಸಿನಿಮಾ ಮದಗಜ (Madhagaja Movie) ಸಿನಿಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ಹೌದು, ಕೋವಿಡ್​ ಎರಡನೇ ಅಲೆಯಿಂದಾಗಿ ಸಾಕಷ್ಟು ಸಿನಿಮಾಗಳ ಚಿತ್ರೀಕರಣದಲ್ಲಿ ವ್ಯತ್ಯಾಸವಾಗಿತ್ತು. ಅವುಗಳಲ್ಲಿ ಮದಜಗ ಸಿನಿಮಾ ಸಹ ಒಂದು. ಎರಡನೇ ಅಲೆಯಿಂದಾಗಿ ಮಾಡಲಾಗಿದ್ದ ಲಾಕ್​ಡೌನ್​ ಅನ್ನು ಅನ್​ಲಾಕ್​ ಮಾಡಿದ ನಂತರ ಕನ್ನಡ ಸಿನಿಮಾಗಳ ಚಿತ್ರೀಕರಣ ಆರಂಭವಾಗಿತ್ತಯ. ಆಗಲೇ ಶ್ರೀರಮುರಳಿ ಅಭಿನಯದ ಮದಗಜ ಚಿತ್ರೀಕರಣದ ಕೊನೆಯ ಹಂತ ಸಹ ಸೆಟ್ಟೇರಿತ್ತು. ಸತತ 74 ದಿನಗಳ ಕಾಲ ನಡೆದ  ಮದಗಜ ಸಿನಿಮಾ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಿನಿಮಾದ ಶೂಟಿಂಗ್​ಗೆ ಈಗ ತೆರೆ ಬಿದ್ದಿದ್ದು, ಇದನ್ನು ಚಿತ್ರತಂಡ ಸಂಭ್ರಮಿಸಿದ್ದಾರೆ. ಅಲ್ಲದೆ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡ ಹಿನ್ನಲೆಯಲ್ಲೊ ಚಿತ್ರದ ಸೆಟ್​ನಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. 


ಭರಾಟೆ (2019) ಸಿನಿಮಾದ ನಂತರ ಶ್ರೀಮುರಳಿ ಅಭಿನಯದ ಯಾವುದೇ ಚಿತ್ರ ತೆರೆ ಕಂಡಿಲ್ಲ. ಇದರಿಂದಾಗಿ ರೋರಿಂಗ್ ಸ್ಟಾರ್ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮದಗಜ ಶೂಟಿಂಗ್ ಮುಕ್ತಾಯವಾಗಿದೆ.
ರಾಬರ್ಟ್​ ಚಿತ್ರದ ನಿರ್ಮಾಪಕ ಉಮಾಪತಿ ನಿರ್ಮಾಣದ ಸಿನಿಮಾ ಮದಗಜ ಕೊರೋನಾ ಎರಡನೇ ಅಲೆಯಿಂದಾಗಿ ಹೇರಲಾಗಿದ್ದ ಲಾಕ್​ಡೌನ್​ ಹಂತ ಹಂತವಾಗಿ ಅನ್​ಲಾಕ್​ ಆಗುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣ ಆರಂಭಿಸಿತ್ತು. ಕೊನೆಯ ಹಂತದ ಚಿತ್ರೀಕರಣ ಈಗ ಪೂರ್ಣಗೊಂಡಿದೆ. ಸತತ 74 ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಈ ಸಿನಿಮಾದ ಶೂಟಿಂಗ್​ಗೆ ಈಗ ತೆರೆ ಎಳೆಯಲಾಗಿದೆ. ಈ ವಿಷಯವನ್ನು ಸಿನಿಮಾದ ನಿರ್ದೇಶಕ ಮಹೇಶ್ ಕುಮಾರ್​ ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Happy Birthday Sumalatha Ambareesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಮಲತಾ: ಶುಭ ಕೋರಿದ ಅಭಿಷೇಕ್ ಅಂಬರೀಷ್​


ಸಿನಿಮಾದ ಶೂಟಿಂಗ್​ ಮುಕ್ತಾಯವಾಗುತ್ತಿದ್ದಂತೆಯೇ ಮದಗಜ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಚಿತ್ರೀಕರಣದ ಸೆಟ್​ನಲ್ಲಿ ತೆಗೆದ ಒಂದು ಪುಟ್ಟ ವಿಡಿಯೋವನ್ನೂ ಹಂಚಿಕೊಂಡಿದೆ. ಚಿತ್ರದ ಮುಹೂರ್ತ, ಚಿತ್ರೀಕರಣ ನಡೆದ ದಿನಗಳನ್ನು ನೆನಪಿಸುವ ವಿಡಿಯೋ ಇದಾಗಿದೆ.
ಮದಗಜ ಸಿನಿಮಾದಲ್ಲಿ ರೋರಿಂಗ್ ಸ್ಟಾರ್​  ಶ್ರೀಮುರಳಿ ಅವರಿಗೆ ಆಶಿಕಾ ರಂಗನಾಥ್​ ಅವರು ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಲುಕ್​ನಲ್ಲಿ ಆಶಿಕಾ ರಂಗನಾಥ್​ ನಟಿಸಿದ್ದಾರೆ. ಈ ಹಿಂದೆ ಅಂದರೆ ಆಶಿಕಾ ರಂಗನಾಥ್​ ಹುಟ್ಟುಹಬ್ಬದಂದು ಅವರ ಫಸ್ಟ್​ಲುಕ್​ ಸಹ ರಿಲೀಸ್ ಮಾಡಲಾಗಿತ್ತು. ಇನ್ನು ಸಿನಿಮಾದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಈಗಾಗಲೇ ಸಿನಿಪ್ರಿಯರ ಮನಸ್ಸು ಕದ್ದಿದೆ. ಜಗಪತಿ ಬಾಬು ಅವರು ರಾಬರ್ಟ್​ ನಂತರ ಬಣ್ಣ ಹಚ್ವಿರುವ ಕನ್ನಡ ಸಿನಿಮಾ ಇದಾಗಿದೆ.


ಇದನ್ನೂ ಓದಿ: Anitha Hasanandani: ಮಾಲ್ಡೀವ್ಸ್​ ಪ್ರವಾಸದಲ್ಲಿ ವೀರ ಕನ್ನಡಿಗ ನಟಿ ಅನಿತಾ ಹಸ್ಸನಂದಾನಿ: ಇಲ್ಲಿವೆ ಚಿತ್ರಗಳು..!


ಇನ್ನು, ಶ್ರೀಮುರಳಿ ಅವರು ಇದೇ ಸಿನಿಮಾದ ಸೆಟ್​ನಲ್ಲಿ ಪುಟ್ಟ ಮಗುವಿನ ಜೊತೆ ಬಿಸ್ಕೆಟ್​ ಕೊಟ್ಟು ಚಿಪ್ಸ್​ ಕೇಳುತ್ತಿದ್ದ ಮುದ್ದಾದ ವಿಡಿಯೋ ಒಂದು ಇತ್ತೀಚೆಗೆ ವೈರಲ್​ ಆಗಿತ್ತು. ಇನ್ನು ಕೊನೆಯ ಹಂತದ ಚಿತ್ರೀಕರಣದಲ್ಲಿ ಸಿನಿಮಾದ ಟೈಟಲ್​ ಟ್ರ್ಯಾಕ್​ ಅನ್ನು ಚಿತ್ರೀಕರಿಸಲಾಗಿದೆ. ಸಿನಿಮಾ ಮುಕ್ತಾಯವಾಗಿರವ ಹಿನ್ನಲೆಯಲ್ಲೇ ಚಿತ್ರತಂಡ ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಚಾಲನೆ ನೀಡಿದೆ.

top videos
    First published: