Spider Man: ಸ್ಪೈಡರ್ ಮ್ಯಾನ್ ಸಿನಿಮಾ ಟಿಕೆಟ್ ಬೆಲೆ 2200 ರೂ..! ಹಿಂಗಾದ್ರೆ ಹೆಂಗೆ?

Spider Man: ನೀವು ಒಮ್ಮೆ ಚಲನಚಿತ್ರದ ಟಿಕೆಟ್‌ನ ದರದತ್ತ ನೋಡಿದರೆ ನಿಮ್ಮ ಕಣ್ಣನ್ನು ನೀವೇ ನಂಬಲಾರದೆ ಕಣ್ಣುಜ್ಜಿಕೊಳ್ಳಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಟಿಕೆಟ್ ದರ 2000 ರೂ. ಗೂ ಅಧಿಕವಿದೆ

ಸ್ಪೈಡರ್ ಮ್ಯಾನ್ ಚಿತ್ರ

ಸ್ಪೈಡರ್ ಮ್ಯಾನ್ ಚಿತ್ರ

  • Share this:
ಸ್ಪೈಡರ್ ಮ್ಯಾನ್’ (Spider-Man) ಕಾರ್ಟೂನಾಗಿ ಮಕ್ಕಳಲ್ಲಿ ಭಾರಿ ರೋಮಾಂಚನ ಉಂಟು ಮಾಡಿತ್ತು. ಇದಾದ ನಂತರ ಹಾಲಿವುಡ್‌ನಲ್ಲಿ ‘ಸ್ಪೈಡರ್ ಮ್ಯಾನ್’ ಚಿತ್ರಗಳ ಸರಣಿಯೇ ಬಂತು. ಮತ್ತು ಅವೆಲ್ಲವೂ ಭಾರಿ ಯಶಸ್ಸು ಗಳಿಸಿದವು. ಇದಾದ ನಂತರ ಇದೇ ಶುಕ್ರವಾರ ಜಗತ್ತಿನಾದ್ಯಂತ(Worldwide) ‘ಸ್ಪೈಡರ್ ಮ್ಯಾನ್’ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಭಾರತದಲ್ಲಿ ಒಂದು ದಿನ ಮುಂಚಿತವಾಗಿಯೇ ‘ಸ್ಪೈಡರ್ ಮ್ಯಾನ್’ ಬಿಡುಗಡೆಯಾಗುತ್ತಿದೆ. ಆದರೆ, ವಿಷಯ ಇದಲ್ಲ; ಸ್ಪೈಡರ್ ಮ್ಯಾನ್ ಚಿತ್ರದ ಟಿಕೆಟ್(Tickets ) ಬೆಲೆ 2200 ರೂ. ಎಂಬುದೇ ಬಹುಚರ್ಚಿತ ವಿಷಯವಾಗಿ ಬದಲಾಗಿದೆ. ಭಾರತೀಯ ಪ್ರೇಕ್ಷಕರು (Indian audiences) ಅಷ್ಟು ಹಣ ತೆತ್ತು ಹಾಲಿವುಡ್‌ನ ಬಹುಕೋಟಿ ವೆಚ್ಚದ( Multi-billion) ಸ್ಪೈಡರ್ ಮ್ಯಾನ್ ಚಿತ್ರವನ್ನು ನೋಡಬಲ್ಲರೆ ಎಂಬುದು ಸಿನಿಮಾ ವಲಯದಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿ ಬದಲಾಗಿದೆ.

ಅದ್ದೂರಿಯಾಗಿ ಸ್ವಾಗತ

ಸ್ವಾರಸ್ಯಕರ ಸಂಗತಿಯೆಂದರೆ, ಚಿತ್ರದ ಬಿಡುಗಡೆಗೂ ಮುನ್ನವೇ ‘ಸ್ಪೈಡರ್ ಮ್ಯಾನ್’ ಬಿಡುಗಡೆಯಾಗುತ್ತಿರುವ ಬಹುತೇಕ ಚಿತ್ರಮಂದಿರಗಳು ಮುಂಗಡವಾಗಿಯೇ ಭರ್ತಿಯಾಗಿವೆ. ಆ ಮೂಲಕ ಭಾರತೀಯ ಪ್ರೇಕ್ಷಕರು ಬಹುಕೋಟಿ ವೆಚ್ಚದ ‘ಸ್ಪೈಡರ್ ಮ್ಯಾನ್’ ಚಿತ್ರವನ್ನು ಅದ್ದೂರಿಯಾಗಿಯೇ ಬರ ಮಾಡಿಕೊಳ್ಳಲು ಅಣಿಯಾಗಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ದಾಖಲೆ ಬರೆದ `ಸ್ಪೈಡರ್​ ಮ್ಯಾನ್​​’: ರಿಲೀಸ್​ಗೂ ಮುನ್ನವೇ ಟಿಕೆಟ್​ ಸೋಲ್ಡ್​​ಔಟ್​!

ಟಾಮ್ ಹಾಲೆಂಡ್-ಜೆಂಡಾಯಾ ಜೋಡಿಯಾಗಿ ನಟಿಸಿರುವ ‘ಸ್ಪೈಡರ್ ಮ್ಯಾನ್’ ಚಿತ್ರ ಭಾರತದ ಗಲ್ಲಾಪೆಟ್ಟಿಯಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿ ನಿಂತಿದೆ. ಬಹುಕೋಟಿ ವೆಚ್ಚದ ‘ಸ್ಪೈಡರ್ ಮ್ಯಾನ್’ ಚಿತ್ರಕ್ಕಾಗಿ ಮುಂಗಡ ಕಾಯ್ದಿರಿಸುತ್ತಿರುವುದನ್ನು ನೋಡುತ್ತಿದ್ದರೆ ಈ ಚಿತ್ರ ಭಾರಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ. ಈ ಚಿತ್ರ ಬಹು ದೊಡ್ಡ ಯಶಸ್ಸು ಸಾಧಿಸಲಿದೆ ಎಂದು ಹೇಳುವುದು ತಪ್ಪಾಗುವುದೂ ಇಲ್ಲ. ಮಾರ್ವೆಲ್ ನಿರ್ಮಾಣದ ಚಿತ್ರಗಳು ಜಗತ್ತಿನಾದ್ಯಂತ ಜನಪ್ರಿಯವಾಗಿದ್ದರೂ, ಭಾರತ ಅದರ ಚಿತ್ರಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿದೆ.

ಪ್ರದರ್ಶನಗಳೂ ಹೌಸ್ ಫುಲ್

ಈ ಕುರಿತು ಟ್ವೀಟ್ ಮಾಡಿರುವ ಖ್ಯಾತ ಚಲನಚಿತ್ರ ವಿಮರ್ಶಕ ತರಣ್‌ ಆದರ್ಶ್, ‘ಸ್ಪೈಡರ್ ಮ್ಯಾನ್’ ಚಿತ್ರದ ಅಭಿಮಾನಿಗಳ ರೋಮಾಂಚನ ದೊಡ್ಡ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ. “ನೀವು ಒಮ್ಮೆ ಚಲನಚಿತ್ರದ ಟಿಕೆಟ್‌ನ ದರದತ್ತ ನೋಡಿದರೆ ನಿಮ್ಮ ಕಣ್ಣನ್ನು ನೀವೇ ನಂಬಲಾರದೆ ಕಣ್ಣುಜ್ಜಿಕೊಳ್ಳಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಟಿಕೆಟ್ ದರ 2000 ರೂ. ಗೂ ಅಧಿಕವಿದೆ… ಬೆರಗುಗೊಳಿಸುವ ಸಂಗತಿಯೆಂದರೆ, ಮುಂಗಡವಾಗಿಯೇ ಎಲ್ಲ ಪ್ರದರ್ಶನಗಳೂ ಹೌಸ್ ಫುಲ್ ಆಗಿವೆ. ಇದರಿಂದ ಚಲನಚಿತ್ರ ಪ್ರೇಮಿಗಳು ತಮ್ಮ ಜೇಬನ್ನು ಬರಿದು ಮಾಡಿಕೊಂಡೂ ಚಿತ್ರ ನಿರ್ಮಾತೃಗಳಿಗೆ ಸಂಭ್ರಮ ನೀಡಲು ಮುಂದಾಗಿದ್ದಾರೆ ಎಂಬುದು ನಿಚ್ಚಳವಾಗಿದೆ“ ಎಂದು ಬರೆದುಕೊಂಡಿದ್ದಾರೆ.

ತೆಲುಗು, ತಮಿಳಿನಲ್ಲೂ ಸ್ಪೈಡರ್ ಮ್ಯಾನ್

ತನ್ನ ಗಾತ್ರ ಹಾಗೂ ಸಾಧ್ಯತೆಯ ದೃಷ್ಟಿಯಿಂದ ‘ಸ್ಪೈಡರ್ ಮ್ಯಾನ್’ ಸಾಹಸಭರಿತ ಚಿತ್ರ ಎಂಬ ಭರವಸೆ ಮೂಡಿಸಿದೆ. ಬಹು ತಾರಾಗಣ ಹೊಂದಿ ತಯಾರಾಗಿರುವ ಈ ಚಿತ್ರದಲ್ಲಿ ಈ ಹಿಂದಿನ ‘ಸ್ಪೈಡರ್ ಮ್ಯಾನ್’ ಸರಣಿಯಲ್ಲಿ ನಟಿಸಿದ್ದ ಸೂಪರ್ ವಿಲನ್‌ಗಳೂ ನಟಿಸಿದ್ದಾರೆ. ಭಾರತದಲ್ಲಿ ಇಂಗ್ಲಿಷ್-ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ‘ಸ್ಪೈಡರ್ ಮ್ಯಾನ್’ ಚಿತ್ರ ಬಿಡುಗಡೆಯಾಗುತ್ತಿದೆ.

ಟ್ರೈಲರ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ

ಮಾರ್ವೆಲ್ ನಿರ್ಮಾಣದ ಚಿತ್ರಗಳ ಬಗ್ಗೆ ಭಾರತದ ಬಹುದೊಡ್ಡ ಪ್ರೇಕ್ಷಕ ವರ್ಗ ದೊಡ್ಡ ಅಭಿಮಾನಿಯಾಗಿದೆ. ಅದು ಹುಚ್ಚು ಅಭಿಮಾನ ಕೂಡಾ ಹೌದು. ಹೀಗಾಗಿಯೇ ‘ಸ್ಪೈಡರ್ ಮ್ಯಾನ್’ ಚಿತ್ರದ ವಿತರಣೆಗೆ ದೊಡ್ಡ ಪೈಪೋಟಿಯೇ ಇದೆ. ‘ಸ್ಪೈಡರ್ ಮ್ಯಾನ್’ ಆಗಿ ಯಾರು ನಟಿಸುತ್ತಿದ್ದಾರೆ ಎಂಬುದು ಇನ್ನೂ ಬಹಿರಂಗಗೊಳ್ಳದಿದ್ದರೂ, ಚಿತ್ರದ ಟ್ರೈಲರ್ ಅಭಿಮಾನಿಗಳಲ್ಲಿ ಭಾರಿ ಕುತೂಹಲವನ್ನೇ ಉಂಟು ಮಾಡಿದೆ. ಮಹಾನಗರಗಳಲ್ಲದೆ ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡಿನಲ್ಲೂ ‘ಸ್ಪೈಡರ್ ಮ್ಯಾನ್’ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಕಂಡು ಬರುತ್ತಿದೆ.

ಸಂಚಲನವನ್ನೇ ಸೃಷ್ಟಿ ಮಾಡಿದವು

‘ಸೂಪರ್ ಮ್ಯಾನ್’, ಬ್ಯಾಟ್ ಮ್ಯಾನ್’, ‘ಸ್ಪೈಡರ್ ಮ್ಯಾನ್’ ಸರಣಿಗಳು ವಿಶ್ವದಾದ್ಯಂತ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿದವು. ಪ್ರತಿ ಸರಣಿಯ ಚಿತ್ರಗಳೂ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ದೊಡ್ಡ ದಾಖಲೆಗಳನ್ನೂ ಬರೆದವು.

ಇದನ್ನೂ ಓದಿ: Spidergirl | ಸರಸರನೆ ಗೋಡೆ ಹತ್ತುವ ಈ ಪುಟಾಣಿ ಸ್ಪೈಡರ್ ಗರ್ಲ್ ನೋಡಿದ್ದೀರಾ... ಇಲ್ಲಿದೆ ವಿಡಿಯೋ

ಭಾರಿ ಅಂತರದ ನಂತರ ಬಿಡುಗಡೆಯಾಗುತ್ತಿರುವ ‘ಸ್ಪೈಡರ್ ಮ್ಯಾನ್’ ಸರಣಿಯ ಮೊದಲ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ದಾಖಲೆಯನ್ನೇ ಬರೆಯಲಿದೆ ಎಂದು ಈಗಾಗಲೇ ಬಹುತೇಕ ಸಿನಿಮಾ ವಿಮರ್ಶಕರು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯ ನಿಜವಾಗುವುದೇ ಎಂದು ತಿಳಿಯಲು ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇದೆ.
Published by:vanithasanjevani vanithasanjevani
First published: