ಬಿಡುಗಡೆಗೆ ಸಜ್ಜಾಗಿದೆ Sreeleela ಅಭಿನಯದ ತೆಲುಗು ಸಿನಿಮಾ: ಇಲ್ಲಿದೆ ಪೆಳ್ಳಿಸಂದD ರಿಲೀಸ್ ದಿನಾಂಕ..!

ಶ್ರೀಲೀಲಾ ಅವರಿಗೆ ನಾಯಕನಾಗಿ ರೋಷನ್​ ನಟಿಸಿರುವ ಪೆಳ್ಳಿಸಂದD ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ನಿನ್ನೆಯಷ್ಟೆ ಈ ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಗಿದೆ.

ಪೆಳ್ಳಿ ಸಂದಡಿ ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ರೋಷನ್​

ಪೆಳ್ಳಿ ಸಂದಡಿ ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ರೋಷನ್​

  • Share this:
ಭರಾಟೆ ಬೆಡಗಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದ್ದಾರೆ. ಈ ನಟಿಯ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಅವರು ಕನ್ನಡದ ಜೊತೆಗೆ ಟಾಲಿವುಡ್​ಗೂ ಕಾಲಿಟ್ಟಿರುವ ವಿಷಯ ಗೊತ್ತೇ ಇದೆ. ತೆಲುಗು ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿದ್ದು, ಕನ್ನಡದಿಂದ ತೆಲುಗಿಗೆ ಹೋಗಿ ಭವಿಷ್ಯ ಕಂಡುಕೊಂಡಿರುವ ನಟಿಯರ ಪಟ್ಟಿಗೆ ಈಗ ಶ್ರೀಲೀಲಾ ಹೆಸರು ಸೇರಿಕೊಂಡಿದೆ. ಶ್ರೀಲೀಲಾಗೆ ಟಾಲಿವುಡ್​ನಲ್ಲಿ ಒಳ್ಳೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಹೌದು, ಈ ಕುರಿತಾಗಿ ನಟಿ ಶ್ರೀಲೀಲಾ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಈಗ ಅವರ ಮೊದಲ ಟಾಲಿವುಡ್​ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಈ ವಿಷಯವನ್ನು ಶ್ರೀಲೀಲಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

ಕಿಸ್​ ಸಿನಿಮಾ ಖ್ಯಾತಿಯ ಮುದ್ದು ಮುಖದ ಸುಂದರಿ ಶ್ರೀಲೀಲಾ ಅಭಿನಯಿಸುತ್ತಿರುವ ಪೆಳ್ಳಿಸಂದD ಚಿತ್ರಕ್ಕೆ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್​ ಅವರ ಮಾರ್ಗದರ್ಶನವಿದೆ. ತೆಲುಗಿನಲ್ಲಿ ದೊಡ್ಡ ದೊಡ್ಡ ಹಿಟ್​ ಕೊಟ್ಟಿರುವ ರಾಘವೇಂದ್ರ ರಾವ್​ ಅವರ ಮಾರ್ಗದರ್ಶನದಲ್ಲಿ ಗೌರಿ ರೋನಕಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

Sreeleela srtarrer Pellisandadi Movie, Pellisandadi movie is releasing on October 15th, Sreeleela starrer telugu movie Pellisandadi, ಪೆಳ್ಳಿಸಂದD ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ, Pellisandadi, Roshan, Tollywood, Raghavendra Rao, sreeleela, ಶ್ರೀಲೀಲಾ, ಪೆಳ್ಳಿಸಂದಡಿ, ಟಾಲಿವುಡ್​ ಸಿನಿಮಾ, ರಾಘವೇಂದ್ರ ರಾವ್​, ರೋಷನ್​, bharate, Sriimurali, Sreeleela, Sandalwood, Sreeleela latest photoshoot, Sreeleela Instagram, ಶ್ರೀಲೀಲಾ. ಭರಾಟೆ ಖ್ಯಾತಿಯ ನಟಿ, ಯುವರಾಣಿಯಾಗಿ ಮಿಂಚಿದ ಶ್ರೀಲೀಲಾ, ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ, Sreeleela srtarrer Pellisandadi movie is releasing on October 15th ae
ಪೆಳ್ಳಿ ಸಂದಡಿ ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ರೋಷನ್​


ನಟಿ ಶ್ರೀಲೀಲಾ ಅವರಿಗೆ ನಾಯಕನಾಗಿ ರೋಷನ್​ ನಟಿಸಿರುವ ಪೆಳ್ಳಿಸಂದD ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ನಿನ್ನೆಯಷ್ಟೆ ಈ ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಗಿದೆ. ಇದೇ ತಿಂಗಳ 15ರಂದು ಪೆಳ್ಳಿಸಂದಡಿ ಚಿತ್ರ ರಿಲೀಸ್ ಆಗಲಿದೆ.
View this post on Instagram


A post shared by Sreeleela (@sreeleela14)


ಪೆಳ್ಳಿಸಂದD ತೆಲುಗು ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಈ ಚಿತ್ರಕ್ಕಾಗಿ ಮಾಡಿರುವ ಕೆಲವು ಫೋಟೋಶೂನ ಚಿತ್ರಗಳನ್ನು ಸೇರಿಸಿ ಮಾಡಿರುವ ಟೈಟಲ್​ ವಿಡಿಯೋವನ್ನು ಶ್ರೀಲೀಲಾ ಈ ಹಿಂದೆ ಹಂಚಿಕೊಂಡಿದ್ದರು.

ಇದನ್ನೂ ಓದಿ: Sree Leela: ಮಾದಕ ನೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದ ಭರಾಟೆ ಖ್ಯಾತಿಯ ನಟಿ ಶ್ರೀಲೀಲಾ..!

ಪೆಳ್ಳಿಸಂದD... ನಟಿ ಶ್ರೀಲೀಲಾ ಅಭಿನಯಿಸುತ್ತಿರುವ ಮೂರನೇ ಸಿನಿಮಾ. ಕಿಸ್​ ಹಾಗೂ ಭರಾಟೆ ನಂತರ ಲೆಟ್ಸ್​ ಬ್ರೇಕಪ್​ ಎಂಬ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದರು. ‘ಪಂಚತಂತ್ರ’ ಸಿನಿಮಾದ ನಟ ವಿಹಾನ್ ಜೊತೆ​ ‘ಲೆಟ್ಸ್​​ ಬ್ರೇಕಪ್‘​ ಎಂದಿದ್ದ ನಟಿ ಕಾರಣಾಂತರಗಳಿಂದ ಚಿತ್ರದಿಂದ ಹೊರ ಬಂದರು. ಇನ್ನು ಜಯಣ್ಣ ನಿರ್ಮಾಣದ ಲೆಟ್ಸ್​ ಬ್ರೇಕಪ್​ ಚಿತ್ರದಿಂದ ವಿಹಾನ್​ ಸಹ ಹೊರ ಬಂದರು. ಕಾರಣ ಶೂಟಿಂಗ್​ಗೆ ಡೇಟ್ಸ್​ ಸರಿಹೊಂದದ್ದೇ ಹೋದದ್ದು ಎನ್ನಲಾಗಿದೆ. ಸ್ವರೂಪ್​ ನಿರ್ದೇಶನ ಮಾಡುತ್ತಿದ್ದ ಲೆಟ್ಸ್​ ಬ್ರೇಕಪ್​ ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ವಿಹಾನ್​ ಕಾಲೇಜು ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆ ಸಿನಿಮಾಗಾಗಿ ವಿಹಾನ್​ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದರಂತೆ.

ದುಬಾರಿ ಸಿನಿಮಾದಲ್ಲೂ ಶ್ರೀಲೀಲಾ

ಕನ್ನಡದಲ್ಲಿ ‘ಕಿಸ್’​ ಮತ್ತು ‘ಭರಾಟೆ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶ್ರೀಲೀಲಾ ಅವರಿಗೆ ಕನ್ನಡದ ಬಿಗ್ ಬಜೆಟ್ ಚಿತ್ರವಾಗಿದ್ದ ದುಬಾರಿಯಿಂದಲೂ ಅವಕಾಶ ಸಿಕ್ಕಿತ್ತು. ದುಬಾರಿ ಸಿನಿಮಾವನ್ನು ನಂದ ಕಿಶೋರ್ ಅವರು ನಿರ್ದೇಶನ ಮಾಡುತ್ತಿದ್ದರು. ಧ್ರುವ ಸರ್ಜಾ ನಾಯಕನಾಗಿದ್ದ ಈ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಅರ್ಧಕ್ಕೆ ನಿಂತಿದೆ. ಸದ್ಯಕ್ಕೆ ಸಿನಿಮಾ ಚಿತ್ರೀಕರಣ ನಿಂತಿದೆ ಎಂದು ನಂದ ಕಿಶೋರ್ ಹೇಳಿಕೆ ನೀಡಿದ್ದರು. ಧ್ರು ಸರ್ಜಾ ಸದ್ಯ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Sreeleela: ಮಾದಕ ನೋಟದಿಂದಲೇ ಮತ್ತು ಬರಿಸುತ್ತಿರುವ ದುಬಾರಿ ನಟಿ ಶ್ರೀಲೀಲಾ..!

ಲಾಕ್​ಡೌನ್​ನಲ್ಲಿ ತಮ್ಮ ಹಾಟ್​ ಫೋಟೋಶೂಟ್​ಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದರು ಶ್ರೀಲೀಲಾ. ತಮ್ಮ ಲೆಟೆಸ್ಟ್​ ಫೋಟೋಶೂಟ್​ಗಳಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ ಈ ನಟಿ.
Published by:Anitha E
First published: