ಕೊರೋನಾ ನಡುವೆ ಶೂಟಿಂಗ್​ಗೆ ಸಜ್ಜಾದ ಮದಗಜ!

Madagaja Movie: ಇದೇ ತಿಂಗಳು 19 ರಿಂದ ಮದಗಜನ ಭರಾಟೆ ಮೈಸೂರಿನಲ್ಲಿ ಸ್ಟಾರ್ಟ್ ಆಗಲಿದೆ. 25 ದಿನಗಳ ಕಾಲ ಮದಗಜನ ಶೂಟಿಂಗ್ ‌ಮೈಸೂರು ಸುತ್ತಮುತ್ತ ನಡೆಯಲಿದೆ. ಶ್ರೀ ಮುರಳಿ, ಆಶಿಕಾ ರಂಗನಾಥ್, ರಂಗಾಯಣ ರಘು, ಸೇರಿದಂತೆ ಚಿತ್ರದ ಬಹುತೇಕ ತಾರಾ ಬಳಗ ಈ ಶೆಡ್ಯೂಲ್​ನಲ್ಲಿ ಪಾಲ್ಗೊಳ್ಳಲಿದೆ.

ಮದಗಜ

ಮದಗಜ

  • Share this:
ಕೊರೋನಾ ಕಾರಣದಿಂದ ಕಳೆದ ಐದಾರು ತಿಂಗಳುಗಳಿಂದ ಚಿತ್ರರಂಗ ಸ್ಥಬ್ದವಾಗಿತ್ತು. ಶೂಟಿಂಗ್ ಸೇರಿ ಬಹುತೇಕ ಚಟುವಟಿಕೆಗಳು ನಿಂತೇ ಹೋಗಿದ್ದವು. ಈಗ ಮತ್ತೆ ಸ್ಯಾಂಡಲ್​ವುಡ್ ಗರಿಗೆದರುತ್ತಿದೆ.‌ ನಿಧಾನಕ್ಕೆ ಚೇತರಿಕೆಯ ಹಾದಿಯಲ್ಲಿದೆ. ಹಲವು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ. ಹೊಸ ಸಿನಿಮಾಗಳು ಮುಹೂರ್ತ ಆಚರಿಸಿಕೊಳ್ತಿವೆ. ಹಾಗೆಯೇ ಪೋಸ್ಟ್ ‌ಪ್ರೊಡಕ್ಷನ್ಸ್ ಕೆಲಸಗಳು ಸಹ ಬಿರುಸಿನಿಂದ ಸಾಗಿವೆ. ಇನ್ನೇನಿದ್ರೂ ಥಿಯೇಟರ್ ರಿ-ಓಪನ್ ಆದರೆ ಸಿನಿಮಾ ರಿಲೀಸ್ ಅಬ್ಬರ ಸಹ ಶುರುವಾಗಲಿದೆ.

ಅಂದಹಾಗೆ, ಕನ್ನಡ ಚಿತ್ರರಂಗದ ಚಟುವಟಿಕೆಗಳಿಗೆ ಮೊದಲಿಗೆ ಕಿಕ್ ಸ್ಟಾರ್ಟ್ ಕೊಟ್ಟಿದ್ದು ಫ್ಯಾಂಟಮ್. ಅನೂಪ್ ಭಂಡಾರಿ ನಿರ್ದೇಶನದ, ಕಿಚ್ಚ ಸುದೀಪ್ ನಟನೆಯ ಈ ಸಿನಿಮಾ ಹೈದರಾಬಾದ್​ನಲ್ಲಿ ಅದ್ಧೂರಿಯಾಗಿ ಚಿತ್ರೀಕರಣ ಆರಂಭಿಸಿ ಕನ್ನಡ ಚಿತ್ರೋದ್ಯಮಕ್ಕೆ ವಿಶ್ವಾಸ ತುಂಬಿತು.

ಆ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಜರಂಗಿ ಅವತಾರದಲ್ಲಿ ಫೀಲ್ಡ್​​ಗೆ ಇಳಿದರು. ಕೊರೋನಾ ನಂತರ ಕನ್ನಡ ನೆಲದಲ್ಲಿ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹಾಜರಾದ ಸ್ಟಾರ್ ನಟ ಎಂಬ ಹೆಗ್ಗಳಿಕಗೆ ಪಾತ್ರರಾದರೂ. ಚಿತ್ರರಂಗದ ಸಾರಥಿಯಾಗಿ ತಾವೇ ಮುಂದು ನಿಂತು ದೈರ್ಯ ತುಂಬಿದರು. ಶಿವಣ್ಣ ಶೂಟಿಂಗ್ ಗೆ ಬಂದಿದ್ದೇ ತಡ, ಬೇರೆ ದೊಡ್ಡ ಸಿನಿಮಾಗಳು ಸಹ ಸಾಲಾಗಿ ಸಾಲಾಗಿ ಚಿತ್ರೀಕರಣದಲ್ಲಿ ನಿರತವಾಗಿವೆ.
ಈಗ ಅದೇ ಹಾದಿಯಲ್ಲಿ ಮದಗಜ ಸಹ ಚಿತ್ರೀಕರಣ ಅಖಾಡಕ್ಕೆ ಧುಮುಕುವ ಉತ್ಸಾಹದಲ್ಲಿದ್ದಾನೆ.

ಮದಗಜ


ಇದೇ ತಿಂಗಳು 19 ರಿಂದ ಮದಗಜನ ಭರಾಟೆ ಮೈಸೂರಿನಲ್ಲಿ ಸ್ಟಾರ್ಟ್ ಆಗಲಿದೆ. 25 ದಿನಗಳ ಕಾಲ ಮದಗಜನ ಶೂಟಿಂಗ್ ‌ಮೈಸೂರು ಸುತ್ತಮುತ್ತ ನಡೆಯಲಿದೆ. ಶ್ರೀ ಮುರಳಿ, ಆಶಿಕಾ ರಂಗನಾಥ್, ರಂಗಾಯಣ ರಘು, ಸೇರಿದಂತೆ ಚಿತ್ರದ ಬಹುತೇಕ ತಾರಾ ಬಳಗ ಈ ಶೆಡ್ಯೂಲ್​ನಲ್ಲಿ ಪಾಲ್ಗೊಳ್ಳಲಿದೆ.

ಶ್ರೀ ಮುರಳಿ


ಮದಗಜನಿಗೆ ಅಯೋಗ್ಯ ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಬರ್ಟ್ ನಿರ್ಮಾಪಕ ಉಮಾಪತಿ ಈ ಸಿನಿಮಾಗಾಗಿ ದೊಡ್ಡ ಮೊತ್ತವನ್ನೇ ಇನ್ವೆಸ್ಟ್ ಮಾಡುತ್ತಿದ್ದಾರೆ. ಒಟ್ಟಾರೆ ಫ್ಯಾಂಟಮ್, ಭಜರಂಗಿ-೨, ಮದಗಜನ ಹೀಗೆ ದೊಡ್ಡ ದೊಡ್ಡ ಸಿನಿಮಾಗಳೆಲ್ಲಾ ಶೂಟಿಂಗ್ ನಲ್ಲಿರೋದು,  ಚಿತ್ರರಂಗದ ಮಂದಿಯಲ್ಲಿ ಹೊಸ ಹುಮ್ಮಸ್ಸನ್ನ ಮೂಡಿಸಿವೆ. ಕೊರೊನಾ ಕಾಲದಲ್ಲೂ ಚಿತ್ರಕರ್ಮಿಗಳು ಕೆಲಸದಲ್ಲಿ ನಿರತವಾಗುವಂತೆ ಮಾಡಿವೆ.
Published by:Harshith AS
First published: