ಭಾರತದಲ್ಲಿ ಹಾಲಿವುಡ್ (Hollywood) ಸಿನಿಮಾಗಳನ್ನು ನೋಡುವ ಜನರು ಹೆಚ್ಚಿದ್ದಾರೆ. ಎಲ್ಲ ಇಂಗ್ಲಿಷ್ ಸಿನಿಮಾಗಳನ್ನು ನೋಡದೇ ಇದ್ದರೂ, ಫ್ಯಾಂಟಸಿ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. ಅದರಲ್ಲೂ ಮಾರ್ವೆಲ್ಸ್ (Marvels), ಡಿಸಿ (DC) ಸಿನಿಮಾಗಳೆಂದರೇ ತುಂಬಾ ಅಚ್ಚುಮೆಚ್ಚು. ಹೀಗಾಗಿ ಹಾಲಿವುಡ್ಗೆ ಭಾರತದ ಗಲ್ಲಾಪೆಟ್ಟಿಗೆ ಮೇಲೆ ಕಣ್ಣು. ಪ್ರತಿ ಮಾರ್ವೆಲ್ಸ್ ಸಿನಿಮಾವನ್ನು ಭಾರತದಲ್ಲಿ ರಿಲೀಸ್ ಮಾಡುವ ಮುನ್ನ ಕಲೆಕ್ಷನ್ ಬಗ್ಗೆ ಲೆಕ್ಕ ಮಾಡಿರುತ್ತಾರೆ. ಟಾಮ್ ಹಾಲೆಂಡ್ (Tom Holland) ನಟನೆಯ ‘ಸ್ಪೈಡರ್ ಮ್ಯಾನ್’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ (Spider-Man: No Way Home) ಡಿಸೆಂಬರ್ 16ರಂದು ಬಿಡುಗಡೆಯಾಗಿ ಬಾಕ್ಸ್ಆಫೀಸ್ ಉಡೀಸ್ ಮಾಡಿದೆ. ಭಾರತದ ಸ್ಟಾರ್ ನಟ (Indian Star Actors)ರ ಸಿನಿಮಾಗಳ ಗಳಿಕೆಯ ದಾಖಲೆಯನ್ನೇ ಹಿಂದಿಕ್ಕಿರುವ 'ಸ್ಪೈಡರ್ಮ್ಯಾನ್' ಸಿನಿಮಾ ಹೊಸ ದಾಖಲೆ (Record)ಯನ್ನೇ ಬರೆದಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅಭಿನಯದ ‘83’, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ಚಿತ್ರದ ತೀವ್ರ ಪೈಪೋಟಿಯ ನಡುವೆಯೂ ‘ಸ್ಪೈಡರ್ಮ್ಯಾನ್..’ ಗಲ್ಲಾಪೆಟ್ಟಿಗೆ ಲೂಟಿ ಮಾಡಿದ್ದಾನೆ.
200 ಕೋಟಿ ಕ್ಲಬ್ ಸೇರಿದ ‘ಸ್ಪೈಡರ್ ಮ್ಯಾನ್’!
ಭಾರತೀಯ ಬಾಕ್ಸಾಫೀಸ್ನಲ್ಲಿ ‘ಸ್ಪೈಡರ್ಮ್ಯಾನ್ ನೋ ವೇ ಹೋಮ್’ ಚಿತ್ರವು ₹ 200 ಕೋಟಿ ಕ್ಲಬ್ ಸೇರಿದೆ. ಬಾಕ್ಸಾಫೀಸ್ ತಜ್ಞ ತರಣ್ ಆದರ್ಶ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಚಿತ್ರ ಈ ವರೆಗೆ ಭಾರತೀಯ ಬಾಕ್ಸಾಫೀಸ್ನಲ್ಲಿ ₹ 202.34 ಕೋಟಿ ಕಮಾಯಿ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ದೊಡ್ಡ ದೊಡ್ಡ ಭಾರತೀಯ ಸ್ಟಾರ್ಗಳ ಸಿನಿಮಾಗಿಂತ `ಸ್ಪೈಡರ್ ಮ್ಯಾನ್’ ಹೆಚ್ಚು ಕಲೆಕ್ಷನ್ ಮಾಡಿದೆ. ಡಿಸೆಂಬರ್ 16ರಂದು ಈ ಸಿನಿಮಾ ಭಾರತದಲ್ಲಿ ತೆರೆ ಕಂಡಿತ್ತು. ಇಂದಿಗೂ ಭಾರತದಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಇರುವ ಅಂಶಗಳು ಜನರಿಗೆ ಬಹಳ ಇಷ್ಟವಾಗಿದೆ. ಹೊಸ ವರ್ಷ ಹಾಗೂ ನಂತರದ ರಜಾ ದಿನಗಳು ಚಿತ್ರದ ಗಳಿಕೆಗೆ ಪೂರಕವಾಗಿದೆ. ಶನಿವಾರ ಹಾಗೂ ಭಾನುವಾರ ಚಿತ್ರ ತಲಾ 4 ಕೋಟಿ ರೂ ಗಳಿಸಿದೆ.
ಇದನ್ನು ಓದಿ : ಭಾರತದ ಗಲ್ಲಾಪೆಟ್ಟಿಗೆ ಲೂಟಿ ಹೊಡೆದ `ಸ್ಪೈಡರ್ ಮ್ಯಾನ್‘: ಒಂದೇ ದಿನಕ್ಕೆ ಇಷ್ಟೊಂದು ಕಲೆಕ್ಷನ್!
ಸ್ಫೈಡರ್ ಮ್ಯಾನ್ ಮೊದಲ ದಿನ ಗಳಿಸಿದೆಷ್ಟು ಗೊತ್ತಾ?
ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರ ಈ ಸರಣಿಯ ಫೇವರಿಟ್ ಸಿನಿಮಾ ಎಂದು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ, ಈ ಸಿನಿಮಾ ಭಾರತದಲ್ಲಿ ಮೊದಲ ದಿನ 33-35 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಮೂಲಕ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ನ ಸೂರ್ಯವಂಶಿ ಸಿನಿಮಾವನ್ನು ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಹಿಂದಿಕ್ಕಿತ್ತು. ಭಾರತದ ಇನ್ಯಾವ ಸಿನಿಮಾವೂ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಕಲೆಕ್ಷನ್ ಮಾಡಿರಲಿಲ್ಲ.
ಇದನ್ನು ಓದಿ : ಬಾಲಯ್ಯನ 107ನೇ ಚಿತ್ರದಲ್ಲಿ `ಬ್ಲಾಕ್ ಕೋಬ್ರಾ’: ದುನಿಯಾ ವಿಜಿ ವಿಲನ್ ಆಗಿ ಅಬ್ಬರಿಸೋದು ಕನ್ಫರ್ಮ್!
ಮೊದಲ ದಿನ 31 ಕೋಟಿ ಕೆಲಕ್ಷನ್ ಮಾಡಿದ್ದ ಎಂಡ್ಗೇಮ್!
ಹೌದು, 2019ರಲ್ಲಿ ತೆರೆಗೆ ಬಂದ ಮಾರ್ವೆಲ್ಸ್ ಅವೆಂಜರ್ಸ್ ಎಂಡ್ಗೇಮ್ ಮೊದಲ ದಿನವೇ ಭಾರತದಲ್ಲಿ 31 ಕೋಟಿ ಕಲೆಕ್ಷನ್ ಮಾಡಿತ್ತು. ಅದರ ದಾಖಲೆಯನ್ನು ಟಾಮ್ ಹಾಲೆಂಡ್ ಅಭಿನಯದ ಸ್ಪೈಡರ್ ಮ್ಯಾನ್ ನೋ ವೇ ಹೋಮ್ ಮುರಿದಿತ್ತು. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಮತ್ತಷ್ಟು ಒಳ್ಳೆಯ ಕಲೆಕ್ಷನ್ ಆಗುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ