ಇಂದಿನಿಂದ ರಾಜ್ಯಾದ್ಯಂತ `ಮದಗಜ‘ನ ಅಬ್ಬರ: 800 ಚಿತ್ರಮಂದಿರಗಳಲ್ಲಿ ಶ್ರೀ ಮುರುಳಿ ಸಿನಿಮಾ ರಿಲೀಸ್!

Madhagaja : ‘ಉಗ್ರಂ’ ಸಿನಿಮಾ ಗೆದ್ದ ಬಳಿಕ ಶ್ರೀಮುರಳಿ ಅವರು ಆ್ಯಕ್ಷನ್​ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ‘ಮದಗಜ’ ಚಿತ್ರದಲ್ಲೂ ಭರ್ಜರಿ ಸಾಹಸ ದೃಶ್ಯಗಳಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಆ ಕಾರಣದಿಂದ ಅವರ ಅಭಿಮಾನಿಗಳಿಗೆ ಸಖತ್​ ಮನರಂಜನೆ ಸಿಗಲಿದೆ.

ಮದಗಜ ಚಿತ್ರದ ಪೋಸ್ಟರ್​

ಮದಗಜ ಚಿತ್ರದ ಪೋಸ್ಟರ್​

  • Share this:
ವರ್ಷದ ಕೊನೆಯ ತಿಂಗಳು ಡಿಸೆಂಬರ್(December)​. ಈ ತಿಂಗಳಲ್ಲಿ ಸಾಕಷ್ಟು ಸಿನಿಮಾ(Movie)ಗಳು ತೆರೆಗೆ ಬರಲಿವೆ. ಕಾರಣ ಕ್ರಿಸ್​ಮಸ್(Christmas)​ ರಜೆ ಸಮಯದಲ್ಲಿ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡದವರು ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದರಂತೆ ಇಂದು ಸ್ಯಾಂಡಲ್​ವುಡ್​(Sandalwood)ನ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ಸಿನಿಮಾ ಮದಗಜ(Madhagaja) ಘೀಳಿಡಲು ರೆಡಿಯಾಗಿದೆ. ಶ್ರೀ ಮುರುಳಿ ಅಭಿನಯದ ಸಿನಿಮಾ ತೆರೆ ಕಾಣುತ್ತಿದೆ. ಇಡೀ ರಾಜ್ಯದ್ಯಾಂತ 800 ಸ್ಕ್ರೀನ್​ಗಳಲ್ಲಿ ಮದಗಜ ಅಬ್ಬರಿಸಲಿದ್ದಾನೆ. ಟೀಸರ್(​​Teaser), ಟ್ರೇಲರ್(Trailer)​ನಿಂದಲೇ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾದ ಟ್ರೈಲರ್​ ರಿಲೀಸ್​ ಆದ ಮೇಲೆ ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಟಟ್ಟಾಗಿದೆ.  ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾವಿದು. ಎಲ್ಲಕ್ಕಿಂತ ಹೆಚ್ಚಾಗಿ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್(Big Budget) ಸಿನಿಮಾ. ಮದಗಜ ಇಂದಿನಿಂದ ಸಿಂಗಲ್​ ಆಗಿ ರಾರಾಜಿಸಲಿದ್ದಾನೆ. ಹೀಗಾಗಿ ಮದಗಜ ಘೀಳಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಭರ್ಜರಿಯಾಗಿರಲಿದೆ ಶ್ರೀಮುರುಳಿ ಆ್ಯಕ್ಷನ್​!

ಸಿನಿಮಾದ ಟ್ರೈಲರ್​ ರಿಲೀಸ್​ ಆದ ಬಳಿಕ ಮದಗಜ ಮೇಲಿದ್ದ ನಿರೀಕ್ಷೆ ದುಪ್ಪಟ್ಟು ಆಗಿತ್ತು.  ‘ಉಗ್ರಂ’ ಸಿನಿಮಾ ಗೆದ್ದ ಬಳಿಕ ಶ್ರೀಮುರಳಿ ಅವರು ಆ್ಯಕ್ಷನ್​ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ‘ಮದಗಜ’ ಚಿತ್ರದಲ್ಲೂ ಭರ್ಜರಿ ಸಾಹಸ ದೃಶ್ಯಗಳಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಆ ಕಾರಣದಿಂದ ಅವರ ಅಭಿಮಾನಿಗಳಿಗೆ ಸಖತ್​ ಮನರಂಜನೆ ಸಿಗಲಿದೆ. ಬರೀ ಆ್ಯಕ್ಷನ್​ ಮಾತ್ರವಲ್ಲದೇ ತಾಯಿ ಸೆಂಟಿಮೆಂಟ್​ ಕೂಡ ಈ ಚಿತ್ರದಲ್ಲಿ ಹೈಲೈಟ್​ ಆಗಿದೆ. ಜೊತೆಗೆ ಕಿಕ್​ ನೀಡುವ ಡೈಲಾಗ್​ಗಳು ಕೂಡ ಸಿನಿಮಾದಲ್ಲಿದೆ. ಈಗಗಾಲೇ ಕೆಲ ಡೈಲಾಗ್​ಗಳನ್ನು ಟ್ರೈಲರ್​ನಲ್ಲಿ ಕೇಳಿ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ.

ಮದಗಜನಿಗೆ 450 ಕೆಜಿಯ ಸೇಬಿನ ಹಾರ!

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿಮಾನಿಗಳು ಮದಗಜ ರಿಲೀಸ್ ಆಗುತ್ತಿರುವುದಕ್ಕೆ ಅಭಿಮನಿಗಳು ಥ್ರಿಲ್ಲಿಂಗ್ ಆಗಿದ್ದಾರೆ. ಚಿತ್ರಮಂದಿರದ ಮುಂದೆ ಹಬ್ಬ ಮಾಡುವುದಕ್ಕೆ ಅಭಿಮಾನಿಗಳು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ, ಹೂವು, ಹಣ್ಣು, ಹಾರ ಎಲ್ಲವೂ ಸಿದ್ಧವಾಗಿದೆ. ವಿಶೇಷ ಅಂದರೆ, ಚಿತ್ರಮಂದಿರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಬರೋಬ್ಬರಿ 450 ಕೆಜಿ ತೂಕವಿರುವ ಸೇಬು ಹಣ್ಣಿನ ಹಾರವನ್ನು ಹಾಕಲಿದ್ದಾರೆ. ಪ್ರಮುಖ ಚಿತ್ರಮಂದಿರ ಅನುಪಮದಲ್ಲಿ ಇದಕ್ಕೆ ವೇದಿಕೆ ಸಿದ್ಧವಾಗಿದೆ, ಅಭಿಮಾನಿಗಳು ಈಗಾಗಲೇ ಸೇಬುಹಣ್ಣಿನ ಹಾರವನ್ನು ಪೋಣಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ.

ರವಿ ಬಸ್ರೂರು ಮ್ಯೂಸಿಕ್ ಹೈಲೆಟ್​!

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ಆಗಿರುವ ಸಂಗೀತ ನಿರ್ದೇಶಕರಲ್ಲಿ ರವಿ ಬಸ್ರೂರು ಕೂಡ ಒಬ್ಬರು. ‘ಕೆಜಿಎಫ್​’ ಚಿತ್ರದ ಯಶಸ್ಸಿನ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ‘ಮದಗಜ’ ಚಿತ್ರಕ್ಕೂ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಮಾತ್ರವಲ್ಲದೇ ಹಿನ್ನೆಲೆ ಸಂಗೀತದಲ್ಲೂ ಅಬ್ಬರಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಧೂಳೆಬ್ಬಿಸಿವೆ. ಮದಗಜ ಟೈಟಲ್​ ಸಾಂಗ್​ ಈಗಾಗಲೇ ಸಖತ್​ ಹಿಟ್​ ಆಗಿದೆ. ಜನ ರಿಪೀಟ್​ ಮೋಡ್​ನಲ್ಲಿ ಆ ಹಾಡನ್ನು ಕೇಳುತ್ತಿದ್ದಾರೆ.  ಇನ್ನೂ ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಹಿನ್ನೆಲೆ ಸಂಗೀತ ಸಖತ್​ ಕಿಕ್​ ನೀಡಲಿದೆ ಅಂತ ನಿರ್ದೇಶಕರು ಈಗಾಗಲೇ ತಿಳಿಸಿದ್ದಾರೆ.

ಇದನ್ನು ಓದಿ :  ಏನ್​ ಗುರೂ... 59ನೇ ವಯಸ್ಸಿನಲ್ಲೂ ಟಾಮ್​ ಕ್ರೂಸ್​ ರಿಯಲ್​ ಸ್ಟಂಟ್​ ನೋಡೋಕೆ ಥ್ರಿಲ್ಲಿಂಗ್​..!

ಜಗಪತಿ ಬಾಬು ವಿಲನ್​​ ಪ್ಲಸ್​ ಪಾಯಿಂಟ್!

ಜಗಪತಿ ಬಾಬು ಮದಗಜ ಸಿನಿಮಾದಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​ನಲ್ಲಿ ಈಗಾಗಲೇ ಅವರ ಲುಕ್, ಅವರ ವಾಯ್ಸ್​​ಗೆ ಫ್ಯಾನ್ಸ್​​ಗೆ ಫಿದಾ ಆಗಿದ್ದಾರೆ. ಇವರಿಗೆ ಜೊತೆಯಾಗಿ ಕನ್ನಡ ಕೆಜಿಎಫ್​ ಸಿನಿಮಾದ ವಿಲನ್​ ಗರುಡ ರಾಮ್​ ಕೂಡು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಯೋಗ್ಯ ಸಿನಿಮಾ ಬಳಿಕ ಮಹೇಶ್​ ಈ ಆ್ಯಕ್ಷನ್​ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಯೋಗ್ಯ ಸಿನಿಮಾ ಕಾಮಿಡಿ ಜೋನರ್​ ಇದ್ಧಂಥ ಚಿತ್ರ. ಮದಗಜ ಫುಲ್​ ಮಾಸ್​ ಪ್ರೇಕ್ಷಕರಿಗಂತೆ ರೆಡಿಮಾಡಿರುವ ಸಿನಿಮಾ. ಒಟ್ನಲ್ಲಿ ಇಂದಿನಿಂದ ತೆರೆಮೇಲೆ ಮದಗಜ ಅಬ್ಬರಿಸಿ ಬೊಬ್ಬರಿಯಲಿದ್ದಾನೆ.

ಇದನ್ನು ಓದಿ: ಊಟ ಇಲ್ಲಾಂದ್ರೂ ಓಕೆ, ಸೆಕ್ಸ್​ ಬೇಕೇ ಬೇಕಂತೆ ಸಮಂತಾಗೆ: ವಿಡಿಯೋ ವೈರಲ್​!

ಇದರ ಜೊತೆಗೆ ನಿರ್ಮಾಪಕ ಉಮಾಪತಿ ಮದಗಜ ಸಿನಿಮಾಗೆ ಸಾಕಷ್ಟ ಹಣ ಹೂಡಿಕೆ ಮಾಡಿದ್ದಾರೆ. ‘ರಾಬರ್ಟ್​’ ಸಿನಿಮಾ ನಿರ್ಮಿಸಿ ಭರ್ಜರಿ ಯಶಸ್ಸು ಕಂಡ ಅವರು ಈಗ ‘ಮದಗಜ’ ಚಿತ್ರವನ್ನೂ ಶ್ರೀಮಂತವಾಗಿ ನಿರ್ಮಿಸಿದ್ದಾರೆ. ಬೃಹತ್​ ಸೆಟ್​ಗಳಲ್ಲಿ ಈ ಸಿನಿಮಾ ಚಿತ್ರೀಕರಣಗೊಂಡಿದೆ. ಟ್ರೈಲರ್​ನಲ್ಲೇ ಅದ್ಧೂರಿತನ ಎದ್ದು ಕಾಣುತ್ತಿತ್ತು. ಇನ್ನೂ ಸಿನಿಮಾ ಪೂರ್ತಿ ಸೆಟ್​ಗಳು ಕಣ್ಣಿಗೆ ಹಬ್ಬ ನೀಡಲಿವೆ.
Published by:Vasudeva M
First published: