Squid Game: ಇದೇ ಮೊದಲ ಬಾರಿಗೆ ವೋಗ್ ಮುಖಪುಟದಲ್ಲಿ ಏಷ್ಯಾದ ಚೆಲುವೆ, ಎಲ್ಲಾ OTT ಮಹಿಮೆ

ಸ್ಕ್ವಿಡ್ ಗೇಮ್ ಭಾರಿ ಜಾಗತಿಕ ಯಶಸ್ಸು ಗಳಿಸಿರುವುದು ಗುಟ್ಟಿನ ಸಂಗತಿಯೇನಲ್ಲ ಅದು ಬಿಡುಗಡೆಯಾದ ಕೇವಲ ನಾಲ್ಕೇ ವಾರಗಳಲ್ಲಿ ಜಗತ್ತಿನಾದ್ಯಂತ ಇರುವ 142 ಮಿಲಿಯನ್‌ ಹೆಚ್ಚು ವೀಕ್ಷಕರನ್ನು ಸಂಪಾದಿಸಿದೆ

ನಟಿ ಜುಂಗ್ ಹೊ ಯಿಯಾನ್

ನಟಿ ಜುಂಗ್ ಹೊ ಯಿಯಾನ್

  • Share this:
'ವೋಗ್'(Vogue) ಪ್ರತಿಷ್ಠಿತ ಫ್ಯಾಷನ್ ನಿಯತಕಾಲಿಕಗಳ (Fashion Magazines) ಪೈಕಿ ಒಂದು. ಈ ನಿಯತಕಾಲಿಕ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ಹಲವು ರೂಪದರ್ಶಿಗಳು ಹಾಗೂ ಸಿನಿಮಾ ತಾರೆಯರ ದೊಡ್ಡ ಕನಸು. ಇಂತಹ ಕನಸೊಂದನ್ನು ನನಸು ಮಾಡಿಕೊಂಡಿರುವ ಪ್ರಪ್ರಥಮ ಪೂರ್ವ ಏಷ್ಯಾದ ಮಾಡೆಲ್ (East Asian model) ಆಗಿದ್ದಾರೆ ನಟಿ ಜುಂಗ್ ಹೊ ಯಿಯಾನ್(Jung Ho Yeon) ಜನವರಿ 5ರಂದು ಈ ಪ್ರತಿಷ್ಠಿತ ಫ್ಯಾಷನ್ ನಿಯತಕಾಲಿಕವು ಜುಂಗ್ ಹೊ ಯಿಯಾನ್ ಅವರ ಫೋಟೋ ಒಳಗೊಂಡಿರುವ ಫೆಬ್ರವರಿಯ ತನ್ನ ಮುಖಪುಟವನ್ನು ಟ್ವೀಟ್ ಮಾಡಿದೆ. ಈ ನಿಯತಕಾಲಿಕವು "ಹೊ ಯಿಯಾನ್: ಅಂತಾರಾಷ್ಟ್ರೀಯ ನಿಗೂಢ ಮಹಿಳೆ"( Mysterious Woman)ಎಂಬ ಶಿರೋನಾಮೆ ಹೊಂದಿರುವ ವಿಶೇಷ ವಿಡಿಯೋವೊಂದನ್ನು ತನ್ನ ಅಧಿಕೃತ ಯೂಟ್ಯೂಬ್ ವಾಹಿನಿ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದೆ. ಈ ವಿಡಿಯೋ ಹಳೆಯ ಗೂಢಚಾರಿಕೆ ಸಿನಿಮಾದಂತಿದ್ದು, ಹೊ ಯಿಯಾನ್ ಬದುಕು ಹಾಗೂ ವೃತ್ತಿ ಜೀವನದ ಕುರಿತು ಕುತೂಹಲಕಾರಿ ಪ್ರವೇಶಿಕೆ ನೀಡುತ್ತದೆ.

ಅಭಿಮಾನಿಗಳ ಪ್ರೀತಿಗೆ ಫಿದಾ
ಜುಂಗ್ ಹೊ ಯಿಯಾನ್ ತನ್ನ ಶೋಗಳಿಗೆ ದೊರೆಯುತ್ತಿರುವ ಭಾರಿ ಜನಪ್ರಿಯತೆ ಹಾಗೂ ಹಾಲಿವುಡ್‌ನಲ್ಲಿ ತನ್ನ ವೃತ್ತಿಜೀವನ ಮುಂದುವರಿಸುವ ಕುರಿತು ತನ್ನ ಭಾವನೆಗಳನ್ನು ಹಂಚಿಕೊಂಡಿದ್ದಾಳೆ. ತನ್ನ ಶೋಗಳಿಗೆ ಜಗತ್ತಿನಾದ್ಯಂತ ಇರುವ ಅಭಿಮಾನಿಗಳಿಂದ ದೊರೆಯುತ್ತಿರುವ ಪ್ರೀತಿಯಲ್ಲಿ ನಾನು ತೊಯ್ದುಹೋಗಿದ್ದೇನೆ ಎಂದು ಹೇಳಿಕೊಂಡಿರುವ ಹೊ ಯಿಯಾನ್, ಈ ಪ್ರೀತಿಯು ನನ್ನ ಬದುಕನ್ನು 360 ಡಿಗ್ರಿ ಕೋನಕ್ಕೆ ಬದಲಾಯಿಸಿದೆ ಎಂದು ಉದ್ಗರಿಸಿದ್ದಾಳೆ.

ಇದನ್ನೂ ಓದಿ: Sonu Sood: ರಿಜೆಕ್ಟ್​ ಆಗಿದ್ದ ನಿಯತಕಾಲಿಕೆಯ ಮುಖ ಪುಟದಲ್ಲೇ ಸೋನು ಸೂದ್​ ಫೋಟೋ..!

ನನಗೆ ಯಾವಾಗಲೂ ಹಾಲಿವುಡ್‌ಗೆ ಹೋಗುವ ಬಯಕೆ ಇದ್ದು, ಅಮೆರಿಕ ಸಿನಿಮಾ ಹಾಗೂ ಟಿವಿ ಶೋಗಳಲ್ಲಿ ಕಾಣಸಿಕೊಳ್ಳಲು ಉತ್ಸುಕಳಾಗಿದ್ದೇನೆ. ಆದರೆ, 'ಸ್ಕ್ವಿಡ್ ಗೇಮ್' ಈಗಲೂ ತೆರೆದ ಸ್ಥಿತಿಯಲ್ಲಿರುವುದರಿಂದ ಅದು ನನ್ನ ಮನಸ್ಥಿತಿ ಪರಿವರ್ತಿಸಿದ್ದು, ಕೊನೆಗೆ ವಿಷಯ ಮತ್ತು ಸಂದೇಶ ಮಾತ್ರ ಪರಿಗಣನೆಗೆ ಬರುತ್ತದೆ ಎಂದು ನನಗೆ ಮನವರಿಕೆಯಾಗಿದೆ ಎಂದು ತನ್ನ ಅನಿಸಿಕೆ ಹಂಚಿಕೊಂಡಿದ್ದಾಳೆ.

ವಿಡಿಯೋ ನೋಡಿ:

ಇಂಗ್ಲಿಷ್ ಕಲಿಯಲು ಕಠಿಣ ಪರಿಶ್ರಮ
"ಸ್ಕ್ವಿಡ್ ಗೇಮ್" ಬಿಡುಗಡೆಯಾದ ಒಂದು ತಿಂಗಳಲ್ಲಿ ನನ್ನ ಜೀವನ ಸಾಕಷ್ಟು ಬದಲಾಗಿದೆ. ನಾನು ಇಂಗ್ಲಿಷ್ ಕಲಿಯಲು ಕಠಿಣ ಪರಿಶ್ರಮ ಪಡುತ್ತಿದ್ದು, ತನ್ನ ಧ್ವನಿ ಮತ್ತು ಅಭಿವ್ಯಕ್ತಿಯನ್ನು ತರಬೇತಿಗೊಳಿಸಿಕೊಳ್ಳುತ್ತಿದ್ದೇನೆ. ಇದರಿಂದ ಹಲವಾರು ಕಲೆ ಮತ್ತು ಸಿನಿಮಾಗಳ ಮೂಲಕ ಜಾಗತಿಕ ವೀಕ್ಷಣೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿದೆ' ಎಂದು ಅಮೆರಿಕ ಮೂಲದ 'ವೋಗ್' ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾಳೆ.

'ಸ್ಕ್ವಿಡ್ ಗೇಮ್' ಭಾರಿ ಜಾಗತಿಕ ಯಶಸ್ಸು ಗಳಿಸಿರುವುದು ಗುಟ್ಟಿನ ಸಂಗತಿಯೇನಲ್ಲ. ಅದು ಬಿಡುಗಡೆಯಾದ ಕೇವಲ ನಾಲ್ಕೇ ವಾರಗಳಲ್ಲಿ ಜಗತ್ತಿನಾದ್ಯಂತ ಇರುವ 142 ಮಿಲಿಯನ್‌ ಹೆಚ್ಚು ವೀಕ್ಷಕರನ್ನು ಸಂಪಾದಿಸಿದೆ. ಈ ಶೋನ ಭಾರಿ ಯಶಸ್ಸಿನೊಂದಿಗೆ ಜುಂಗ್ ಹೊ ಯಿಯಾನ್ ರಾತ್ರೋರಾತ್ರಿ ಅಂತಾರಾಷ್ಟ್ರೀಯ ತಾರೆಯಾಗಿ ಬದಲಾಗಿದ್ದಾಳೆ. ಸದ್ಯ ಆಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ 23.7 ಮಿಲಿಯನ್‌ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ.

ಯೋಲ್‌ನ ಫ್ಯಾಷನ್ ಪ್ರದರ್ಶನ
ಹೊ ಯಿಯಾನ್ ಜುಂಗ್ ಎಂದೇ ಕರೆಸಿಕೊಳ್ಳುವ ಜುಂಗ್ ಹೊ ಯಿಯಾನ್ ದಕ್ಷಿಣ ಕೊರಿಯಾದ ರೂಪದರ್ಶಿ ಹಾಗೂ ನಟಿ. 2010ರಲ್ಲಿ ಸ್ವತಂತ್ರ ರೂಪದರ್ಶಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿದ ಜುಂಗ್ ಹೊ ಯಿಯಾನ್, ಎರಡು ವರ್ಷಗಳ ಕಾಲ ಸಿಯೋಲ್‌ನ ಫ್ಯಾಷನ್ ಪ್ರದರ್ಶನಗಳಲ್ಲಿ ಹೆಜ್ಜೆ ಹಾಕಿದ್ದಳು.
2016ರಲ್ಲಿ ಲೂಯಿಸ್ ವುಟ್ಟಿನ್‌ ಕಂಪನಿಗಷ್ಟೇ ಸೀಮಿತವಾದ ರೂಪದರ್ಶಿಯಾಗಿ ಆಯ್ಕೆಯಾಗಿ, ನಂತರ 2021ರಲ್ಲಿ ಕಂಪನಿಯ ಜಗತ್ತಿನಾದ್ಯಂತ ರಾಯಭಾರಿಯಾಗಿ ನಿಯೋಜನೆಗೊಂಡಳು. 2021ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಸ್ಕ್ವಿಡ್ ಗೇಮ್'ನಲ್ಲಿ ಕಾಂಗ್ ಸೇ-ಬ್ಯೋಕ್ ಆಗಿ ಕಾಣಿಸಿಕೊಂಡಿರುವ ಜುಂಗ್ ಹೊ ಯಿಯಾನ್, ಶೋನಲ್ಲಿ ಅತ್ಯಂತ ಯಶಸ್ವಿ ತಾರೆಯಾಗಿ ಉದಯಿಸಿರುವ ಕಾರಣ ಅಂತಾರಾಷ್ಟ್ರೀಯ ಖ್ಯಾತಿ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಸಾಹಸಮಯ ಪ್ರದರ್ಶನ
'ಸ್ಕ್ವಿಡ್ ಗೇಮ್' ದಕ್ಷಿಣ ಕೊರಿಯಾದಿಂದ ಪ್ರಸಾರವಾಗುತ್ತಿರುವ ನೆಟ್‌ಫ್ಲಿಕ್ಸ್‌ನ ಅಸಲಿ ಸಾಹಸಮಯ ಪ್ರದರ್ಶನ. ಈ ಚಿತ್ರವನ್ನು ಹ್ವಾಂಗ್ ಡಾಂಗ್-ಹ್ಯುಕ್ ಬರೆದು, ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 17, 2021ರಿಂದ ಪ್ರಸಾರವಾಗುತ್ತಿರುವ ಈ ಚಿತ್ರದ ಜಾಗತಿಕ ವಿತರಣೆಯ ಹಕ್ಕನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಸ್ಕ್ವಿಡ್ ಗೇಮ್ ತನ್ನ ಅಭಿನಯ, ಅಸಲಿತನ, ನಿರ್ದೇಶನ, ದೃಶ್ಯಾತ್ಮಕ ಶೈಲಿ, ಸಂಗೀತ ಸಂಯೋಜನೆ, ಕಲಾ ವಿನ್ಯಾಸ, ಮನೋಭಾವ ಹಾಗೂ ಪರಿಕಲ್ಪನೆಯ ಕಾರಣಕ್ಕೆ ಅತ್ಯದ್ಭುತ ಧನಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Parineeti Chopra: ವ್ಹಾವ್... ಅದೇನ್​ ವಯ್ಯಾರ.. ಈಕೆಯ ಫೋಟೋ ನೋಡಿದ್ರೇನೆ ಕಂಟ್ರೋಲ್​ ತಪ್ಪುತ್ತೆ!​

ಕೇವಲ ಒಂದೇ ವಾರದಲ್ಲಿ ಈ ಶೋ ವಿಶ್ವದ ನಾನಾ ಭಾಗಗಳಲ್ಲಿ ನೆಟ್‌ಫ್ಲಿಕ್ಸ್‌ನ ಭಾರಿ ಜನಪ್ರಿಯ ಶೋ ಆಗಿ ಖ್ಯಾತಿ ಪಡೆಯಿತು. ತನ್ನ ಮೊದಲ ತಿಂಗಳ ಪ್ರಸಾರದಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾದ ಅಸಲಿ ಸರಣಿಯಾಗುವ ಮೂಲಕ ಪ್ರದರ್ಶನ ಸೇವೆಯ ವ್ಯವಸ್ಥಾಪಕರನ್ನು ಅಚ್ಚರಿಯ ಕಡಲಿಗೆ ನೂಕಿತು.
Published by:vanithasanjevani vanithasanjevani
First published: