Bigg Boss ಮನೆಯ ಪ್ರೀತಿ ಕಥೆ ಬಿಚ್ಚಿಟ್ಟ ಸ್ಪೂರ್ತಿ, ರಾಕೇಶ್ ಮೇಲಿರೋದು ಪ್ರೀತಿನಾ? ಕ್ರಶಾ?

ರಾಕೇಶ್​, ಸೋನುಗೌಡ, ಸ್ಪೂರ್ತಿ ನಡುವಿನ ತ್ರಿಕೋನ ಪ್ರೇಮ ಕಥೆ ನಡೀದೆ ಅನ್ನೋ ಸುದ್ದಿ ಎಲ್ಲೆಡೆ ಹರಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಫೂರ್ತಿ ಗೌಡ, ಹಾಗೇನು ಇಲ್ಲ ಎಂದು ನಕ್ಕರು, ರಾಕೇಶ್​ ಮೇಲೆ  ನನಗೆ ಪ್ರೀತಿ ಅಥವಾ ಕ್ರಶ್​ ಅಂತ ಯಾವುದು ಇಲ್ಲ. ನಾವಿಬ್ಬರು ಒಳ್ಳೆಯ ಫ್ರೆಂಡ್​ ಎಂದು ಹೇಳಿದ್ದಾರೆ.

ಸ್ಫೂರ್ತಿ ಗೌಡ

ಸ್ಫೂರ್ತಿ ಗೌಡ

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ.  ಎರಡನೇ ವಾರದ (2nd Week) ಎಲಿಮಿನೇಷನ್​ನಲ್ಲಿ (Elimination) ಸ್ಪೂರ್ತಿ ಗೌಡ ಹೊರ ಹೋಗಿದ್ದಾರೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದರು . ಅತಿ ಕಡಿಮೆ ವೋಟ್ ಪಡೆದು ಸ್ಫೂರ್ತಿ ಗೌಡ (Spoorthi Gowda) ಎಲಿಮಿನೇಟ್ ಆಗಿದ್ದಾರೆ. ನ್ಯೂಸ್​ 18 ಕನ್ನಡ ಜೊತೆ ಮಾತಾಡಿ ಸ್ಪೂರ್ತಿ ಗೌಡ, ದೊಡ್ಮನೆಯಲ್ಲಿ 2 ವಾರ ಕಳೆದ ಅನುಭವವನ್ನು ಹಂಚಿಕೊಂಡಿದ್ದಾರೆ.

ರಾಕೇಶ್ ಮೇಲಿರೋದು ಪ್ರೀತಿನಾ? ಕ್ರಶಾ?

ರಾಕೇಶ್​, ಸೋನುಗೌಡ, ಸ್ಪೂರ್ತಿ ನಡುವಿನ ತ್ರಿಕೋನ ಪ್ರೇಮ ಕಥೆ ನಡೀದೆ ಅನ್ನೋ ಸುದ್ದಿ ಎಲ್ಲೆಡೆ ಹರಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಫೂರ್ತಿ ಗೌಡ, ಹಾಗೇನು ಇಲ್ಲ ಎಂದು ನಕ್ಕರು, ರಾಕೇಶ್​ ಮೇಲೆ  ನನಗೆ ಪ್ರೀತಿ ಅಥವಾ ಕ್ರಶ್​ ಅಂತ ಯಾವುದು ಇಲ್ಲ. ನಾವಿಬ್ಬರು ಒಳ್ಳೆಯ ಫ್ರೆಂಡ್​ ಎಂದು ಹೇಳಿದ್ದಾರೆ.

ರಾಕೇಶ್​ ಅವರೇ ಗೆಲ್ಲಬೇಕು?

ಬಿಗ್​ ಬಾಸ್​ ವಿನ್ನರ್​ ಯಾರಾಗ್ಬೇಕು ಅನ್ನೋ ಪ್ರಶ್ನೆಗೆ ಉತ್ತರಿಸಿದ ಸ್ಪೂರ್ತಿ,  ರಾಕೇಶ್ ಅವರೇ ಗೆಲ್ಲಬೇಕು ಎಂದು ಹೇಳಿದ್ದಾರೆ. ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವ್ರು, ಬಿಗ್​ ಬಾಸ್​ ಮನೆಯಲ್ಲಿ ಅವರು ಎಲ್ಲರ ಜೊತೆ ಹೊಂದುಕೊಂಡು ಹೋಗ್ತಿದ್ದಾರೆ. ಹಾಗೇ ಟಾಸ್ಕ್​ನಲ್ಲೂ ಚೆನ್ನಾಗಿಯೇ ಆಡ್ತಾರೆ ಎಂದು ಸ್ಪೂರ್ತಿಗೌಡ ಹೇಳಿದ್ರು.

bigg boss ott elimination spoorthi gowda eliminate
ಸ್ಫೂರ್ತಿ ಗೌಡ


ಬಿಗ್​ ಬಾಸ್​ ಮನೆಯಲ್ಲಿ ಗುಂಪುಗಾರಿಕೆ ಇದೆ

ದೊಡ್ಮನೆಯಿಂದ ಹೊರಬಂದ ಬಳಿಕ ಅವರು ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಗುಂಪುಗಾರಿಕೆ ಇದೆ ಎಂಬುದನ್ನು ಸ್ಫೂರ್ತಿ ಗೌಡ (Spoorthi Gowda) ವಿವರಿಸಿದ್ದಾರೆ. ‘ಕ್ಯಾಪ್ಟನ್​ ಹೇಳಿದ್ದನ್ನು ನಾನು ಫಾಲೋ ಮಾಡಿದೆ. ಒಂಟಿಯಾಗಿ ಆಟ ಆಡಿದ್ದರೆ ನಾನು ಗೆಲ್ಲುತ್ತಿದ್ದೆ. ನಮ್ಮ ಗ್ರೂಪ್​​ ಗೆಲ್ಲಬೇಕು ಎಂಬ ಆಶಯ ನನಗಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ ನನಗೆ ಈಗ ಅನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಈ ವಾರ ಸೋನು ಗೌಡ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್​ ಅಡಿಗ, ಆರ್ಯವರ್ಧನ್ ಗುರೂಜಿ ಮೇಲೆ ನಾಮಿನೇಟ್​ ಆಗಿದ್ರು. ಇವರಲ್ಲಿ ಎಲ್ಲರೂ ಟಾಸ್ಕ್​ನನ್ನು ಉತ್ತಮವಾಗಿ ಆಡಿದ್ರು. ಆದ್ರೆ ಸ್ಫೂರ್ತಿ ಗೌಡ ನೀಡಿದ ಪರ್ಫಾರ್ಮೆನ್ಸ್ ಕಡಿಮೆ ಹೀಗಾಗಿ ಅವರಿಗೆ ಹೆಚ್ಚು ವೋಟ್​ ಬಿದ್ದಿಲ್ಲ.

ಸ್ಪೂರ್ತಿ ಗೌಡಗೆ ಅತಿ ಕಡಿಮೆ ವೋಟ್​

ಮೊದಲು ರಾಕೇಶ್ ಸೇಫ್ ಎಂದು ಸುದೀಪ್ ಘೋಷಿಸಿದರು. ನಂತರ ಆರ್ಯವರ್ಧನ್, ಸಾನ್ಯಾ, ಸೋಮಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಅಕ್ಷತಾ ಸೇಫ್ ಎಂದು ಸುದೀಪ್ ಘೋಷಿಸಿದರು. ಬಳಿಕ ಸ್ಫೂರ್ತಿ ಹೊರ ಹೋಗುತ್ತಿರುವ ಬಗ್ಗೆ ತಿಳಿಸಿದ್ರು.

ಸ್ಪೂರ್ಥಿಗೆ ಕಿಚ್ಚ ಸುದೀಪ್​ ಕ್ಲಾಸ್​

ಟಾಸ್ಕ್​ ವಿಚಾರದಲ್ಲಿ ನೀವು ತಪ್ಪು ಮಾಡಿದ್ರಿ ಎಂದು ಸುದೀಪ್​ ಹೇಳಿದ್ದಾರೆ. ನಿಮಗೆ ಆಟವಾಡಲು ಚಾನ್ಸ್​ ಸಿಕ್ಕಿದ್ರು ಬಳಸಿಕೊಳ್ಳಲಿಲ್ಲ ಯಾಕೆ? ಉದಾಸೀನಾ ತೋರಿದ್ರಿ ಎಂದು ಸುದೀಪ್​ ಕಿಡಿಕಾರಿದ್ರು

ಇದನ್ನೂ ಓದಿ: Bigg Boss OTT: ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಪರ್ಧಿಗಳ ಸರ್ಕಸ್, ಪ್ರೇಕ್ಷಕರಿಗೆ ಮಜವೋ ಮಜ!

ಬಿಗ್​ ಬಾಸ್​ ಮನೆಯಿಂದ ಸ್ಪೂರ್ತಿ ಗೌಡ  ಔಟ್​

ಸ್ಫೂರ್ತಿ ಗೌಡ ಅವರು ಈ ವಾರದ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ತೋರಿಸಿಲ್ಲ. ಚಿಕ್ಕ ವಿಚಾರಕ್ಕೆ ದೊಡ್ಡದಾಗಿ ಕೂಗಾಡಿದ್ದರು. ಅಲ್ಲದೆ, ಬಿಗ್ ಬಾಸ್ ಮನೆಯಲ್ಲಿ ತಮಗೆ ಉಳಿದುಕೊಳ್ಳಲು ಆಸಕ್ತಿ ಇಲ್ಲ ಎಂಬುದನ್ನು ಪದೇಪದೇ ಹೇಳಿದ್ದರು. ಈ ವಿಚಾರಕ್ಕೆ ಅವರಿಗೆ ಕಡಿಮೆ ವೋಟ್ ಬಿದ್ದಿದೆ.

ಅರ್ಜುನ್​ ರಮೇಶ್​ ಸೇಫ್​

ಈ ಮಧ್ಯೆ ಕಳೆದ ವಾರ ಕ್ಯಾಪ್ಟನ್ ಆಗಿದ್ದ ಅರ್ಜುನ್ ರಮೇಶ್ (Arjun Ramesh) ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗ್ತಿತ್ತು.  ಟಾಸ್ಕ್​ ವೇಳೆ ಗಾಯಗೊಂಡಿದ್ದ ಅರ್ಜುನ್​ ರಮೇಶ್​, ಕೆಲ ದಿನಗಳಿಂದ ನೋವಿನಿಂದ ಬಳಲುತ್ತಿದ್ದಾರೆ. ಆದ್ರೆ ಅವರು ಕೂಡ ಸೇಪ್​ ಆಗಿದ್ದಾರೆ.
Published by:Pavana HS
First published: