ಮುದ್ದು ಮಗು ಜತೆ ನಟ ಶ್ರೀಮುರಳಿ ಆಟ: ಇಲ್ಲಿದೆ ಕ್ಯೂಟ್​ ವಿಡಿಯೋ

ನಿರ್ದೇಶಕ ಮಹೇಶ್​ ಅವರು ಆ್ಯಕ್ಷನ್​ ಕಟ್ ಹೇಳುತ್ತಿರುವ ಮದಗಜ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಚಿತರೀಕರಣದ ಸೆಟ್​ನಲ್ಲಿ ದುಶ್ಯಂತ್ ಎಂಬ ಮಗು ಜತೆ ತಮಾಷೆ ಮಾತಾಡುತ್ತಾ ಶ್ರೀಮುರಳಿ ಸಖತ್ತಾಗಿ ಆಟವಾಗಿದ್ದಾರೆ.

ಮಗುವಿನ ಜೊತೆ ನಟ ಶ್ರೀಮುರಳಿ

ಮಗುವಿನ ಜೊತೆ ನಟ ಶ್ರೀಮುರಳಿ

  • Share this:
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಮಕ್ಕಳ ಜೊತೆ ಮಕ್ಕಳಾಗಿ ಬಿಡುತ್ತಾರೆ. ಅವರು ಮಕ್ಕಳೊಂದಿಗೆ ಇರುವ ವಿಡಿಯೋ ಅಥವಾ ಫೋಟೋ ನೋಡಿದರೆ ಸಾಕು. ಎಷ್ಟೇ ಹಠ ಮಾಡುವ ಮಕ್ಕಳಿದ್ದರೂ ಅವರನ್ನು ತಮ್ಮ ಮಾತುಗಳಿಂದಲೇ ನೈಸ್​ ಮಾಡಿ ಬಿಡುತ್ತಾರೆ. ಈ ಹಿಂದೆಯೂ ತಮ್ಮ ಮಕ್ಕಳ ಜೊತೆಗಿನ ವಿಡಿಯೋ ಹಾಗೂ ಕ್ರೇಜಿ ಫೋಟೋಗಳನ್ನು ಶ್ರೀಮುರಳಿ ಹಾಗೂ ವಿದ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗಲೂ ಸಹ ಶ್ರೀ ಮುರಳಿ ಅವರ ಒಂದು ಕ್ಯೂಟ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಶೂಟಿಂಗ್ ಸೆಟ್​ನಲ್ಲಿರುವ ಮಗುವಿನ ಜೊತೆ ಮುರಳಿ ತಮಾಷೆ ಮಾಡುತ್ತಾ ಆಟವಾಡುತ್ತಿದ್ದಾರೆ. 

ನಿರ್ದೇಶಕ ಮಹೇಶ್​ ಅವರು ಆ್ಯಕ್ಷನ್​ ಕಟ್ ಹೇಳುತ್ತಿರುವ ಮದಗಜ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಚಿತರೀಕರಣದ ಸೆಟ್​ನಲ್ಲಿ ದುಶ್ಯಂತ್ ಎಂಬ ಮಗು ಜತೆ ತಮಾಷೆ ಮಾತಾಡುತ್ತಾ ಶ್ರೀಮುರಳಿ ಸಖತ್ತಾಗಿ ಆಟವಾಗಿದ್ದಾರೆ.
ಮದಗಜ ಚಿತ್ರದ ಶೂಟಿಂಗ್ ಸೆಟ್​ನಲ್ಲಿ ಮಗುವಿನ ಜತೆ ಶ್ರೀಮುರಳಿ ಆಟವಾಡಿರುವ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಶ್ರೀಮುರಳಿ ಅವರು ಬಿಸ್ಕೆಟ್​ ಕೊಟ್ಟು ಮಗುವಿನ ಬಳಿ ಚಿಪ್ಸ್​ ಕೇಳುತ್ತಿದ್ದಾರೆ. ಮೊದಲಿಗೆ ಕೊಡುವುದಿಲ್ಲ ಎನ್ನುವ ಆ ಮಗು, ನಂತರ ಶ್ರೀಮುರಳಿ ಅವರ ಮಾತು ಕೇಳಿ ಅವರಿಗೆ ಚಿಪ್ಸ್​ ತಿನ್ನಿಸುತ್ತೆ. ನಂತರ ಮುರಳಿ ಮಗುವಿನ ಜೊತೆ ಮಾತನಾಡುತ್ತಾ ಅದರ ಕಾಲು ಒತ್ತುತ್ತಾರೆ. ಮಕ್ಕಳ ಮುಂದೆ ತಾನೊಬ್ಬ ಸ್ಟಾರ್ ಎನ್ನುವುದನ್ನೂ ಮರೆತ ನಟನ ವರ್ತನೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ: Weight Loss: ಹೊಸ ಸಿನಿಮಾಗಾಗಿ 15 ಕೆಜಿ ತೂಕ ಇಳಿಸಿಕೊಂಡ ನಟ ಸಿಂಬುರೋರಿಂಗ್​ ಸ್ಟಾರ್ ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್​ ಅಭಿನಯದ ಮದಗಜ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿದೆ. ಕೊರೋನಾ ಎರಡನೇ ಅಲೆಯಿಂದಾಗಿ ಆಗಿದ್ದ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಚಿತ್ರತಂಡ ಶೂಟಿಂಗ್​ ಆರಂಭಿಸಿದೆ. ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್​ ನಿರ್ದೇಶನದ ಹಾಗೂ ಉಮಾಪತಿ ನಿರ್ಮಾಣದ ಸಿನಿಮಾ ಮದಗಜ ಚಿತ್ರೀಕರಣ ಜ.22ರಿಂದ ಆರಂಭವಾಗಿದೆ. ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಿರುವ ಬಗ್ಗೆ ನಿರ್ದೇಶಕ ಮಹೇಶ್ ಅವರೇ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಸುದೀಪ್​ ಮಾಡಿದ ತಪ್ಪು ಹುಡುಕಿ ಬುದ್ಧಿ ಹೇಳಿದ ನೆಟ್ಟಿಗ: ಕಿಚ್ಚನ ಪ್ರತಿಕ್ರಿಯೆ ಹೀಗಿದೆ..!

ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್​ ಅಭಿನಯದ ಮದಗಜ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲಾಗಿತ್ತು. ಹಾಡಿನ ಚಿತ್ರೀಕರಣಕ್ಕೆಂದು ವಿಭಿನ್ನವಾದ ಮೂರು ಸೆಟ್​ಗಳನ್ನು ನಿರ್ಮಿಸಲಾಗಿದೆ ಎಚ್ಎಂಟಿ ಮೈದಾನದಲ್ಲಿ ನಿರ್ಮಿಸಿದ್ದು, ಅಲ್ಲಿ ಸಿನಿಮಾದ ಟೈಟಲ್ ಟ್ರ್ಯಾಕ್​ ಶೂಟಿಂಗ್​ ಆರಂಭವಾಗಿತ್ತು.  ಈ ಹಾಡು ಸಿನಿಮಾದ ಹೆಸರಿನಂತೆಯೇ ಆನೆಗಳ ಥೀಮ್​ ಮೇಲೆ ಮಾಡಲಾಗುತ್ತಿದೆ.ಈ ಸಿನಿಮಾದಲ್ಲಿ ಟಾಲಿವುಡ್​ ನಟ ಜಗಪತಿ ಬಾಬು ಅವರೂ ನಟಿಸಿದ್ದಾರೆ.ಈ ಸಿನಿಮಾದಲ್ಲಿ ಶ್ರೀಮುರಳಿ ಸಖತ್ ರಗಡ್​ ಹಾಗೂ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.ಟೈಟಲ್​ ಟ್ರ್ಯಾಕ್​ ಶೂಟಿಂಗ್​ ನಂತರ ಮೈಸೂರಿನ ಸುತ್ತಮುತ್ತ ಮತ್ತೊಂದು ಹಾಡಿನ ಚಿತ್ರೀಕಣರ ನಡೆಯಲಿದೆಯಂತೆ.ಕಡೆಯದಾಗಿ ಮೇಕೆದಾಟುವಿನಲ್ಲಿ ಕ್ಲೈಮ್ಯಾಕ್ಸ್​ ಶೂಟಿಂಗ್​ ನಡೆಯಲಿದೆ.ಇದನ್ನೂ ಓದಿ: Pawan Kalyan: ಭೀಮ್ಲಾ ನಾಯಕ್​ ಪಂಚೆ ಎತ್ತಿ ಕಟ್ಟುವ ಸ್ಟೈಲ್​ಗೆ ಅಭಿಮಾನಿಗಳು ಫಿದಾ..!ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Anitha E
First published: