ಟಗರು ಚೆಲುವೆಗೆ ರೋರಿಂಗ್ ಸ್ಟಾರ್ ಸಾಥ್: ಸಮುದ್ರಂನಲ್ಲಿ ಸೈಕೋ ಸುಂದರಿಯ ಹೊಸ ಸಾಹಸ

ಮಾದಕ ಚೆಲುವೆ ಅನಿತಾ ಭಟ್ ಈಗ ಸಮುದ್ರಂ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಇತ್ತೀಚೆಗಷ್ಟೇ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಸಮುದ್ರಂ ಚಿತ್ರದ (Samudram Movie Poster) ಪೋಸ್ಟರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಸಮುದ್ರಂ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್ ಮಾಡಿದ ಶ್ರೀಮುರಳಿ

ಸಮುದ್ರಂ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್ ಮಾಡಿದ ಶ್ರೀಮುರಳಿ

  • Share this:
ಸೈಕೋ ಚಿತ್ರದ ಮೂಲಕ ಸ್ಯಾಂಡಲ್‍ವುಡ್ (Sandalwood) ಡೆಬ್ಯೂ ಮಾಡಿದ ನಟಿ ಅನಿತಾ ಭಟ್ (Anita Bhat). ಆ ಬಳಿಕ ನಗೆ ಬಾಂಬ್, ಜೂಟಾಟ, ರಾಜ್ ಬಹದ್ದೂರ್, ಟಗರು, ಶಟರ್ ದುಲಾಯಿ, ಹೊಸ ಕ್ಲೈಮ್ಯಾಕ್ಸ್, ಡೇಸ್ ಆಫ್ ಬೋರಾಪುರ ಹಾಗೂ ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆದ ಕಲಿವೀರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅವರು ನಟಿಸಿರುವ ಬಳೇಪೇಟೆ, ಬೆಂಗಳೂರು 69 ಸೇರಿದಂತೆ ಇನ್ನೂ ಕೆಲ ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ. ಇದರ ನಡುವೆಯೇ ನಟಿ ಅನಿತಾ ಭಟ್ ಈಗ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಹೌದು, ಮಾದಕ ಚೆಲುವೆ ಅನಿತಾ ಭಟ್ ಈಗ ಸಮುದ್ರಂ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಇತ್ತೀಚೆಗಷ್ಟೇ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಸಮುದ್ರಂ ಚಿತ್ರದ (Samudram Movie Title Poster) ಟೈಟಲ್​ ಪೋಸ್ಟರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ವಿಶೇಷ ಅಂದರೆ ಮುಹೂರ್ತಕ್ಕೂ ಮುನ್ನ ಪೋಸ್ಟರ್, ಟೈಟಲ್ ರಿವೀಲ್ ಮಾಡುವುದು ಸಾಮಾನ್ಯ. ಆದರೆ ಸಮುದ್ರಂ ಚಿತ್ರತಂಡ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಆ ಬಳಿಕ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದೆ. ನಿರ್ಮಾಣದ ಜೊತೆಗೆ ಅನಿತಾ ಭಟ್, ನಾಯಕಿಯಾಗಿಯೂ ಸಮುದ್ರಂ ಚಿತ್ರದಲ್ಲಿ ನಟಿಸಿದ್ದಾರೆ.
View this post on Instagram


A post shared by Anita Bhat (@iamanitabhat)


ಕೊರೋನಾ ಕಾಲದಲ್ಲಿ ಆಸ್ಥೆಯಿಂದ ತಯಾರಿ ನಡೆಸಿ, ಕೊರೋನಾ ಅಬ್ಬರ ತುಸು ತಗ್ಗುತ್ತಲೇ ಈ ಸಿನಿಮಾದ ಚಿತ್ರೀಕರಣವನ್ನೂ ಪೂರ್ಣಗೊಳಿಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಸಿನಿಮಾ ಮುಹೂರ್ತದ ಆಸುಪಾಸಲ್ಲಿಯೇ ಟೈಟಲ್ ಲಾಂಚ್ ಮಾಡೋದು ರೂಢಿ. ಆದರೆ ಈ ಚಿತ್ರ ತಂಡ ಮಾತ್ರ ಆ ಪದ್ಧತಿಯನ್ನು ಬ್ರೇಕ್ ಮಾಡಿದೆ. ಚಿತ್ರೀಕರಣವೆಲ್ಲ ಮುಗಿದ ನಂತರ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಅಂದಹಾಗೆ, ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್, ನಿರ್ಮಾಣ ಮಾಡಿರೋ ಚಿತ್ರ. ಇದಕ್ಕೆ ಅನಿತಾ ಭಟ್ ಕ್ರಿಯೇಷನ್ಸ್, ಡಾಟ್ ಟಾಕೀಸ್ ಸಹಯೋಗವಿದೆ. ಅನಿತಾ ಭಟ್ ಮತ್ತು ಶಿವಧ್ವಜ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜ್ ಕಿಶೋರ್ ಮತ್ತು ಸ್ವಾತಿ ಬಂಗೇರ ಜೋಡಿ ಮತ್ತೆರಡು ಪ್ರಧಾನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಇದನ್ನೂ ಓದಿ: Ganesh Chaturthi: ಪತಿ ನಿಖಿಲ್​ ಕುಮಾರಸ್ವಾಮಿ ಜೊತೆ ಗಣಪನ ಪೂಜೆ ಮಾಡಿದ ರೇವತಿ: ಇಲ್ಲಿವೆ ಲೆಟೆಸ್ಟ್​ ಫೋಟೋಗಳು..!

ಸಮುದ್ರಂ ಎಂಬ ಶೀರ್ಷಿಕೆಯೇ ಕಥೆಯ ಜಾಡನ್ನು ಕಡಲ ಕಿನಾರೆಯತ್ತ ಸರಿಸುವಂತಿದೆ. ಅದು ನಿಜವೂ ಹೌದು. ಯಾಕೆಂದರೆ, ಇದು ಕಡಲ ಕಿನಾರೆಯ ನಿಗೂಢ ಕಥಾ ಹಂದರವನ್ನೊಳಗೊಂಡಿರುವ ಚಿತ್ರ. ಕಡಲೆಂದರೆ ಬಹುತೇಕರ ಮನಸ್ಸು ನೀಲಾಕಾಶದಂತೆ ಪ್ರಪುಲ್ಲವಾಗುತ್ತದಲ್ಲಾ, ಅದರ ಕಿನಾರೆಗಳಲ್ಲಿ ಮೈಚಾಚಿಕೊಂಡ ಭೂಗತ ಚಟುವಟಿಕೆಗಳ ಬಗ್ಗೆ ಹೇಳ ಹೊರಟಿದೆ ಸಮುದ್ರಂ ಚಿತ್ರತಂಡ. ಸಮುದ್ರಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ರಾಘವ ರಿಷಿ, ಶಿವಧ್ವಜ್ ಇಲ್ಲಿ ಡಾನ್ ಪಾತ್ರವನ್ನು ನಿರ್ವಹಿಸಿದ್ದರೆ, ಅನಿತಾ ಭಟ್ ಥರ ಥರದ ಶೇಡ್‍ಗಳಿರೋ ಸವಾಲಿನ ಪಾತ್ರವನ್ನು ನಿಭಾಯಿಸಿದ್ದಾರೆ. ಮುಗ್ಧ ಗೃಹಿಣಿಯಾಗಿ, ಅಂದರ್ಭಕ್ಕೆ ಅನುಸಾರ ರೆಬೆಲ್ ಆಗಿ ಈ ಸಮಾಜದೆದುರು ನಿಲ್ಲುವ ದಿಟ್ಟ ಹೆಣ್ಣಾಗಿಯೂ ಅವರು ನಟಿಸಿದ್ದಾರೆ.

ಇದನ್ನೂ ಓದಿ: Kareena Kapoor- Saif Ali Khan ಮನೆಯಲ್ಲಿ ಗಣಪತಿ ಹಬ್ಬದ ಸಂಭ್ರಮ

ಉಡುಪಿ, ಮಲ್ಪೆ, ಬ್ರಹ್ಮಾವರ, ಸಕಲೇಶಪುರ ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ ಶರವೇಗದಲ್ಲಿ ಸಮುದ್ರಂ ಚಿತ್ರೀಕರಣ ಮುಗಿಸಿಕೊಳ್ಳಲಾಗಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಿನ ಪ್ರಚಾರದ ಕೆಲಸಗಳಿಗೂ ಚಾಲನೆ ಸಿಕ್ಕಿದೆ. ಈ ಚಿತ್ರಕ್ಕೆ ರಾಘವ ರಿಶಿ ನಿರ್ದೇಶನದ ಜತೆಗೆ ಆಕಾಶ್ ಅವರ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ, ಸಂಕಲನ ಮಾತ್ರವಲ್ಲದೆ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ರಿಷಿಕೇಶ್ ನಿಭಾಯಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಮುದ್ರಂನ ಇನ್ನೊಂದಷ್ಟು ಅಚ್ಚರಿದಾಯಕ ಅಂಶಗಳು ರಿವೀಲ್ ಆಗಲಿದ್ದು, ಬಿಡುಗಡೆ ದಿನಾಂಕವೂ ಅನೌನ್ಸ್ ಆಗಲಿದೆ.
Published by:Anitha E
First published: