Viral Video: ಶ್ರೀಮುರಳಿ ಕೆನ್ನೆಗೆ ಬಾರಿಸಿದ ರೌಡಿ ಬೇಬಿ: ವಿಡಿಯೋ ಇಲ್ಲಿದೆ..!
SriiMuralis Videos: ತಾನಾಯ್ತು ತನ್ನ ಕುಟುಂಬವಾಯ್ತು ಅಂತ ಇರುವ ನಟ ಶ್ರೀಮುರಳಿ ಅವರಿಗೆ ರೌಡಿ ಬೇಬಿ ಕೆನ್ನೆಗೆ ಬಾರಿಸಿದ್ದಾರೆ. ಏಟು ತಿಂದರೂ ನಗುತ್ತಾ ಸುಮ್ಮನಾದ ಮುರಳಿ ಅವರ ವಿಡಿಯೋ ಇಲ್ಲಿದೆ ನೋಡಿ.
ರೋರಿಂಗ್ ಸ್ಟಾರ್ ಶ್ರೀಮುರಳಿ ಸದಾ ತಮ್ಮ ಸಿನಿಮಾ ಹಾಗೂ ಕುಟುಂಬ ಅಂತ ಇರುವ ವ್ಯಕ್ತಿ. ಚಿತ್ರೀಕರಣದಿಂದ ಸಮಯದ ಸಿಕ್ಕರೆ ಸಾಕು ಮಕ್ಕಳೊಂದಿಗೆ ಕಾಲ ಕಳೆಯೋಕೆ ಬಯಸುತ್ತಾರೆ. ಲಾಕ್ಡೌನ್ನಲ್ಲಂತೂ ಕೇಳುವ ಹಾಗೇ ಇಲ್ಲ. ಮನೆಯಲ್ಲಿ ಮಕ್ಕಳೊಂದಿಗೆ ಮಗುವಾಗಿದ್ದಾರೆ ಈ ನಟ.
ತಾನಾಯ್ತು ತನ್ನ ಕುಟುಂಬವಾಯ್ತು ಅಂತ ಇರುವ ನಟ ಶ್ರೀಮುರಳಿ ಅವರಿಗೆ ರೌಡಿ ಬೇಬಿ ಕೆನ್ನೆಗೆ ಬಾರಿಸಿದ್ದಾರೆ. ಏಟು ತಿಂದರೂ ನಗುತ್ತಾ ಸುಮ್ಮನಾದ ಮುರಳಿ ಅವರ ವಿಡಿಯೋ ಇಲ್ಲಿದೆ ನೋಡಿ.
ಶ್ರೀಮುರಳಿ ಅವರ ಮನೆಯಲ್ಲಿ ರೌಡಿ ಬೇಬಿ ಇದ್ದಾಳೆ. ಅವಳೆಂದರೆ ಶ್ರೀಮುರಳಿ ಅವರೇ ಹೆದರುತ್ತಾರಂತೆ. ಅದು ಮತ್ತಾರೂ ಅಲ್ಲ ಅವರ ಮಗಳು ಅತೀವ. ಮಗಳೆಂದರೆ ಅಪ್ಪನಿಗೆ ಜೀವ. ಅವಳಿಗೆ ಸ್ವಲ್ಪ ನೋವಾದರೂ ಸಹಿಸೋದಿಲ್ಲವಂತೆ.
ಮಗಳು ಅತೀವಾಳ ಜಡೆ ಹಿಡಿದು ಮೀಸೆ ಮಾಡಿಕೊಂಡ ಅಪ್ಪನಿಗೆ ಕೆನ್ನೆಗೆ ಬಾರಿಸಿದ್ದಾಳೆ ರೌಡಿ ಬೇಬಿ. ಈ ಹಳೇ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿದ್ಯಾ, ಮಗಳನ್ನು ಪ್ರೀತಿಯಿಂದ ರಾಕ್ಷಸಿ ತಲ್ಲಿ ಎಂದು ಕರೆದಿದ್ದಾರೆ.
ಶ್ರೀಮುರಳಿ ಹಾಗೂ ವಿದ್ಯಾ ಅವರಿಗೆ ಇಬ್ಬರು ಮಕ್ಕಳು. ಅಗಸ್ತ್ಯ ಹಾಗೂ ಅತೀವಾ. ಮುರಳಿ ಅವರಿಗೆ ಮಕ್ಕಳೊಂದಿಗೆ ಕಾಲ ಕಳೆಯುವುದು ಎಂದರೆ ತುಂಬಾ ಇಷ್ಟ. ಚಿತ್ರೀಕರಣ ಇಲ್ಲ ಅಂದ್ರೆ ಸಾಕು ಪತ್ನಿ ಹಾಗೂ ಮಕ್ಕಳೊಂದಿಗೆ ಶಾಪಿಂಗ್ ಅಂತ ಸುತ್ತಾಡಲು ಹೊರಗಡೆ ಹೋಗುತ್ತಾರೆ. ಅಷ್ಟೇಅಲ್ಲ ಮಕ್ಕಳಿಗೆ ಸ್ವಿಮ್ಮಿಂಗ್ ಕಲಿಸೋದು, ಅವರೊಂದಿಗೆ ಆಡೋದು ಮಾಡುತ್ತಾರೆ. ಇಲ್ಲಿವೆ ಅವರ ಕೆಲವು ಕ್ಯೂಟ್ ವಿಡಿಯೋಗಳು.