ಪಾತ್ರಕ್ಕಾಗಿ ಪಲ್ಲಂಗ: ನಟ-ನಿರ್ದೇಶಕ ಲಾರೆನ್ಸ್​ ವಿರುದ್ಧವೂ ಶ್ರೀರೆಡ್ಡಿ ಆರೋಪ!

news18
Updated:July 13, 2018, 11:34 AM IST
ಪಾತ್ರಕ್ಕಾಗಿ ಪಲ್ಲಂಗ: ನಟ-ನಿರ್ದೇಶಕ ಲಾರೆನ್ಸ್​ ವಿರುದ್ಧವೂ ಶ್ರೀರೆಡ್ಡಿ ಆರೋಪ!
news18
Updated: July 13, 2018, 11:34 AM IST
ನ್ಯೂಸ್​ 18 ಕನ್ನಡ 

ಪಾತ್ರಕ್ಕಾಗಿ ಪಲ್ಲಂಗ ಕುರಿತಂತೆ ದಿನಕ್ಕೊಂದು ಫೇಸ್​ಬುಕ್​ ಪೋಸ್ಟ್​ ಮೂಲಕ ತೆಲುಗು-ತಮಿಳು ಚಿತ್ರರಂಗದ ನಟ, ನಿರ್ದೇಶಕರ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ನಿನ್ನೆಯಷ್ಟೆ ತಮಿಳಿನ ನಟ ಶ್ರೀಕಾಂತ್​ ಹಾಗೂ ನಿರ್ದೇಶಕ ಮುರುಗದಾಸ್​ ಅವರ ವಿರುದ್ಧ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡುವ ಮೂಲಕ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಒಂದನ್ನು ಹಾಕಿಕೊಂಡಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಶ್ರೀರೆಡ್ಡಿ, ನಟ ಹಾಗೂ ನಿರ್ದೇಶಕ ಲಾರೆನ್ಸ್​ ಅವರ ವಿರುದ್ಧವೂ ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಮಾಡಿದ್ದಾರೆ. ಹೌದು ನೃತ್ಯ ಸಂಯೋಜಕನಾಗಿ ತೆಲುಗು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಲಾರೆನ್ಸ್​ ಇಂದು ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸುವ ಮಟ್ಟಕ್ಕೆ ಬೆಳೆದಿದ್ದಾರೆ. 'ಮುನಿ', 'ಮುನಿ 2', 'ಮಾಸ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

'ಸ್ನೇಹಿತರ ಮೂಲಕ ಗೋಲ್​ಕೊಂಡ ಹೋಟೆಲ್​ನಲ್ಲಿ ಲಾರೆನ್ಸ್​ ಅವರ ಪರಿಚಯವಾಗಿತ್ತು. ಅಂದು ಅವರು ನನ್ನನ್ನು ಅವರ ರೂಮ್​ಗೆ ಕರೆದುಕೊಂಡು ಹೋಗಿದ್ದರು. ಅವರ ಕೋಣೆಯಲ್ಲಿ ರಾಘವೇಂದ್ರ ಸ್ವಾಮಿ ಅವರ ಫೋಟೋ ಹಾಗೂ ರುದ್ರಾಕ್ಷಿ ಮಾಲೆಗಳಿದ್ದವು. ಅದನ್ನು ಕಂಡು ನಾನು ಇವರು ತುಂಬಾ ಸಜ್ಜನ ವ್ಯಕ್ತಿ ಎಂದುಕೊಂಡೆ. ಆದರೆ ಕೆಲ ಸಮಯದ ನಂತರ ಸೊಂಟ ತೋರಿಸುತ್ತಾ ಕನ್ನಡಿಯೊಂದಿಗೆ ರೊಮ್ಯಾನ್ಸ್​ ಮಾಡುವಂತೆ ಹೇಳಿದರು. ಕಾರಣ ಕೇಳಿದಕ್ಕೆ ನಿನಗೆ ಸಿನಿಮಾದಲ್ಲಿ ಅವಕಾಶ ಬೇಕಾದರೆ ಅಭಿನಿಯಿಸಿ ತೋರಿಸು ಎಂದರು. ಇದಾದ ಬಳಿಕ ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ನಿನಗೆ ಆಫರ್​ ಖಚಿತವಾಯಿತು ಎಂದರು. ಅದಕ್ಕಾಗಿ ಅವರೊಂದಿಗೆ ಕೆಲಕಾಲ ಸ್ನೇಹವನ್ನು ಮುಂದುವರಿಸಿದೆ. ಆದರೆ ನಂತರ ಅವರೂ ನನಗೆ ಮೋಸ ಮಾಡಿ ನನ್ನ ಜೀವನದಲ್ಲಿ ಖಳನಾಯಕನಾದರು' ಎಂದು ಶ್ರೀರೆಡ್ಡಿ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.ಬಡ ಕುಟುಂಬದಿಂದ ಬಂದು ಈ ಮಟ್ಟಕ್ಕೆ ಬೆಳೆದಿರುವ ಲಾರೆನ್ಸ್​ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲದೆ ಕೊನೆಯುಸಿರೆಳೆದ ತನ್ನ ತಾಯಿಗೆಂದೇ ದೇವಾಲಯವನ್ನು ಕಟ್ಟಿದ್ದು, ಸಾಕಷ್ಟು ಬಡ ಮಕ್ಕಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ.
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ