HOME » NEWS » Entertainment » SRII MURALI STARRING PRASHANT NEEL LEAD BAGHEERA DIRECTOR DR SURI DETAILS HERE VB

Bagheera Movie: ಪ್ರಶಾಂತ್ ನೀಲ್ ಚಿತ್ರಕಥೆ, ಮುರಳಿ ನಾಯಕನಾಗಿರುವ ಬಘೀರ ಸಿನಿಮಾ ನಿರ್ದೇಶಕ ಡಾ. ಸೂರಿ ಯಾರು ಗೊತ್ತೇ?

ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಮತ್ತೆ ಒಂದು ದೊಡ್ಡ ಚಿತ್ರಕ್ಕೆ ನಿರ್ದೇಶನ ಮಾಡಲು ಹೊರಟಿದ್ದಾರೆ ಸೂರಿ. ಪ್ರಶಾಂತ್ ನೀಲ್ ಬಘೀರ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ.

news18-kannada
Updated:December 17, 2020, 2:13 PM IST
Bagheera Movie: ಪ್ರಶಾಂತ್ ನೀಲ್ ಚಿತ್ರಕಥೆ, ಮುರಳಿ ನಾಯಕನಾಗಿರುವ ಬಘೀರ ಸಿನಿಮಾ ನಿರ್ದೇಶಕ ಡಾ. ಸೂರಿ ಯಾರು ಗೊತ್ತೇ?
Bagheera Movie Director Dr Suri
  • Share this:
ಸ್ಯಾಂಡಲ್​ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಬೆಳಗ್ಗೆಯಷ್ಟೇ 'ಮದಗಜ' ಚಿತ್ರತಂಡ, ಸಿನಿಮಾ ಟೀಸರ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಭರ್ಜರಿಯಾಗಿ ಶುಭ ಕೋರಿದೆ. ಇದರ ಬೆನ್ನಲ್ಲೇ ಅವರ ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ. ಹೌದು, ಕೆಜಿಎಫ್ ಖ್ಯಾತಿಯ ಹೊಂಬಾಳೆ ಫಿಲಂಸ್ ಬ್ಯಾನರ್ ಇತ್ತೀಚೆಗಷ್ಟೇ ಪ್ರಭಾಸ್ ಅಭಿನಯದ 'ಸಲಾರ್' ಎಂಬ ಸಿನಿಮಾ ಅನೌನ್ಸ್ ಮಾಡಿತ್ತು. ಇದೀಗ ಮುರಳಿ ಅಭಿನಯದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ. ಈ ಚಿತ್ರಕ್ಕೆ 'ಬಘೀರ' ಎಂದು ಹೆಸರಿಡಲಾಗಿದ್ದು, ಪ್ರಶಾಂತ್ ನೀಲ್ ಚಿತ್ರಕಥೆ ಬರೆಯಲಿದ್ದಾರೆ. ಆದರೆ, ನಿರ್ದೇಶನ ಇವರದ್ದಲ್ಲ. 'ಬಘೀರ' ಸಿನಿಮಾವನನ್ನು ಡಾ. ಸೂರಿ ಎಂಬವರು ನಿರ್ದೇಶನ ಮಾಡುತ್ತಿದ್ದಾರೆ.

ಚಂದನವನದ ಸಿನಿ ಪ್ರಿಯರು ಈ ಹೆಸರನ್ನು ಅಷ್ಟೊಂದು ಕೇಳಿರಲಿಕ್ಕಿಲ್ಲ. ಆದರೆ, ಡಾ. ಸೂರಿ ಅವರದ್ದು ಇದು ಮೊದಲ ಸಿನಿಮಾವೇನಲ್ಲ. ದಂತ ವೈದ್ಯ ವೃತ್ತಿಯಿಂದ ನಿರ್ದೇಶನದತ್ತ ಜಿಗಿದ ಸೂರಿ ಈ ಹಿಂದೆ 2012 ರಲ್ಲಿ ಲಕ್ಕಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಮ್ಯಾ ನಾಯಕಿಯಾಗಿ ನಟಿಸಿದ್ದರು. ಇವರು ನಿರ್ದೇಶನ ಮಾಡಿದ ಈ ಮೊದಲ ಸಿನಿಮಾವೇ ಹಿಟ್ ಆಗಿತ್ತು.



Bagheera Poster: ಪ್ರಶಾಂತ್ ನೀಲ್ ಚಿತ್ರಕಥೆಯಲ್ಲಿ ಬಘೀರನಾಗಿ ಬಂದ ಶ್ರೀಮುರಳಿ: ಹೊಂಬಾಳೆ ಫಿಲಂಸ್​ನಿಂದ ಹೊಸ ಸಿನಿಮಾ ಘೋಷಣೆ

ನಂತರ 2014 ರಲ್ಲಿ ಸತೀಶ್ ನೀನಾಸಂರನ್ನು ಇಟ್ಟುಕೊಂಡು ಕ್ವಾಟ್ಲೆ ಸತೀಸ ಎಂಬ ಸಿನಿಮಾ ಮಾಡಿದರು. ಇದುಕೂಡ ಚಿತ್ರಮಂದಿರಗಳಲ್ಲಿ ಕೊಂಚ ಸದ್ದುಮಾಡಿತ್ತು. ಬಳಿಕ 2016 ರಲ್ಲಿ ಮಾಂಜಾ ಸಿನಿಮಾವನ್ನು ಆನೌನ್ಸ್ ಮಾಡಿದ್ದರು. ಅನೀಶ್ ತೇಜೇಶ್ವರ್ ಮತ್ತು ದೀಪಾ ಸನ್ನಿಧಿ ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾಕ್ಕೆ ಇನ್ನೂ ಬಿಡುಗಡೆ ಭಾಗ್ಯದೊರೆತಿಲ್ಲ.

ಸದ್ಯ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಮತ್ತೆ ಒಂದು ದೊಡ್ಡ ಚಿತ್ರಕ್ಕೆ ನಿರ್ದೇಶನ ಮಾಡಲು ಹೊರಟಿದ್ದಾರೆ ಸೂರಿ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ. ಡಿಸೆಂಬರ್ 17 ರಂದು ಬೆಳಗ್ಗೆ 11.59ಕ್ಕೆ ಹೊಸ ಸಿನಿಮಾವೊಂದನ್ನು ಘೋಷಿಸುತ್ತಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅನೌನ್ಸ್ ಮಾಡಿತ್ತು. ಅದರಂತೆ ಇಂದು ಹೇಳಿದ ಸಮಯಕ್ಕೆ ಹೊಸ ಚಿತ್ರವನ್ನು ಅನೌನ್ಸ್ ಮಾಡಿದೆ.

Madhagaja Teaser: ಧೂಳೆಬ್ಬಿಸಿದ ಮದಗಜ ಟೀಸರ್: ಫಸ್ಟ್ ಲುಕ್ ಟೀಸರ್​ನಲ್ಲಿ ಶ್ರೀಮುರಳಿ ರೋರಿಂಗ್

ಇದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 8 ನೇ ಸಿನಿಮಾ. ಇದೇ ಮೊದಲ ಬಾರಿಗೆ ಶ್ರೀ ಮುರಳಿ ಅಭಿನಯದ ಸಿನಿಮಾವನ್ನು ವಿಜಯ್ ಕಿರಗಂದೂರ್​​​ ನಿರ್ಮಿಸಿದ್ದಾರೆ. ಸದ್ಯಕ್ಕೆ ಶ್ರೀಮುರಳಿ 'ಮದಗಜ' ಚಿತ್ರದಲ್ಲಿ ಬ್ಯುಸಿ ಇದ್ದು 55 ದಿನಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು 20 ದಿನಗಳಷ್ಟೇ ಬಾಕಿ ಇದ್ದು ಜನವರಿ ವೇಳೆಗೆ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಈ ಸಿನಿಮಾ ನಂತರ ಶ್ರೀಮುರಳಿ 'ಬಘೀರ' ಚಿತ್ರೀಕರಣ ಆರಂಭವಾಗಲಿದೆಯಂತೆ.
Published by: Vinay Bhat
First published: December 17, 2020, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories