Spider Man: ಯವ್ವಿ.. ಯವ್ವಿ ಈ ಪಾಟಿ ಕಾಸ್ಟ್ಲಿ ಮನೆನಾ? ಹೊಸ ಬಂಗಲೆ ಖರೀದಿಸಿದ ಸ್ಪೈಡರ್​​ ಮ್ಯಾನ್​ ಜೋಡಿ!

ಸ್ಪೈಡರ್ ಮ್ಯಾನ್ ಹೀರೋ ಟಾಮ್ ಹಾಲೆಂಡ್ ಯುಕೆಯಲ್ಲಿ ಸೂಪರ್‌ಸ್ಟಾರ್ ಗೆಳತಿ ಝೆಂಡಯಾ ಜೊತೆ ವಾಸಿಸುವ ಸಲುವಾಗಿ 3 ಮಿಲಿಯನ್‌ ಪೌಂಡ್‌(3 Million Pound)ನಷ್ಟು ಬೆಲೆ ಬಾಳುವ ಮನೆಯೊಂದನ್ನು ಖರೀದಿ ಮಾಡಿದ್ದಾರೆ.

ಝೆಂಡಯಾ, ಟಾಮ್​​ ಹಾಲೆಂಡ್

ಝೆಂಡಯಾ, ಟಾಮ್​​ ಹಾಲೆಂಡ್

  • Share this:
ಝೆಂಡಯಾ (Zendaya) ಮತ್ತು ಟಾಮ್​ ಹಾಲೆಂಡ್ ​(Tom Holland) ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಹಾಲಿವುಡ್‌ನ ಗೋಲ್ಡನ್ ಜೋಡಿ (Hollywood Golden Couple) ಎಂದೇ ಇಬ್ಬರು ಜನಪ್ರಿಯರಾಗಿದ್ದಾರೆ. ಸದ್ಯ ಟಾಮ್ ಹಾಲೆಂಡ್ ಮತ್ತು ಝೆಂಡಯಾ UKಯಲ್ಲಿ 3 ಮಿಲಿಯನ್ ಪೌಂಡ್‌ ಮೌಲ್ಯದ ಮನೆಯೊಂದನ್ನು ಖರೀದಿಸಿದ್ದಾರೆ. ಮನೆಯ ನವೀಕರಣದ ಕೆಲಸ ನಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಹೊಸ ಮನೆಗೆ ಸ್ಪೈಡರ್-ಮ್ಯಾನ್ (Spider Man) ಪ್ರೇಮಿಗಳು ಎಂಟ್ರಿ ನೀಡಲಿದ್ದಾರೆ. ಹಾಲಿವುಡ್‌ನ ಗೋಲ್ಡನ್ ಜೋಡಿಗಳು ಬ್ರಿಟನ್ ಅನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಸ್ಪೈಡರ್ ಮ್ಯಾನ್ ಹೀರೋ ಟಾಮ್ ಹಾಲೆಂಡ್ ಯುಕೆಯಲ್ಲಿ ಸೂಪರ್‌ಸ್ಟಾರ್ ಗೆಳತಿ ಝೆಂಡಯಾ ಜೊತೆ ವಾಸಿಸುವ ಸಲುವಾಗಿ 3 ಮಿಲಿಯನ್‌ ಪೌಂಡ್‌(3 Million Pound)ನಷ್ಟು ಬೆಲೆ ಬಾಳುವ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಏಂಜಲೀನಾ ಜೋಲೀ, ಸರ್ ಡೇವಿಡ್ ಅಟೆನ್‌ಬರೋ ಮತ್ತು ಸರ್ ಮಿಕ್ ಜಾಗರ್ ಬಳಿ 6 ರೂಮ್‌ಗಳಿರುವ ಭವ್ಯ ಬಂಗಲೆಗೆ ಕಾಲಿಡಲು ಸಜ್ಜಾಗಿದ್ದಾರೆ.

ಅಬ್ಬಾ.. ಇಷ್ಟು ಕಾಸ್ಟ್ಲಿ ಮನೆನಾ?

2016ರಲ್ಲಿ ಸ್ಪೈಡರ್ ಮ್ಯಾನ್: ಹೋಮ್‌ಕಮಿಂಗ್ ಸೆಟ್‌ನಲ್ಲಿ ಭೇಟಿಯಾದ ಟಾಮ್ ಹಾಲೆಂಡ್ ಮತ್ತು ಝೆಂಡಯಾ ಪ್ರಸ್ತುತ ಸ್ಟಾರ್ ಕಪಲ್‌ಗಳು. 25 ವರ್ಷದ ವಯಸ್ಸಿನ ಇಬ್ಬರು ಹಾಲಿವುಡ್‌ನಲ್ಲಿ ಸ್ಪೈಡರ್ ಮ್ಯಾನ್ ಪ್ರೇಮಿಗಳೆಂದೇ ಖ್ಯಾತರಾಗಿದ್ದಾರೆ. ಇಬ್ಬರು ಜೊತೆಯಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹೊಸ ಮನೆಯ ನವೀಕರಣ ಕಾರ್ಯ ನಡೆಯುತ್ತಿದ್ದು, ಟಾಮ್ ಹಾಲೆಂಡ್ ಮತ್ತು ಝೆಂಡಯಾ ಮನೆಯಲ್ಲಿ ಲಕ್ಷುರಿ ಕೋಣೆಗಳು, ಜಿಮ್, ಸಿನಿಮಾ ಹಾಲ್ ಮತ್ತು ಮ್ಯಾನ್ ಗುಹೆ ಇದೆ.

3 ಮಿಲಿಯನ್​ ಪೌಂಡ್​ ಮೌಲದ್ಯ ಮನೆ ವಿಶೇಷತೆ ಏನು?

ಯುಫೋರಿಯಾದಲ್ಲಿ ಝೆಂಡಯಾ ಟಿವಿ ಸೀರಿಸ್‌ನ ತಾರೆಯಾಗಿದ್ದಾಗ ಟಾಮ್ ಹಾಲೆಂಡ್ ಅಲ್ಲೂ ಒಂದು ಮನೆ ಖರೀದಿ ಮಾಡಿದ್ದರು. ಲಾಸ್ ಏಂಜಲೀಸ್‌ನಲ್ಲಿ ಸಹ ಮೂರು ಬೆಡ್ ರೂಮ್ ಇರುವ ಮನೆಯನ್ನು ಹೊಂದಿದ್ದಾರೆ. ಟಾಮ್ ಈ ಹಿಂದೆ ತಾನು ಹುಟ್ಟಿ ಬೆಳೆದ ಥೇಮ್ಸ್ ಹತ್ತಿರ ಸೌತ್ ವೆಸ್ಟ್ ಲಂಡನ್‌ನ ಸ್ವಾಂಕಿ ರಿಚ್‌ಮಂಡ್‌ನಲ್ಲಿ ಆಸ್ತಿಯನ್ನು ಖರೀದಿಸಿದ್ದರು.

ಇದನ್ನು ಓದಿ: ಚಾನ್ಸ್​ ಬೇಕು ಅಂದ್ರೆ ಮಂಚಕ್ಕೆ ಬಾ ಅಂದ್ರಂತೆ ಆ ನಿರ್ದೇಶಕ.. ಕಾಸ್ಟಿಂಗ್​ ಕೌಚ್​ ಬಗ್ಗೆ ಮೌನ ಮುರಿದ ನಟಿ ದಿವ್ಯಾಂಕ!

ಹುಟ್ಟಿದ ಊರಲ್ಲೇ ಮನೆ ಖರೀದಿಸಿದ ಟಾಮ್​!

ಇಬ್ಬರು ಮೂಲತಃ ಬ್ರಿಟನ್ ಮೂಲದವರಾಗಿದ್ದು ಈಗ ತವರಿಗೆ ಮರಳಿದ್ದಾರೆ. ಟಾಮ್ ಮತ್ತು ಝೆಂಡಯಾ ತಮ್ಮ ಮನೆಯನ್ನು ಲಂಡನ್‌ನಲ್ಲಿ ಖರೀದಿಸಲು ತುಂಬಾ ಉತ್ಸುಕರಾಗಿದ್ದರು. ಟಾಮ್ ಹುಟ್ಟಿ ಬೆಳೆದ ಊರಾಗಿದ್ದು ಇಲ್ಲೇ ನೆಲೆ ಊರಲು ಕಾಯುತ್ತಿದ್ದರು. ಬಹಳ ವರ್ಷಗಳ ಬಳಿಕ ಈ ಆಸೆ ಕೈಗೂಡಿದೆ ಎಂದು ಇಬ್ಬರು ಪ್ರೇಮಿಗಳು ಸಂತಸಗೊಂಡಿದ್ದಾರೆ.

ಸಖತ್​ ಥ್ರಿಲ್​ ಆಗಿದ್ದಾರಂತೆ ಸ್ಪೈಡರ್ ಮ್ಯಾನ್​ ಜೋಡಿ!

ಸುದ್ದಿ ಮೂಲ ಹೇಳುವ ಪ್ರಕಾರ ಟಾಮ್ ಮತ್ತು ಝೆಂಡಯಾ ಚಂದ್ರನ ಮೇಲೆ ಇರುವಷ್ಟು ಸಂತಸದಿಂದಿದ್ದಾರೆ ಎಂದು ಅವರ ಮನೆಯನ್ನು ಬಣ್ಣಿಸಿದ್ದಾರೆ. ಮನೆಯ ನವೀಕರಣದ ಕೆಲಸವನ್ನು 250,000 ಪೌಂಡ್‌ ವೆಚ್ಚದಲ್ಲಿ ಕೆಜಿಎಫ್ ಗ್ರೂಪ್ ನಡೆಸುತ್ತಿದೆ. ಟಾಮ್ ಅವರು ಮನೆಯಲ್ಲಿ ಹೈಟೆಕ್ ಭದ್ರತೆ ಒದಗಿಸಲು 8 ಅಡಿಯ ಸ್ಟೀಲ್ ಗೋಡೆಗಳನ್ನು ಹಾಕಿಸಿದ್ದಾರಂತೆ.ಮನೆಯ ನವೀಕರಣವು ಪೂರ್ಣಗೊಂಡ ನಂತರ, ಬಹುಶಃ ಬೇಸಿಗೆಯ ಕೊನೆಯಲ್ಲಿ ಅವರು ಸ್ಥಳಾಂತರಗೊಳ್ಳುವ ಯೋಜನೆ ಹಾಕಿಕೊಂಡಿದ್ದಾರಂತೆ.

ಇದನ್ನು ಓದಿ: ಭಾರತದಲ್ಲಿ ದಾಖಲೆ ಬರೆದ `ಸ್ಪೈಡರ್​ ಮ್ಯಾನ್​​’: ರಿಲೀಸ್​ಗೂ ಮುನ್ನವೇ ಟಿಕೆಟ್​ ಸೋಲ್ಡ್​​ಔಟ್​!

ರಿಚ್ಮಂಡ್ ಅನ್ನು ಲಂಡನ್‌ನ ಆರ್ಕಾಡಿಯಾ ಎಂದು ಕರೆಯಲಾಗುತ್ತದೆ ಮತ್ತು A-ಲಿಸ್ಟರ್‌ಗಳ ಸ್ಟ್ರಿಂಗ್‌ಗೆ ನೆಲೆಯಾಗಿದೆ. ಇಲ್ಲಿ ಸರ್ ಮಿಕ್ ಜಾಗರ್, ಏಂಜಲೀನಾ ಜೋಲೀ, ಸರ್ ಡೇವಿಡ್ ಅಟೆನ್‌ಬರೋ ಮತ್ತು ಟಾಮ್ ಹಾರ್ಡಿ ಸೇರಿ ಹಲವು ಪ್ರಸಿದ್ಧ ವ್ಯಕ್ತಿಗಳು ನೆಲೆಸಿದ್ದಾರೆ. ಡಿಸ್ನಿ ಚಾನೆಲ್ ಸಿಟ್‌ಕಾಮ್‌ನಲ್ಲಿ ಝೆಂಡಯಾ ಖ್ಯಾತಿ ಗಳಿಸಿದ್ದಾಳೆ. HBO ನಾಟಕ ಸರಣಿ ಯುಫೋರಿಯಾದಲ್ಲಿ ಡ್ರಗ್ ವ್ಯಸನಿ ಹದಿಹರೆಯದ ಪಾತ್ರಕ್ಕಾಗಿ ಅವಳು ಎಮ್ಮಿ ಪ್ರಶಸ್ತಿ ಗೆದ್ದಾಗಿನಿಂದ ಅವಳ ಜನಪ್ರಿಯತೆಯು ಗಗನಕ್ಕೇರಿದೆ. ದಿ ಗ್ರೇಟೆಸ್ಟ್ ಶೋಮ್ಯಾನ್‌ನಲ್ಲಿ ನಟಿಸಿದ್ದು, ಆಲ್ಬಮ್ ಕೂಡ ಬಿಡುಗಡೆ ಮಾಡಿದ್ದಾಳೆ.
Published by:Vasudeva M
First published: