ಭಾರತದ ಗಲ್ಲಾಪೆಟ್ಟಿಗೆ ಲೂಟಿ ಹೊಡೆದ `ಸ್ಪೈಡರ್​ ಮ್ಯಾನ್​‘: ಒಂದೇ ದಿನಕ್ಕೆ ಇಷ್ಟೊಂದು ಕಲೆಕ್ಷನ್​!

ಈ ಸಿನಿಮಾ ಭಾರತದಲ್ಲಿ ಮೊದಲ ದಿನ 33-35 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಮೂಲಕ ಮೊದಲ ದಿನದ ಕಲೆಕ್ಷನ್​ ವಿಚಾರದಲ್ಲಿ ಬಾಲಿವುಡ್​ನ ಸೂರ್ಯವಂಶಿ ಸಿನಿಮಾವನ್ನು ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಹಿಂದಿಕ್ಕಿದೆ.

ಸ್ಪೈಡರ್​ ಮ್ಯಾನ್​ ನೋ ವೇ ಹೋಂ ಪೋಸ್ಟರ್​

ಸ್ಪೈಡರ್​ ಮ್ಯಾನ್​ ನೋ ವೇ ಹೋಂ ಪೋಸ್ಟರ್​

  • Share this:
ಭಾರತದಲ್ಲಿ ಹಾಲಿವುಡ್ (Hollywood)​ ಸಿನಿಮಾಗಳನ್ನು ನೋಡುವ ಜನರು ಹೆಚ್ಚಿದ್ದಾರೆ. ಎಲ್ಲ ಇಂಗ್ಲಿಷ್​ ಸಿನಿಮಾಗಳನ್ನು ನೋಡದೇ ಇದ್ದರೂ, ಫ್ಯಾಂಟಸಿ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. ಅದರಲ್ಲೂ ಮಾರ್ವೆಲ್ಸ್ (Marvels)​​, ಡಿಸಿ (DC) ಸಿನಿಮಾಗಳೆಂದರೇ ತುಂಬಾ ಅಚ್ಚುಮೆಚ್ಚು. ಹೀಗಾಗಿ ಹಾಲಿವುಡ್​ಗೆ ಭಾರತದ ಗಲ್ಲಾಪೆಟ್ಟಿಗೆ ಮೇಲೆ ಕಣ್ಣು. ಪ್ರತಿ ಮಾರ್ವೆಲ್ಸ್​ ಸಿನಿಮಾವನ್ನು ಭಾರತದಲ್ಲಿ ರಿಲೀಸ್​ ಮಾಡುವ ಮುನ್ನ ಕಲೆಕ್ಷನ್​ ಬಗ್ಗೆ ಲೆಕ್ಕ ಮಾಡಿರುತ್ತಾರೆ. ಟಾಮ್ ಹಾಲೆಂಡ್ (Tom Holland)​ ನಟನೆಯ ‘ಸ್ಪೈಡರ್​ ಮ್ಯಾನ್​’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ (Spider-Man: No Way Home) ಡಿಸೆಂಬರ್​ 16ರಂದು ಬಿಡುಗಡೆಯಾಗಿ ಬಾಕ್ಸ್​ಆಫೀಸ್​ ಉಡೀಸ್​ ಮಾಡಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಲೆಕ್ಷನ್ (Collection)​ ವಿಚಾರದಲ್ಲೂ  ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ 'ಸ್ಪೈಡರ್‌ಮ್ಯಾನ್; ನೋ ವೇ ಹೋಮ್'  ಮೊದಲ ದಿನದ ಕಲೆಕ್ಷನ್‌ನಲ್ಲಿ ದಾಖಲೆಯನ್ನೇ ಬರೆದಿದೆ. ಒಂದು ದಿನದ ಕಲೆಕ್ಷನ್​ ನೋಡಿ ಎಲ್ಲರೂ ದಂಗಾಗಿ ಹೋಗಿದ್ದಾರೆ. ಭಾರತದ ಸ್ಟಾರ್ ನಟ (Indian Star Actors)ರ ಸಿನಿಮಾಗಳ ಗಳಿಕೆಯ ದಾಖಲೆಯನ್ನೇ ಹಿಂದಿಕ್ಕಿರುವ 'ಸ್ಪೈಡರ್‌ಮ್ಯಾನ್' ಸಿನಿಮಾ ಹೊಸ ದಾಖಲೆ (Record)ಯನ್ನೇ ಬರೆದಿದೆ. ಹಾಲಿವುಡ್​ನ ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದೆಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೊದಲ ದಿನವೇ 33 ಕೋಟಿ ಬಾಚಿದ ‘ಸ್ಪೈಡರ್ ಮ್ಯಾನ್​’!

‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರ ಈ ಸರಣಿಯ ಫೇವರಿಟ್​ ಸಿನಿಮಾ ಎಂದು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ, ಈ ಸಿನಿಮಾ ಭಾರತದಲ್ಲಿ ಮೊದಲ ದಿನ 33-35 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಮೂಲಕ ಮೊದಲ ದಿನದ ಕಲೆಕ್ಷನ್​ ವಿಚಾರದಲ್ಲಿ ಬಾಲಿವುಡ್​ನ ಸೂರ್ಯವಂಶಿ ಸಿನಿಮಾವನ್ನು ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಹಿಂದಿಕ್ಕಿದೆ. ಭಾರತದ ಇನ್ಯಾವ ಸಿನಿಮಾವೂ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಕಲೆಕ್ಷನ್ ಮಾಡಿಲ್ಲ. ಇದೇ ಮೊದಲ ಬಾರಿಗೆ ಇಷ್ಟು ಕಲೆಕ್ಷನ್​ ಮಾಡಿದ ಸಿನಿಮಾ ಅಂದರೆ ಅದು ‘ಸ್ಪೈಡರ್​ ಮ್ಯಾನ್​ ನೋ ವೇ ಹೋಮ್​’.

ಇದನ್ನು ಓದಿ : ಖ್ಯಾತ ಗಾಯಕಿಗೆ 11ನೇ ವಯಸ್ಸಿನಲ್ಲೇ ಪೋರ್ನ್​ ಸಿನಿಮಾ ನೋಡುವ ಹುಚ್ಚು! ಗ್ರಾಮಿ ಪ್ರಶಸ್ತಿ ವಿಜೇತೆ ಬಿಚ್ಚಿಟ್ಟ ರಹಸ್ಯ!

‘ಸೂರ್ಯವಂಶಿ’ ಹಿಂದಿಕ್ಕಿದ ಟಾಮ್​ ಸಿನಿಮಾ!

ಇತ್ತೀಚೆಗೆ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಬಹಳ ದೊಡ್ಡ ಮೊತ್ತ ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿತ್ತು.  ಸೂರ್ಯವಂಶಿ ಮೊದಲ ದಿನ 26.50 ಕೋಟಿ ಕಲೆಕ್ಷನ್​ ಮಾಡಿತ್ತು. ಆದರೆ 'ಸೂರ್ಯವಂಶಿ' ಸಿನಿಮಾದ ದಾಖಲೆ ಮುರಿದಿರುವ 'ಸ್ಪೈಡರ್‌ಮ್ಯಾನ್' ಮೊದಲ ದಿನವೇ ಬರೋಬ್ಬರಿ 33 ಕೋಟಿ ರುಪಾಯಿ ಗಳಿಕೆ ಮಾಡಿದೆ. ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಸಿನಿಮಾ 2ಡಿ, 3ಡಿ, ಐಮ್ಯಾಕ್ಸ್​ 3ಡಿ ಸೇರಿ ಸಾಕಷ್ಟು ವಿಧದಲ್ಲಿ ಪ್ರೇಕ್ಷಕರಿಗೆ ಲಭ್ಯವಿದೆ.

ಇದನ್ನು ಓದಿ : ಸ್ಪೈಡರ್ ಮ್ಯಾನ್ ಸಿನಿಮಾ ಟಿಕೆಟ್ ಬೆಲೆ 2200 ರೂ..! ಹಿಂಗಾದ್ರೆ ಹೆಂಗೆ?

ಮೊದಲ ದಿನ 31 ಕೋಟಿ ಕೆಲಕ್ಷನ್​ ಮಾಡಿದ್ದ ಎಂಡ್​ಗೇಮ್​!

ಹೌದು, 2019ರಲ್ಲಿ ತೆರೆಗೆ ಬಂದ ಮಾರ್ವೆಲ್ಸ್​ ಅವೆಂಜರ್ಸ್​ ಎಂಡ್​​ಗೇಮ್​ ಮೊದಲ ದಿನವೇ ಭಾರತದಲ್ಲಿ 31 ಕೋಟಿ ಕಲೆಕ್ಷನ್​ ಮಾಡಿತ್ತು. ಅದರ ದಾಖಲೆಯನ್ನು ಟಾಮ್​ ಹಾಲೆಂಡ್​ ಅಭಿನಯದ ಸ್ಪೈಡರ್​ ಮ್ಯಾನ್​ ನೋ ವೇ ಹೋಮ್ ಮುರಿದಿದೆ. ತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್​​ನಲ್ಲಿ ಮತ್ತಷ್ಟು ಒಳ್ಳೆಯ ಕಲೆಕ್ಷನ್ ಆಗುವ ಸಾಧ್ಯತೆ ಇದೆ.
Published by:Vasudeva M
First published: