Sriimurali: ದಸರಾ ಹಬ್ಬಕ್ಕೆ ಭರ್ಜರಿ ಸುದ್ದಿ ಕೊಟ್ಟ ಮದಗಜ ಚಿತ್ರತಂಡ..!

ಮದಗಜ ಚಿತ್ರತಂಡದ ಕಡೆಯಿಂದ ಸಿನಿಮಾಗೆ ಕುರಿತ ಅಪ್ಡೇಟ್​ಗಳು ಆಗಾಗ ಸಿಗುತ್ತಲೇ ಇರುತ್ತವೆ. ಹಾಡಿನ ಚಿತ್ರೀಕರಣ, ಸಿನಿಮಾ ಶೂಟಿಂಗ್​ ಮುಕ್ತಾಯವಾದ ವಿಷಯ... ಹೀಗೆ ನಿರ್ದೇಶಕ ಮಹೇಶ್ ಅವರು ಸಿನಿಪ್ರಿಯರವರೆಗೆ ಮಟ್ಟಿಸುತ್ತಲೇ ಇರುತ್ತಾರೆ. ಈಗಲೂ ಸಹ ಒಂದು ಹೊಸ ಅಪ್ಡೇಟ್​ ಹಂಚಿಕೊಂಡಿದ್ದಾರೆ.

ಮದಗಜ ಸಿನಿಮಾದ ಥಿಯರಿಟಿಕಲ್​ ಟೀಸರ್ ರಿಲೀಸ್​

ಮದಗಜ ಸಿನಿಮಾದ ಥಿಯರಿಟಿಕಲ್​ ಟೀಸರ್ ರಿಲೀಸ್​

  • Share this:
ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್​  (Director Mahesh) ನಿರ್ದೇಶನದ ಮದಗಜ ಸಿನಿಮಾದ (Madhagaja Kannada Movie) ಕನ್ನಡದ ಜೊತೆ ತೆಲುಗಿನಲ್ಲೂ ರಿಲೀಸ್ ಆಗಲಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ (Roaring Star Sriimurali) ಅಭಿನಯದ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಸಿನಿಮಾ ರಿಲೀಸ್​ಗೆ ತಯಾರಿ ನಡೆಸುತ್ತಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಮದಗಜ ಸಿನಿಮಾವನ್ನು ನಿರ್ಮಾಪಕ ಉಮಾಪತಿ ಅವರು ತಮ್ಮ ಉಮಾಪತಿ ಫಿಲಂಸ್​ ಬ್ಯಾನರ್​ ಅಡಿ ನಿರ್ಮಿಸುತ್ತಿದ್ದಾರೆ. ರಾಬರ್ಟ್​ ನಂತರ ಉಮಾಪತಿ ಅವರ ನಿರ್ಮಾಣದ ಮದಗಜ ರಿಲೀಸ್ ಆಗುತ್ತಿದೆ. ರಾಬರ್ಟ್​ ಚಿತ್ರದಂತೆಯೇ ಮದಗಜ ಸಹ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿದೆ ಅನ್ನೋ ಆಶಯ ಚಿತ್ರತಂಡದ್ದು. ಎಲ್ಲ ಸರಿಯಾಗಿ ಇದ್ದಿದ್ದರೆ ಈಗಾಗಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ಬಿಡುಗಡೆ ದಿನಾಂಕ ಮುಂದೂಡಲಾಯಿತು. 

ಮದಗಜ ಚಿತ್ರತಂಡದ ಕಡೆಯಿಂದ ಸಿನಿಮಾಗೆ ಕುರಿತ ಅಪ್ಡೇಟ್​ಗಳು ಆಗಾಗ ಸಿಗುತ್ತಲೇ ಇರುತ್ತವೆ. ಹಾಡಿನ ಚಿತ್ರೀಕರಣ, ಸಿನಿಮಾ ಶೂಟಿಂಗ್​ ಮುಕ್ತಾಯವಾದ ವಿಷಯ... ಹೀಗೆ ನಿರ್ದೇಶಕ ಮಹೇಶ್ ಅವರು ಸಿನಿಪ್ರಿಯರವರೆಗೆ ಮಟ್ಟಿಸುತ್ತಲೇ ಇರುತ್ತಾರೆ. ಈಗಲೂ ಸಹ ಒಂದು ಹೊಸ ಅಪ್ಡೇಟ್​ ಹಂಚಿಕೊಂಡಿದ್ದಾರೆ.






ಹೌದು, ಸಿನಿಮಾದ ಥಿಯರಿಟಿಕಲ್​ ಟೀಸರ್ ಅನ್ನು ದಸರಾ ಹಬ್ಬದ ಪ್ರಯುಕ್ತ ರಿಲೀಸ್​ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಕ್ಟೋಬರ್ 14ರಂದು ಸಂಜೆ 5:05 ಗಂಟೆಗೆ ಆನಂದ್ ಆಡಿಯೋ YouTube ಚಾನಲ್​​ನಲ್ಲಿ ಟೀಸರ್ ರಿಲೀಸ್​ ಆಗಲಿದೆ.  ಈ ವಿಷಯವನ್ನು ನಿರ್ದೇಶಕ ಮಹೇಶ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.




ಮದಗಜ ಸಿನಿಮಾ ಆಗಸ್ಟ್​ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಕೊರೋನಾ ಆತಂಕದಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಸದ್ಯ ಇನ್ನು ಚಿತ್ರತಂಡ ರಿಲೀಸ್ ಡೇಟ್​ ಪ್ರಕಟಿಸಿಲ್ಲ. ಆದರೆ ಡಿಸೆಂಬರ್​ ಹೊತ್ತಿಗೆ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಈ ಸಿನಿಮಾದ ಹಾಡು ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ನಟಿ ಆಶಿಕಾ ರಂಗನಾಥ್ ಅವರು ಈ ಸಿನಿಮಾದಲ್ಲಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದಂದು ರಿಲೀಸ್​ ಆಗಿದ್ದ ಪೋಸ್ಟರ್​ ಅಭಿನಿಮಾಗಳ ಮನಸ್ಸು ಗೆದ್ದುಕೊಂಡಿತ್ತು.

ಇದನ್ನೂ ಓದಿ: Madhagaja Teaser: ಧೂಳೆಬ್ಬಿಸಿದ ಮದಗಜ ಟೀಸರ್: ಫಸ್ಟ್ ಲುಕ್ ಟೀಸರ್​ನಲ್ಲಿ ಶ್ರೀಮುರಳಿ ರೋರಿಂಗ್

ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಮದಗಜ ಸಿನಿಮಾದ​ ಫಸ್ಟ್​ ಲುಕ್​ ಟೀಸರ್​ ಅನ್ನು ಲಾಂಚ್​ ಮಾಡಲಾಗಿತ್ತು. ‘ಉಗ್ರಂ’ ಸಿನಿಮಾದ ಮೂಲಕ, ನಟ ಶ್ರೀಮುರಳಿ ಅವರ ಸಿನಿ ಜೀವನಕ್ಕೆ ತಿರುವು ಸಿಕ್ಕಿತ್ತು. ಆ ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ನೀಲ್​, ‘ಮದಗಜ’ ಚಿತ್ರದ ಲುಕ್​ ರಿವೀಲ್​ ಮಾಡಿದ್ದರು. ವಿಶೇಷ ಎಂದರೆ ಇದುವರೆಗೂ ಕಾಣಿಸಿಕೊಂಡಿರದ ಹೊಸ ಲುಕ್‌ನಲ್ಲಿ ಮುರಳಿ ಇಲ್ಲಿ ಮಿಂಚಿದ್ದಾರೆ. ಧೂಳೆಬ್ಬಿಸುವ ಖಡಕ್ ಡೈಲಾಗ್​ನೊಂದಿಗೆ ಮುರಳಿ ಅಭಿಮಾನಿಗಳೆದುರು ಮತ್ತೆ ಬಂದಿದ್ದಾರೆ.

ಡಿಸೆಂಬರ್​ 17ರಂದು ರಿಲೀಸ್​ ಆದ ಮದಗಜ ಚಿತ್ರದ 1:42 ಸೆಕಂಡ್ ಇರುವ ಟೀಸರ್​, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಯೂ ಟ್ಯೂಬ್​ನಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿತು. ನಂತರ ಟೀಸರ್​ಗೆ 3 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿತ್ತು. ಹೊಸ ವರ್ಷಕ್ಕೆಂದು ಕಳೆದ ಜನವರಿಯಲ್ಲಿ ಮದಗಜ ಚಿತ್ರತಂಡ ತೆಲುಗು ಪ್ರೇಕ್ಷಕರಿಗೆ ತೆಲುಗು ಟೀಸರ್ ಅನ್ನು ಉಡುಗೊರೆಯಾಗಿ ನೀಡಿತ್ತು. ಈ ತೆಲುಗು ಟೀಸರ್​ಗೆ ಶ್ರೀಮುರಳಿ ಅವರೇ ಕಂಠದಾನ ಮಾಡಿದ್ದಾರೆ. ಖಕಡ್​ ವಾಯ್ಸ್​ನಲ್ಲಿ ಹೇಳಿರುವ ಪಂಚಿಗ್ ಡೈಲಾಗ್ಸ್​ಗೆ ಟಾಲಿವುಡ್​ ಪ್ರೇಕ್ಷಕರೂ ಫಿದಾ ಆಗಿದ್ದಾರೆ.

ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿರುವ ಭಾಗ ಅದ್ಭುತವಾಗಿ ಮೂಡಿಬಂದಿದ್ದು, ಸುಡುವ ಹೆಣಗಳ ಮಧ್ಯೆ ಮುರಳಿ ಕೂತು ಚಿಲ್ಲಂ ಸೇದುವ ಸ್ಲೋ ಮೋಶನ್ ಶಾಟ್ ಅಂತೂ ಅಭಿಮಾನಿಗಳಿಗೆ ಹಬ್ಬ. ಮದಗಜ ಚಿತ್ರವನ್ನು ವಾರಣಾಸಿ ಸೇರಿದಂತೆ ಮೈಸೂರು, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ: Srimurali-Madhagaja: ಶ್ರೀಮುರಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ಮುಕ್ತಾಯ: ಸಂಭ್ರಮದಲ್ಲಿ ಚಿತ್ರತಂಡ..!

ಮದಗಜ ಚಿತ್ರದ ಮೊದಲ ಕಂತು ವಾರಾಣಸಿಯಲ್ಲಿ ಮುಗಿಸಿದ್ದ ಚಿತ್ರತಂಡ, ಮೈಸೂರಿನಲ್ಲಿ ಎರಡನೇ ಹಂತ ಮುಗಿಸಿ, ಈಗ ಮೂರನೇ ಹಂತದ ಚಿತ್ರೀಕರಣ ಆರಂಭಿಸಿತ್ತು. ಇತ್ತೀಚೆಗಷಟೆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ನಿರತವಾಗಿದೆ. ರವಿ ಬಸ್ರೂರ್ ಸಂಗೀತ ನೀಡುತ್ತಿದ್ದು ನವೀನ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದ ಬಜೆಟ್ ಬರೋಬ್ಬರಿ 20 ಕೋಟಿಗಿಂತ ಜಾಸ್ತಿ ಇರಬಹುದು ಎಂದು ನಿರ್ದೇಶಕರು ಹೇಳಿದ್ದಾರೆ. ಮಹೇಶ್ ಕುಮಾರ್ ಇದಕ್ಕೂ ಮುನ್ನ ಸತೀಶ್ ನೀನಾಸಂ ರವರ ಅಯೋಗ್ಯ ಎಂಬ ಹಿಟ್ ಸಿನಿಮಾ ಕೊಟ್ಟಿದ್ದರು. ಇವರು ಯೋಗರಾಜ್ ಭಟ್ಟರ ಜೊತೆ ಸಹ ಕೆಲಸ ಮಾಡಿದ್ದಾರೆ.
Published by:Anitha E
First published: