news18-kannada Updated:May 26, 2020, 7:38 PM IST
ಅವನೇ ಶ್ರೀಮನ್ನಾರಾಯಣ
ಲಾಕ್ಡೌನ್ ಸಮಯಮವನ್ನು ಸಿನಿಮಾ ಮಂದಿ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಸಿದ್ಧಪಡಿಸಲು, ಪ್ರಿ ಪ್ರೊಡಕ್ಷನ್ ಕೆಲಸಗಳಿಗೆ ಬಳಸಿಕೊಂಡು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದರೆ ಶ್ರೀ ದೇವಿ ಎಂಟರ್ಟೈನ್ಮೆಂಟ್ ಸಂಸ್ಥೆ.
ಈಗಾಗಲೇ ‘ರಂಗಿತರಂಗ‘ ಹಾಗೂ ‘ಅವನೇ ಶ್ರೀಮನ್ನಾರಾಯಣ‘ದಂತಹ ಅದ್ಭುತ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಶ್ರೀ ದೇವಿ ಎಂಟರ್ಟೈನ್ಮೆಂಟ್ ಸಂಸ್ಥೆ ಈಗ ಹ್ಯಾಟ್ರಿಕ್ ಭಾರಿಸಲು ಸಜ್ಜಾಗಿದೆ. ಮತ್ತೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಬಾರಿ ಭರತ್ ಜಿ ಎಂಬ ಹೊಸ ನಿರ್ದೇಶಕನ ಮೊರೆ ಹೋಗಿರುವ ಈ ಸಂಸ್ಥೆ ಹೊಸ ರೀತಿಯ ಸಿನಿಮಾಗಾಗಿ ಲಾಕ್ ಡೌನ್ ಸಮಯವನ್ನ ಬಳಸಿಕೊಂಡಿದೆ.
ಅದರಂತೆ ಪೂರ್ಣ ಸ್ಕ್ರಿಪ್ಟ್ ಮಾಡಿ, ತಾಂತ್ರಿಕ ವರ್ಗವನ್ನ ಹಾಗೂ ಚಿತ್ರೀಕರಣ ಲೋಕೆಷನ್ ಸಹ ಆನ್ ಲೈನ್ ನಲ್ಲಿಯೇ ಸೆಟ್ ಮಾಡಿದೆ. ಹಾಗೆಯೇ ಹೊಸ ಪ್ರತಿಭೆಗಳ ಆಡಿಶನ್ ಗಾಗಿ ವಿಡಿಯೋ ಡ್ಯಾಶ್ ಬೋರ್ಡ್ ಒಂದನ್ನ ಸಹ ಸಿದ್ದಪಡಿಸಿಕೊಂಡಿದೆ.
ಕರ್ನಾಟಕದ ಪ್ರತಿಭಾನ್ವಿತ ನಟ-ನಟಿಯರನ್ನ ಆನ್ ಲೈನ್ ಮೂಲಕ ಆಡಿಶನ್ ಮಾಡುತ್ತಿದ್ದಾರೆ. ಪಾತ್ರಕ್ಕೆ ಒಪ್ಪುವಂತವರನ್ನ ಆಯ್ಕೆ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ಮಾಡುವ ಉತ್ಸಾಹ ನಿರ್ಮಾಪಕ ಪ್ರಕಾಶ್ ಹಾಗೂ ನಿರ್ದೇಶಕ ಭರತ್. ಜಿ ಅವರದ್ದು. ಅಂದಹಾಗೆ, ಈ ಬಾರಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನ ಹೇಳಲು ಹೊರಟಿದೆಯಂತೆ.
Vijay Yesudas: ಕನ್ನಡ ಸೇರಿ 6 ಭಾಷೆಯಲ್ಲಿ ಸಜ್ಜಾಗುತ್ತಿದೆ ಯೇಸುದಾಸ್ ಪುತ್ರ ವಿಜಯ್ ಯೇಸುದಾಸ್ ಸಿನಿಮಾ!
First published:
May 26, 2020, 7:26 PM IST