Squid Game-2: ಈ ಬಾರಿ ಆ ಭಯಾನಕ ಗೊಂಬೆಯ ಜೊತೆ ಹೊಸ ಪಾತ್ರವೊಂದು ಕಾಣಿಸಿಕೊಳ್ಳಲಿದೆಯಂತೆ ನೋಡಿ

ಸ್ಕ್ವಿಡ್ ಗೇಮ್ ಅಭಿಮಾನಿಗಳಿಗೆ ಅದರ 2 ನೇ ಸರಣಿ ಬರುತ್ತಿರುವ ಸುದ್ದಿ ನಿಜಕ್ಕೂ ಸಂತೋಷದಾಯಕವೇ. ಅಲ್ಲದೆ, ಎರಡನೇ ಸರಣಿ ಮೊದಲನೇ ಸರಣಿಗಿಂತ ಭಿನ್ನವಾಗಿರುತ್ತದೆ ಮತ್ತು ಇನ್ನಷ್ಟು ರೋಚಕವಾಗಿಯೂ ಇರಬಹುದು. ಆದರೆ ನೆಟ್ಟಿಗರ ಕುತೂಹಲವನ್ನು ಕೆರಳಿಸಿರುವ ಸಂಗತಿ ಇನ್ನೂ ಒಂದಿದೆ.

ಸ್ಕ್ವಿಡ್ ಗೇಮ್-2

ಸ್ಕ್ವಿಡ್ ಗೇಮ್-2

  • Share this:
ಡಾಲ್ಗೋನ್ ಕ್ಯಾಂಡಿ, ರೆಡ್ ಲೈಟ್ ಗ್ರೀನ್ ಲೈಟ್, ಮಾರ್ಬಲ್ಸ್ .  ಈ ಎಲ್ಲಾ ಪದಗಳನ್ನು ಕೇಳಿದರೆ ಥಟ್ಟನೆ ನೆನಪಾಗುವುದು ಸ್ಕ್ವಿಡ್ ಗೇಮ್ ಸರಣಿ (Squid Game). ಕೊರಿಯನ್ ವೆಬ್ ಸರಣಿಗಳು (Korean Web Series) ಈಗ ನಮ್ಮ ದೇಶದಲ್ಲಿ ಜನಪ್ರಿಯತೆ ಪಡೆಯುತ್ತಿದ್ದು, ಅದರ ಅಭಿಮಾನಿಗಳು ಸ್ಕ್ವಿಡ್ ಗೇಮ್ ವೆಬ್ ಸರಣಿಯನ್ನಂತೂ ಖಂಡಿತಾ ವೀಕ್ಷಿಸಿರುತ್ತಾರೆ. ವಿಶ್ವದಾದ್ಯಂತ ವೆಬ್‍ಸರಣಿ ಪ್ರಿಯರ ಮನಗೆದ್ದ ಕಾರ್ಯಕ್ರಮವಿದು. ಈ ವೆಬ್ ಸರಣಿಯನ್ನು ಬರೆದು, ನಿರ್ದೇಶನ ಮತ್ತು ನಿರ್ಮಾಣ ಮಾಡಿರುವವರು ಹ್ಯಾಂಗ್ ಡಾಂಗ್ -ಹ್ಯೂಕ್ (Hwang Dong-hyuk). ಇದರ ಎರಡನೇ ಸೀಸನ್ ಬರಲಿದೆ ಎಂಬುದು ಸದ್ಯಕ್ಕೆ ಸ್ಕ್ವಿಡ್ ಗೇಮ್ ಅಭಿಮಾನಿಗಳ ಪಾಲಿಗೆ ಸಿಕ್ಕಿರುವ ಸಿಹಿ ಸುದ್ದಿ. ಓಟಿಟಿ ವೇದಿಕೆ ನೆಟ್‍ಫ್ಲಿಕ್ಸ್ ಇದರ ಟೀಸರ್ ಅನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಅದನ್ನು ಕಂಡು ನೆಟ್ಟಿಗರು ಸಿಕ್ಕಾಪಟ್ಟೆ ಖುಷಿಯಾಗಿದ್ದು, ಆ ಕುರಿತು ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಸ್ಕ್ವಿಡ್ ಗೇಮ್- 2 ರಲ್ಲಿ ಹೊಸ ಪಾತ್ರ
ಸ್ಕ್ವಿಡ್ ಗೇಮ್ ಅಭಿಮಾನಿಗಳಿಗೆ ಅದರ 2 ನೇ ಸರಣಿ ಬರುತ್ತಿರುವ ಸುದ್ದಿ ನಿಜಕ್ಕೂ ಸಂತೋಷದಾಯಕವೇ. ಅಲ್ಲದೆ, ಎರಡನೇ ಸರಣಿ ಮೊದಲನೇ ಸರಣಿಗಿಂತ ಭಿನ್ನವಾಗಿರುತ್ತದೆ ಮತ್ತು ಇನ್ನಷ್ಟು ರೋಚಕವಾಗಿಯೂ ಇರಬಹುದು. ಆದರೆ ನೆಟ್ಟಿಗರ ಕುತೂಹಲವನ್ನು ಕೆರಳಿಸಿರುವ ಸಂಗತಿ ಇನ್ನೂ ಒಂದಿದೆ. ಅದುವೇ ಸ್ಕ್ವಿಡ್ ಗೇಮ್ 2 ರಲ್ಲಿ ಕಂಡು ಬರಲಿರುವ ಹೊಸ ಪಾತ್ರ.

ಇದನ್ನೂ ಓದಿ: 777 Charlie ಸಿನಿಮಾದಲ್ಲಿ ಚಾರ್ಲಿಗೆ ಕೊಟ್ಟ ಸಂಬಳ ಎಷ್ಟು ಗೊತ್ತಾ? ಹೀರೋಗೂ ಇಷ್ಟು ಸಂಭಾವನೆ ಇಲ್ವಂತೆ

ಈ ಶೋ ಅನ್ನು ರಚಿಸಿರುವವರು ಮಾಡಿರುವ ಹೊಸ ಅಧಿಕೃತ ಘೋಷಣೆಯೊಂದರ ಪ್ರಕಾರ, ಸ್ಕ್ವಿಡ್ ಗೇಮ್‍ನಲ್ಲಿ ಸರಣಿಯೊಳಗಿನ ಪಾತ್ರಗಳನ್ನು ಮಾತ್ರವಲ್ಲದೆ ನೋಡುಗರನ್ನೂ ನಡುಗಿಸಿದ್ದ ಭಯಾನಕ ಗೊಂಬೆ ಯಂಗ್ ಹೀ ಜೊತೆಗೆ ಈ ಬಾರಿ ಅದರ ಬಾಯ್‍ಫ್ರೆಂಡ್ ಕೂಡ ಕಾಣಿಸಿಕೊಳ್ಳಲಿದೆಯಂತೆ!

ಯಂಗ್ ಹೀ ಜೊತೆಗೆ ಚಿಯೋಲ್ -ಸೂ
ಆ ಬಾಯ್ ಫ್ರೆಂಡ್‍ಗೆ ಚಿಯೋಲ್ -ಸೂ ಎಂದು ಹೆಸರಿಡಲಾಗಿದೆ. ಯಂಗ್ ಹೀ ಒಂದೇ ಅಷ್ಟೊಂದು ಭಯ ಹುಟ್ಟಿಸಿತ್ತು, ಇನ್ನು ಬಾಯ್ ಫ್ರೆಂಡ್ ಕೂಡ ಜೊತೆಗೂಡಿದರೆ ಹೇಗಿರುತ್ತದೆ? ನೀವೇ ಒಮ್ಮೆ ಊಹಿಸಿ ನೋಡಿ. ಸ್ಕ್ವಿಡ್ ಗೇಮ್ ಅಭಿಮಾನಿಗಳಲ್ಲಂತೂ ಈ ಸಂಗತಿ ಕೌತುಕ ಮೂಡಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಹೊಸ ಸೀಸನ್‍ನಲ್ಲಿ ಬೇರೆ ಏನೆಲ್ಲಾ ಇದೇ ಗೊತ್ತಾ?
ನೆಟ್‍ಫ್ಲಿಕ್ಸ್ ಹಂಚಿಕೊಂಡ ಪ್ರಕಟಣೆಯ ಪ್ರಕಾರ, ಸ್ಕ್ವಿಡ್ ಗೇಮ್‍ನ ಕ್ರೀಯೇಟರ್, ಹೊಸ ಸೀಸನ್‍ನಲ್ಲಿ ಏನನ್ನೆಲ್ಲಾ ನಿರೀಕ್ಷಿಸಬಹುದು ಎಂಬ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಕಳೆದ ವರ್ಷ ‘ಸ್ಕ್ವಿಡ್ ಗೇಮ್’ ನ ಮೊದಲ ಸೀಸನ್‍ಗೆ ಜೀವ ತುಂಬಲು 12 ವರ್ಷಗಳು ಬೇಕಾಯಿತು. ಆದರೆ ಅದು ನೆಟ್‍ಫ್ಲಿಕ್ಸ್ ಇದುವರೆಗಿನ ಅತ್ಯಂತ ಜನಪ್ರಿಯ ವೆಬ್‍ಸರಣಿಯಾಗಿ ಹೊರಹೊಮ್ಮಲು 12 ದಿನಗಳನ್ನು ತೆಗೆದುಕೊಂಡಿತು.

‘ಸ್ಕ್ವಿಡ್ ಗೇಮ್’ ನ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ಜಗತ್ತಿನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಶೋ ಅನ್ನು ವೀಕ್ಷಿಸಿದಕ್ಕಾಗಿ ಮತ್ತು ಪ್ರೀತಿಸಿದಕ್ಕಾಗಿ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kiara Advani: ವೈಟ್​ ಸಾರಿಯಲ್ಲಿ ಮಿಂಚಿದ ಕಿಯಾರಾ, ಇವರ ಫೋಟೋಗೆ ನೆಟ್ಟಿಗರು ಫುಲ್​ ಫಿದಾ

“ಆಕೆಯ ಪ್ರೇಮ ಜೀವನ ನನ್ನದಕ್ಕಿಂತ ಉತ್ತಮವಾಗಿರಬಹುದು. . .” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಬರೆದುಕೊಂಡಿದ್ದರೆ, ಇನ್ನೊಬ್ಬರು “ ಸ್ಕ್ವಿಡ್ ಗೇಮ್ ಸೀಸನ್ ಎರಡರಲ್ಲಿ ರೋಬೋಟ್ ಗೊಂಬೆಯ ಬಾಯ್‍ಫ್ರೆಂಡ್‍ನನ್ನು ಭೇಟಿಯಾಗುವುದನ್ನು ಕಾಯಲು ಸಾಧ್ಯವಾಗುತ್ತಿಲ್ಲ!” ಎಂದು ಪ್ರತಿಕ್ರಿಯಿಸಿದ್ದಾರೆ. “ಒಂದು ಗೊಂಬೆಗೂ ಕೂಡ ಬಾಯ್ ಫ್ರೆಂಡ್ ಇದೆ, ನಾನು ನನ್ನ ಜೀವನದಲ್ಲಿ ಏನು ಮಾಡುತ್ತಿದ್ದೇನೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. “ಈ ಬಾರಿ ಅದನ್ನು ಇಂಗ್ಲಿಷ್‍ನಲ್ಲಿ ವೀಕ್ಷಿಸಲು ಸಿಗಬಹುದೆ? “ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. “ಯಾರೂ ಅವಳ ಬಾಯ್ ಫ್ರೆಂಡ್ ಬಗ್ಗೆ ಏಕೆ ಮಾತನಾಡುತ್ತಿಲ್ಲ “ ಇನ್ನೊಬ್ಬ ನೆಟ್ಟಿಗ ಕೇಳಿದ್ದಾರೆ. “ಇದು ತುಂಬಾ ತಪ್ಪು” ಎಂದು ಇನ್ನೊಬ್ಬ ಬಳಕೆದಾರರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
Published by:Ashwini Prabhu
First published: