ಸೃಜನ್​ ಲೋಕೇಶ್​ಗೆ ಹುಟ್ಟುಹಬ್ಬದ ಸಂಭ್ರಮ

news18
Updated:June 28, 2018, 7:54 PM IST
ಸೃಜನ್​ ಲೋಕೇಶ್​ಗೆ ಹುಟ್ಟುಹಬ್ಬದ ಸಂಭ್ರಮ
news18
Updated: June 28, 2018, 7:54 PM IST
ನ್ಯೂಸ್​ 18 ಕನ್ನಡ 

ಟಾಕಿಂಗ್ ಸ್ಟಾರ್ ಸೃಜನ್ ಲೊಕೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್​​ಡೇ ಪ್ರಯುಕ್ತ ಇಂದು ನಗರದ ಗವಿಪುರಂ ಗುಟ್ಟಳ್ಳಿಯ ಬಂಡೆಮಹಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಸಲಾಯಿತು. ಕುಟುಂಬ ಸದಸ್ಯರು, ಸ್ನೇಹಿತರು ಈ ಪೂಜೆಯಲ್ಲಿ ಭಾಗಿಯಾಗಿದರು.

ವಿಶೇಷ ಅಂದ್ರೆ ಬಂಡೆ ಮಹಾಕಾಳಮ್ಮ ದೇವಸ್ಥಾನದ ಪೂರ್ವ ದ್ವಾರವನ್ನ ಕಟ್ಟಿಸಿದ್ದ ಸೃಜನ್ ಲೋಕೇಶ್ ಇಂದು ಅದನ್ನ ಉದ್ಘಾಟನೆ ಮಾಡಿದರು. ವಿಶೇಷ ಅಂದರೆ ಕಟ್ಟಿಸಿದ ಈ ದ್ವಾರಕ್ಕೆ ಪೈಂಟಿಂಗ್ ಮಾಡಿಸಿದ ದರ್ಶನ್ ಈ ದೈವಕಾರ್ಯಕ್ಕೆ ಸೃಜನ್​ಗೆ ಜೊತೆಯಾಗಿದ್ದಾರೆ. 

ಪ್ರತೀ ವರ್ಷದಂತೆ ಈ ಬಾರಿಯೂ ಗಿಡಗಳನ್ನ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ ಸೃಜನ್, ಸಾರ್ವಜನಿಕರಿಗೆ ಸುಮಾರು 1500 ಗಿಡಗಳನ್ನ ನೀಡಿದರು. ಅಲ್ಲದೇ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲು 500 ಗಿಡಗಳನ್ನ ನೆಡಿಸಿದ್ದು ವಿಶೇಷವಾಗಿತ್ತು. ಹಾಗೆ ಸೃಜನ್ ಸೃಜ ಗಜ ಹೆಸರಲ್ಲಿ 2  ಶ್ರೀಗಂಧದ ಗಿಡಗಳನ್ನ ನೆಟ್ಟು ಖುಷಿ ಪಟ್ಟರು.

ಅಖಿಲ ಕರ್ನಾಟಕ ಟಾಕಿಂಗ್ ಸ್ಟಾರ್​ ಸೃಜನ್​ ಅಭಿಮಾನಿಗಳ ಸಂಘ ಸೃಜನ್​ಗೆ ಬೆಳ್ಳಿ ಕಿರೀಟ ತೊಡಿಸಿ ಸಂಭ್ರಮಪಟ್ಟಿತು.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...